ಭೀಮೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೀಮೇಶ್ವರ

ಭೀಮೇಶ್ವರ ಪಾಂಡವರ ಅಜ್ಞಾತ ವಾಸದ ಕಾಲದಲ್ಲಿ ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನ
ಭೀಮೇಶ್ವರ ದೇವಸ್ಥಾನ ಮತ್ತು ಜಲಪಾತ

ಭೀಮೇಶ್ವರ, ಸಾಗರ ತಾಲ್ಲೂಕಿನ ಈ ಪುಟ್ಟ ಗ್ರಾಮವು ಸಾಗರ-ಕೋಗಾರ್-ಭಟ್ಕಳ ಮಾರ್ಗದಲ್ಲಿ ಸಿಗುತ್ತದೆ. ಸಾಗರ ನಗರದಿಂದ ೬೨ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಭೀಮೇಶ್ವರನ ಲಿಂಗ ಕಾಣಬಹುದು. ದೇವಸ್ಥಾನದ ಪಕ್ಕದಲ್ಲೇ ೫೦ ಅಡಿ ಎತ್ತರಿಂದ ಧುಮುಕುವ ಒಂದು ಜಲಪಾತವಿದೆ.

ಸ್ಥಳ ಪುರಾಣ[ಬದಲಾಯಿಸಿ]

ಭೀಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಜಲಪಾತ

ಈ ದೇವಸ್ಥಾನದ ಇತಿಹಾಸವು ಪುರಾಣದ ಜೊತೆಗೆ ತಳಕು ಹಾಕಿಕೊಂಡಿದ್ದು, ಅದರ ಪ್ರಕಾರ ಈ ದೇವಸ್ಥಾನವನ್ನು ಪಾಂಡವರು ಅಜ್ಞಾತವಾಸದಲ್ಲಿ ಇರುವಾಗ ಕಾಶಿಯಿಂದ ಭೀಮನು ತಂದ ಲಿಂಗವನ್ನು ಇಲ್ಲಿ ಸ್ಥಾಪಿಸಿದರು. ಆ ಲಿಂಗಕ್ಕೆ ಅಭಿಷೇಕ ಮಾಡಲು ನೀರು ಬೇಕಾದಾಗ ಅರ್ಜುನ ಬಾಣ ಹೂಡಿ ಜಲಧಾರೆಯನ್ನು ಚಿಮ್ಮಿಸುತ್ತಾನೆ, ಅದೇ ಈಗ ಅಲ್ಲಿ ಧುಮುಕುವ ಸರಳ ಹೊಳೆ. ಕಾಲಕ್ರಮೇಣ ಆ ಪ್ರದೇಶವನ್ನಾಳಿದ ಪಾಳೇಗಾರರು, ನಂತರ ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ಧಿಯಾಗಿದ್ದ ಗೇರುಸೊಪ್ಪದ ಚನ್ನಭೈರಾದೇವಿಯು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿರುವ ಕುರುಹುಗಳಿವೆ[೧].

ಆಚರಣೆಗಳು[ಬದಲಾಯಿಸಿ]

ಪ್ರತಿದಿನವೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿವರ್ಷ ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಹುಣ್ಣಿಮೆ ಮತ್ತು ಅಮವ್ಯಾಸೆಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ[೨].

ಪ್ರಕೃತಿ ಸೌಂದರ್ಯ[ಬದಲಾಯಿಸಿ]

ಈ ದೇವಸ್ಥಾನವು ಪಶ್ಚಿಮ ಘಟ್ಟದ ದಟ್ಟಾರಣ್ಯದ ಮದ್ಯೆ ಇರುವುದರಿಂದ ನೈಸರ್ಗಿಕವಾಗಿ ಹರಿಸಿನಿಂದ ಕೂಡಿದೆ. ವಿವಿಧ ರೀತಿಯ ಕಾಡಿನ ಗಿಡ ಮರಗಳು, ಹಲವಾರು ರೀತಿಯ ಚಿಟ್ಟೆಗಳು, ಬಗೆಬಗೆಯ ಪಕ್ಷಿಗಳು, ಮಂಗ ಮತ್ತು ಸಿಗಂಳಿಕಗಳು ಕಾಣಸಿಗುತ್ತವೆ.

ಸಾರಿಗೆ ವ್ಯವಸ್ಥೆ ಮತ್ತು ಮಾರ್ಗ[ಬದಲಾಯಿಸಿ]

ದೇವಸ್ಥಾನಕ್ಕೆ ಹೋಗುವ ದಾರಿ

ಸಾಗರದಿಂದ ಭಟ್ಕಳಕ್ಕೆ, ಕೋಗಾರು ಮಾರ್ಗದಲ್ಲಿ ಹೋಗುವ ಎಲ್ಲ ಬಸ್ಗಳಿಗೂ ಭೀಮೇಶ್ವರ ಕ್ರಾಸ್ ನಲ್ಲಿ ನಿಲುಗಡೆ ಇದೆ ಅಲ್ಲಿಂದ ೨ ಕಿಲೋಮೀಟರ್ ನಡೆದು ಕೊಂಡು ಹೋಗಬೇಕು. ಸ್ವಂತ ವಾಹನವಾದರೆ ದೇವಸ್ಥಾನದ ಹತ್ತಿರದವರೆಗು ಹೋಗಬಹುದು. ಆದರೆ ರಸ್ತೆ ದುರ್ಗಮವಾಗಿದ್ದು ಜಾಗೃತೆ ಅವಶ್ಯಕವಾಗಿದೆ.

ಮಾರ್ಗ:[ಬದಲಾಯಿಸಿ]

  • ಸಾಗರ-ತಾಳಗುಪ್ಪ-ಕಾರ್ಗಲ್-ಕೋಗಾರು-ಭೀಮೇಶ್ವರ.(೬೭ ಕಿ.ಮೀ)
  • ಭಟ್ಕಳ-ಸಿದ್ದಾಪುರ-ಸೊರಬ ಮಾರ್ಗವಾಗಿ (೧೨೨ ಕಿ.ಮೀ)
  • ಮಂಗಳೂರಿನಿಂದ ಭೀಮೇಶ್ವರಕ್ಕೆ (೧೭೬ಕಿ.ಮೀ)
  • ಜೋಗದಿಂದ ಭೀಮೇಶ್ವರಕ್ಕೆ (೪೪ ಕಿ.ಮೀ.)

ವಸತಿ ಮತ್ತು ಊಟ[ಬದಲಾಯಿಸಿ]

ಭೀಮೇಶ್ವರದಲ್ಲಿ ಯಾತ್ರಿಕರಿಗೆ ವಸತಿ ವ್ಯವಸ್ಥೆ ಇಲ್ಲ. ಸಾಗರ, ಜೋಗ ಅಥವಾ ಭಟ್ಕಳದಲ್ಲಿ ಉಳಿದುಕೊಂಡು ಇಲ್ಲಿಗೆ ಭೇಟಿ ನೀಡಬೇಕು. ಅಲ್ಲಿ ಯಾತ್ರಿಕರಿಗೆ ಊಟೋಪಚಾರದ ವ್ಯವಸ್ಥೆ ಮಾತ್ರ ಲಭ್ಯವಿದೆ.

ಉಲ್ಲೇಖಗಳು[ಬದಲಾಯಿಸಿ]

  1. Udayavani, Team (Aug 1, 2019,). "ಜೋಗ- ಭೀಮೇಶ್ವರ". No. Aug 1, 2019, . Udayavani. Udayavani. Retrieved 25 November 2019. {{cite news}}: Check date values in: |date= (help)CS1 maint: extra punctuation (link)
  2. [೧]ವಿಜಯ ಕರ್ನಾಟಕ ವರದಿ