ಮೇ ವೆಡ್ಡರ್ಬರ್ನ್ ಕ್ಯಾನನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇ ವೆಡ್ಡರ್ಬರ್ನ್ ಕ್ಯಾನನ್ ಅವರು ಆಕ್ಸ್ವರ್ಡ್, ಇಂಗ್ಲೆಂಡ್,ಯುನೈಟೆಡ್ ಕಿಂಗ್ಡೆಮ್ದಲ್ಲಿ ಅಕ್ಟೋಬರ್ ೧೪ನೇ ರಂದು ೧೮೯೩ರಲ್ಲಿ ಜನಿಸಿದರು. ಇವರು ಮೊದಲ ವಿಶ್ವಯುದ್ಧದ ಕಾಲಿನ ಬ್ರಿಟೀಷ್ ಕವಿ. ಆಕೆಯ ಸಮಯದ ಕವಿತೆಯ ಮೂಲಕ ಮತ್ತು ಆಕೆಯ ಆತ್ಮಚರಿತ್ರೆಯ ಮೂಲಕ ಮೇ ವೆಡ್ಡರ್ಬರ್ನ್ ಕ್ಯಾನನ್ಗೆ ವಿಡಂಬನೆಯು ಪೀಳಿಗೆಯ ಧ್ವನಿಗಳಲ್ಲಿ ಒಂದಾಗಿತ್ತು.

ಜೀವನ ಚರಿತ್ರೆ[ಬದಲಾಯಿಸಿ]

ಮೇ ವೆಡ್ಡರ್ಬರ್ನ್ ಕ್ಯಾನನ್ ಅವರ ಚಾರ್ಲ್ಸ್ ಕ್ಯಾನನ್ ಅವರ ಮೂರು ಹೆಣ್ಣು ಮಕ್ಕಳಲ್ಲಿ ಎರಡನೇ ಮಗಳಾಗಿದ್ದಳು. ಅವರ ತಂದೆ ಆಕ್ಸ್ವರ್ಡ್ ನಲ್ಲಿರುವ ಟ್ರಿನಿಟಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ೧೯೧೧ರಲ್ಲಿ ಮೇ ಅವರಿಗೆ ೧೮ ವಯಸ್ಸಿದಾಗ ಅವರು ಸ್ವಯಂಅಪ್ರೇರಿತ ನೆರವು ಬೇರ್ಪಡುವಿಕೆಗೆ ಸೇರಿ ಅಲ್ಲಿ ನರ್ಸ್ಸಾಗಿ ತರಬೇತಿ ಪಡೆದು ಕ್ವಾರ್ಟರ್ಮಾಸ್ಟ ರ್ಶ್ರೇಣಿಯನ್ನು ತಲುಪಿದರು. ಮೇ ವೆಡ್ಡರ್ಬರ್ನ್ ಕ್ಯಾನನ್ ರವರು ಅವರ ಪದ್ಯದಲ್ಲಿ ಕೆಂಪು ಅಡ್ಡ ಚಿಹ್ನವನ್ನು, ಕತ್ತರಿಸಿದ ಕತ್ತಿಗಳ ಸಮಾನವಾಗಿ ನೋಡಿ ಕದನದಲ್ಲಿ ಸತ್ತ ಪ್ರೇಮಿಯನ್ನು ಸೂಚಿಸಿದರು. ಅವರು ಯುದ್ಧದ ಸಮಯದಲ್ಲಿ ಕ್ಯಾಂಟೀನ್ನನ್ನು ಚಲಾಯಿಸುವುದಕ್ಕೆ ಸಹಾಯಮಡಲು ರೂಯನ್ಗೆ ಹೋದಳು. ನಂತರ ಅವರ ತಂದೆಗೆ ಸಹಾಯ ಮಾಡಲು ಆಕ್ಸ್ ಫೋರ್ಡ್ ಯೂನಿವರ್ಸಿಟಿ ಪ್ರೆಸ್ಗೆ ಹೋದಳು. ಅಂತಿಮವಾಗಿ ಪ್ಯಾರಿಸ್ನಲ್ಲಿನ ಯುದ್ಧ ಕಛೇರಿ ವಿಭಾಗದಲ್ಲಿ ಗೂಢಚಯೆ ಇಲಾಖೆಯಲ್ಲಿ ಅವರು ತನ್ನ ನಿಶ್ಚಿತರವರ ಜೊತೆ ಸೇರಿದರು. ಅವರು ಯುದ್ಧದ ಸಮಯದಲ್ಲಿ ಮೂರು ಸಂಪುಟಗಳ ಕವಿತೆಗಳನ್ನು ಪ್ರಕಟಿಸಿದರು. ಅವುಗಳು ಯಾವುದೆಂದರೆ "ಇನ್ ವಾರ್ ಟೈಮ್" (೧೯೧೭). "ದಿ ಸ್ಪ್ಲೆಂಡಿಡ್ ಡೇಸ್" (೧೯೧೨)- ಇದನ್ನು ಬೆವಿಲ್ ಕ್ಯೂಲ್ಲರ್ ಖೊಚ್ ಗೆ ಅರ್ಪಿಸಿದರು. ಮೂರುನೆಯದು,"ದಿ ಹೌವ್ಸ್ ಆಫ್ ಹೋಪ್"(೧೯೨೩)- ಇದನ್ನು ಅವರ ತಂದೆಗೆ ಅರ್ಪಿಸಿದರು. ೧೯೩೪ರಲ್ಲಿ "ದಿ ಲೋನಲಿ ಜೆನೆರೇಶನ್" ಎಂಬ ನಿಘಂಟನ್ನು ಬರೆದರು.[೧]

ನಂತರ ಜೀವನ[ಬದಲಾಯಿಸಿ]

೧೯೭೦ರ ದಶಕದಲ್ಲಿ ಮೇ ಪ್ರಕಟಣೆ ಬಿಡುವುದನ್ನು ನಿಲ್ಲಿಸಿದರು, ತನ್ನ ಕೊನೆಯ ವರ್ಷಗಳಲ್ಲಿ(೧೯೭೬) ಅವರು "ಗ್ರೇ ಘೋಸ್ಟ್ ಮತ್ತು ವಾಯ್ಸಸ್" ಎಂಬ ಆತ್ಮಚರಿತ್ರೆಯನ್ನು ಪೂರ್ಣಗೊಳಿಸಿದರು.ಈ ಪುಸ್ತಕವು ಅವಳ ಬಾಲ್ಯ ಮತ್ತು ಯುದ್ಧದ ವರ್ಷಗಳನ್ನು ನೆನಪಿಸುತಿತ್ತು. ಮತ್ತಷ್ತು ಅಪ್ರಕಟಿತವಾದ ಪದ್ಯಗಳನ್ನು ಮೇ ರವರ ಸೋದರನ ಮಗನು ಚಾರ್ಲೋಟ್ಟೆ ಫೀಫೆ "ದಿ ಟಿಯರ್ಸ್ ಆಫ್ ವಾರ್" (೨೦೦೦)ನಲ್ಲಿ ಪ್ರಕಟಿಸಿದರು. ಇದು ಅವಳ ಮತ್ತು ಬೆವಿಲ್ ಕ್ವಿಲ್ಲರ್-ಕೌಚ್ನೊಂದಿಗಿದ್ದ ಪ್ರೇಮ ಸಂಬಂಧವನ್ನು ಸೂಚಿಸುತ್ತದೆ.

ವೈವಾಹಿಕ ಜೀವನ[ಬದಲಾಯಿಸಿ]

ಮೇ ವೆಡ್ಡರ್ಬರ್ನ್ ಕ್ಯಾನನ್ ಅವರು ಕಾದಂಬರಿಕಾರ ಜೊವಾನ್ನಾ ಕ್ಯಾನನ್ ರವರ. ಅವರು ಶೈಕ್ಷಣಿಕ ಚಾರ್ಲ್ಸ್ ಕ್ಯಾನನ್ ಅವರ ಮಗಳು. ಬ್ರಿಟೀಷ್ ಕಾದಂಬರಿಕಾರ ಮತ್ತು ನಾಟಕಕಾರ ಗಿಲ್ಬರ್ಟ್ ಕ್ಯಾನನ್ ಅವರ ಸಂಬಂಧಿ ಕೂಡ. ಅವರು ಪ್ರಸಿದ್ದರಾದ ಪುಲ್ಲೀನ್-ಥಾಂಪ್ಸನ್ ಮತ್ತು ಬ್ರಿಟೀಷ್ ನಾಟಕಕಾರ ಡೆನಿಸ್ ಕ್ಯಾನನ್ ಅವರ ಚಿಕ್ಕಮ್ಮನಾಗಿದ್ದಾಳೆ. ಮೇ ಅವರು ಸರ್ ಆರ್ಥರ್ ಕ್ವಿಲ್ಲರ್-ಕೌಚ್ ಅವರ ಪುತ್ರ ಬೆವಿಲ್ ಕ್ವಿಲ್ಲರ್-ಕೌಚ್ಗೆ ನಿಶ್ಚಿತವಾದರು. ಬೇವಿಲ್ ಅವರು ವಿಶ್ವಯುದ್ಧ೧ ರಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸಿದರು. ಅವರು ಯಾವುದೇ ಗಾಯವಿಲ್ಲದೆ ಯುದ್ಧದಲ್ಲಿದ್ದರು. ಆದರೆ ನಂತರ ಸ್ವ್ಯಾನಿಷ್ ಜ್ವರ ಸಾಂಕ್ರಾಮಿಕದಲ್ಲಿ ಸತ್ತರು. ಮೇ ಅವರು ಅನಂತರ ವಿಶ್ವ ಸಮರ ೧ ಯಲ್ಲಿನ ಆಕಾಶಬುಟ್ಟಿವಾದ ಪರ್ಸಿವಲ್ ಜೇಮ್ಸ್ ಸ್ಲೇಟರನ್ನು ವಿವಾಹವಾದಳು. ಎರಡನೇ ಮಹಾಯುದ್ಧದಲ್ಲಿ ಬ್ರಿಗೇಡಿಯರ್ಗೆ ಉತ್ತೇಜನ ನೀಡಿದರು.


ರೇಡಿಯೊ ಕಾರ್ಯಕ್ರಮ[ಬದಲಾಯಿಸಿ]

೨೦೦೨ರಲ್ಲಿ ಬಿಬಿಸಿ ರೇಡಿಯೋಳ, ಮಧ್ಯಾಹ್ನ ನಾಟಕವಾಗಿ "ದಿ ಟಿಯರ್ಸ್ ಆಫ್ ವಾರ್" ಎಂಬ ನಾಟಕೀಯ ಅವೃತ್ತಿಯನ್ನು ಪ್ರಸ್ತುತ ಪಡೆಸಿದರು.

ಗ್ರಂಥಸೂಚಿ[ಬದಲಾಯಿಸಿ]

♦ರೀಕಲೆಕ್ಷನ್ಸ್ ಆಫ್ ಎ ಬ್ರಿಟೀಷ್ ರೆಡ್ ಕ್ರಾಸ್ ವಾಲಂಟರಿ ಏಡ್ ಡಿಟ್ಯಾಚ್ಮಂಟ್, ನಂ. ೧೨, ಮೇ ವೆಡ್ಡರ್ಬರ್ನ್ ಕ್ಯಾನನ್, (೧೯೭೧) ಆಕ್ಸ್ಫರ್ಡ್ ವಿಶ್ವವಿದ್ಯಾಲಯ, ಮಾರ್ಚ್ ೨೬ ೧೯೧೧-ಏಪ್ರಿಲ್ ೨೪, ೧೯೧೯, ಟಿಎಸ್.

ಇನ್ ವಾರ್ ಟೈಮ್, ಆಕ್ಸ್ಫರ್ಡ್, ಮೇ ವೆಡ್ಡರ್ಬರ್ನ್ ಕ್ಯಾನನ್, ೧೯೧೭.

♦ ದಿ ಸ್ಪ್ಲೆಂಡಿಡ್ ಡೇಸ್, ಮೇ ವೆಡ್ಡರ್ಬರ್ನ್ ಕ್ಯಾನನ್, ಬ್ಲಾಕ್ವೆಲ್ ೧೯೧೯. ♦ ದಿ ಹೌಸ್ ಆಫ್ ಹೋಪ್, ಮೇ ವೆಡ್ಡರ್ಬರ್ನ್ ಕ್ಯಾನನ್, ೧೯೨೩. ♦ ಗ್ರೇ ಘೋಸ್ಟ್ಸ್ ಮತ್ತು ವಾಯ್ಸಸ್, ಮೇ ವೆಡ್ಡರ್ಬರ್ನ್ ಕ್ಯಾನನ್, ರೌಂಡ್ವುಡ್ ಪ್ರೆಸ್, ೧೯೭೬. ♦ ದಿ ಟಿಯರ್ಸ್ ಆಫ್ ವಾರ್: ದಿ ಲವ್ ಸ್ಟೋರಿ ಆಫ್ ಎ ಯಂಗ್ ಪೊಯೆಟ್ ಅಂಡ್ ಎ ವಾರ್ ಹೀರೋ, ಮೇ ವೆಡ್ಡರ್ಬರ್ನ್ ಕ್ಯಾನನ್;ಪ್ರಕಾಶಕ: ಕವಾಲಿಯರ್ಬಿ. ♦ ಆಂಡ್ರ್ಯೂಮೊಷನ್, ಥಾಮಸ್ ಹಾರ್ಡಿ, ರೂಪರ್ಟ್ ಬ್ರೂಕ್, ಹೆಲನ್ ಮ್ಯಾಕೆ ಜುಲಿಯನ್ ಗ್ರೆನ್ಫೆಲ್, ಡಬ್ಲು. ಬಿ. ಯೀಟ್ಸ್, ಮೇ ವೆಡ್ಡರ್ಬರ್ನ್ ಕ್ಯಾನನ್, ಚಾರ್ಲ್ಸ್ ಹಾಮಿಲ್ಟನ್ಸೊರ್ಲೆ ೨೦೦೩ ♦ಗ್ರೇಟ್ ಎಕ್ಸ್ಪೆಕ್ಟೇಷನ್ಸ್ : ರಿಹಾಬಿಲಿಟೇಟಿಂಗ್ ದಿ ರಿಕ್ಯಾಲ್ಸಿಟ್ರಾಂಟ್ ವಾರ್ ಪೊ ಯಟ್ಸ್ , ಗಿಲ್ಪೇನ್, ಫೆಮಿನಿಸ್ಟ್, ರಿವ್ಯು ನಂ. ೫೧ (ಶರತ್ಕಾಲ, ೧೯೯೫) ♦ ಫೈಟಿಂಗ್ ಫೋರ್ಸಸ್, ರೈಟಿಂಗ್ ಪುಮೆನ್: ಐಡೆಂಟಿಟಿ ಆಂಡ್ ಐಡಿಯಾಲಜಿ ಇನ್ ದಿ ಫಸ್ಟ್ ವರ್ಲ್ಡ್ ವಾರ್, ಶರೋನ್ ಔಡಿಟ್, ರೂಟ್ಲೆಡ್ಜ್, ೧೯೯೪.

ಮೇ ವೆಡ್ಡರ್ಬರ್ನ್ ಕ್ಯಾನನ್ ಅವರ ಕೆಲವ್ಯ್ ಕವಿತೆಗಳು ಯಾವುದೆಂದರೆ: ೧. ರೂಯನ್ ೨. ವಿಮೆನ್ ಡಿಮೊಬಿಲೈಸ್ಟ್ ೩. ವೆನ್ ದಿ ವಿಷನ್ ಡೇಸ್ ೪. ಲಾಮ್ಪ್ ಲೈಟ್ ೫. ಅರ್ಮಿಸ್ಟೈಸ್ ಮತ್ತು ಅನೇಕ ಕವನಗಳನ್ನು ರಚಿಸಿದ್ದಾರೆ.

ಮೇ ವೆಡ್ಡರ್ಬರ್ನ್ ಕ್ಯಾನನ್ ಅವರ ಮೊದಲ ಕವಿತೆ 'ದಿ ಸ್ಕಾಟ್ಸ್ಮನ್'. ಇದು ಅವರು ೧೫ನೇ ವಯಸ್ಸಿದಾಗ ಮುದ್ರಿತವಾಯಿತು. ಮೇ ವೆಡ್ಡರ್ಬರ್ನ್ ಕ್ಯಾನನ್ ಅವರು ಯುದ್ಧಭೂಮಿಯ ಅವಧಿಯಿಂದ ದೂರಾಗಿ ಆಕ್ಸ್ಫರ್ಡಲ್ಲಿ ಇದ್ದಾಗ ೧೯೧೭ ರಲ್ಲಿ ತಮ್ಮ ಪದ್ಯ "ಲಾಮ್ಪಲೈಟ್" ರಚಿಸಿದರು.' ನೀವು ಮತ್ತು ನಾನು ಒಟ್ಟಾಗಿ ಪ್ರಪಂಚವನ್ನು ಅಲುಗಾಡಿಸಲು ಯೋಜಿದೆ'ಎಂಬುದು ಅದರ ಮೊದಲ ಸಾಲು. ಇದು ಅವರಿಗೆ ತುಂಬ ದುಃಖವನ್ನು, ನಿರರ್ಥಕ ಕನಸುಗಳನ್ನು ಮತ್ತು ಕಳೆದುಹೋದ ಪ್ರೀತಿಯನ್ನು ನೆನಪಿಸುತಿತ್ತು. ಮೇ ವೆಡ್ಡರ್ಬರ್ನ್ ಕ್ಯಾನನ್ ಅವರು ತಮ್ಮ ಸತ್ತ ಗಂಡನನ್ನು'ಡೆತ್' ಎಂಬ ಕವಿತೆಯಲ್ಲಿ ನೆನೆಪಿಸಿಕೊಳ್ಳು್ತಾಳೆ.

ಜಗತನ್ನು ಅಲುಗಾಡಿಸುವ ಅವರ ದೃಷ್ಟಿಕೋನಗಳ ನಂತರ, ಅವರ ಬರಹಗಳು ಕಾವ್ಯಾತ್ಮಕ ಭೊಕಂಪವನ್ನು ಉಂಟು ಮಾಡಿಲ್ಲವ್ವೆಂದು ಒಂದು ಅವಮಾನ ಅವರಿಗೆ. ಮಹಾಯುದ್ಧ ದೌರ್ಬಲ್ಯ ಮತ್ತು ಪ್ರಭಾವವನ್ನು ಗ್ರಹಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಸಮಾಜದಲ್ಲಿ, ಅವರ ಪದಗಳು ವಿವರಣೆಯಲ್ಲಿ ಮತ್ತು ದೃಷ್ಟಿಕೋನದಲ್ಲಿ ಅತ್ಯಂತ ಮಹತ್ವವಾಗಿದೆ. ಅದು ಎಲ್ಲ ಚಿಕ್ಕ ನಡಕಗಿಂತ ನೆನಪಿಸಿಕೊಳ್ಳಬೇಕು.[೨]

೧೯೧೮ ರಲ್ಲಿ ಮೇ ವೆಡ್ಡರ್ಬರ್ನ್ ಕ್ಯಾನನ್ ಅವರಿಗೆ ಪ್ಯಾರಿಸ್ನ್ ವಾರ್ ಆಫ್ ಸ್ ಡಿಪಾರ್ಟಮೆಂಟ್ ಅಲ್ಲಿ ಉದ್ಯೋಗದ ಪ್ರಸ್ತಾಪವಾಗಿತ್ತು. ಇದನ್ನು 'ಬ್ರಿಟೀಷ್ ಮಿಷನ್' ಎಂದು ಕರೆಯಲಾಗುತಿತ್ತು. ಮತ್ತು ಅದು MI 5 ನ ಭಾಗವಾಗಿತ್ತು. ಯುದ್ಧ ಕೊನೆಗೊಂಡಾಗ ಅವರು ಅಲ್ಲೆ ಇದ್ದರು. ಅವರ ಕವಿತೆ 'ದಿ ಆರ್ಮಿಸ್ಟೃಸ್' ಗೆಲುವಿನ ಹಾದಿಯಲ್ಲಿತ್ತು. ಮೇ ವೆಡ್ಡರ್ಬರ್ನ್ ಕ್ಯಾನನ್ ಅವರು ಸೀಗ್ಫೆಡ್ ಸಸ್ಸೂನನ್ನು ಉತ್ತಮ ಕವಿಯಾಗಿದ್ದಾನೆಂದು ಭಾವಿಸಿದ್ದರು ಆದರೆ ಯುದ್ಧ-ವಿರೋಧಿ ಭಾವನೆಗಳನ್ನು (೧೯೧೭ರಲ್ಲಿ) ನಿರಾಕರಿಸಿದರು. ಮೇ ವೆಡ್ಡರ್ಬರ್ನ್ ಕ್ಯಾನನ್ ಅವರು ೧೯೭೩ ರಲ್ಲಿ ಪಾಂಗ್ಬೋರ್ನೆ, ಯುನೈಟೆಡ್ ಕಿಂಗ್ಡೆಮಲ್ಲಿ ನಿಧನಗೊಂಡರು.

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/May_Wedderburn_Cannan
  2. https://www.poetryfoundation.org/poets/may-wedderburn-cannan