ಮರಿಯ ಜಯಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮರಿಯ ಜಯಂತಿಯು ಒಂದು ಒಗ್ಗೂಡುವಿಕೆಯ ಹಾಗು ಕುಟುಂಬದ ಹಬ್ಬವಾಗಿದೆ.ಈ ಹಬ್ಬವನ್ನು ಮಂಗಳೂರು ಹಾಗು ಉಡುಪಿಯ ಭಾಗದಲ್ಲಿ ಕೊಂಕಣಿ ಮತಾಡುವ ಕ್ರೈಸ್ತರು ಹೆಚ್ಚಾಗಿ ಆಚರಿಸುತ್ತಾರೆ.ಮರಿಯಮ್ಮನವರ ಜನುಮವು ಈ ಹಬ್ಬದ ಪ್ರಮುಖ್ಯತೆಯಾಗಿದೆ. ಈ ಹಬ್ಬವನ್ನು ಹೆಣ್ಣುಮಕ್ಕಳ ಹಬ್ಬವೆಂದೂಸಹ ಕರೆಯಲಾಗುತ್ತದೆ.

ಅಲ್ರಿಚ್ ಬರ್ಗ್ - ಮಾತೆ ಮರಿಯಮ್ಮ

ಹಿನ್ನೆಲೆ[ಬದಲಾಯಿಸಿ]

ಕೋಂಕಣಿಯಲ್ಲಿ ಈ ಹಬ್ಬವನ್ನು "ಮೋಂತಿ ಫೆಸ್ತ್" ಎಂದು ಕರೆಯಲಾಗುತ್ತದೆ. "ಮೋಂತಿ ಫೆಸ್ತ್" ಎಂಬ ಹೆಸರು ಫರಂಗಿ ಪೇತೆಯ ಮಾತೆ ಮರಿಯಾನೋ ಎಂಬ ಚರ್ಚಿನ ಹೆಸರಿನಿಂದ ಬಂದಿದೆ.ಟಿಪ್ಪು ಸುಲ್ತಾನನ ಕಾಲದಲ್ಲಿ ಹಲವಾರು ಕ್ರೈಸ್ತ ಗುಡಿಯನ್ನು ನಾಶಮಾಡಿದ್ದಾದರು, ಈ ಒಂದು ಗುಡಿಯು ಮಾತ್ರ ನಾಶವಾಗದೆ ಮಂಗಳೂರು ಪ್ರದೇಶದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ.ಈ ಒಂದು ಹಬ್ಬದ ದಿನ ಎಲ್ಲಾ ಜನರು ಒಟ್ಟುಗೂಡಿ ಮಾಂಸ-ಮೀನು ಮಾಡದೆ, ಹೊಸ ತೆನೆ ಹಾಗು ಹೊಸ ಫಲದಿಂದ ಮಾಡಿದ ತರಕಾರಿ ಊಟವನ್ನು ಮಾಡುತ್ತಾರೆ.


ಆಚರಣೆ[ಬದಲಾಯಿಸಿ]

ಪ್ರಪ್ರಥಮವಾಗಿ ಈ ಹಬ್ಬದ ದಿನ ಹೋಸ ತೆನೆಯನ್ನು ಕ್ರೈಸ್ತ ಗುಡಿಯಲ್ಲಿ ಪವಿತ್ರೀಕರಿಸಲಾಗುತ್ತದೆ.ಪೂಜೆಯ ಮೋದಲು ಈ ಒಂದು ತೆನೆಯನ್ನು ಪವಿತ್ರೀಕರಿಸಿ, ಪೂಜೆಯ ಕೊನೆಯಲ್ಲಿ ಕುಟುಂಬದ ಯಜಮಾನರಿಗೆ ಅಥವಾ ಹಿರಿಯರಿಗೆ ಹಂಚಲಾಗುತ್ತದೆ. ಇದನ್ನು ತದನಂತರ ಮನೆಯಲ್ಲಿ ಹಾಲು ಅಥವ ಪಾಯಸದಲ್ಲಿ ಸೇರಿಸಿ ಸೇವಿಸಲಾಗುತ್ತದೆ.ಮಕ್ಕಳು ಈ ಹಬ್ಬದ ದಿನ ಹೋವನ್ನು ಮರಿಯಮ್ಮನವರಿಗೆ ಒಟ್ಟುಗೂಡಿಸಿ ಅರ್ಪಿಸುತ್ತಾರೆ. ಪೂಜೆಯ ಕೋನೆಯಲ್ಲಿ ಮಕ್ಕಳಿಗಾಗಿ ಸಿಹಿತಿಂಡಿಯನ್ನು ಹಂಚಲಾಗುತ್ತದೆ.ಈ ಹಬ್ಬದ ದಿನ ಪೂಜೆಯ ಸಮಯದಲ್ಲಿ ಮುಖ್ಯವಾಗಿ ಕುಟುಂಬಗಳಿಗೆ ಹಾಗು ಹೆಣ್ಣುಮಕ್ಕಳಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಮರಿಯಮ್ಮನ್ವರೆ ನಮಗಾಗಿ ಪ್ರಾರ್ತಿಸಿರಿ

ಗುಡುಯಲ್ಲಿ ನಡೆದ ಪೂಜೆಯ ನಂತರ ಮನೆಯಲ್ಲೂ ಊಟದ ಮುಂಚೆ ಪ್ರಾರ್ಥನೆ ಮಾಡಲಾಗುತ್ತದೆ. ಈ ಪ್ರಾರ್ಥನೆ[ಶಾಶ್ವತವಾಗಿ ಮಡಿದ ಕೊಂಡಿ]ಯಲ್ಲಿ ಕುಟುಂಬದ ಐಕ್ಯತೆ ಹಾಗು ಅನ್ಯೋನತೆಗಾಗಿ ಪ್ರಾರ್ಥನೆ ಮಾದಲಾಗುತ್ತದೆ.ಹೊರದೇಶದಲ್ಲಿರುವ ಕುಟ್ಂಬದವರಿಗೂ ಹಾಗು ಕುಟುಂಬದಲ್ಲಿ ತೀರಿಕೂಂಡವರಿಗೂ ಮುಖ್ಯವಾಗಿ ಪ್ರಾರ್ಥನೆ ಮಾಡಲಾಗುತ್ತದೆ.ಪ್ರಾರ್ಥನೆಯ ನಂತರ ಕುಟುಂಬದವರೆಲ್ಲರೂ ಒಟ್ಟಾಗಿ ಕೆಳಗೆ ಕುಳಿತು, ಬಾಳೇಎಲೆಯಲ್ಲಿ ಊಟ ಮಾಡುತ್ತಾರೆ.

ಉಲ್ಲೇಖ[ಬದಲಾಯಿಸಿ]