ಭಾರತ ಸರ್ಕಾರದ ಸಚಿವಾಲಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಸರ್ಕಾರ ತನ್ನ ಕಾರ್ಯಕಾರಿ ಅಧಿಕಾರವನ್ನು ಹಲವಾರು ಸಚಿವಾಲಯಗಳು ಅಥವಾ ರಾಜ್ಯ ಇಲಾಖೆಗಳ ಮೂಲಕ ಬಳಸುತ್ತದೆ. ಸಚಿವಾಲಯವು ಉದ್ಯೋಗಿಗಳು, ಅಧಿಕಾರಿಗಳನ್ನು ಕೂಡಿದ್ದು, ಇವರನ್ನು ನಾಗರಿಕ ಸೇವಕರು ಎಂದು ಕರೆಯಲಾಗುತ್ತದೆ ಮತ್ತು ರಾಜಕೀಯವಾಗಿ ಸಚಿವರು ಜವಾಬ್ದಾರರಾಗಿರುತ್ತಾರೆ. ಹೆಚ್ಚಾಗಿ ಪ್ರಮುಖ ಸಚಿವಾಲಯಗಳ ನೇತೃತ್ವವನ್ನು ಸಚಿವ ಸಂಪುಟದ ಮಂತ್ರಿಗಳು ವಹಿಸುತ್ತಾರೆ.

ಕೆಲವು ಸಚಿವಾಲಯಗಳು ಇಲಾಖೆಗಳು ಎಂಬ ಉಪವಿಭಾಗಗಳನ್ನು ಹೊಂದಿವೆ. ಉದಾಹರಣೆಗೆ, ಸಂವಹನ ಸಚಿವಾಲಯವು ಎರಡು ವಿಭಾಗಗಳನ್ನು ಹೊಂದಿದೆ - ದೂರಸಂಪರ್ಕ ಇಲಾಖೆ ಮತ್ತು ಅಂಚೆ ಇಲಾಖೆ .

ಕೇಂದ್ರ ಸರ್ಕಾರಿ ಸಚಿವಾಲಯಗಳ ಪಟ್ಟಿ[ಬದಲಾಯಿಸಿ]

ಇತ್ತೀಚೆಗೆ ಮುಕ್ತಾಯಗೊಂಡ 2019 ರ ಸಾರ್ವತ್ರಿಕ ಚುನಾವಣೆಯು ಭಾರತೀಯ ಜನತಾ ಪಕ್ಷವು ಒಟ್ಟು 303 ಸ್ಥಾನಗಳನ್ನು ಗಳಿಸಿ ಜಯಗಳಿಸಿತು. ನರೇಂದ್ರ ಮೋದಿಯವರನ್ನು 17 ನೇ ಲೋಕಸಭೆಯ ನಾಯಕರಾಗಿ ಆಯ್ಕೆ ಮಾಡಲಾಯಿತು. ಇತರ ಐವತ್ತೆಂಟು ಸದಸ್ಯರೊಂದಿಗೆ ನರೇಂದ್ರ ಮೋದಿ 30 ಮೇ 2019 ರಂದು ಸಂಜೆ 7 ಗಂಟೆಗೆ ಗೌರವಾನ್ವಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಬಿಮ್ಸ್ಟೆಕ್ ರಾಷ್ಟ್ರಗಳ ಪ್ರಮುಖ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಪುಟದ ಮಂತ್ರಿಗಳು ಮತ್ತು ಸ್ವತಂತ್ರ ಉಸ್ತುವಾರಿ ಸಚಿವರ ಪಟ್ಟಿ
ಸಚಿವಾಲಯದ ಹೆಸರು ಸ್ಥಾಪನೆ ಸಚಿವರು ಸಚಿವ ಶ್ರೇಣಿ
1 ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ 1947 ನರೇಂದ್ರ ಸಿಂಹ ತೋಮರ್ ಸಂಪುಟ ಸಚಿವ
2 ಆಯುಷ್ ಸಚಿವಾಲಯ 9 ನವೆಂಬರ್ 2014 ಶ್ರೀಪಾದ್ ಯಸ್ಸೊ ನಾಯಕ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
3 ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ 5 ಜೂನ್ 1991 ಡಿ. ವಿ. ಸದಾನಂದ ಗೌಡ ಸಂಪುಟ ಸಚಿವ
4 ನಾಗರಿಕ ವಿಮಾನಯಾನ ಸಚಿವಾಲಯ ಹರ್ದೀಪ್ ಸಿಂಹ ಪುರಿ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
5 ಕಲ್ಲಿದ್ದಲು ಸಚಿವಾಲಯ ಪ್ರಹ್ಲಾದ ಜೋಶಿ ಸಂಪುಟ ಸಚಿವ
6 ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ 15 ಆಗಷ್ಟ್ 1947 ಪೀಯುಷ್ ಗೋಯಲ್ ಸಂಪುಟ ಸಚಿವ
7 ಸಂವಹನ ಸಚಿವಾಲಯ 19 ಜುಲೈ 2016 ರವಿ ಶಂಕರ್‌ ಪ್ರಸಾದ್‌ ಸಂಪುಟ ಸಚಿವ
8 ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ರಾಮ್ ವಿಲಾಸ್ ಪಾಸ್ವಾನ್ ಸಂಪುಟ ಸಚಿವ
9 ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ನಿರ್ಮಲಾ ಸೀತಾರಾಮನ್ ಸಂಪುಟ ಸಚಿವ
10 ಸಂಸ್ಕೃತಿ ಸಚಿವಾಲಯ ಪ್ರಹ್ಲಾದ್ ಸಿಂಹ ಪಟೇಲ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
11 ರಕ್ಷಣಾ ಸಚಿವಾಲಯ 15 ಆಗಷ್ಟ್ 1947 ರಾಜನಾಥ್ ಸಿಂಗ್ ಸಂಪುಟ ಸಚಿವ
12 ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ 29 ಜನವರಿ 2003 ಜಿತೇಂದ್ರ ಸಿಂಗ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
13 ಭೂ ವಿಜ್ಞಾನ ಸಚಿವಾಲಯ 2006 ಹರ್ಷವರ್ಧನ್ ಸಂಪುಟ ಸಚಿವ
14 ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 19 ಜುಲೈ 2016 ರವಿ ಶಂಕರ್‌ ಪ್ರಸಾದ್‌ ಸಂಪುಟ ಸಚಿವ
15 ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 1985 ಪ್ರಕಾಶ್ ಜಾವಡೇಕರ್ ಸಂಪುಟ ಸಚಿವ
16 ವಿದೇಶಾಂಗ ಸಚಿವಾಲಯ 2 ಸೆಪ್ಟೆಂಬರ್ 1946 ಎಸ್.ಜೈಶಂಕರ್ ಸಂಪುಟ ಸಚಿವ
17 ಹಣಕಾಸು ಸಚಿವಾಲಯ 29 ಅಕ್ಟೋಬರ್ 1946 ನಿರ್ಮಲಾ ಸೀತಾರಾಮನ್ ಸಂಪುಟ ಸಚಿವ
18 ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ 1988 ಹರ್ಸಿಮ್ರತ್ ಕೌರ್ ಬಾದಲ್ ಸಂಪುಟ ಸಚಿವ
19 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 15 ಆಗಷ್ಟ್ 1947 ಹರ್ಷವರ್ಧನ್ ಸಂಪುಟ ಸಚಿವ
20 ಗೃಹ ಸಚಿವಾಲಯ 15 ಆಗಷ್ಟ್ 1947 ಅಮಿತ್ ಶಾ ಸಂಪುಟ ಸಚಿವ
21 ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯ ಪ್ರಕಾಶ್ ಜಾವಡೇಕರ್ ಸಂಪುಟ ಸಚಿವ
22 ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2017 ಹರ್ದೀಪ್ ಸಿಂಹ ಪುರಿ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
23 ಶಿಕ್ಷಣ ಸಚಿವಾಲಯ 15 ಆಗಷ್ಟ್ 1947 ರಮೇಶ್ ಪೋಖ್ರಿಯಾಲ್ ಸಂಪುಟ ಸಚಿವ
24 ಮಾಹಿತಿ ಮತ್ತು ಪ್ರಸಾರ ಸಚಿವಾಲಯ 15 ಆಗಷ್ಟ್ 1947 ಪ್ರಕಾಶ್ ಜಾವಡೇಕರ್ ಸಂಪುಟ ಸಚಿವ
25 ಜಲಶಕ್ತಿ ಸಚಿವಾಲಯ 30 ಮೇ 2019 ಗಜೇಂದ್ರ ಸಿಂಹ ಸಂಪುಟ ಸಚಿವ
26 ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಂತೋಷ್ ಗಾಂಗವರ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
27 ಕಾನೂನು ಮತ್ತು ನ್ಯಾಯ ಸಚಿವಾಲಯ 15 ಆಗಷ್ಟ್ 1947 ರವಿ ಶಂಕರ್‌ ಪ್ರಸಾದ್‌ ಸಂಪುಟ ಸಚಿವ
28 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ 9 ಮೇ 2007 ನಿತಿನ್ ಗಡ್ಕರಿ ಸಂಪುಟ ಸಚಿವ
29 ಗಣಿಗಾರಿಕೆ ಸಚಿವಾಲಯ ಪ್ರಹ್ಲಾದ ಜೋಶಿ ಸಂಪುಟ ಸಚಿವ
30 ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ 2006 ಮುಖ್ತಾರ್ ಅಬ್ಬಾಸ್ ನಕ್ವಿ ಸಂಪುಟ ಸಚಿವ
31 ಹೊಸ ಮತ್ತು ನವೀಕರಣೀಯ ಶಕ್ತಿ ಸಚಿವಾಲಯ 1992 ಆರ್.ಕೆ.ಸಿಂಗ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
32 ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ 1971 ಹರ್ಷವರ್ಧನ್ ಸಂಪುಟ ಸಚಿವ
33 ಸಂಸದೀಯ ವ್ಯವಹಾರಗಳ ಸಚಿವಾಲಯ 1949 ಪ್ರಹ್ಲಾದ ಜೋಶಿ ಸಂಪುಟ ಸಚಿವ
34 ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ 1 ಆಗಷ್ಟ್ 1970 ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ (ಹೆಚ್ಚುವರಿ ಉಸ್ತುವಾರಿ)
35 ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಧರ್ಮೇಂದ್ರ ಪ್ರಧಾನ್ ಸಂಪುಟ ಸಚಿವ
36 ಯೋಜನಾ ಸಚಿವಾಲಯ 2014 ರಾವ್ ಇಂದರ್ಜಿತ್ ಸಿಂಗ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
37 ಪಂಚಾಯತಿ ರಾಜ್ ಸಚಿವಾಲಯ 27 ಮೇ 2004 ನರೇಂದ್ರ ಸಿಂಹ ತೋಮರ್ ಸಂಪುಟ ಸಚಿವ
38 ವಿದ್ಯುತ್ ಸಚಿವಾಲಯ 2 ಜುಲೈ 1992 ರಾಜಕುಮಾರ್ ಸಿಂಗ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
39 ಪ್ರಧಾನಮಂತ್ರಿ ಕಾರ್ಯಾಲಯದ ಸಚಿವಾಲಯ 1977 ಜಿತೇಂದ್ರ ಸಿಂಗ್ ರಾಜ್ಯ ಮಂತ್ರಿ
40 ಗ್ರಾಮೀಣಾಭಿವೃದ್ಧಿ ಸಚಿವಾಲಯ ನರೇಂದ್ರ ಸಿಂಹ ತೋಮರ್ ಸಂಪುಟ ಸಚಿವ
41 ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 1942 ನಿತಿನ್ ಗಡ್ಕರಿ ಸಂಪುಟ ಸಚಿವ
42 ವಿದ್ಯುತ್ ಸಚಿವಾಲಯ 2 ಜುಲೈ 1992 ಆರ್.ಕೆ.ಸಿಂಗ್ ಸಂಪುಟ ಸಚಿವ
43 ರೈಲ್ವೆ ಸಚಿವಾಲಯ 15 ಆಗಷ್ಟ್ 1947 ಪೀಯುಷ್ ಗೋಯಲ್ ಸಂಪುಟ ಸಚಿವ
44 ಹಡಗು ಸಾಗಣೆ ಸಚಿವಾಲಯ 15 ಆಗಷ್ಟ್ 1947 ಮನ್ಸುಖ್ ಎಲ್. ಮಾಂಡವಿಯಾ ಸಂಪುಟ ಸಚಿವ
45 ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 1985 ಥಾವರ್ ಚಂದ್ ಗೆಹ್ಲೊಟ್ ಸಂಪುಟ ಸಚಿವ
46 ಅಂಕಿಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ರಾವ್ ಇಂದರ್ಜಿತ್ ಸಿಂಗ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
47 ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ 9 ನವೆಂಬರ್ 2014 ಮಹೇಂದ್ರನಾಥ್ ಪಾಂಡೆ ಸಂಪುಟ ಸಚಿವ
48 ಉಕ್ಕು ಸಚಿವಾಲಯ ಧರ್ಮೇಂದ್ರ ಪ್ರಧಾನ್ ಸಂಪುಟ ಸಚಿವ
49 ಜವಳಿ ಸಚಿವಾಲಯ ಸ್ಮೃತಿ ಇರಾನಿ ಸಂಪುಟ ಸಚಿವ
50 ಪ್ರವಾಸೋದ್ಯಮ ಸಚಿವಾಲಯ 1999 ಪ್ರಹ್ಲಾದ್ ಸಿಂಗ್ ಪಟೇಲ್ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)
51 ಬುಡಕಟ್ಟು ವ್ಯವಹಾರಗಳ ಸಚಿವಾಲಯ 1999 ಅರ್ಜುನ್ ಮುಂಡಾ ಸಂಪುಟ ಸಚಿವ
52 ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ 30 ಮೇ 2019 ಗಿರಿರಾಜ್ ಸಿಂಗ್ ಸಂಪುಟ ಸಚಿವ
53 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 1985 ಸ್ಮೃತಿ ಇರಾನಿ ಸಂಪುಟ ಸಚಿವ
54 ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ 27 ಮೇ 2000 ಕಿರೆಣ್ ರಿಜಿಜು ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ)

ಸ್ವತಂತ್ರ ಇಲಾಖೆಗಳು[ಬದಲಾಯಿಸಿ]

ಕೆಳಗಿನವುಗಳು ಯಾವುದೇ ಕೇಂದ್ರ ಸಚಿವಾಲಯದ ಅಡಿಯಲ್ಲಿರದ ಭಾರತ ಸರ್ಕಾರದ ಸ್ವತಂತ್ರ ಇಲಾಖೆಗಳು. ಇವುಗಳು ನೇರವಾಗಿ ಪ್ರಧಾನ ಮಂತ್ರಿ ಕಾರ್ಯಾಲಯದ ಅಡಿಯಲ್ಲಿ ಬರುತ್ತವೆ.

ನಿಷ್ಕ್ರಿಯ ಸಚಿವಾಲಯಗಳು[ಬದಲಾಯಿಸಿ]

ಈ ಕೆಳಗಿನ ಸಚಿವಾಲಯಗಳು ಹಿಂದೆ ಕಾರ್ಯ ನಿರ್ವಹಿಸಿದ್ದವು, ಆದರೆ ಈಗ ಅವು ನಿಷ್ಕ್ರಿಯಗೊಂಡಿವೆ, ಏಕೆಂದರೆ ಸಾಮಾನ್ಯವಾಗಿ ಮತ್ತೊಂದು ಸಚಿವಾಲಯದೊಂದಿಗೆ ವಿಲೀನ ಅಥವಾ ಹೊಸ ಸಚಿವಾಲಯಗಳಾಗಿ ವಿಭಜನೆಯಾಗುತ್ತದೆ.