ಮುಳ್ಳಪುಡಿ ವೆಂಕಟ ರಮಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಳ್ಳಪುಡಿ ವೆಂಕಟ ರಮಣ[ಬದಲಾಯಿಸಿ]

ಮುಳ್ಳಪುಡಿ ವೆಂಕಟ ರಮಣ (೨೮ ಜೂನ್,೧೯೩೧ - ೨೪ಫೆಬ್ರವರಿ,೨೦೧೧ ) ಒಬ್ಬ ತೆಲುಗು ಕಥೆಗಾರರು. ಅವರು ಹಾಸ್ಯ ಶೈಲಿಯ ಲೇಖನಗಳಿಗೆ ಪ್ರಸಿದ್ದರಾಗಿದ್ದಾರೆ. ಇವರು ಸೃಷ್ಟಿಸಿರುವ ಬುಡುಗು ಎಂಬ ಬಾಲನಟನ ಪಾತ್ರ ಬಹಳ ಪ್ರಸಿದ್ದವಾಗಿದೆ. ಇವರು ರಾಧಾ ಗೋಪಾಲಂ, ಕಾಂಟ್ರಾಕ್ಟರ್, ಟುಟ್ಟಿ ಎಂಬ ಇನ್ನಿತರ ಮರೆಯಲಾಗದ ಪಾತ್ರಗಳನ್ನು ರಚಿಸಿದ್ದಾರೆ. ಮುಳ್ಲಪೂಡಿಯವರು ಬಾಪು-ರಮಣ ಸಂಯೋಜನೆಯಿಂದ ಬಂದಿರುವ ಸಿನೆಮಾಗಳಿಗೆ ಸಂಭಾಷಣೆ, ಕಥೆ ಮತ್ತು ಚಿತ್ರಕಥೆಗಳನ್ನು ರಚಿಸಿದ್ದಾರೆ. ಅವರ ಬರಹಗಳು ಬಹಳ ಹೃದಯಸ್ಪರ್ಶವಾಗಿವೆ.

ಜೀವನ[ಬದಲಾಯಿಸಿ]

ಆರಂಭಿಕ ಜೀವನ ಶ್ರೀ ಮುಳ್ಳಪುಡಿ ವೆಂಕಟ ರಮಣ ಒಂದು ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರು.ಅವರು ತಮ್ಮ ಬಾಲ್ಯವನ್ನು ಹೆಚ್ಚಾಗಿ ಆಂಧ್ರಪ್ರದೇಶದ ರಾಜಮಂತ್ರಿಯ ಬಳಿ ಇರುವ ಧೊವಲೇಶ್ವರಂ ಎಂಬ ಪುಟ್ಟ ಗ್ರಾಮದಲ್ಲಿ ಕಳೆದರು. ಇವರಿಗೆ ಒಬ್ಬ ಅಕ್ಕ ಮತ್ತು ತಮ್ಮ ಇದ್ದಾರೆ. ರಮಣರ ಕುಟುಂಬದವರು ಬಹಳ ಸಂತೋಷದಿಂದರು. ರಮಣರಿಗೆ ಒಂಬತ್ತು ವರ್ಷಗಳಿದ್ದಾಗ ಅವರ ತಂದೆಯನ್ನು ಕಳೆದುಕೊಂಡರು. ಇದರಿಂದ ಅವರ ಮನೆಯಲ್ಲಿ ಹಣಕಾಸಿನ ತೊಂದರೆ ಉಂಟಾಗಿ ಉತ್ತಮ ಅವಕಾಶಗಳನ್ನು ಅರಸಿ ಅವರು ಚೆನೈಗೆ (ಆ ದಿನಗಳಲ್ಲಿ ಮದ್ರಾಸ್ ಎಂದು ಕರೆಯಲಾಗುತ್ತಿತ್ತು) ಸ್ಥಳಾಂತರರಾದರು. ರಮಣರ ತಾಯಿ ಶ್ರೀಮತಿ ಆದಿಲಕ್ಷ್ಮಿ ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಿಸುವ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡರು. ರಮಣರು ಮದ್ರಾಸಿನಲ್ಲಿ ತಮ್ಮ ಓದನ್ನು ಮುಗಿಸಿದರು. ತಮ್ಮ ಅಧ್ಯಯನದ ದಿನಗಳಲ್ಲಿ ತೆಲುಗು ಭಾಷೆಯ ಕಥೆಗಳನ್ನು ಬರೆಯುವ ಆಸಕ್ತಿಯನ್ನು ಬೆಳಸಿಕೊಂಡರು. ಇದೇ ಸಂದರ್ಭದಲ್ಲಿ ಅವರು ಬಾಪು ಅವರ ಜೊತೆ ಸೇಹ್ನವನ್ನು ಬೆಳೆಸಿದರು. ಇವರಿಬ್ಬರು ಒಳ್ಳೆಯ ಕಲಾವಿದರು. ರಮಣರು ಬರೆಯುವ ಕಲೆ ಇತ್ತು, ಬಾಪುವಿಗೆ ಚಿತ್ರಕಲೆಯ ಪ್ರತಿಭೆ ಇತ್ತು. ಅವರು ತಮ್ಮ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸಿ ಕೊಂಡು ತೆಲುಗು ಚಿತ್ರರಂಗಕ್ಕೆ ಉತ್ತಮಕೊಡುಗೆಗಳನ್ನು ನೀಡಿದ್ದಾರೆ . ಕಥಾ ರಮನೀಯಂ 'ಭಾಗ -1 ರಲ್ಲಿ ೮ ಪಾಠಗಳ ೪೦ ಕಥೆಗಳಲ್ಲಿ ಒಂದೊಂದು ನವರಸವನ್ನು ತೋರಿಸಿದ್ದಾರೆ.ಅವುಗಳಲ್ಲಿ ಕೆಲವು ಚಿತ್ರಗಳು ನಂತರ ಮಾಡಲಾಯಿತು. ಅದ್ಯಾವುದೆಂದರೆ ಸೀತಾ ಕಲ್ಯಾಣಂ, ಭೋಗಿಮಂಟ, ಸ್ವಯಂವರಂ ಇತ್ಯಾದಿ. ಕಥಾ ರಮನೀಯಂ 'ಭಾಗ -2 ಸುಮಾರು 45 ಕಥೆಗಳು ಹೊಂದಿರುವ ಕೆಲವು ಭಾರತೀಯ ಮಧ್ಯಮ ವರ್ಗದ ಜೀವನವನ್ನು ಪ್ರತಿನಿಧಿಸುತ್ತದೆ. ಮೂಡ ನಂಬಿಕೆಯನ್ನು ಎತ್ತಿ ಹಿಡಿಯುವ ಸಮಾಜದಲ್ಲಿ ಕೆಳವರ್ಗದ ಜನರನ್ನು ನಡೆಸಿಕೊಳ್ಳುವ ರೀತಿಯನ್ನು ಈ ಪುಸ್ತಕದಲ್ಲಿ ಬಹಳ ಉತ್ತಮವಾಗಿ ಚಿತ್ರಿಸಲಾಗಿದೆ.

ವೃತ್ತಿ:[ಬದಲಾಯಿಸಿ]

ಮದ್ರಾಸಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ನಂತರ, ರಮಣರು ೧೯೫೩ರಲ್ಲಿ ಆಗಿನ ಜನಪ್ರಿಯ ಪತ್ರಿಕೆ "ಆಂಧ್ರ ಪತ್ರಿಕಾ" ವರದಿಗಾರರಾಗಿ ಪ್ರಾರಂಭಿಸುವ ಮೊದಲು ಅನೇಕ ವಿಲಕ್ಷಣ ಕೆಲಸಗಳನ್ನು ಮಾಡಲೇಬೇಕಿತ್ತು. ಇಲ್ಲಿ ಅದೇ ಪತ್ರಿಕೆಗೆ ಕೆಲಸ ಮಾಡುತ್ತಿದ್ದ ನಂದೂರಿ ರಾಮಮೋಹನ ರಾವ್, ಪಿಲಕ ಗಣಪತಿ ಶಾಸ್ತ್ರಿ, ಸುರಂಪುಡಿ ಸೀತಾರಾಮ್ ಮುಂತಾದ ತೆಲುಗು ಸಾಹಿತ್ಯದ ಶ್ರೇಷ್ಠ ಬರಹಗಾರರ ಜೊತೆ ವ್ಯವಹರಿಸಲು ರಮಣರಿಗೆ ಅವಕಾಶ ಸಿಕ್ಕಿತು. ಶ್ರೀರಮಣರು ಮೊದಲು ದಿನಪತ್ರಿಕೆ "ಡೈಲಿ" ವಿಭಾಗದಲ್ಲಿ ಕೆಲಸ ಮಾಡುತ್ತಿದರು ನಂತರ "ವೀಕ್ಲಿ" ವಿಭಾಗಕ್ಕೆ ವರ್ಗಾವಣೆಯಾದರು. ಇಲ್ಲಿ ಕೆಲಸ ಮಾಡುತ್ತಿದ್ದಾಗ, ಬುಡುಗು (ಚಿಕ್ಕ ಮಗು) ಎಂಬ ಇವರ ಕಥೆ ಪ್ರಕಟವಾಯಿತು ಹಾಗೂ ಜನಪ್ರಿಯತೆಯನ್ನು ಗಳಿಸಿತು. ಕುಟುಂಬದ ಹಿರಿಯರ ಬಗ್ಗೆ ಪುಟ್ಟ ಮಕ್ಕಳ ವೀಕ್ಷಣೆಗಳನ್ನು ಪ್ರಸ್ತುತಪಡಿಸಲು ಈ ಕಥೆಯನ್ನು ರಚಿಸಿದ್ದಾರೆ. ಈ ಕಥೆ ಮಕ್ಕಳಿಗೆ ಹಾಸ್ಯಮಯವಾಗಿರುತ್ತವೆ ಹಾಗೂ ತಮ್ಮ ಮಕ್ಕಳ ಚಿಂತನ ಪ್ರಕ್ರಿಯೆ ತಿಳಿಯಲು ಹಿರಿಯರಿಗೆ ಸಹಾಯ ಮಾಡುತ್ತದೆ. ನಂತರ, ಈ ಕಥೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಯಿತು. ಪತ್ರಿಕೆಯಲ್ಲಿ ಸಿನಿಮಾದ ಪುಟ ಬರೆಯುವಾಗ, ರಮಣರ ನೇರ ಬರವಣಿಗೆ ಅವರ ಚಿತ್ರ ವಿಮರ್ಶೆಗಳು ಜನಪ್ರಿಯವಾಗಲು ನೆರವಾಯಿತು. ಇದರಿಂದ ಇವರು ಚಲನಚಿತ್ರರಂಗಕ್ಕೆ ಪರಿಚಿತವಾದರು ಹಾಗೂ ಪ್ರಸಿದ್ಧ ನಟ ನಟಿಯರ ಜೊತೆ ಗೆಳೆತನವಾಯಿತು. ಇದೇ ಸಮಯದಲ್ಲಿ ಅದುರ್ತಿ ಸುಬ್ಬರಾವ್ ಮತ್ತು ದುಂಡಿ ಎಂಬ ಮಹಾನ್ ನಿರ್ದೇಶಕರು ಪರಿಚಯವಾಗಿ ಅವರು ರಮಣರಿಗೆ ಚಿತ್ರರಂಗದಲ್ಲಿ ಕೆಲಸಮಾಡಲು ಪ್ರೊತ್ಸಾಹಿಸಿದರು.

ಚಲನಚಿತ್ರಗಳು[ಬದಲಾಯಿಸಿ]

ರಮಣರ ಉತ್ತಮ ರಚನ ಶೈಲಿಯಿಂದ ಅವರ ಚಲನಚಿತ್ರವಿಮರ್ಶೆ ಮತ್ತು ಸಿನಿಮಾ ಕಥೆಗಳು ಪ್ರಸಿದ್ಧವಾದವು. "ವೆಲುಗುನೀದಲು", "ಕನ್ನೆಮನಸುಲು" ಮುಂತಾದ ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೊಟ್ಟು ಹಿಟ್ ಮಾಡಿದರು. ಮೂಗ ಮನಸುಲು, ಭಾರ್ಯಾ ಭರ್ತಲು, ವೆಲುಗುನೀದಲು ಮುಂತಾದ ಚಿತ್ರಗಳು ಇವರಿಗೆ ಉತ್ತಮ ಕಥೆಗಾರ ಎಂಬ ಹೆಸರು ತಂದುಕೊಟ್ಟವು. ನಂತರ, ಅವರ ಚಿತ್ರದ ಕಥೆಗಾರರಾಗಿ ತನ್ನ ಪತ್ರಕರ್ತ ಕೆಲಸವನ್ನು ತ್ಯಜಿಸಿದರು. ತನ್ನ ಬಾಲ್ಯ ಸ್ನೇಹತ ಬಾಪುವಿನ ಜೊತೆ ಸೇರಿಕೊಂಡು ಸಾಕ್ಷಿ ಎಂಬ ಮೊದಲನೆಯ ಚಲನಚಿತ್ರಕ್ಕೆ ಸಹ-ನಿರ್ಮಾಪಕರಾಗಿ ಕೆಲಸ ಮಾಡಿದರು. ನಂತರ ಭಕ್ತ ಕನ್ನಪ್ಪ, ಸಂಪೂರ್ಣ ರಾಮಾಯಣಂ ಮುಂತಾದ ಹಿಟ್ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಟೆಲಿವಿಷನ್:[ಬದಲಾಯಿಸಿ]

೧೯೮೫-೧೯೯೦ ರವರೆಗೆ ಶ್ರೀ ಬಾಪು ಮತ್ತು ಶ್ರೀ ರಮಣರವರು ಮಕ್ಕಳಿಗಾಗಿ ವಿಡಿಯೋಗಳನ್ನು ತಯಾರಿಸಿ ಟೆಲಿವಿಷನ್ ಮೂಲಕ ಪ್ರದರ್ಶಿಸಿದರು. ಇಂದು ನಮ್ಮ ಸಂಗೀತ ನಿರ್ದೇಶಕ ಎ ಆರ್ ರಹ್ಮಾನ್ ರವರು ಅಂದು ಬಾಪು ರಮಣರ ಕೆಲವು ವಿಡಿಯೋಗಳಿಗೆ ಡ್ರಮ್ಮರ್ ಹಾಗಿ ಕೆಲಸ ಮಾಡಿದ್ದರು. ಬಾಪು-ರಮಣ ಸಂಯೋಜನೆಯಿಂದ ಬಂದ "ಭಾಗವತಂ" ಎಂಬ ಧಾರಾವಾಹಿ ಈಟೀವಿನಲ್ಲಿ ಪ್ರಸಾರವಾಯಿತು. ಈ ಧಾರವಾಹಿ ಬಹಳ ಜನಪ್ರಿಯತೆಯನ್ನು ಗಳಿಸಿತು.

ಆತ್ಮಚರಿತ್ರೆ:[ಬದಲಾಯಿಸಿ]

ಕೋತಿ ಕೊಮ್ಮಚಿ, ಇಂಕೋತಿ ಕೊಮ್ಮಚಿ, ಮುಕ್ಕೋತಿ ಕೊಮ್ಮಚಿ, ಮುಂತಾದ ಮೂರು ಸಂಪುಟಗಳಲ್ಲಿ ಪುಸ್ತಕ ಮತ್ತು ಆಡಿಯೋ ರೂಪದ ಮೂಲಕ ಇವರ ಆತ್ಮಚರಿತ್ರೆ ರಚಿಸಿದ್ದಾರೆ.

ಪ್ರಶಸ್ತಿಗಳು:[ಬದಲಾಯಿಸಿ]

೧೯೮೬ರಲ್ಲಿ ಆಂಧ್ರ ಪ್ರದೇಶದಿಂದ "ರಘುಪತಿ ವೆಂಕೈಯ್ಯ ಪ್ರಶಸ್ತಿ"ಲಭಿಸಿದೆ. ತಿರುಪತಿಯ ಶ್ರೀ ವೆಂಕಟೇಶ್ವರ ಯೂನಿವೆರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ.

ಮರಣ:[ಬದಲಾಯಿಸಿ]

ರಮಣರವರು ೨೪ ಫೆಬ್ರವರಿ ೨೦೧೧ರಂದು ಚೆನೈನಲ್ಲಿ ಅನಾರೋಗ್ಯದಿಂದ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

<References>

  • Ramana's stories by MBS Prasad</ref>
  • Vikramarkudi marku simhasanam kathalu preview by MBS Prasad</ref>