ಭಾರತದ ೧೦೦ ರೂಪಾಯಿ ನಾಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ೧೦೦ ರೂಪಾಯಿ ನಾಣ್ಯ (Indian 100-rupee coin) ಭಾರತೀಯ ಕೇಂದ್ರ ಹಣಕಾಸು ಸಚಿವಾಲಯ ಹೊರತರಲು ನಿರ್ಧರಿಸಿರುವ ಭಾರತೀಯ ರೂಪಾಯಿಯ ಒಂದು ಪಂಗಡವಾಗಿದೆ. ೨೦೧೭ ಸೆಪ್ಟೆಂಬರ್ ನಲ್ಲಿ ಮುಂದೆ ಬಿಡುಗಡೆ ಮಾಡುವದಾಗಿ ಘೋಷಿಸಿದೆ.[೧]

ನೂರು ರೂಪಾಯಿ ನಾಣ್ಯದ ವಿಶೇಷತೆ[ಬದಲಾಯಿಸಿ]

  • 44 ಮಿ.ಮೀ. ವ್ಯಾಸ
  • 35 ಗ್ರಾಂ ತೂಕ
  • ನಾಣ್ಯವನ್ನ ಬೆಳ್ಳಿ, ತಾಮ್ರ, ನಿಕ್ಕಲ್ ಹಾಗೂ ಸತುವಿನಿಂದ ನಾಣ್ಯ ತಯಾರಿ ಮಾಡಲಾಗುತ್ತದೆ.

೧೦೦ ರೂಪಾಯಿಯ ನಾಣ್ಯದಲ್ಲಿ ಅಶೋಕಸ್ತಂಭ .ಸತ್ಯಮೇವ ಜಯತೆ ಎಂದು ಬರೆಯಲಾಗಿರುತ್ತದೆ. ದೇವನಗರಿಯಲ್ಲಿ ಭಾರತ ಎಂದು, ಇಂಗ್ಲಿಷ್ನಲ್ಲಿ ಇಂಡಿಯಾ ಎಂದು ಬರೆಯಲಾಗುತ್ತದೆ ಎನ್ನಲಾಗಿದೆ.

ಕೆಲವು ನಾಣ್ಯಗಳಲ್ಲಿ[ಬದಲಾಯಿಸಿ]

ಎಂಜಿಆರ್ ಹಾಗೂ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜನ್ಮಶತಮಾನೋತ್ಸವ ಅಂಗವಾಗಿ

  • ಕೆಲವು ನಾಣ್ಯಗಳಲ್ಲಿ ಎಂಜಿಆರ್ ಚಿತ್ರ ಇರಲಿದ್ದು, (1917-2017) ಎಂದು ಬರೆಯಲಾಗಿರುತ್ತದೆ.
  • ಕೆಲವು ನಾಣ್ಯಗಳಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಚಿತ್ರ ಇರಲಿದ್ದು, (1912-2016) ಎಂದು ಬರೆಯಲಾಗಿರುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. "ಶೀಘ್ರದಲ್ಲೇ 100 ರೂಪಾಯಿ ನಾಣ್ಯ ಬಿಡುಗಡೆ: ಕೇಂದ್ರ". vijaykarnataka.indiatimes.com , 13 September 2017.
  2. http://indianexpress.com/article/business/business-others/centre-plans-to-unveil-rs-100-coin-to-mark-mg-ramachandrans-birth-centenary-4840902/

ಬಾಹ್ಯ ಕೊಂಡಿಗಳು[ಬದಲಾಯಿಸಿ]