ಮೃಣಾಲಿನಿ ಸಾರಾಭಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೃಣಾಲಿನಿ ಸಾರಾಭಾಯ್ ಇಂದ ಪುನರ್ನಿರ್ದೇಶಿತ)
ಮೃಣಾಲಿನಿ ಸಾರಾಭಾಯ್
ಮೃಣಾಲಿನಿ ಸಾರಾಭಾಯ್
ಜನನ(೧೯೧೮-೦೫-೧೧)೧೧ ಮೇ ೧೯೧೮
ಕೇರಳ, ಭಾರತ
ಮರಣ21 January 2016(2016-01-21) (aged 97)
ರಾಷ್ಟ್ರೀಯತೆಭಾರತೀಯ
ಇದಕ್ಕೆ ಖ್ಯಾತರುdancer/choreographer
ಜೀವನ ಸಂಗಾತಿವಿಕ್ರಂ ಸಾರಾಭಾಯ್
ಮಕ್ಕಳುಮಲ್ಲಿಕಾ ಸಾರಾಭಾಯ್
ಕಾರ್ತಿಕೇಯ ಸಾರಾಭಾಯ್
ನೆಂಟರುಲಕ್ಷ್ಮಿ ಸೆಹ್ಗಲ್ (ಸೋದರಿ)

ಮೃಣಾಲಿನಿ ಸಾರಾಭಾಯಿ,[೧] ಭರತನಾಟ್ಯ, ಕಥಕ್ಕಳಿ ಹಾಗೂ ಮೋಹಿನಿಯಾಟ್ಟಂನಲ್ಲಿ ಪರಿಣಿತರಾಗಿದ್ದರು. 'ದರ್ಪಣ'[೨] ಎಂಬ ನೃತ್ಯಶಾಲೆಯನ್ನು ತಮ್ಮ ಪತಿ ವಿಕ್ರಂ ಸಾರಾಭಾಯಿ[೩] ಯವರ ಸಹಯೋಗದಿಂದ ೧೯೪೮-೪೯ ರಲ್ಲಿ ಸ್ಥಾಪಿಸಿದರು. ಮುಂದೆ ಅವರ ಮಗಳು ಮಲ್ಲಿಕಾ ಸಾರಾಭಾಯ್[೪] ಜೊತೆ ಸೇರಿ ನಡೆಸಿಕೊಂಡು ಬರುತ್ತಿದ್ದರು. ಅವರ ಮಗ 'ಕಾರ್ತಿಕೇಶ ಸಾರಾಭಾಯ್' ಪರಿಸರ ಶಿಕ್ಷಣ ಕೇಂದ್ರದ ಸಂಸ್ಥಾಪಕ. 'ದರ್ಪಣ ನೃತ್ಯಶಾಲೆ' ನೃತ್ಯಪ್ರದರ್ಶನ ಕಲೆ ಕಲಿಕಾ ನೃತ ನಾಟಕಗಳು, ಸಂಗೀತ,ಬೊಂಬೆಯಾಟ ಮೊದಲಾದ ಪ್ರದರ್ಶನಕಲೆಗಳಲ್ಲಿ ತರಪೇತಿಕೊಡುವ ಪ್ರಮುಖಕೇಂದ್ರವಾಗಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿ ಕಲಿತು ಹೊರಬಂದು ಹಲವಾರು ಸಂಸ್ಥೆಗಳಲ್ಲಿ ಕೆಲಸಮಡಿ ಹೆಸರುಮಾಡಿದ ಶಿಷ್ಯರ ಸಂಖ್ಯೆ ೧೮ ಸಾವಿರಕ್ಕೂ ಮಿಗಿಲಾಗಿದೆ. ಮೃಣಾಲಿನಿಯವರು ವಿಶ್ವಕವಿ ರವೀಂದ್ರನಾಥ ಠಾಗೋರ್ ಸ್ಥಾಪಿಸಿದ ಶಾಂತಿನಿಕೇತನದ ವಿದ್ಯಾರ್ಥಿನಿಯಾಗಿದ್ದರು. ಭಾರತದ ಬಾಹ್ಯಾಕಾಶ ಯೋಜನೆಗಳ ನಿರ್ಮಾತೃ ಡಾ.ವಿಕ್ರಮ್ ಸಾರಾಭಾಯ್ ಅವರ ಪತಿ. ಮೃಣಾಲಿನಿ ಅವರ ಪುತ್ರಿ, ಮಲ್ಲಿಕಾ ಸಾರಾಭಾಯ್ ರವರು ಕೂಡಾ ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಪ್ರಸಿದ್ಧಿ ಪಡೆದಿದ್ದಾರೆ. ಮೃಣಾಲಿನಿ ಸಾರಾಭಾಯಿ[೫]ಯವರ ಹಿರಿಯ ಸಹೋದರಿ ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ರವರು ಸುಭಾಷ್ ಚಂದ್ರ ಬೋಸ್ ರವರ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು.

ಜನನ,ಬಾಲ್ಯ,ವಿದ್ಯಾಬ್ಯಾಸ[ಬದಲಾಯಿಸಿ]

ಮೃಣಾಲಿನಿ, ೧೯೧೮ ರ,ಮೇ,೧೧ ರಂದು,ಮದ್ರಾಸ್ ಲಾ ಕಾಲೇಜ್ ಪ್ರಿನ್ಸಿಪಾಲ್,ಸ್ವಾಮಿನಾಥನ್ ಅಯ್ಯರ್, ಹಾಗೂ ಸ್ವಾತಂತ್ಯ ಹೋರಾಟಗಾರ್ತಿ ಮಾಜಿ ಸಂಸತ್ ಸದಸ್ಯೆ,ಅಮ್ಮುರವರ ಪ್ರೀತಿಯ ಮಗಳಾಗಿ ಕೇರಳದಲ್ಲಿ ಜನಿಸಿದರು. ಮೃಣಾಲಿನಿಯವರು 'ಸ್ವಿಟ್ಸರ್ ಲ್ಯಾಂಡ್'[೬] ನಲ್ಲಿ ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸವನ್ನುಗಳಿಸಿ ಭಾರತಕ್ಕೆ ಹಿಂದಿರುಗಿದರು. ಸ್ವಲ್ಪ ಸಮಯ ಅಮೆರಿಕಕ್ಕೆ ಹೋಗಿ ಧ್ವನಿಸಂಸ್ಕರಣದಲ್ಲಿ ತರಪೇತಿಗಳಿಸಿ ನಿಷ್ಣಾತರಾದರು. ಚಿಕ್ಕವಯಸ್ಸಿನಲ್ಲೇ ಗುರು ಮೀನಾಕ್ಷಿಸುಂದರಂ ಪಿಳ್ಳೈರವರ ಹತ್ತಿರ ಭರತನಾಟ್ಯವನ್ನೂ, ಕಂಚು ಕುರೂಪ್ ರವರ ಬಳಿ ಕಥಕ್ಕಳಿ ನೃತ್ಯವನ್ನೂ ಕಲಿತು ಅಭ್ಯಾಸಮಾಡಿದರು.[೭]

ಮೃಣಾಲಿನಿಯವರ ಮದುವೆ[ಬದಲಾಯಿಸಿ]

ಮೃಣಾಲಿನಿಯವರು, ಬೆಂಗಳೂರಿನ ತಾತಾ ವಿಜ್ಞಾನ ಭವನದಲ್ಲಿ ಡಾ. ಸಿ.ವಿ.ರಾಮನ್ ಮೇಲ್ವಿಚಾರಣೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಕ್ರಮ್ ಸಾರಾಭಾಯಿ ರವರನ್ನು ಭೇಟಿಯಾಗಿ, ೧೯೪೨ ರಲ್ಲಿ ಮದುವೆಯಾದರು. ಮುಂದೆ ಅಮೆರಿಕದಲ್ಲಿ ಧ್ವನಿ ಸಂಸ್ಕರಣ ದಲ್ಲಿ ತರಬೇತಿಗಳಿಸಿದರು. ಜಾವಾ,ಬಾಲಿ ದ್ವಿಫಗಳಿಗೆ ಹೇಟಿ ಆಗ್ನೇಯ ನೃತ್ಯಪ್ರಾಕಾರಗಳನ್ನು ಅಧ್ಯಯನ ಮಾಡಿದರು. ಜಾವಾದಲ್ಲಿ ರಾಜಕುಮಾರ 'ತೇಝಜೋ ಕುಸುಮ್' ರವರ ಮಾರ್ಗದರ್ಶನದಲ್ಲಿ ತಮ್ಮ ಜ್ನಾನಭಂಡಾರವನ್ನು ವೃದ್ಧಿಸಿದರು. [೮] ಗುಜರಾತ್ ರಾಜ್ಯದಲ್ಲಿ ಭರತನಾಟ್ಯ ಕಲೆಸ್ಥಾಪಕರಾಗಿ ಕೀರ್ತಿಗೆ ಭಾಜನರಾದರು ಗಣ್ಯ ನೃತ್ಯ ಸಂಯೋಜಕಿ, ಮೃಣಾ,

  • ವಲ್ಲಿ ಕಲ್ಯಾಣ,
  • ಗೀತಗೋವಿಂದ,
  • ಟ್ಯಾಗೋರ್ ರವರ ಭಾನುಸಿಂಗರ್ ಪದಾವಳಿ, ಮೊದಲಾದ ೫೦ ನೃತ್ಯ ನಾಟಕಗಳ ಸಂಯೋಜಿಸಿ ಪ್ರದರ್ಶಿಸಿದರು.

ಬೆಂಗಳೂರಿನಲ್ಲಿ ಡಾನ್ಸ್ ಸ್ಟುಡಿಯೊ ಮಾಲೀಕರಾಗಿದ್ದ, ರಾಮ್ ಗೋಪಾಲ್ ಜೊತೆ ಜಂಟಿಯಾಗಿ ನೃತ್ಯಪ್ರದರ್ಶನ ಕೊಟ್ಟು, ಭಾರತದಾದ್ಯಂತ ಹೋಗಿ, ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಅವುಗಳ ವಿವರಗಳು ಹೀಗಿವೆ :

  1. ಮೆಮೊರಿ,
  2. ಸ್ತ್ರೀಮತ್ತು ನೀಲ,

ದೃಷ್ಯನಾಟಕಗಳು ಸೃಜನಶೀಲತೆಗೆ ಹೆಸರಾದವು. ಮೃಣಾಲಿನಿಯವರು, ಅಮೆರಿಕ, ಚೀನ, ರಷ್ಯ,ಜಪಾನ್ ದೇಶಗಳಲ್ಲಿ ಸಂಚರಿಸಿ ಹಲವಾರು ಸ್ಥಳಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಶಾರೀರಿಕ ಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿ, ಆಂಗಿಕಾಭಿನಯಕ್ಕೆ ಹೆಚ್ಚು ಒತ್ತುನೀಡಿದ್ದರಿಂದ ನೃತ್ತ ಮತ್ತು ಮುಖಿಜ ಅಭಿನಯಗಳಿಗೆ ಹೊಸಮಜಲು ದೊರೆಯುವಂತಾಯಿತು.

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

  • ಗುಜರಾತ್ ರಾಜ್ಯಕರಕುಶಲ ಕಲೆಗಾರಿಕೆ ಮತ್ತು ಕೈಮಗ್ಗದ ಅಭಿವೃದ್ಧಿನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದರು.
  • ಸರ್ವೋದಯ ಇಂಟರ್ನ್ಯಾಷನಲ್ ಟ್ರಸ್ಟ್ ನ ಟ್ರಸ್ಟಿಯಾಗಿ ಕೆಲಸಮಾಡಿದರು.
  • ನ್ಯಾಷನಲ್ ಫೌಂಡೇಶನ್ ನ ಅಧ್ಯಕ್ಷೆಯಾಗಿ ದುಡಿದರು.
  • 'The Voice of the Heart'[೯]ಎಂಬ ಆತ್ಮಚರಿತ್ರೆಯನ್ನು ಬರೆದರು.[೧೦]

ಪ್ರಶಸ್ತಿ ಗೌರವಗಳು[ಬದಲಾಯಿಸಿ]

  • ೧೯೬೫ ರಲ್ಲಿ ಪದ್ಮಶ್ರೀ ಪ್ರಶಸ್ತಿ,
  • 'French Archives Internationales de la Danse ಸಂಸ್ಥೆಯ ಡಿಪ್ಲೊಮ ಸರ್ಟಿಫಿಕೇಟ್ ಗಳಿಸಿದ ಭಾರತದ ಪ್ರಥಮ ಮಹಿಳೆ',
  • ೧೯೯೦ ಅಲ್ಲಿ ಪ್ಯಾರಿಸ್ ನಲ್ಲಿ Executive Committee of the International Dance Council, ಯ ಕಾರ್ಯಕಾರಿ ಸಮಿತಿಗೆ ಸದಸ್ಯೆಯಾಗಿ ಆಯ್ಕೆಯಾದರು.
  • ೧೯೯೧ ರಲ್ಲಿ, ಪಂ.ಓಂಕಾರನಾಥ್ ಠಾಕೂರ್ ಪ್ರಶಸ್ತಿ,
  • ೧೯೯೨ ರಲ್ಲಿ ಪದ್ಮಭೂಷಣ ಪ್ರಶಸ್ತಿ,
  • ೧೯೯೪ ರಲ್ಲಿ ನವದೆಹಲಿಯಲ್ಲಿ 'ಸಂಗೀತ್ ನಾಟಕ್ ಅಕ್ಯಾಡೆಮಿ ಫೆಲೋಶಿಪ್' ದೊರೆಯಿತು.
  • ೧೯೯೭ ರಲ್ಲಿ ಬ್ರಿಟನ್ನಿನ ನಾರ್ವಿಚ್ ನಲ್ಲಿರುವ ಈಸ್ಟ್ ಆಂಗ್ಲಿಸ್ ವಿಶ್ವವಿದ್ಯಾಲಯದ 'Degree of Doctor of Letters, honoris causa (LittD) ಪದವಿ'[೧೧] ಗಳಿಸಿದರು.
  • 'Ballet Folklorico of Mexico' ಎಂಬ ನೃತ್ಯ ಸಂಯೋಜನೆಯನ್ನು ನಡೆಸಿಕೊಟ್ಟ ಮೃಣಾಲಿನಿಯವರ ಕೌಶಲ್ಯವನ್ನು ಮೆಚ್ಚಿ, ಮೆಕ್ಸಿಕೋದೇಶದ ಸರ್ಕಾರ ಬಂಗಾರದ ಪದಕವನ್ನು ಪ್ರದಾನಮಾಡಿತು.
  • ಡಿಸೆಂಬರ್, ೨೮, ೧೯೯೮ ರಲ್ಲಿ 'ದರ್ಪಣ ಅಕ್ಯಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಬಂಗಾರದ ಹಬ್ಬ'ವನ್ನು ಆಚರಿಸಲಾಯಿತು. ಆ ಸಮಯದಲ್ಲಿ 'ಮೃಣಾಲಿನಿ ಸಾರಾಭಾಯ್ ಅವಾರ್ಡ್ ಫಾರ್ ಕ್ಲಾಸಿಕಲ್ ಎಕ್ಸಲೆನ್ಸೆ' ಎಂಬ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿರುವುದಾಗಿ ಘೋಶಿಸಲಾಯಿತು.
  • ೧೯೯೬-೯೭ರ ಕಾಳಿದಾಸ ಸಮ್ಮಾನ್ ಪ್ರಶಸ್ತಿ.

ನಿಧನ[ಬದಲಾಯಿಸಿ]

ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ [೧೨] (೯೭) ೨೧, ಗುರುವಾರ, ಜನವರಿ, ೨೦೧೬ ರಂದು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದರು ವಯೋವೃದ್ಧೆ ಮೃಣಾಲಿನಿ,ಯವರನ್ನು ಅಹಮದಾಬಾದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ತಮ್ಮ ನೃತ್ಯ ಜಗತ್ತನ್ನು ನಮ್ಮ ಪಾಲಿಗೆ ಉಳಿಸಿ ನಮ್ಮನ್ನಗಲಿದ್ದಾರೆ ಎಂದು ಮಲ್ಲಿಕಾ ಅವರು 'ಫೇಸ್ ಬುಕ್' ಪುಟದಲ್ಲಿ ಬರೆದುಕೊಂಡಿದ್ದಾರೆ.

'ಮೃಣಾಲಿನಿ ಸಾರಾಭಾಯ್' ರವರ ಅಂತಿಮ ಸಂಸ್ಕಾರ ಗುಜರಾತಿನ ಗಾಂಧಿನಗರ ಜಿಲ್ಲೆಯ ಪೇಥಪುರ ಗ್ರಾಮ [೧೩] ದಲ್ಲಿ ನಡೆಯಿತು. ಚಿತೆಗೆ ಬೆಂಕಿಯನ್ನು ಮಲ್ಲಿಕಾ, ಹಾಗೂ ಕಾರ್ತಿಕೇಯ ಸ್ಪರ್ಷಮಾಡಿದರು.

ಉಲ್ಲೇಖಗಳು[ಬದಲಾಯಿಸಿ]

  1. Famous people, Dancers : Mrinalini Sarabhai
  2. 'Darpana dance academy', established by Mrinalini and Vikram Sarabhai in 1949
  3. Vikram sarabhai
  4. Mallika sarabhai
  5. Sulekha.com, Famous Bharatanatyam Dancer Of Yester Years Mrinalini Sarabhai, Is No More
  6. ಮೃಣಾಲಿನಿಯವರ ವಿದ್ಯಾಭ್ಯಾಸದ ವಿವರಗಳು ಮತ್ತು ವಿದೇಶಿ ಪದವಿಗಳು[ಶಾಶ್ವತವಾಗಿ ಮಡಿದ ಕೊಂಡಿ]
  7. ವಿಜಯ ಕರ್ನಾಟಕ, ಜನವರಿ,೨೨,೨೦೧೬
  8. prajavani rajya, ನೃತ್ಯಲೋಕದ ಪ್ರಖರ ತಾರೆ ಅಸ್ತಂಗತ, ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ, 01-22-2016
  9. Language without Speech
  10. https://books.google.co.in/books/about/The_Voice_of_the_Heart.html?id=19UZAAAACAAJ&redir_esc=y The voice of the heart-An autobiography by Mrinalini sarabhai]
  11. ಅವಾರ್ಡ್ ಗಳು, ಡಾಕ್ಟರೇಟ್ ಪದವಿ, ಇತ್ಯಾದಿ[ಶಾಶ್ವತವಾಗಿ ಮಡಿದ ಕೊಂಡಿ]
  12. ಪ್ರಜಾವಾಣಿ, ೦೧-೨೨-೨೦೧೬, ಮೃಣಾಲಿನಿ ಸಾರಾಭಾಯಿ ಇನ್ನಿಲ್ಲ
  13. : January 22, 2016, Indian express, Lakshmi ajay, Mrinalini Sarabhai: Amma’s last journey with ghungroo on feet

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. Rediff.com. jan, 2, 16 Mrinalini Sarabhai transformed Guajrat's cultural life
  2. hindustan times, 21, jan, 16 Legendary dancer Mrinalini Sarabhai dies at 97