ಮಾರಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಬ್ಬ ಪ್ರಯಾಣಿಕೆಗೆ ಬೀ‍ಚ್‍ನಲ್ಲಿ ಕಂಠಹಾರಗಳನ್ನು ತೋರಿಸುತ್ತಿರುವ ಮಾರಾಟಗಾರ
ಹಳ್ಳಿಯಲ್ಲಿ ತರಕಾರಿ ಮಾರುವವನು

ಮಾರಾಟ (ವಿಕ್ರಯ) ಎಂದರೆ ಮಾರುವುದು ಅಥವಾ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಮಾರಲಾದ ಸರಕುಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು.

ಮಾರಾಟಗಾರ, ಅಥವಾ ಸೇವೆಗಳು ಅಥವಾ ಸರಕುಗಳನ್ನು ಒದಗಿಸುವವನು, ಸ್ವಾಧೀನ, ವಶಪಡಿಸಿಕೊಳ್ಳುವಿಕೆ, ವಿನಂತಿ ಅಥವಾ ಮಾರಾಟದ ಸ್ಥಳದಲ್ಲಿ ಖರೀದಿಸುವವನೊಂದಿಗೆ ನೇರ ಸಂಭಾಷಣೆಗೆ ಪ್ರತಿಯಾಗಿ ಮಾರಾಟವನ್ನು ಪೂರ್ಣಗೊಳಿಸುತ್ತಾನೆ.[೧] ವಸ್ತುವಿನ ಹಕ್ಕಿನ ವರ್ಗಾವಣೆ, ಮತ್ತು ಬೆಲೆಯ ಇತ್ಯರ್ಥವಾಗುತ್ತದೆ. ಇದರಲ್ಲಿ ವಸ್ತುವಿನ ಒಡೆತನದ ವರ್ಗಾವಣೆಯಾಗುವ ಬೆಲೆಯ ಒಪ್ಪಂದವಾಗುತ್ತದೆ. ಮಾರುವವನು (ಖರೀದಿಸುವವನಲ್ಲ) ಸಾಮಾನ್ಯವಾಗಿ ಮಾರಾಟವನ್ನು ನೆರವೇರಿಸುತ್ತಾನೆ ಮತ್ತು ಇದು ಸಂದಾಯದ ಕರ್ತವ್ಯದ ಮುನ್ನವೇ ಪೂರ್ಣಗೊಳ್ಳಬಹುದು. ಪರೋಕ್ಷ ಸಂವಹನದ ಸಂದರ್ಭದಲ್ಲಿ, ಮಾಲೀಕನ ಪರವಾಗಿ ಸರಕುಗಳು ಅಥವಾ ಸೇವೆಯನ್ನು ಮಾರಾಟ ಮಾಡುವ ವ್ಯಕ್ತಿಯನ್ನು ಮಾರಾಟಗಾರ ಅಥವಾ ಮಾರಾಟಗಾರ್ತಿ ಎಂದು ಕರೆಯಲಾಗುತ್ತದೆ. ಹಲವುವೇಳೆ ಇದು ಅಂಗಡಿಯಲ್ಲಿ ಸರಕುಗಳನ್ನು ಮಾರುವವರನ್ನು ಸೂಚಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Part III, effects of the contract, Rule 5. Sale of Goods Act 1979. Sale of Goods Act 1979
"https://kn.wikipedia.org/w/index.php?title=ಮಾರಾಟ&oldid=928127" ಇಂದ ಪಡೆಯಲ್ಪಟ್ಟಿದೆ