ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ತಂಡವನ್ನು ಬಲ ಗೊಳಿಸುವ ಉದ್ದೇಶದಿಂದ ಹಾಕಿ ಇಂಡಿಯಾ (ಎಚ್‌ಐ) ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿ ಮಾಡಿದೆ.ಮಿಡ್‌ಫೀಲ್ಡರ್ ರಿತು ರಾಣಿ ಪ್ರವಾಸದ ವೇಳೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಡಿಫೆಂಡರ್ ದೀಪಿಕಾ ಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ. ಭಾರತ ಈ ಪ್ರವಾಸದ ವೇಳೆ ಜರ್ಮನಿ, ದಕ್ಷಿಣ ಆಫ್ರಿಕಾ ಮತ್ತು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ತಂಡಗಳ ಎದುರು ತಲಾ ಎರಡು ಪಂದ್ಯಗಳನ್ನು ಆಡಲಿದೆ. ಜತೆಗೆ 21 ವರ್ಷ ದೊಳಗಿನವರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ.
ತಂಡ ಇಂತಿದೆ:
ಗೋಲ್‌ಕೀಪರ್ಸ್: ಸವಿತಾ ರಾಣಿ, ರಜನಿ ಎತಿಮರ್ಪು ಮತ್ತು ಯೋಗಿತಾ ಬಾಲಿ.
ಆಸ್ಟ್ರೇಲಿಯಾ, ನೆದರ್ಲೆಂಡ್ಸ್, ಅರ್ಜೆಂ ಟೀನಾ, ಮತ್ತು ನ್ಯೂಜಿ ಲೆಂಡ್, ಈ ಬಾರಿಯ ಒಲಿಂ ಪಿಕ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ತಂಡಗಳೆಂಬ ಹಣೆಪಟ್ಟಿ ಹೊಂದಿವೆ. ಹಾಗಂತ ಭಾರತವನ್ನು ಕಡೆಗಣಿಸುವಂತಿಲ್ಲ. ಹಿಂದಿನ ಒಂದು ವರ್ಷದಲ್ಲಿ ನಡೆದ ಟೂರ್ನಿಗಳಲ್ಲಿ ರಿತು ಪಡೆಯಿಂದ ಮೂಡಿ ಬಂದಿರುವ ಸಾಮರ್ಥ್ಯ ತಂಡದ ಮೇಲೆ ನಿರೀಕ್ಷೆ ಇಡುವಂತೆ ಮಾಡಿದೆ. ಕಳೆದ ವರ್ಷದ ಆರಂಭದಲ್ಲಿ ನಡೆದ ಸ್ಪೇನ್ ಪ್ರವಾಸ, ವಿಶ್ವ ಹಾಕಿ ಲೀಗ್ ಸೆಮಿಫೈನಲ್ ರೌಂಡ್–2 ಟೂರ್ನಿಗಳಲ್ಲಿ ಭಾರತ ತಂಡ ಜರ್ಮನಿ, ಆಸ್ಟ್ರೇಲಿಯಾದಂತಹ ಶಕ್ತಿಯುತ ತಂಡಗಳ ಎದುರು ಗೆದ್ದಿತ್ತು. ಜತೆಗೆ ಅರ್ಜೆಂಟೀನಾ ಪ್ರವಾಸದಲ್ಲಿಯೂ ಗಮನಾರ್ಹ ಸಾಮರ್ಥ್ಯ ತೋರಿತ್ತು.
ಆಸ್ಟ್ರೇಲಿಯಾ ತಂಡದ ಹಾಕಿ ಮಾಂತ್ರಿಕ ನೀಲ್ ಹಾಗುಡ್ ಹೋದ ವರ್ಷ ಎರಡನೇ ಅವಧಿಗೆ ಮುಖ್ಯಕೋಚ್ ಆಗಿ ನೇಮಕಗೊಂಡ ಬಳಿಕ ತಂಡದ ಪ್ರದರ್ಶನ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. 2013ರಲ್ಲಿ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ಹಾಗುಡ್ ತಂಡದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದರು. ಅವರ ಮಾರ್ಗ ದರ್ಶನದಲ್ಲಿ ತಂಡ ಆ ವರ್ಷ ಹಾಕಿ ವಿಶ್ವ ಲೀಗ್ ರೌಂಡ್–2ರಲ್ಲಿ ಪ್ರಶಸ್ತಿ ಗೆದ್ದಿತ್ತು. ಜತೆಗೆ ಏಷ್ಯನ್ ಚಾಂಪಿ ಯನ್‌ಷಿಪ್‌ನಲ್ಲಿ ಕಂಚಿನ ಸಾಧನೆಯನ್ನು ಮಾಡಿತ್ತು.
2014ರಲ್ಲಿ ಕೆಲ ಕಾರಣಗಳಿಂದ ಹಾಗುಡ್ ತಮ್ಮ ಸ್ಥಾನ ತೊರೆದಿದ್ದರು. ಭಾರತ ತಂಡ ಒಲಿಂ ಪಿಕ್ಸ್‌ಗೆ ಅರ್ಹತೆ ಗಳಿಸಿದ ಬಳಿಕ ತನ್ನ ಪ್ರತಿಷ್ಠೆ ಯನ್ನು ಬದಿಗೊತ್ತಿದ ಹಾಕಿ ಇಂಡಿಯಾ ಆಸ್ಟ್ರೇಲಿ ಯಾದ ಮಾಜಿ ಆಟಗಾರನ ಮನವೊಲಿಸಿ ಮತ್ತೊಮ್ಮೆ ಅವರನ್ನು ಕೋಚ್ ಹುದ್ದೆಗೆ ತಂದು ಕೂರಿಸಿದೆ. ಅವರು ಬಂದ ಬಳಿಕ ತಂಡದ ಸಾಮರ್ಥ್ಯ ಏರುಗ ತಿಯಲ್ಲಿ ಸಾಗಿದೆ.
ಇತ್ತೀಚೆಗೆ ನಡೆದ 12ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿರುವುದು ತಂಡದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಭಾರತ ತಂಡ ಮುಂಚೂಣಿ ಮತ್ತು ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ ಮುಗ್ಗರಿಸುತ್ತಿದೆ. ಹಿಂದಿನ ಕೆಲ ಪಂದ್ಯಗಳ ಫಲಿತಾಂಶ ಇದಕ್ಕೆ ನಿದರ್ಶನ. ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಈ ತಪ್ಪುಗಳನ್ನು ತಿದ್ದಿಕೊಂಡು ಸಾಗಬೇಕಾದ ಸವಾಲು ಈಗ ಭಾರತದ ಮಹಿಳಾತಂಡದ ಮುಂದಿದೆ.
‘ಒಲಿಂಪಿಕ್ಸ್‌ನಲ್ಲಿ ನಾವು ಜರ್ಮನಿ ತಂಡದ ಸವಾಲು ಎದುರಿಸಲಿದ್ದೇವೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ನಮಗೆ ಅಗ್ನಿ ಪರೀಕ್ಷೆ ಇದ್ದ ಹಾಗೆ. ಒಂದು ವೇಳೆ ನಾವು ಸೋತರೆ ಅದರಿಂದ ನಷ್ಟವೇನಿಲ್ಲ. ನಮ್ಮ ಲೋಪ ದೋಷಗಳನ್ನು ಅರಿತು ಅವುಗಳನ್ನು ತಿದ್ದಿಕೊಳ್ಳಲು ಈ ಪ್ರವಾಸ ನೆರವಾಗಲಿದೆ’ ಎಂದು ಹಾಗುಡ್ ಹೇಳಿದ್ದರು.[೧]
ಭಾರತೀಯ ಮಹಿಳಾ ತಂಡ, ಮುಂದೆ ಅತ್ಯಂತ ನಿರ್ಣಾಯಕ 2016 ರಿಯೊ ಒಲಿಂಪಿಕ್ಸ್' ಗುರಿಯಿಟ್ಟುಕೊಂಡು, ಪಂದ್ಯಾವಳಿಯಲ್ಲಿ ಒಂದು ಸುಧಾರಿತ ಪ್ರದರ್ಶನ ನೀಡಲು, ಮುಖ್ಯ ಕೋಚ್ ನೀಲ್ ಹಾಗುಡ್'(Hawgood), ಅವರ ಜಾಗರೂಕ ಕಣ್ಣುಗಳ ಅಡಿಯಲ್ಲಿ, ಬೆಂಗಳೂರಿನಲ್ಲಿ SAI ಕೇಂದ್ರದ ಶಿಬಿರದಲ್ಲಿ ಪ್ರಾಥಮಿಕ ತರಬೇತಿ ಪಡೆಯುತ್ತಿದೆ.
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ 5–2 ಗೋಲುಗಳಿಂದ ಕೆನಡಾ ತಂಡವನ್ನು ಪರಾಭವಗೊಳಿಸಿತು. ಹಿಂದಿನ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಸೋಲಿಸಿ ಅದಕ್ಕೆ ಆಘಾತ ನೀಡಿದ್ದರು. ವಿರಾಮದ ವೇಳೆಗೆ ಉಭಯ ತಂಡಗಳು 1–1ರಲ್ಲಿ ಸಮಬಲ ಹೊಂದಿದ್ದವು. ವಂದನಾ 9 ಮತ್ತು 51, ದೀಪಿಕಾ 38 ಮತ್ತು 49ನೇ ನಿಮಿಷಗಳಲ್ಲಿ ಗೋಲು.9ನೇ ನಿಮಿಷದಲ್ಲಿ ವಂದನಾ ಕಟಾರಿಯಾ, ಫೀಲ್ಡ್ ಗೋಲು ಗಳಿಸಿ ತಂಡದ ಖಾತೆ ತೆರೆದರು.38ನೇ ನಿಮಿಷದಲ್ಲಿ ಭಾರತ ತಂಡದ ದೀಪಿಕಾರ ಗೋಲಿನಿಂದ ಮತ್ತೆ ಮುನ್ನಡೆ ಕಂಡುಕೊಂಡಿತು. 58ನೇ ನಿಮಿಷದಲ್ಲಿ ಪೂನಮ್ ರಾಣಿ ಗೋಲು ದಾಖಲಿಸುತ್ತಿದ್ದಂತೆ 5–2ರ ಜಯ ಲಭಿಸಿತು.
ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ.
ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ.
ಗುಂಪು ವಿಭಾಗದಲ್ಲಿ ಭಾರತ ಮಹಿಳೆಯರ ತಂಡ 2–0 ಗೋಲು ಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದೆ. ಈ ಗೆಲುವಿನಿಂದ ಭಾರತ ತಂಡ ಏಳು ಪಾಯಿಂಟ್ಸ್‌ಗಳೊಂದಿಗೆ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆದು ಕೊಂಡಿದೆ. ಕೊರಿಯಾ, ಚೀನಾ, ಜಪಾನ್ ಮತ್ತು ಮಲೇಷ್ಯಾ ತಂಡಗಳು ನಂತರದ ಸ್ಥಾನದಲ್ಲಿವೆ. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆದಿದ್ದರಿಂದ ಭಾರತ ತಂಡದ ನಾಕೌಟ್ ತಲುಪುವ ಕನಸು ನನಸಾಗಿದೆ.[೮]
ಭಾರತ ಶನಿವಾರ ಸಿಂಗಪುರದಲ್ಲಿ 'ಮಹಿಳೆಯರ 4ನೇ ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿ' ಫೈನಲ್‍ನಲ್ಲಿ ಚೀನಾ ಮೇಲೆ 2-1 ಜಯ ಸಾಧಿಸಿದರು. ದೀಪಿಕಾ ಆಟಗಾರ್ತಿ ಅಂತಿಮ ಕೇವಲ 20 ಸೆಕೆಂಡುಗಳ ಸಮಯದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಒಂದು ಬಿರುಸು ಹೊಡೆತದಿಂದ ಗೋಲುಮಾಡಿ ಜಯ ತಂದಿತ್ತರು.
ಭಾರತದವರು ಮೊದಲ ಕಾಲುಭಾಗದಲ್ಲಿ ಒಂದು ಪೆನಾಲ್ಟಿ ಕಾರ್ನರ್ ಮೂಲಕ ದೀಪ್ ಗ್ರೇಸ್ ಎಕ್ಕಾರ 13 ನೇ ನಿಮಿಷದ ಗೋಲಿನಲ್ಲಿ 1-0 ಮುನ್ನಡೆ ಪಡೆದರು; ನಂತರ ಚೀನಾದವರು ಒಂದುಗೋಲು ಮಾಡಿ ಸಮ ಮಾಡಿಕೊಂಡರು.ದೀಪಿಕಾರ ಅಂತಿಮ ಕ್ಷಣದ ಗೋಲು ಜಯ ತಂದಿತ್ತಿತು
ಏಪ್ರಿಲ್ ಒಂದರಿಂದ ಆರಂಭವಾಗಲಿರುವ ಮಹಿಳೆಯರ ಎರಡನೇ ಸುತ್ತಿನ ವಿಶ್ವ ಲೀಗ್‌ನಲ್ಲಿ ಪಾಲ್ಗೊಳ್ಳಲು ಭಾರತ ಹಾಕಿ ತಂಡ ದಿ.೨೩, ಗುರುವಾರ ವೆಸ್ಟ್ ವಾಂಕೊವರ್‌ಗೆ ಪ್ರಯಾಣ ಬೆಳೆಸಿದೆ. ಭಾರತ ತಂಡ ಈ ಟೂರ್ನಿಯಲ್ಲಿ ಕೆನಡಾ, ಮೆಕ್ಸಿಕೊ, ಬೆಲಾರಸ್, ಟ್ರಿನಿಡಾಡ್, ಟೊಬ್ಯಾಗೊ, ಚಿಲಿ ಮತ್ತು ಉರುಗ್ವೆಯ ವಿರುದ್ಧ ಆಡಲಿದೆ.
ವೆಸ್ಟ್ ವ್ಯಾಂಕೋವರ್: ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಕೆನಡಾ ವಿರುದ್ಧ ೧-೩ ಅಂತರಲ್ಲಿ ಪರಾಭವಗೊಂಡಿದೆ.[೧೨]
02 Apr 2017
ವನಿತೆಯರ ವಿಶ್ವ ಹಾಕಿ ಲೀಗ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಹೊಡೆಯುವ ಮೂಲಕ 4-2 ಅಂತರದಿಂದ ಉರುಗ್ವೆ ತಂಡವನ್ನು ಮಣಿಸಿ ಲೀಗ್ ರೌಂಡ್-2ರಲ್ಲಿ ಶುಭಾರಂಭ ಮಾಡಿದೆ.[೧೩]
ವೆಸ್ಟ್ ವಾಂಕೋವರ್: ವಂದನಾ ಕಟಾರಿಯಾ ಗಳಿಸಿದ ಸೊಗಸಾದ ಗೋಲಿನ ನೆರವಿನಿಂದಾಗಿ ಭಾರತ ತಂಡ ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಹಾಕಿ ಲೀಗ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ 1-0 ದಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಉರುಗ್ವೆ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಪಡೆದಿತ್ತು. ಗೋಲು ಗಳಿಸಲು ಮೊದಲ ಕ್ವಾರ್ಟರ್‌ನಿಂದಲೇ ಉಭಯ ತಂಡಗಳು ಕಠಿಣ ಹೋರಾಟ ನಡೆಸಿದವು. ಆದರೆ ಫಲ ಲಭಿಸಿದ್ದು 26ನೇ ನಿಮಿಷದಲ್ಲಿ. ಗುಂಪಿನಲ್ಲಿ ಒಟ್ಟು ಮೂರು ತಂಡಗಳಿದ್ದು ಎರಡು ಪಂದ್ಯಗಳಲ್ಲಿ ಜಯ ಪಡೆದಿರುವ ಕಾರಣ ಭಾರತ ಸೆಮಿಫೈನಲ್ ಪ್ರವೇಶಿಸಿದೆ[೧೪]
ಭಾರತ ತಂಡ ಇಲ್ಲಿ ನಡೆದ ವಿಶ್ವ ಹಾಕಿ ಲೀಗ್ ರೌಂಡ್–2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು. ಸೋಮವಾರ ನಡೆದ ಫೈನಲ್‍ನಲ್ಲಿ ಶೂಟೌಟ್‌ನಲ್ಲಿ ಭಾರತ ತಂಡ 3–1 ಗೋಲುಗಳಿಂದ ಬಲಿಷ್ಠ ಚಿಲಿ ತಂಡವನ್ನು ಸೋಲಿಸಿತು.
ಇದರಿಂದ ಭಾರತ ವಿಶ್ವಲೀಗ್ ಆಡಲು ಸೆಮಿಫೈನಲ್ಸ್ ಅರ್ಹತೆ ಪಡೆದಿದೆ.
ದೀಪಿಕಾ 200 ಪಂದ್ಯಗಳ ಸಾಧನೆ; ಮಿಡ್‌ಫೀಲ್ಡರ್ ಆಟಗಾರ್ತಿ ದೀಪಿಕಾ, ಚಿಲಿ ತಂಡದ ವಿರುದ್ಧ ಆಡುವ ಮೂಲಕ ‘ದ್ವಿಶತಕ’ ಬಾರಿಸಿದ ಕೀರ್ತಿಗೆ ಪಾತ್ರರಾದರು. ಇದು ಅವರಿಗೆ 200ನೇ ಅಂತರ ರಾಷ್ಟ್ರೀಯ ಪಂದ್ಯ.[೧೫]
ಭಾರತದ ಮಹಿಳೆಯರ ತಂಡ ಬ್ಯಾಂಕಾಕ್‍ನಲ್ಲಿ ನಡೆಯುತ್ತಿ ರುವ 18 ವರ್ಷದೊಳಗಿನವರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಶನಿವಾರ ಎರಡನೇ ಗೆಲುವು ದಾಖಲಿಸಿದೆ. ಚೀನಾ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ತಂಡ 3–2ಗೋಲುಗಳಲ್ಲಿ ಜಯಗಳಿಸಿದೆ.[೧೬]