ಮುನಿಯಾಲ್ ಗಣೇಶ್ ಶೆಣೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುನಿಯಾಲ್ ಗಣೇಶ್ ಶೆಣೈ ೧೯೫೮ ಅಕ್ಟೋಬರ್ ೬ರಂದು ಮುನಿಯಾಲು ಗ್ರಾಮದಲ್ಲಿ ಶ್ರೀ ಪದ್ಮನಾಭ ಶೆಣೈ ಮತ್ತು ಸುಮತಿ ಶೆಣೈ ದಂಪತಿಯ ಮೂರನೆಯ ಪುತ್ರನಾಗಿ ಹುಟ್ಟಿದರು.

ಶಿಕ್ಷಣ[ಬದಲಾಯಿಸಿ]

ವಿಜ್ಞಾನ ಮತ್ತು ಇತಿಹಾಸದಲ್ಲಿ ಶಿಕ್ಷಣದೊಂದಿಗೆ ರಷ್ಯನ್ ಭಾಷೆ ಪತ್ರಿಕೋದ್ಯಮ, ಫಾರ್ಮಸ್ಯುಟಿಕಲ್ ಟೆಕ್ನಾಲಜಿ, ಅಂಗಾಂಶ ಕೃಷಿ, ಔಷಧೀಯ ಮತ್ತು ಸುಗಂಧ ಬೆಳೆಗಳ ಉತ್ಪಾದನೆ ಮುಂತಾದ ವಿಷಯಗಳಲ್ಲಿ ಶೈಕ್ಷಣಿಕ ತರಬೇತಿಯನ್ನು ಪಡೆದರು. ಎಡಪಂಥೀಯ ಕೆಂಭಾವುಟ ಪತ್ರಿಕೆಯ ಪರವಾಗಿ ವಿಧಾನಸೌಧದಲ್ಲಿ ವರದಿಗಾರನಾಗಿ, ಸಂಕೇತ ಪತ್ರಿಕೆಯ ಲೇಖಕನಾಗಿ, ಹೊಸ ದಿಗಂತ ಪತ್ರಿಕೆಯಲ್ಲಿ ವಿಜ್ಞಾನ ಪ್ರಪಂಚ ಮತ್ತು ಪುಸ್ತಕ ಪ್ರಪಂಚವೆಂಬ ಎರಡು ಅಂಕಣಗಳ ಬರಹಗಾರನಾಗಿ ಸೇವೆ ಸಲ್ಲಿಸಿದ್ದಾರೆ.

ಸಸ್ಯ ಸಂಕುಲ[ಬದಲಾಯಿಸಿ]

ನಮ್ಮ ಸುತ್ತಮುತ್ತಲಿನ ಗಿಡಮರಗಳನ್ನು ಪರಿಚಯ ಮಾಡಿಕೊಳ್ಳುವ ಉದ್ದೇಶದಿಂದ 'ಸಸ್ಯಸಂಪದ' ಎಂಬ ಮಾಲಿಕೆಯನ್ನು ಇವರು ಬರೆದಿದ್ದಾರೆ. ಇದು ೧೦೦ ಗಿಡಮರಗಳನ್ನು ಪರಿಚಯಿಸುವ ೧೦೦ ಪುಸ್ತಕಗಳ ಮಾಲಿಕೆಯಾಗಿದೆ.

ಅಳಿಯುತ್ತಿರುವ ಸಸ್ಯ ಸಂಕುಲವನ್ನು ಗುರುತಿಸಿ, ಸಂರಕ್ಷಿಸುವ ಉದ್ದೇಶದಿಂದ ಮತ್ತು ಸಸ್ಯ ಪ್ರಪಂಚವನ್ನು ಗುರುತಿಸಿ ಸಾರ್ವಜನಿಕರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಹಸಿರು ಭಾರತ ಆಂದೋಲನವೆಂಬ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ಮೂರುವರೆ ದಶಕಗಳಿಂದ ಜನಪದ ವೈದ್ಯಕೀಯ ಮತ್ತು ಪಾರಂಪರಿಕ ಜ್ಞಾನಗಳ ಕುರಿತು ಅಧ್ಯಯನ ಕ್ಷೇತ್ರ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಅದರ ಫಲವಾಗಿ ಈಗ ಗಿಡಮೂಲಿಕೆಗಳು ಬಳಸಿ ನೂರಾರು ಹೊಸ ಉತ್ಪನ್ನಗಳನ್ನು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಪ್ರಕಟಿತ ಕೃತಿಗಳು[ಬದಲಾಯಿಸಿ]

ಮಕ್ಕಳ ಸಾಹಿತ್ಯ[ಬದಲಾಯಿಸಿ]

ವೆರಿಯರ್ ಎಲ್ವಿನ್, ನಾಯಿ,ಜಾದೂಕುಂಚ, ಸುಖವೆಂಬ ಪಕ್ಷಿ

ವಿಜ್ಞಾನ ಸಾಹಿತ್ಯ[ಬದಲಾಯಿಸಿ]

ನೂರೇಳು ಮಿತ್ರರು, ಅಂತರ ತಾರಾ ಮೋಡಗಳು, ಕಾಣೆಯಾದ ಪಕ್ಷಿ, ಜೀವ ವಿಕಾಸದಲ್ಲಿ ಸಣ್ಣ ಪ್ರಾಣಿ ದೊಡ್ಡ ಪ್ರಾಣಿ, ನಿಗೂಢ ಆಕಾಶ, ಪ್ರನಾಳದಲ್ಲಿ ಹಣ್ಣಿನ ರಸ, ವಿಜ್ಞಾನ ವಿಸ್ಮಯ, ವಿಜ್ಞಾನ ವೈವಿಧ್ಯ

ಆಧ್ಯಾತ್ಮಿಕ[ಬದಲಾಯಿಸಿ]

ಹುಲ್ಲು ಮತ್ತು ಆತ್ಮಜ್ಞಾನ, ತುಂಬಿದ ಬಟ್ಟಲು(ಝೆನ್ ಸಾಹಿತ್ಯ)

ಸಂಕೀರ್ಣ[ಬದಲಾಯಿಸಿ]

ವಿಶ್ವಬ್ಯಾಂಕ್: ಏನಿದು?, ಸ್ವಂತ ಉದ್ಯಮ ಆರಂಭಿಸುವುದು ಹೇಗೆ?, ಮರುಭೂಮಿ ಕಾಡಾಯಿತು, ಮನೆಯಲ್ಲೇ ಓದಿ ಪದವೀಧರರಾಗಿ, ಯಾರಿಗೆ ಬೇಕಿದೆ ಇತಿಹಾಸ

ಆರೋಗ್ಯ[ಬದಲಾಯಿಸಿ]

'ಎಚ್.ಐ.ವಿ. ಸೋಂಕಿದ್ದರೇನು ಬದುಕಿಯೇ ಸಿದ್ಧ ನಾನು'(ವೀಣಾಧಾರಿ ಜೀವನಕಥೆ), ಆರೋಗ್ಯಕ್ಕಾಗಿ, ಸೌಂದರ್ಯಕ್ಕಾಗಿ ಗೋಧಿ ಹುಲ್ಲಿನ ಜ್ಯೂಸ್, ಹಂದಿಜ್ವರ, ಚರ್ಮದ ಸಮಸ್ಯೆಗಳಿಗೆ ಮನೆ ಔಷಧಗಳು, ಹೊಟ್ಟೆಯ ಸಮಸ್ಯೆಗಳಿಗೆ ಮನೆ ಔಷಧಗಳು, ಮನೆಯಲ್ಲೇ ಡಾಕ್ಟರ್ ಭಾಗ ೧ & ಭಾಗ ೨

ಸದಸ್ಯತ್ವ[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]

  • ರಾಜ್ಯ ಮಟ್ಟದ ಮಾಧ್ಯಮ ಪ್ರಶಸ್ತಿ
  • ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವರ್ಷದ ಶ್ರೇಷ್ಠ ಲೇಖಕ ಪ್ರಶಸ್ತಿ

ನಾಲಂದಾ ಸಂಸ್ಥೆ[ಬದಲಾಯಿಸಿ]

ಪ್ರಸ್ತುತ ಕುಂದಾಪುರದಲ್ಲಿ ನಾಲಂದಾ ಎಂಬ ಸಾವಯವ-ಗಿಡಮೂಲಿಕೆ-ಆಯುರ್ವೇದ ಉತ್ಪನ್ನಗಳ ಮಳಿಗೆಯನ್ನು, ನಾಲಂದಾ ಸಾಹಿತ್ಯ ಮತ್ತು ನಾಲಂದಾ ಟ್ರಾವೆಲ್ಸ್ ಎಂಬ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.