ವಿಷಯಕ್ಕೆ ಹೋಗು

ಮೂಕಜ್ಜಿಯ ಕನಸುಗಳು (ಕಾದಂಬರಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂಕಜ್ಜಿಯ ಕನಸುಗಳು
ಲೇಖಕರುಕೆ. ಶಿವರಾಮ ಕಾರಂತ
ದೇಶಭಾರತ
ಭಾಷೆಕನ್ನಡ
ಪ್ರಕಾರಕಾದಂಬರಿ
ಪ್ರಕಾಶಕರುಎಸ್ ಬಿ ಎಸ್ ಪ್ರಕಾಶಕರು ಮತ್ತು ವಿತರಕರು (Kannada)
ಪ್ರಕಟವಾದ ದಿನಾಂಕ
೧೯೬೮
ಪುಟಗಳು೨೭೨
ಐಎಸ್‍ಬಿಎನ್9788172850623

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು ರಚಿಸಿರುವ ಒಂದು ಕಾದಂಬರಿ. ಈ ಕಾದಂಬರಿಗೆ ೧೯೭೭ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.[] ಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯೋ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮೊಮ್ಮಗನ ಪ್ರಶ್ನೆಗಳಿಗೆ ಅಜ್ಜಿ ತನ್ನ ಅನಿಸಿಕೆಗಳನ್ನು ಹೇಳುತ್ತಾ ಇಂದಿನ ಜಮಾನದ ಜನತೆಗೆ ಇರುವ ಹಲವು ಬಗೆಯ ಗೊಂದಲಗಳನ್ನು ಬಿಡಿಸಿ ತಿಳಿಸಿದ್ದಾರೆ.ಈ ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಒಂದು ಅಚ್ಚರಿಯಾದ ಶಕ್ತಿ ಇರುತ್ತದೆ.ಅದೇನೆಂದರೆ,ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುತ್ತವೆ.ಅಂದರೆ ಇವು ನಿದ್ದೆಯಲ್ಲಿ ಬರೋ ಕನಸುಗಳು ಅಲ್ಲ.ಎಚ್ಚರವಿದ್ದಾಗ ಬರುವ ಕನಸುಗಳು. ಈ ಕಾದಂಬರಿಯ ಕಥಾನಾಯಕಿ, ಮೂಕಜ್ಜಿ, ತನ್ನ ಕನಸುಗಳ ಬಗ್ಗೆ ಅವಳ ಮೊಮ್ಮಗನ ಹತ್ತಿರ ಹೇಳಿಕೊಳ್ಳುತ್ತಾಳೆ. ಈ ಕನಸುಗಳು ಮನುಷ್ಯನ ಸಾಮಾಜಿಕ ಬೆಳವಣಿಗೆಗಳು ಮತ್ತು ದೇವರ ಸ್ವರೂಪದ ಬಗ್ಗೆ ಇರುತ್ತದೆ.ಇಲ್ಲಿ ಹಲವು ಪಾತ್ರಗಳು ಬಂದು ಹೋದರು ಅಜ್ಜ್ಜಿ ಮತ್ತು ಮೊಮ್ಮಗನ ಪಾತ್ರಗಳು ಮುಖ್ಯವಾದವು ತಂತಮ್ಮ ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನರ ಕಥೆಯೂ ಇಲ್ಲಿದೆ. ಅದರಿಂದಾಗಿ ಇಂದಿನ ನಮಗೆ ಕೇಳಿಸದೇ ಹೋದ ಕೆಲವು ಯಾತನೆಯ ಧ್ವನಿಗಳನ್ನು ಲೇಖಕರು ಬಹಳ ಸೊಗಸಾಗಿ ಪುಟಗಳ ಮೇಲೆ ತಂದಿದ್ದಾರೆ.

ಹಿನ್ನಲೆ

[ಬದಲಾಯಿಸಿ]

ಕಾರoತರ ಈ ಕಾದoಬರಿಯು ಕರ್ನಾಟಕದ ಕರಾವಳಿಯ ಹಳ್ಲಿಯೊಂದರಲ್ಲಿ ನಡೆಯುತ್ತದೆ. ಕಾದಂಬರಿಯು ಪ್ರಾಚೀನಕಾಲದಿಂದ ನಂಬಿಕೊಂಡು ಬಂದಿರುವ ಸಂಪ್ರದಾಯಗಳನ್ನು, ದೇವರ ಅಸ್ತಿತ್ವವನ್ನು, ಇತಿಹಾಸ ಪರಂಪರೆಯನ್ನು, ಧಾರ್ಮಿಕ ವಿಧಿವಿಧಾನಗಳನ್ನು ಮತ್ತು ಅವುಗಳ ಹಿನ್ನಲೆಯನ್ನು ಅನ್ವೇಷಿಸುತ್ತದೆ. ಕಥೆಯು ಹಳ್ಳಿ ಜೀವನದ ಮಗ್ಗಲುಗಳನ್ನು, ಕೌಟುಂಬಿಕ ಸಂಬಂಧಗಳನ್ನು, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡುತ್ತದೆ. ಕಥೆಯು ಹೆಚ್ಚ್ರಾಗಿ ಕರಾವಳಿಯ ಕನ್ನಡವನ್ನು ಬಳಸುತ್ತದೆ.

ಕಥಾವಳಿ

[ಬದಲಾಯಿಸಿ]

ಸುಬ್ಬರಾಯನು ಕುತೂಹಲದ ವ್ಯಕ್ತಿ. ಅವನಿಗೆ ತಾನು ಚಿಕ್ಕವನಿಂದ ಕೇಳಿಕೊಂಡು ಬಂದಿರುವ ಕಥೆಗಳ ಹಿನ್ನಲೆ ಏನೆಂದು ತಿಳಿಯುವ ಕುತೂಹಲ. ಮೂಕಜ್ಜಿಯು ಸುಬ್ಬರಾಯನ ಅಜ್ಜಿ, ಅವಳ ಹೆಸರು ದೇವಿ ಮೂಕಾಂಬಿಕೆ ಮೇಲೆ ಇಡಲಾಗಿದೆ, ಅವಳೊಬ್ಬ ಅನಕ್ಷರಸ್ಥೆ, ವಿಧವೆ. ಕಥೆಯಲ್ಲಿ ಮೂಕಜ್ಜಿಗೆ ವಿಶೇಷವಾದ ಗ್ರಹಣಶಕ್ತಿ ಇದೆ, ಅವಳು ಹಿಂದೆ ನಡೆದುಹೋದ ಘಟನೆಗಳ, ಈಗ ಅಗುತ್ತಿರುವ ಘಟನೆಗಳ ಅರಿವಿದೆ. ಸುಬ್ಬರಾಯನು ತನ್ನ ಅಜ್ಜಿಯ ಜೊತೆ ನಡೆಸುವ ಚರ್ಚೆಗಳು ಕಾದಂಬರಿಯ ಜೀವಾಳ.

ಪಾತ್ರಗಳು

[ಬದಲಾಯಿಸಿ]
  • ಸುಬ್ಬರಾಯ- ಕಥೆಯ ನಾಯಕ,ನಿರೂಪಕ. ಸುಬ್ಬರಾಯನು ಒದಿದ ಹುಡುಗ, ಅವನಿಗೆ ಹಳ್ಳಿಯ ಧಾರ್ಮಿಕ ಆಚರಣೆಗಳ, ಅವುಗಳ ಇತಿಹಾಸ ತಿಳಿಯುವ ಹಂಬಲ.
  • ಮೂಕಜ್ಜಿ- ಸುಬ್ಬರಾಯನ ಅಜ್ಜಿ, ಅವಳ ಪೂರ್ಣ ಹೆಸರು ಮೂಕಾಂಬಿಕೆ ಅಂತ. ಕಾದಂಬರಿಯಲ್ಲಿ ಇವಳಿಗೆ ವಿಶೇಷವಾದ ಗ್ರಹಣಶಕ್ತಿ ಇದೆ, ಅವಳು ಹಿಂದೆ ನಡೆದುಹೋದ ಘಟನೆಗಳ, ಈಗ ಅಗುತ್ತಿರುವ ಘಟನೆಗಳನ್ನು ಸರಿಯಾಗಿ ಊಹಿಸುತ್ತಾಳೆ. ಹಳ್ಲಿಯ ಜನರ ಪ್ರಕಾರ ಈ ಅಜ್ಜಿಗೆ ಅರಳು ಮರಳು.
  • ಸೀತೆ-ಸುಬ್ಬರಾಯನ ಹೆಂಡತಿ.
  • ಜನಾರ್ಧನ-ಸುಬ್ಬರಾಯನ ಸ್ನೇಹಿತ, ಅವನೊಡನೆ ಇವನ ಒಡನಾಟ ಹೆಚ್ಚು.

ಬಹುಮಾನ, ಗೌರವಗಳು

[ಬದಲಾಯಿಸಿ]

ಮೂಕಜ್ಜಿಯ ಕನಸುಗಳು ಕಾದಂಬರಿಯು ೧೯೭೭ರ ಜ್ಞಾನಪೀಠ ಪ್ರಶಸ್ತಿ ಗಳಿಸಿತು.

ಉಲ್ಲೇಖಗಳು

[ಬದಲಾಯಿಸಿ]