ಮಹಾದೇವಿ ವರ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾದೇವಿ ವರ್ಮಾ
Mahadevi Verma
महादेवी वर्मा
ಮಹಾದೇವಿ ವರ್ಮಾ
ಜನನ(೧೯೦೭-೦೩-೨೬)೨೬ ಮಾರ್ಚ್ ೧೯೦೭
ಫ಼ಾರುಖಾಬಾದ್, ಫ಼ಾರುಖಾಬಾದ್ ಜಿಲ್ಲೆ, ಉತ್ತರ ಪ್ರದೇಶ, ಬ್ರಿಟಿಷ್ ಇಂಡಿಯಾ
ಮರಣ11 September 1982(1982-09-11) (aged 75)
ಅಲಹಾಬಾದ್, [ಉತ್ತರ ಪ್ರದೇಶ]], ಭಾರತ
ವೃತ್ತಿಬರಹಗಾರ್ತಿ, ಕವಯಿತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ, ಶಿಕ್ಷಣ ತಜ್ಞೆ
ರಾಷ್ಟ್ರೀಯತೆಭಾರತೀಯ
ಜನಾಂಗೀಯತೆಹಿಂದು
ಪೌರತ್ವಭಾರತೀಯ
ವಿದ್ಯಾಭ್ಯಾಸಎಮ್. ಎ. (ಸಂಸ್ಕೃತ)
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಕ್ರಾಸ್ತ್ವಾಯಿಟ್ ಬಾಲಕಿಯರ ಶಾಲೆಯ, ಅಲಹಾಬಾದ್, ಉತ್ತರ ಪ್ರದೇಶ
ಕಾಲChhayavaad
ಪ್ರಕಾರ/ಶೈಲಿಕಾವ್ಯ, ಸಾಹಿತ್ಯ
ಸಾಹಿತ್ಯ ಚಳುವಳಿಛಾಯಾವಾದಿ
ಪ್ರಮುಖ ಕೆಲಸ(ಗಳು)ಮೆರೆ ಬಚ್ಪನ್ ಕೆ ದಿನ್.
ಪ್ರಮುಖ ಪ್ರಶಸ್ತಿ(ಗಳು)೧೯೭೯: ಸಾಹಿತ್ಯ ಅಕಾಡೆಮಿ ಫ಼ೆಲೋಷಿಪ್
೧೯೮೨: ಜ್ಞಾನಪೀಠ ಪ್ರಶಸ್ತಿ
೧೯೫೬: ಪದ್ಮಭೂಷಣ
೧೯೮೮: ಪದ್ಮ ವಿಭೂಷಣ

ಮಹಾದೇವಿ ವರ್ಮಾ (೧೯೦೭- ೧೧, ಸೆಪ್ಟೆಂಬರ್ ೧೯೮೭) ಹಿಂದಿ ಭಾಷೆಯ ಪ್ರಸಿದ್ಧ ಕವಯಿತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ ಹಾಗು ಶಿಕ್ಷಣ ತಜ್ಞೆ.೧೯೧೪ರಿಂದ ೧೯೩೮ರವ[೧]ರೆಗೆ ಹಿಂದಿ ಸಾಹಿತ್ಯಲೋಕದಲ್ಲಿ ನೆಡೆದ ಛಾಯಾವಾದ ಸಾಹಿತ್ಯ ಪ್ರಕಾರ ಹಾಗು ಹಲವು ಕವಿ ಸಮ್ಮೇಳನಗಳಲ್ಲಿ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. "ಆಧುನಿಕ ಮೀರಾ"[೨] ಎಂದು ಖ್ಯಾತರಾಗಿದ್ದ ಇವರು ೧೯೮೨ ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.

ಅಲಹಾಬಾದಿನಲ್ಲಿರುವ ಪ್ರಯಾಗ್ ಮಹಿಳಾ ವಿದ್ಯಾಪೀಠದ ಪ್ರಾಂಶುಪಾಲೆ ಹಾಗು ಉಪ-ಕುಲಪತಿಯಾಗಿಯು ಸಹ ಇವರು ಕಾರ್ಯ ನಿರ್ವಹಿಸಿದರು.

ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ಮಹಾದೇವಿ ವರ್ಮಾರವರು ೨೭ ಏಪ್ರಿಲ್ ೧೯೦೭ರಂದು ಉತ್ತರ ಪ್ರದೇಶದ, ಫಾರುಖಾಬಾದಿನ ಹಿಂದು ಉದಾರವಾದಿ ವಕೀಲರ ಕುಟುಂಬದಲ್ಲಿ ಜನಿಸಿದರು.

೧೯೧೬ರಲ್ಲಿ ಮಹಾದೇವಿಯವರು ೯ ವರ್ಷದವರಾಗಿದ್ದಾಗ ಅವರ ವಿವಾಹವನ್ನು ನಿಶ್ಚಯಿಸಿ ನೆರವೇರಿಸಲಾಯಿತು. ಆದರೆ ಮದುವೆಯ ನಂತರವೂ ಮಹಾದೇವಿಯವರು ತಮ್ಮ ತವರಿನಲ್ಲಿಯೇ ಉಳಿದು ತಮ್ಮ ಅಲಹಾಬಾದಿನ ಕ್ರಾಸ್ತ್ವಾಯಿಟ್ ಬಾಲಕಿಯರ ಶಾಲೆಯ[೩]ಲ್ಲಿ ತಮ್ಮ ವಿದ್ಯಾಭಾಸವನ್ನು ಮುಂದುವರಿಸಿದರು. ಈ ಶಾಲೆಯಲ್ಲಿಯೇ ಅವರು ಮುಂದೊಂದು ದಿನ ಇವರಂತೆಯೇ ಪ್ರಸಿದ್ಧ ಕವಯಿತ್ರಿಯೆಂದು ಗುರುತಿಸಿಕೊಂಡ ಸುಭದ್ರ ಕುಮಾರಿ ಚೌಹಾಣ್ರನ್ನು ಸಹಪಾಠಿಯಾಗಿ ಭೇಟಿಯಾದರು.[೩]

"ಇತರರು ಹೊರಗಡೆ ಆಟವಾಡುವಾಗ, ನಾನು ಹಾಗು ಸುಭದ್ರ ಒಂದು ಮರದ ಮೇಲೆ ಕುಳಿತು, ನಮ್ಮ ಸೃಜನಾತ್ಮಕ ಆಲೋಚನೆಗಳನ್ನು ಹರಿಬಿಡುತ್ತಿದ್ದೆವು. ಅವಳು ಖರಿಬೋಲಿಯಲ್ಲಿಬರೆಯುತ್ತಿದ್ದಳು, ಇದನ್ನು ಕಂಡು ನಾನು ಸಹ ಖರಿಬೋಲಿಯಲ್ಲಿ ಬರೆಯಲು ಆರಂಭಿಸಿದೆ. ಈ ರೀತಿಯಾಗಿ ನಾವು ದಿನಕ್ಕೆ ಒಂದು ಅಥವ ಎರಡು ಪದ್ಯಗಳನ್ನು ಬರೆಯಲಾರಂಭಿಸಿದೆವು.."

— ತಮ್ಮ ಹಾಗು ಸುಭದ್ರರವರ ಗೆಳೆತನದ ಬಗ್ಗೆ ಮಹಾದೇವಿಯವರು ತಮ್ಮ ಬಾಲ್ಯದ ಆತ್ಮಚರಿತ್ರೆ "ಮೆರೆ ಬಚ್ಪನ್ ಕೆ ದಿನ್"ನಲ್ಲಿ ಬರೆದಿರುವ ತುಣುಕು.

ಇವರು ತವರಿನಲ್ಲಿರುವಾಗ ಇವರ ಪತಿಯು ಲಕ್ನೊನಲ್ಲಿ ತಮ್ಮವ್ಯಾಸಂಗ ಮಾಡುತ್ತಿದ್ದರು. ಈ ಸಮಯದಲ್ಲಿ ತಮ್ಮ ಉನ್ನತ ವ್ಯಾಸಂಗವನ್ನು ಅಲಹಾಬಾದ್ ವಿಶ್ವವಿದ್ಯಾಲಯದಿಂದ ಪಡೆದ ಮಹಾದೇವಿಯವರು, ೧೯೨೯ರಲ್ಲಿ ಬಿ.ಎ ಪದವಿ ಪಡೆದು, ೧೯೩೩ರಲ್ಲಿ ಸಂಸ್ಕೃತದಲ್ಲಿ ಎಮ್.ಎ ಪದವಿ ಪಡೆದರು.

ತಮ್ಮ ಬಾಲ್ಯದ ಆತ್ಮಚರಿತ್ರೆ "ಮೆರೆ ಬಚ್ಪನ್ ಕೆ ದಿನ್"ನಲ್ಲಿ, ಮಹಾದೇವಿ ವರ್ಮಾರವರು ಆ ಕಾಲದಲ್ಲಿ ಇದ್ದ ಲಿಂಗ ತಾರತಮ್ಯದ ಬಗ್ಗೆ ಚರ್ಚಿಸುತ್ತಾ ಹೇಗೆ ಒಂದು ಹಿಂದು ಉದಾರವಾದಿ ಕುಟುಂಬದಲ್ಲಿ ಜನಿಸಿದ್ದು ಇವರ ಅದೃಷ್ಟ ಎಂಬುದನ್ನು ಉಲ್ಲೇಖಿಸಿದ್ದಾರೆ . ಇವರ ತಾತನವರು ಇವರ ಬಾಲ್ಯ ವಿವಾಹಕ್ಕೆ ಕಾರಣರಾದರೂ ಸಹ, ಮಹಾದೇವಿಯವರನ್ನು ಒಬ್ಬ ಉತ್ತಮ ವಿದ್ವಾಂಸರನ್ನಾಗಿ ಕಾಣಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದರು[೩]. ಮಹಾದೇವಿಯವರ ತಾಯಿಯು ಸಂಸ್ಕೃತ ಹಾಗು ಹಿಂದಿಯನ್ನು ಸುಲಲಿತವಾಗಿ ಬಲ್ಲವರಾಗಿದ್ದರು ಹಾಗು ಧರ್ಮನಿಶ್ಠರಾಗಿದ್ದರು. ಮಹಾದೇವಿಯವರು ಸಾಹಿತ್ಯದ ಮೇಲಿನ ತಮ್ಮ ತಾಯಿಯವರೇ ಸ್ಪೂರ್ತಿ ಎಂದು ಹಲವೆಡೆ ಬಣ್ಣಿಸಿದ್ದಾರೆ.[೪]

೧೯೨೯ರಲ್ಲಿ ತಮ್ಮ ಪದವಿ ಪಡೆದ ನಂತರ, ಮಹಾದೇವಿಯವರು ಸಂಪ್ರದಾಯದ ವಿರುದ್ದ ಬಂಡಾಯವೆದ್ದು,ತಮ್ಮ ಪತಿ ಡಾ. ಸ್ವರೂಪ್ ನಾರಾಯಣ್ ವರ್ಮಾ ರೊಂದಿಗೆ ಬಾಳಲು ನಿರಾಕರಿಸಿದರು. ತಮ್ಮ ಪತಿಯನ್ನು ಮರುಮದುವೆ ಮಾಡಿಕೊಳ್ಳುವಂತೆ ಮನವೊಲಿಸುವ ವಿಫಲ ಪ್ರಯತ್ನವನ್ನೂ ಮಾಡಿದರು[೫].

ಮೊದಮೊದಲು ಬೌದ್ಧ ಸನ್ಯಾಸಿನಿಯಾಗುವ ಆಲೋಚನೆ ಮಾಡಿದ ಮಹಾದೇವಿಯವರು, ತಮ್ಮ ಮಾಸ್ಟರ್ಸ್ ಪದವಿಗಾಗಿ ಪಾಲಿ ಹಾಗು ಪ್ರಾಕ್ರಿತ್ ಪಠ್ಯಗಳನ್ನು ಅಭ್ಯಸಿಸದ ಅವರು ,ಅಂತಿಮವಾಗಿ ಸನ್ಯಾಸಿನಿಯಾಗುವ ಆಲೋಚನೆಯನ್ನು ಕೈಬಿಟ್ಟರು.[೫]

ವೃತ್ತಿ ಜೀವನ[ಬದಲಾಯಿಸಿ]

೧೯೩೦ರಲ್ಲಿ ಅಲಹಾಬಾದಿನ ಹಳ್ಳಿಗಳಲ್ಲಿ ಇವರು ಪಾಠ ಮಾಡಲಾರಂಭಿಸಿದರು[೩]. ರಾಜನೀತಿಕ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಇವರು ಭಾಗವಹಿಸದಿದ್ದರೂ, ಇವರು ಗಾಂಧಿ ತತ್ವಗಳನ್ನು ಅನುಸರಿಸತೊಡಗಿದರು. ಇದರ ಅನುಸಾರ ಮಹಾದೇವಿಯವರು ಇಂಗ್ಲೀಷಿನಲ್ಲಿ ಮಾತಾಡುವುದನ್ನು ನಿಲ್ಲಿಸಿದರು ಹಾಗು ಖಾದಿ ಬಟ್ಟೆಗಳನ್ನು ಮಾತ್ರ ಉಪಯೋಗಿಸತೊಡಗಿದರು.

೧೯೩೩ರಲ್ಲಿ ಅಲಹಾಬಾದಿನ(ಪ್ರಯಾಗದ) ಮಹಿಳಾ ವಿದ್ಯಾಪೀಠದ ಮುಖ್ಯೋಪಾಧ್ಯಾಯಕಿಯಾಗಿ ಇವರ ನೇಮಕವಾಯಿತು. ಈ ವಿದ್ಯಾಪೀಠವನ್ನು ಹುಡುಗಿಯರಲ್ಲಿ ಸಾಂಸ್ಕೃತಿಕ ಹಾಗು ಸಾಸಿತ್ಯಕ ಶಿಕ್ಷಣವನ್ನು ಹಿಂದಿ ಮಾಧ್ಯಮದ ಮೂಲಕ ಕಲಿಸಲು ಸ್ಥಾಪಿಸಲಾಗಿತ್ತು. ನಂತರ ಇದೇ ವಿದ್ಯಾಪೀಠದ ಕುಲಪತಿಯಾಗಿ ಸಹ ಕಾರ್ಯ ನಿರ್ವಹಿಸಿದರು. ಪ್ರಯಾಗ ಮಹಿಳಾ ಪೀಠದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಮಹಾದೇವಿಯವರು ಹಲವು ಕವಿ ಸಮ್ಮೇಳನಗಳನ್ನು ಹಾಗು ಸಣ್ಣ ಕಥೆಗಳ ಬರಹಗಾರರ ಸಮ್ಮೇಳನಗಳನ್ನು(ಗಲ್ಪ ಸಮ್ಮೇಳನ) ನೆಡೆಸಿದರು. ೧೯೩೬ರಲ್ಲಿ ನೆಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಬರಹಗಾರರಾದ ಸುದಕ್ಷಿಣ ವರ್ಮರವರು ವಹಿಸಿದ್ದರು.[೩]

ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೆ, ಮಹಾದೇವಿಯವರು ಉತ್ತಮ ಬರಹಗಾರ್ತಿಯಾಗಿ ಗುರುತಿಸಿಕೊಳ್ಳತೊಡಗಿದರು. ಹಿಂದಿ ಪತ್ರಿಕೆಯಾದ ಚಾಂದ್ ನಲ್ಲಿ ಇವರ ಸಂಪಾದಕೀಯಗಳು ಪ್ರಕಟಗೊಳ್ಳತೊಡಗಿದವು. ಈ ಪತ್ರಿಕೆಯ ಸಂಪಾದನೆ ಹಾಗು ದೃಷ್ಟಾಂತ ರೂಪಣೆಯಲ್ಲೂ ಸಹ ಕೈಜೋಡಿಸಿದರು. ತಮ್ಮ ಸಂಪಾದಕೀಯಗಳಲ್ಲಿ ಮಹಾದೇವಿಯವರು ಹಿಂದಿ ಸಾಹಿತ್ಯದಲ್ಲಿ ಮಹಿಳೆಯರ ಕೊಡುಗೆಗಳ ಬಗ್ಗೆ ವಿಮರ್ಶಿಸುತ್ತಿದ್ದರು. ಹೇಗೆ ಮಹಿಳಾ ಸಾಹಿತಿಗಳು ತಮ್ಮ ಸಾಹಿತ್ಯಿಕ ಕೊಡುಗೆಗಳ ಮೌಲ್ಯಗಳ ಬಗ್ಗೆ ಹೆಚ್ಚು ಹೆಮ್ಮೆಯನ್ನು ವ್ಯಕ್ತಪಡಿಸುವುದನ್ನು ರೂಢಿಸಿಕೊಳ್ಳಬೇಕೆಂಬುದನ್ನು ತಮ್ಮ ಸಂಪಾದಕೀಯದಲ್ಲಿ ಪ್ರತಿಪಾದಿಸುತ್ತಿದ್ದರು. ಈ ಸಂಪಾದಕೀಯಗಳವನ್ನು ಸಂಗ್ರಹಿಸಿ, ೧೯೪೨ರಲ್ಲಿ "ಶ್ರಿಂಖಲಾ ಕೆ ಕಡಿಯಾ"(ಸರಣಿಯ ಕೊಂಡಿಗಳು) ಎಂಬ ಸಂಪುಟವನ್ನು ಪ್ರಕಟಿಸಲಾಯಿತು.[೩]

೧೯೬೬ರಲ್ಲಿ ತಮ್ಮ ಪತಿಯ ಮರಣದ ನಂತರ ಅಲಹಾಬಾದಿಗೆ ಬಂದ ಮಹಾದೇವಿಯವರು, ೧೧ ಸೆಪ್ಟೆಂಬರ್ ೧೯೮೭ರಲ್ಲಿ, ೮೦ರ ವಯಸ್ಸಿನಲ್ಲಿ ತಮ್ಮ ಕೊನೆಯುಸಿರೆಳೆದರು.

ಸಾಹಿತ್ಯ[ಬದಲಾಯಿಸಿ]

ಹಿಂದಿ ಸಾಹಿತ್ಯದ "ಛಾಯಾವಾದಿ" ಪ್ರಕಾರದ ಮುಖ್ಯ ಲೇಖಕಿಯರಲ್ಲಿ ಒಬ್ಬರಾಗಿ 'ಮಹಾದೇವಿ ವರ್ಮಾ' ಪ್ರಸಿದ್ಧರಾಗಿದ್ದಾರೆ. ಈ ಪ್ರಕಾರದ ಇತರ ಪ್ರಮುಖ ಲೇಖಕರೆಂದರೆ ಸುಮಿತ್ರಾನಂದನ ಪಂತ್, ಸೂರ್ಯಕಾಂತ್ ತ್ರಿಪಾಠಿ, ಜೈಶಂಕರ್ ಪ್ರಸಾದ್ ಹಾಗು ಮೊದಲಾದವರು.

ಯಮ ಹಾಗು ತಮ್ಮ ಹಲವಾರು ಕೃತಿಗಳಿಗೆ ಮಹಾದೇವಿಯವರೇ ದೃಷ್ಟಾಂತ ರೂಪಿಸಿದ್ದರು. ಇವರ ನಿಜಜೀವನದ ಅಧಾರಿತ ಗೌರ ಎಂಬ ಕೃತಿಯು ಒಂದು ಸುಂದರ ಹಸುವಿನ ಕಥೆ

ಮಹದೇವಿಯವರ ಹಲವಾರು ಕೃತಿಗಳನ್ನು ದೇಶಾದ್ಯಂತ ಹಲವು ಶೈಕ್ಷಣಿಕ ಮಂಡಳಿಗಳು ತಮ್ಮ ಪಠ್ಯಕ್ರಮದ ಭಾಗವನ್ನಾಗಿಸಿವೆ. ಇವರ ನೀಲಕಂಠ ಎಂಬ ಕೃತಿಯಲ್ಲಿ , ಒಂದು ನವಿಲಿನ ಜೊತೆ ತಮಗಾದ ಅನುಭವವನ್ನು ವಿವರಿಸಿದ್ದಾರೆ. ಈ ಭಾಗವು ಸಿ.ಬಿ.ಎಸ್.ಸಿ ಯ ೭ನೇ ತರಗತಿಯ ಪಠ್ಯಕ್ರಮದ ಭಾಗವಾಗಿದೆ. ಮಹಾದೇವಿ ವರ್ಮಾರವರ ಬಾಲ್ಯದ ಆತ್ಮಚರಿತ್ರೆಯಾದ ಮೆರೆ ಬಚ್ಪನ್ ಕೆ ದಿನ್ ಹಾಗು ಗಿಲ್ಲು , ಐ.ಸಿ.ಎಸ್.ಸಿಯ ೯ನೇ ತರಗತಿಯ ಪಠ್ಯಕ್ರಮದ ಭಾಗವಾಗಿದೆ[೬]. ಇವರ ಪದ್ಯ, "ಮಧುರ್ ಮಧುರ್ ಮೆರೆ ದೀಪಕ್ ಜಲ್", ಸಿ.ಬಿ.ಎಸ್.ಸಿಯ ೧೦ನೇ ತರಗತಿಯ ಹಿಂದಿ-ಬಿ ಪಠ್ಯಕ್ರಮದ ಭಾಗವಾಗಿದೆ.

ಮಹಾದೇವಿ ವರ್ಮಾ ಅವರ ಪ್ರಸಿದ್ಧ ಪುಸ್ತಕಗಳಲ್ಲಿ ಕೆಲವೆಂದರೆ,