ಭಾರತದಲ್ಲಿ ಆನೆಕಾಲು ಕಾಯಿಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ಆನೆಕಾಲು ಕಾಯಿಲೆಗೆ ಭಾರತದಲ್ಲಿ ದುಗ್ಧರಸ ಆನೆಕಾಲು ಅಥವಾ ಫೈಲೇರಿಯಾಸಿಸ್ ಎಂಬ ಹೆಸರಿದೆ. ಇದು ಭಾರತದಲ್ಲಿ ದುಗ್ಧರಸ ಆನೆಕಾಲು ಎಂಬ ಕಾಯಿಲೆಯ ಉಪಸ್ಥಿತಿ ಮತ್ತು ಅದಕ್ಕೆ ಎಲ್ಲಾ ಸಾಮಾಜಿಕ ಪ್ರತಿಕ್ರಿಯೆಗಳನ್ನು ಒಳಗೊಂಡಿದೆ. ಭಾರತದಲ್ಲಿ ಈ ಸೋಂಕು ಶೇಕಡ ೯೯ ರಷ್ಟು ಸಂದರ್ಭಗಳಲ್ಲಿ ಒಂದು ಸೊಳ್ಳೆಯ ಕಡಿತದಿಂದ ಬರುತ್ತದೆ.[೧] ಇದರ ಚಿಕಿತ್ಸೆಯ ಯೋಜನೆಯು ಭಾರತದಲ್ಲಿ ಈ ಕಾಯಿಲೆಯನ್ನು ತರುವ ಪರಾವಲಂಬಿಯನ್ನು ತೊಡೆದುಹಾಕಲು ಸುಮಾರು ೪೦ ಕೋಟಿ ಜನರಿಗೆ ಔಷಧಿಗಳನ್ನು ಒದಗಿಸುತ್ತದೆ.[೨] ೨೦೧೦ ರ ದಶಕದ ಆರಂಭದ ವೇಳೆಗೆ ಭಾರತದಲ್ಲಿ ಸುಮಾರು ೫ ಕೋಟಿ ಜನರು ಈ ಕಾಯಿಲೆಯನ್ನು ತರುವ ಹುಳುವನ್ನು ಹೊಂದಿದ್ದರು ಹಾಗೂ ಇದು ವಿಶ್ವದ ಇಂತಹ ಎಲ್ಲಾ ಪ್ರಕರಣಗಳ ಶೇಕಡ ೪೦ ರಷ್ಟು ಆಗಿದೆ.[೩] ಭಾರತವು ಪ್ರಪಂಚದ ಇತರ ದೇಶಗಳೊಂದಿಗೆ, ದುಗ್ಧರಸ ಆನೆಕಾಲು ಕಾಯಿಲೆಯನ್ನು ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನದಲ್ಲಿ ಭಾಗವಹಿಸುತ್ತಿದೆ. ಕಾಯಿಲೆಯನ್ನು ತರುವ ಹುಳುವನ್ನು ಭಾರತದಿಂದ ನಾಶಮಾಡಿದರೆ ರೋಗವು ಶಾಶ್ವತವಾಗಿ ಹೋಗಬಹುದು.[೪] [೫] ಅಕ್ಟೋಬರ್ ೨೦೧೯ ರಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ೨೦೨೧ ರ ವೇಳೆಗೆ ಆನೆಕಾಲು ಕಾಯಿಲೆಯನ್ನು ಭಾರತದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಯೋಜನೆ ನಿಗದಿಯಾಗಿದೆ ಎಂದು ಹೇಳಿದ್ದರು.[೬] ಸಾಮೂಹಿಕವಾಗಿ ಈ ಕಾಯಿಲೆಯನ್ನು ತರುವ ಹುಳವನ್ನು ನಿರ್ಮೂಲನೆ ಮಾಡಲು ಭಾರತ ಸರಕಾರವು ಸಾಮೂಹಿಕವಾಗಿ ಔಷಧ ನೀಡುವ ಪ್ರಕ್ರಿಯೆ ನಡೆಸುತ್ತಿದೆ. ಈ ಚಿಕಿತ್ಸೆಯು ವರ್ಷಕ್ಕೆ ಒಮ್ಮೆಯಂತೆ ಐದು ವರ್ಷಗಳವರೆಗೆ ತೆಗೆದುಕೊಳ್ಳುವ ಕೆಲವು ಮಾತ್ರೆಗಳನ್ನು ಒಳಗೊಂಡಿದೆ. ಚಿಕಿತ್ಸೆಯು ಸರಿಯಾಗಿ ಕೆಲಸ ಮಾಡಲು ದೊಡ್ಡ ಪ್ರದೇಶಗಳಲ್ಲಿ ಶೇಕಡ ೬೦-೮೦ ರಷ್ಟು ಜನರು ಇದನ್ನು ವರ್ಷಕ್ಕೊಮ್ಮೆಯಂತೆ ಹಲವಾರು ವರ್ಷಗಳವರೆಗೆ ತೆಗೆದುಕೊಳ್ಳಬೇಕು.

ಚಿಕಿತ್ಸೆ[ಬದಲಾಯಿಸಿ]

ಚಿಕಿತ್ಸೆಯು ಸಾರ್ವಜನಿಕ ಆರೋಗ್ಯ ಯೋಜನೆಯಾಗಿ ನಡೆಯುತ್ತದೆ ಹಾಗೂ ಇದರಲ್ಲಿ ಈ ಕಾಯಿಲೆಯನ್ನು ತರುವ ಪರಾವಲಂಬಿ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಜನರು ಚಿಕಿತ್ಸೆ ಪಡೆಯುತ್ತಾರೆ. ಹುಳಗಳ ನಿರ್ಮೂಲನೆ ಮಾಡುವ ಸಾಮೂಹಿಕ ಪ್ರಕ್ರಿಯೆಯಾಗಿದೆ. ಭಾರತದಲ್ಲಿ ಈ ಕಾಯಿಲೆಯನ್ನು ತರುವ ಹುಳು ಮಾನವರಲ್ಲಿ ಮಾತ್ರ ವಾಸಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಚಿಕಿತ್ಸೆ ಪಡೆದರೆ ಮತ್ತು ಎಲ್ಲರೂ ಗುಣಮುಖರಾದರೆ ಹುಳು ಶಾಶ್ವತವಾಗಿ ಹೋಗುತ್ತದೆ. ಭೂಮಿಯಿಂದ ಇಂತಹ ಹುಳುಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಜಾಗತಿಕ ನಿರ್ಮೂಲನಾ ಕಾರ್ಯಕ್ರಮದಲ್ಲಿ ಭಾರತ ಭಾಗವಹಿಸುತ್ತಿದೆ.

ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣವು ಈ ಅಭಿಯಾನದ ಒಂದು ಅವಶ್ಯಕ ಭಾಗವಾಗಿದೆ.[೨] ಪೀಡಿತ ಸಮುದಾಯಗಳಲ್ಲಿನ ಲಕ್ಷಾಂತರ ಜನರು ವರ್ಷಕ್ಕೊಮ್ಮೆ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳಲು ಒಪ್ಪಿಕೊಳ್ಳಬೇಕಾಗುತ್ತದೆ.[೨] ೨೦೧೫ ರಲ್ಲಿ ಪ್ರಾರಂಬಿಸಿದ ಆನೆಕಾಲು ಮುಕ್ತ ಭಾರತ ಎಂಬ ಸಾರ್ವಜನಿಕ ಆರೋಗ್ಯ ಅಭಿಯಾನದಲ್ಲಿ ಈ ಕಾಯಿಲೆಯು ದಪ್ಪ ಕಾಲುಗಳನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ತೋರಿಸುತ್ತದೆ ಮತ್ತು ಔಷಧಿ ಸುರಕ್ಷಿತವಾಗಿದೆ ಎಂದು ಹೇಳುತ್ತದೆ ಹಾಗೂ ಅದನ್ನು ತೆಗೆದುಕೊಳ್ಳಲು ಜನರಿಗೆ ಹೇಳುತ್ತದೆ.[೨] ಚಿಕಿತ್ಸೆಯ ಕಾರ್ಯಕ್ರಮವು ಭಾರತದ ವಿವಿಧ ಸ್ಥಳಗಳಲ್ಲಿ ಬದಲಾಗುತ್ತದೆ. ಅಸ್ಸಾಂ[೭] ಮತ್ತು ಆಂಧ್ರಪ್ರದೇಶದಂತಹ ಸ್ಥಳಗಳ ವಿವಿಧ ವರದಿಗಳು ವ್ಯತ್ಯಾಸವನ್ನು ವಿವರಿಸುತ್ತವೆ.[೮] ಚಿಕಿತ್ಸೆಯನ್ನು ತೆಗೆದುಕೊಳ್ಳುವ ಹೆಚ್ಚಿನ ಜನರಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ.[೯] ಚಿಕಿತ್ಸೆಯ ಯಾವುದೇ ಅಡ್ಡಪರಿಣಾಮಗಳಿಗಿಂತ ದೊಡ್ಡ ಸಮಸ್ಯೆಯೆಂದರೆ ಜನರಿಗೆ ಚಿಕಿತ್ಸೆಯನ್ನು ಪಡೆಯುವ ಭಯ. ಇದರಿಮದಾಗಿ ಅವರು ಔಷಧಿ ತೆಗೆದುಕೊಳ್ಳಲು ನಿರಾಕರಿಸುತ್ತಾರೆ.[೯] ಭಾರತದ ವಿವಿಧ ಪ್ರದೇಶಗಳಲ್ಲಿನ ಜನರು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಏಕೆ ನಿರ್ಲಕ್ಷಿಸುತ್ತಾರೆ ಎಂಬುದನ್ನು ವಿವಿಧ ಅಧ್ಯಯನಗಳು ಪರಿಶೀಲಿಸಿವೆ.[೧೦]

ಸೋಂಕುವಾಹಕಗಳು[ಬದಲಾಯಿಸಿ]

ಭಾರತದಲ್ಲಿ ಶೇಕಡ ೯೯ ಸೋಂಕುಗಳು ಕ್ಯುಲೆಕ್ಸ್ ಕ್ವಿನ್ಕ್ಫಾಸಿಯಾಟಸ್ ಎಂಬ ಸೊಳ್ಳೆ ಕಚ್ಚುವಿಕೆಯ ಮೂಲಕ ವುಚೆರಿಯಾ ಬ್ಯಾನ್‌ಕ್ರೊಫ್ಟಿ ಎಂಬ ಹುಳು ಹರಡಿದಾಗ ಉಂಟಾಗುತ್ತವೆ.[೧] ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹುಳು ಮತ್ತು ಪರಾವಲಂಬಿಗಳು ಈ ಕಾಯಿಲೆಗೆ ಕಾರಣವಾಗಿರಬಹುದು. ಆದುದರಿಂದ ಪ್ರತಿ ದೇಶವು ಈ ಕಾಯಿಲೆಯೆ ನಿಯಂತ್ರಣಕ್ಕೆ ಮತ್ತು ಚಿಕಿತ್ಸೆಗೆ ತನ್ನದೇ ಆದ ಯೋಜನೆಯನ್ನು ಮಾಡಿಕೊಂಡಿದೆ.[೧೧] ಆನೆಕಾಲು ಕಾಯಿಲೆಯ ತಡೆಗಟ್ಟುವಿಕೆಗಾಗಿ ಜನರಿಗೆ ಔಷಧಿಗಳನ್ನು ನೀಡಲಾಗುತ್ತಿದೆ.[೧೨] ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ಸೊಳ್ಳೆಗಳನ್ನು ತೊಡೆದುಹಾಕಲು ಕೀಟನಾಶಕವನ್ನು ಬಳಸಲಾಗುತ್ತಿದೆ.[೧೨] ಆನೆಕಾಲು ರೋಗವನ್ನು ಸಂಪೂರ್ಣವಅಗಿ ತೊಡೆದುಹಾಕಬೇಕಾದರೆ ಮಾನವರು ಅಥವಾ ಸೊಳ್ಳೆಗಳು ಅದನ್ನು ಹಬ್ಬಿಸುವ ಪರಾವಲಂಬಿಯನ್ನು ಹೊಂದಿರಬಾರದು.[೧೩] ಒಂದು ಪ್ರದೇಶದಿಂದ ಆನೆಕಾಲು ಕಾಯಿಲೆಯನ್ನು ತೊಡೆದುಹಾಕಲಾಗಿದೆಯೆ ಎಂದು ನಿರ್ಧರಿಸುವ ಸಾಮಾನ್ಯ ಮಾರ್ಗವೆಂದರೆ ಅಲ್ಲಿಯ ಮನುಷ್ಯರಲ್ಲಿ ಆ ಪರಾವಲಂಬಿ ಇದೆಯೇ ಎಂದು ಪರೀಕ್ಷಿಸುವುದು.[೧೩]

ಸಾಂಕ್ರಾಮಿಕ ರೋಗಶಾಸ್ತ್ರ[ಬದಲಾಯಿಸಿ]

೨೦೦೬ ರ ಹೊತ್ತಿಗೆ ೨ ಕೋಟಿ ಜನರು ರೋಗಲಕ್ಷಣಗಳೊಂದಿಗೆ ಸೋಂಕಿಗೆ ಒಳಗಾಗಿದ್ದರು, ೩ ಕೋಟಿ ಜನರು ಸೋಂಕಿತರಾಗಿದ್ದರೂ ಲಕ್ಷಣರಹಿತರಾಗಿದ್ದರು ಮತ್ತು ೪೭ ಕೋಟಿ ಜನರು ಸಂಭಾವ್ಯ ಅಪಾಯದಲ್ಲಿದ್ದರು.[೧]೨೦೦೬ ರಲ್ಲಿ ಭಾರತದಲ್ಲಿ ವರದಿಯಾದ ಶೇಕಡ ೯೫ ರಷ್ಟು ಪ್ರಕರಣಗಳು ಆಂಧ್ರಪ್ರದೇಶ, ಬಿಹಾರ, ಗುಜರಾತ್, ಕೇರಳ, ಮಹಾರಾಷ್ಟ್ರ, ಒರಿಸ್ಸಾ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿದ್ದವು.[೧೪] ವಿಶ್ವದ ದುಗ್ಧರಸ ಆನೆಕಾಲು ಪ್ರಕರಣಗಳಲ್ಲಿ ಶೇಕಡ ೪೦ ರಷ್ಟು ಭಾರತದಲ್ಲಿವೆ.[೧೫] ಕಾಯಿಲೆಯ ಚಿಕಿತ್ಸೆಯ ಪ್ರಮುಖ ವೆಚ್ಚವೆಂದರೆ ರೋಗಿಯು ಕೆಲಸದಿಂದ ಸಾಕಷ್ಟು ಸಮಯವನ್ನು ಕಳೆಯಬೇಕಾಗುತ್ತದೆ.[೧೫]೨೦೦೦ನೆಯ ವರ್ಷದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಅರ್ಧದಷ್ಟು ಜನರು ಆನೆಕಾಲು ಕಾಯಿಲೆಗೆ ತುತ್ತಾಗುವ ಅಪಾಯವಿದೆ.[೧೬] ಪುರುಷರು ಮತ್ತು ಮಹಿಳೆಯರು ಈ ರೋಗವನ್ನು ಸಮಾನವಾಗಿ ಪಡೆಯಬಹುದು. ಆದರೆ ಈ ಹಿಂದೆ ಮಹಿಳೆಯರು ಸಾಮಾನ್ಯ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆಯಲು ಅಡೆತಡೆಗಳು ಇದ್ದವು.[೧೭]೨೦೦೦ನೆಯ ಇಸವಿಯ ಅಂದಾಜಿನ ಪ್ರಕಾರ, ಭಾರತದಲ್ಲಿ ಆನೆಕಾಲು ಕಾಯಿಲೆಯಿಂದಾಗಿ ರಾಷ್ಟ್ರಕ್ಕೆ ವಾರ್ಷಿಕ ಅಂದಾಜು ೫೦೦೦ ಕೋಟಿ ರೂ. ಆರ್ಥಿಕ ನಷ್ಟ ಆಗಿದೆ.[೧೫]

ಸಮಾಜ ಮತ್ತು ಸಂಸ್ಕೃತಿ[ಬದಲಾಯಿಸಿ]

ಭಾರತದ ಪ್ರಾಚೀನ ಆಯುರ್ವೇದ ಗ್ರಂಥವಾದ ಸುಶ್ರುತ ಸಂಹಿತಾದಲ್ಲಿ ಕ್ರಿ.ಪೂ ೬ ನೇ ಶತಮಾನದಲ್ಲೇ ಆನೆಕಾಲು ಕಾಯಿಲೆಯನ್ನು ವಿವರಿಸಲಾಗಿದೆ.[೧] ಈ ಕಾಯಿಲೆಯು ಭಾರತದ ಇತಿಹಾಸದುದ್ದಕ್ಕೂ ಕಂಡುಬಂದಿದೆ.೫ನೆಯ ಶತಮಾನದ ಲ್ಲೇ ಭಾರತದ ವೈದ್ಯರು ಈ ಕಾಯಿಲೆಯ ಬಗ್ಗೆ ಬರೆದಿದ್ದರು.[೧೮]೧೫ನೆಯ ಶತಮಾನದಲ್ಲಿ ಯುರೋಪಿಯನ್ ಪರಿಶೋಧಕ ಜಾನ್ ಹುಯಿಘೆನ್ ವ್ಯಾನ್ ಲಿನ್ಸ್‌ಚೊಟೆನ್ ಗೋವಾಕ್ಕೆ ಭೇಟಿ ನೀಡಿ ಅಲ್ಲಿ ಆನೆಕಾಲು ರೋಗಲಕ್ಷಣಗಳಿರುವ ಜನರ ಬಗ್ಗೆ ಬರೆದಿದ್ದಾರೆ.[೧೮] ಆನೆಕಾಲು ಕಾಯಿಲೆಯ ಹರಡುವಿಕೆಯನ್ನು ಸೀಮಿತಗೊಳಿಸುವ ಯೋಜನೆಯಾಗಿ ೧೯೫೫ ರಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಆನೆಕಾಲು ನಿಯಂತ್ರಣ ಕಾರ್ಯಕ್ರಮವನ್ನು ಸ್ಥಾಪಿಸಿತು.[೧೯] [೧]೧೯೫೯ ರ ಹೊತ್ತಿಗೆ ಆ ಸಂಸ್ಥೆ ಆನೆಕಾಲು ಕಾಯಿಲೆಯನ್ನು ನಿಯಂತ್ರಿಸಲು ಅಥವಾ ನಿರ್ಮೂಲನೆ ಮಾಡಲು ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿತು.[೨೦] ಸೋಂಕುಗಳು ೧೯೫೫ ರಿಂದ ೧೯೯೫ ರವರೆಗೆ ನಿಯಂತ್ರಣ ತಪ್ಪಿ ಹರಡಿತು ಹಾಗೂ ಆ ಸಮಯದಲ್ಲಿ ಪ್ರಕರಣಗಳ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಯಿತು.[೧] ನಗರಗಳಲ್ಲಿ ಹೆಚ್ಚಿದ ಜನಸಂಖ್ಯೆ ಮತ್ತು ದೇಶದಲ್ಲಿ ವೇಗವಾಗಿ ಬದಲಾಗುತ್ತಿರುವ ಸ್ಥಿತಿಗತಿಗಳಿಂದಾಗಿ ಸೊಳ್ಳೆಗಳೊಂದಿಗೆ ಜನರ ಸಂಪರ್ಕವು ಹೆಚ್ಚಾಗಿ ಕಾಯಿಲೆಯು ಪ್ರಸರಣ ಆಗಲು ಕಾರಣೀಭೂತವಾಯಿತು.[೨೧]

ದೆಹಲಿಯ ಜನರು ಜೆಪಿ ನಡ್ಡಾ ಅವರ ಬೆಂಬಲದೊಂದಿಗೆ ಆನೆಕಾಲು ಕಾಯಿಲೆಯನ್ನು ನಿರ್ಮೂಲನೆ ಮಾಡುವ ೨೦೧೮ ರ ಯೋಜನೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ

೨೦೨೦ ರ ವೇಳೆಗೆ ಆನೆಕಾಲು ಕಾಯಿಲೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ವಿಶ್ವ ಆರೋಗ್ಯ ಅಸೆಂಬ್ಲಿಯ ೧೯೯೭ ರ ನಿರ್ಣಯಕ್ಕೆ ಭಾರತವೂ ಸೇರಿಕೊಂಡಿತು.[೧೯] ಭಾರತದಲ್ಲಿ ಈ ಗುರಿಯನ್ನು ಸಾಧಿಸಲು ಕಾಯಿಲೆಗೆ ತುತ್ತಾಗಬಹುದಾದ ಎಲ್ಲರಿಗೂ ಸುಲಭವಾಗಿ ಆರೋಗ್ಯ ಸೌಲಭ್ಯಗಳು ಲಭ್ಯವಿರಬೇಕು.[೨೨] ಭಾರತ ಸರ್ಕಾರವು ಮೂಲತಃ ೨೦೧೫ ರ ವೇಳೆಗೆ ರೋಗವನ್ನು ತೊಡೆದುಹಾಕಲು ಯೋಜಿಸಿತ್ತು, ನಂತರವಾಯಿದೆಯನ್ನು ೨೦೧೭ ಕ್ಕೆ, ನಂತರ ೨೦೨೦ ಕ್ಕೆ ಬದಲಾಯಿಸಿತು.[೨೩] ಭಾರತವು ಗುರಿಯನ್ನು ಹೇಗೆ ಸಾಧಿಸಬಹುದು ಅಥವಾ ಹೆಚ್ಚಿನ ಸಮಯ ಬೇಕಾದರೆ ಅದು ಮುಂದೆ ಏನಾಗಬಹುದು ಎಂದು ವಿವಿಧ ಮಾಧ್ಯಮ ಮಾಧ್ಯಮಗಳು ಚರ್ಚಿಸಿವೆ. [೨೪] [೨೫] [೨೬]

ಆನೆಕಾಲು ಕಾಯಿಲೆಯನ್ನು ನಿರ್ಮೂಲನೆ ಮಾಡುವಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವು ೨೦೧೫ ರಲ್ಲಿ ಆನೆಕಾಲು ಮುಕ್ತ ಭಾರತ ಎಂಬ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿತು.[೨೭] [೨೮]ಈ ಕಾರ್ಯಕ್ರಮದಲ್ಲಿ ಆನೆಕಾಲು ಕಾಯಿಲೆ ಇರುವ ಪ್ರದೇಶದ ಪ್ರತಿಯೊಬ್ಬರೂ ವರ್ಷಕ್ಕೆ ಒಮ್ಮೆಯಂತೆ ಐದು ವರ್ಷಗಳವರೆಗೆ ಮಾತ್ರೆ ತೆಗೆದುಕೊಳ್ಳುತ್ತಾರೆ. [೨೩]ಈ ಔಷಧವು ಡೈಥೈಲ್‌ಕಾರ್ಬಮಾಜಿನ್ ಸಿಟ್ರೇಟ್ ಮತ್ತು ಅಲ್ಬೆಂಡಜೋಲ್ ಆಗಿದೆ. ಇದು ಸುಮಾರು ನಾಲ್ಕು ಮಾತ್ರೆಗಳ ರೂಪದಲ್ಲಿರುತ್ತದೆ. ಇದನ್ನು ಜನರು ಒಂದೇ ಬಾರಿಗೆ ತೆಗೆದುಕೊಳ್ಳುತ್ತಾರೆ.[೨೩]

ಸಂಶೋಧನೆ[ಬದಲಾಯಿಸಿ]

ಸಾರ್ವಜನಿಕ ಆರೋಗ್ಯ ಸಂಶೋಧಕರು ಭಾರತದಲ್ಲಿ ಆನೆಕಾಲು ಕಾಯಿಲೆಯ ಸಾರ್ವಜನಿಕ ಆರೋಗ್ಯ ಉಸ್ತುವಾರಿಯನ್ನು ಸುಧಾರಿಸಲು ಯಂತ್ರ ಕಲಿಕೆ ತಂತ್ರಗಳನ್ನು ಅನ್ವಯಿಸಿದ್ದಾರೆ.[೨೯] ೨೦೧೯ ರ ಒಂದು ವರದಿಯು ಕೇರಳದಲ್ಲಿ ಆನೆಕಾಲು ಕಾಯಿಲೆಯನ್ನು ತರಬಹುದಾದ ಬ್ರೂಜಿಯಾ ಮಲಯಿ ಎಂಬ ಹುಳವನ್ನು ಹೊಂದಿದ ನಾಯಿಗಳನ್ನು ಗುರುತಿಸಿದೆ.[೩೦] ಈ ಹುಳು ಭಾರತದಲ್ಲಿ ಜನರಿಗೆ ಆನೆಕಾಲು ಕಾಯಿಲೆಯನ್ನು ತರುವ ಬಗ್ಗೆ ತಿಳಿದು ಬಂದಿಲ್ಲ.[೩೦] ಅಗತ್ಯವಿದ್ದರೆ ರೋಗವನ್ನು ಹೊದಿದ ನಾಯಿಗಳನ್ನು ಗುರುತಿಸಲು ಪರೀಕ್ಷೆಗಳು ಸಿದ್ಧವಾಗಿವೆ.[೩೦]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ ೧.೫ Agrawal, VK; Sashindran, VK (October 2006). "Lymphatic Filariasis in India : Problems, Challenges and New Initiatives". Medical Journal Armed Forces India. 62 (4): 359–362. doi:10.1016/S0377-1237(06)80109-7. PMC 5034168. PMID 27688542.
  2. ೨.೦ ೨.೧ ೨.೨ ೨.೩ Bagcchi, Sanjeet (April 2015). "India tackles lymphatic filariasis". The Lancet Infectious Diseases. 15 (4): 380. doi:10.1016/S1473-3099(15)70116-7. PMID 25809895.
  3. Hoti, S (January 2012). "Filariasis of uncommon nature in India". Tropical Parasitology. 2 (1): 2–3. doi:10.4103/2229-5070.97230. PMC 3593514. PMID 23509678.{{cite journal}}: CS1 maint: unflagged free DOI (link)
  4. Ganguly, NK (9 January 2018). "The final lap towards elimination of Lymphatic Filariasis". Business Line (in ಇಂಗ್ಲಿಷ್).
  5. Senthilingam, Meera (24 April 2015). "Every last worm: Eliminating Elephantiasis in India". CNN.
  6. Sharma, Neetu Chandra (30 October 2019). "India to eliminate Lymphatic Filariasis by 2021: Harsh Vardhan". Livemint (in ಇಂಗ್ಲಿಷ್).
  7. Khan, AbdulMabood (2018). "Lymphatic filariasis elimination programme in Assam, India, needs change in mass drug administration strategy to target the focus of infection". Indian Journal of Medical Research. 147 (1): 7–10. doi:10.4103/ijmr.IJMR_1843_16. PMC 5967220. PMID 29749354.{{cite journal}}: CS1 maint: unflagged free DOI (link)
  8. Upadhyayula, Suryanaryana Murty; Mutheneni, Srinivasa Rao; Kadiri, Madhusudhan Rao; Kumaraswamy, Sriram; Nagalla, Balakrishna; Noor, Abdisalan Mohamed (19 March 2012). "A Cohort Study of Lymphatic Filariasis on Socio Economic Conditions in Andhra Pradesh, India". PLoS ONE. 7 (3): e33779. Bibcode:2012PLoSO...733779U. doi:10.1371/journal.pone.0033779. PMC 3307764. PMID 22442721.{{cite journal}}: CS1 maint: unflagged free DOI (link)
  9. ೯.೦ ೯.೧ Kuttiatt, VS; Somani, RK; Swaminathan, S; Krishnamoorthy, K; Weil, GJ; Purushothaman, J (January 2020). "Frequency and Clinical Significance of Localized Adverse Events following Mass Drug Administration for Lymphatic Filariasis in an Endemic Area in South India". The American Journal of Tropical Medicine and Hygiene. 102 (1): 96–99. doi:10.4269/ajtmh.19-0532. PMC 6947773. PMID 31769393.
  10. Banerjee, S; Bandyopadhyay, K; Khan, MF; Akkilagunta, S; Selvaraj, K; Tripathy, JP; Solanki, R; Kushwaha, AS; Deshmukh, P (September 2019). "Coverage of mass drug administration for elimination of lymphatic filariasis in urban Nagpur, Central India: A mixed method study". Journal of Family Medicine and Primary Care. 8 (9): 3009–3014. doi:10.4103/jfmpc.jfmpc_503_19. PMC 6820416. PMID 31681683.{{cite journal}}: CS1 maint: unflagged free DOI (link)
  11. Erickson, Sara M.; Thomsen, Edward K.; Keven, John B.; Vincent, Naomi; Koimbu, Gussy; Siba, Peter M.; Christensen, Bruce M.; Reimer, Lisa J.; Valenzuela, Jesus G. (12 September 2013). "Mosquito-Parasite Interactions Can Shape Filariasis Transmission Dynamics and Impact Elimination Programs". PLoS Neglected Tropical Diseases. 7 (9): e2433. doi:10.1371/journal.pntd.0002433. PMC 3772046. PMID 24069488.{{cite journal}}: CS1 maint: unflagged free DOI (link)
  12. ೧೨.೦ ೧೨.೧ Sadanandane, C; Gunasekaran, K; Boopathi Doss, PS; Jambulingam, P (January 2018). "Field evaluation of the biolarvicide, spinosad 20 per cent emulsifiable concentrate in comparison to its 12 per cent suspension concentrate formulation against Culex quinquefasciatus, the vector of bancroftian filariasis in India". The Indian Journal of Medical Research. 147 (1): 32–40. doi:10.4103/ijmr.IJMR_1369_15. PMC 5967213. PMID 29749358.{{cite journal}}: CS1 maint: unflagged free DOI (link)
  13. ೧೩.೦ ೧೩.೧ Subramanian, S; Jambulingam, P; Krishnamoorthy, K; Sivagnaname, N; Sadanandane, C; Vasuki, V; Palaniswamy, C; Vijayakumar, B; Srividya, A (January 2020). "Molecular xenomonitoring as a post-MDA surveillance tool for global programme to eliminate lymphatic filariasis: Field validation in an evaluation unit in India". PLoS Neglected Tropical Diseases. 14 (1): e0007862. doi:10.1371/journal.pntd.0007862. PMC 7001988. PMID 31978060.{{cite journal}}: CS1 maint: unflagged free DOI (link)
  14. Pani, SP; Kumaraswami, V; Das, LK (2005). "Epidemiology of lymphatic filariasis with special reference to urogenital-manifestations". Indian Journal of Urology. 21 (1): 44. doi:10.4103/0970-1591.19551.{{cite journal}}: CS1 maint: unflagged free DOI (link)
  15. ೧೫.೦ ೧೫.೧ ೧೫.೨ Ramaiah, Kapa D; Das, Pradeep K; Michael, Edwin; Guyatt, Helen L (June 2000). "The Economic Burden of Lymphatic Filariasis in India". Parasitology Today. 16 (6): 251–253. doi:10.1016/S0169-4758(00)01643-4. PMID 10827432.
  16. Sabesan, S.; Palaniyandi, M.; Das, P. K.; Michael, E. (3 Jul 2000). "Mapping of lymphatic filariasis in India". Annals of Tropical Medicine & Parasitology. 94 (6): 591–606. doi:10.1080/00034983.2000.11813582. PMID 11064761.
  17. Bandyopadhyay, Lalita (May 1996). "Lymphatic filariasis and the women of India". Social Science & Medicine. 42 (10): 1401–1410. doi:10.1016/0277-9536(95)00288-X. PMID 8735896.
  18. ೧೮.೦ ೧೮.೧ Gordon, CA; Jones, MK; McManus, DP (4 June 2018). "The History of Bancroftian Lymphatic Filariasis in Australasia and Oceania: Is There a Threat of Re-Occurrence in Mainland Australia?". Tropical Medicine and Infectious Disease. 3 (2): 58. doi:10.3390/tropicalmed3020058. PMC 6073764. PMID 30274454.{{cite journal}}: CS1 maint: unflagged free DOI (link)
  19. ೧೯.೦ ೧೯.೧ Sabesan, S; Vanamail, P; Raju, KH.K; Raju, P (2010). "Lymphatic filariasis in India: Epidemiology and control measures". Journal of Postgraduate Medicine. 56 (3): 232–8. doi:10.4103/0022-3859.68650. PMID 20739779.{{cite journal}}: CS1 maint: unflagged free DOI (link)
  20. Beye, H. K.; Wright, W. H. (1959). "The National Filaria Control Program (NFCP) of India: investigative challenges". Bulletin of the National Society of India for Malaria and Other Mosquito-Borne Diseases. Indian Society for Malaria and Other Communicable Diseases. 7 (2): 45–52.
  21. Ramaiah, KD (1993). "A rational approach to the control of filariasis in India". The National Medical Journal of India. 6 (3): 114–6. PMID 8329989.
  22. Agrawal, VK; Sashindran, VK (October 2006). "Lymphatic Filariasis in India : Problems, Challenges and New Initiatives". Medical Journal Armed Forces India. 62 (4): 359–362. doi:10.1016/S0377-1237(06)80109-7. PMC 5034168. PMID 27688542.
  23. ೨೩.೦ ೨೩.೧ ೨೩.೨ TNN (17 November 2017). "filariasis in india: The epidemic you don't know about". The Times of India (in ಇಂಗ್ಲಿಷ್).
  24. TNN (17 November 2017). "Filariasis in india: The epidemic you don't know about". ದಿ ಟೈಮ್ಸ್ ಆಫ್‌ ಇಂಡಿಯಾ (in ಇಂಗ್ಲಿಷ್). The Times Group.
  25. Basu, Snigdha (8 March 2018). "Not Stigma But Awareness A Hurdle To Eliminate Lymphatic Filariasis By 2020". NDTV.
  26. Rath, Nibedita; Dash, Sambit (22 August 2017). "India Is Set To Fail Its Target Of Eradicating Filariasis By 2020". HuffPost India (in ಇಂಗ್ಲಿಷ್). AOL.
  27. Bagcchi, Sanjeet (April 2015). "India tackles lymphatic filariasis". The Lancet Infectious Diseases. 15 (4): 380. doi:10.1016/S1473-3099(15)70116-7. PMID 25809895.
  28. McNeil, Donald G. (2 March 2015). "India Begins Campaign to Eliminate Elephantiasis". The New York Times.
  29. Kondeti, PK; Ravi, K; Mutheneni, SR; Kadiri, MR; Kumaraswamy, S; Vadlamani, R; Upadhyayula, SM (2 September 2019). "Applications of machine learning techniques to predict filariasis using socio-economic factors". Epidemiology and Infection. 147: e260. doi:10.1017/S0950268819001481. PMC 6805759. PMID 31475670.
  30. ೩೦.೦ ೩೦.೧ ೩೦.೨ Sadarama, PV; Chirayath, D; Pillai, UN; Unny, NM; Lakshmanan, B; Sunanda, C (December 2019). "Canine Brugia malayi microfilarial excretory/secretory protein-based antibody assay for the diagnosis of brugian filariasis in dogs". Journal of Parasitic Diseases. 43 (4): 549–553. doi:10.1007/s12639-019-01125-3. PMC 6841868. PMID 31749523.

ಇವುಗಳನ್ನೂ ಓದಿ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]