ಮಂದಾರ್‌ಮನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂದಾರ್‌ಮನಿ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಒಂದು ಕಡಲಬದಿಯ ವಿಹಾರ ಗ್ರಾಮವಾಗಿದೆ. ಇದು ಬಂಗಾಳ ಕೊಲ್ಲಿಯ ಉತ್ತರ ತುದಿಯಲ್ಲಿ ಪೂರ್ವ ಮೇದಿನೀಪುರ್ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಪಶ್ಚಿಮ ಬಂಗಾಳದ ಅತಿ ದೊಡ್ಡ ಕಡಲಬದಿ ವಿಹಾರಧಾಮಗಳಲ್ಲಿ ಒಂದಾಗಿದ್ದು ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ.

ಇದು ಕೊಲ್ಕತ್ತ-ದೀಘಾ ಮಾರ್ಗದಲ್ಲಿ ಕೊಲ್ಕತ್ತ ವಿಮಾನ ನಿಲ್ದಾಣದಿಂದ ಹೆಚ್ಚುಕಡಿಮೆ ೧೮೦ ಕಿ.ಮಿ. ದೂರದಲ್ಲಿದೆ. ಸುಮಾರು ೧೩ ಕಿ.ಮಿ. ಉದ್ದದ ಬೀಚ್‍ನ ಮೇಲೆ ತೆವಳುವ ಕೆಂಪು ಏಡಿಗಳು ಮಂದಾರ್‌ಮನಿಯ ವಿಶೇಷ ಆಕರ್ಷಣೆಯಾಗಿದೆ. ಇದು ಭಾರತದಲ್ಲಿನ ಅತಿ ಉದ್ದದ ಚಾಲನೆ ಮಾಡಬಲ್ಲ ಬೀಚ್ ಎಂದು ವಾದಿಸಲಾಗಿದೆ.[೧][೨] ಇದು ಕೊಂಟಾಯ್ ಉಪವಿಭಾಗ ಪ್ರದೇಶದಡಿ ಸ್ಥಿತವಾಗಿದೆ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "West Bengal Tourism, Digha". Archived from the original on 9 February 2012. Retrieved 20 December 2012.
  2. "Mandarmani, A complete travel guide". Retrieved 20 December 2012.

ಹೊರಗಿನ ಕೊಂಡಿಗಳು[ಬದಲಾಯಿಸಿ]