ಬ್ರುಸೆಲ್ಲೋಸಿಸ್ - ಜಾನುವಾರು ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(Brucella spp) ಬ್ರುಸೆಲ್ಲಾ ಎಸ್ಪಿಪಿ. ಗ್ರಾಮ್-ನಕರಾತ್ಮಕ ವಿóಷಾಣು ಜೀವಿ-ರಚನೆ (ರೂಪವಿಜ್ಞಾನ). ಬ್ರುಸೆಲ್ಲಾ ಎಸ್ಪಿಪಿ. ಅಲ್ಪ ಪ್ರಮಾಣ ಅಂಟಿದೆ., ಸಣ್ಣ ಗ್ರಾಮ್-ನಕರಾತ್ಮಕ ಛಿoಛಿಛಿobಚಿಛಿiಟಟi (ಗಾತ್ರ0.5-0.7 ಘಿ 0.6-1.5 ಯುಎಂ), ಮತ್ತು ಹೆಚ್ಚಾಗಿ, ಏಕೆ ಕೋಶಗಳಾಗಿ ಕಾಣಬಹುದು ಮತ್ತು "ಸೂಕ್ಷ್ಮ ಮರಳಿನ" ನಂತೆ ಕಾಣಿಸುವುದು.

ಪೀಠಿಕೆ[ಬದಲಾಯಿಸಿ]

  • ಬ್ರುಸೆಲ್ಲೊಸೊಸ್ ಎನ್ನುವ ರೋಗಕ್ಕೆ, ಬ್ಯಾಂಗ್ ರೋಗ, ಕ್ರಿಮೀಯನ್ ಜ್ವರ, ಗಿಬ್ರಾಲ್ಟರ್ ಜ್ವರ, ಮಾಲ್ಟಾ ಜ್ವರ, ಮಾಲ್ಟೀಸ್ ಜ್ವರ, ಮೆಡಿಟರೇನಿಯನ್ ಜ್ವರ, ರಾಕ್ ಜ್ವರ, ಅಥವಾ ಮಾಲ್ಟ ಜ್ವರ ಎಂಬ ಹೆಸರುಗಳಿವೆ. ಸೋಂಕಿತ ಪ್ರಾಣಿಗಳ ಪಾಶ್ಚರೀಕರಿಸದ ಹಾಲು ಸೇವನೆಯಿಂದ ಅಥವಾ ಸರಿಯಾಗಿ ಬೇಯಿಸದ ಮಾಂಸದಿಂದ , ಅಥವಾ ನಿಕಟ ಸಂಪರ್ಕ/ಅವು ಸ್ರವಿಸುವ ದ್ರವದಿಂದ ಉಂಟಾಗುವ ಅತ್ಯಂತ ಸಾಂಕ್ರಾಮಿಕ ಪ್ರಾಣಿಜನ್ಯ (ಜೂನೋಸಿಸ್) ಸೊಂಕು ಖಾಯಿಲೆ.
Coxiella burnetii 01ಚಲಿಸದ ದಂಡಾಕಾರದ ರೂಪವಿರುವ(ಕೊಕೊಬ್ಯಸಿಲಿ) ಬ್ಯಾಕ್ಟೀರಿಯಾಗಳು; ಇದು ಅದೇ ಜಾತಿಯ ಕೊಕ್ಸಿಲ್ಲ ಬರ್ನೆಟಿಐ
  • ಬ್ರುಸೆಲ್ಲಾ ಜಾತಿಯು ಸಣ್ಣ, ಗ್ರಾಮ್-ನಕಾರಾತ್ಮಕ, ಚಲಿಸದ ದಂಡಾಕಾರದ ರೂಪವಿರುವ(ಕೊಕೊಬ್ಯಸಿಲಿ) ಬ್ಯಾಕ್ಟೀರಿಯಾಗಳು. ಅವು ಸಾಮಾನ್ಯವಾಗಿ ಪ್ರಾಣಿಗಳು ಮತ್ತು ಮಾನವರಿಗೆ ಜೀವಮಾನವಿಡೀ ಮುಂದುವರಿಯುವ,ಅಥವಾ ಕಾಡುವ ದೀರ್ಘಕಾಲದ ಖಾಯಿಲೆಯಾಗಲು ಕಾರಣವಾಗುತ್ತದೆ, ನಾಲ್ಕುಬಗೆಯ ಅಣುಜೀವಿಗಳು ಮನುಷ್ಯರಿಗೆ ಸೋಂಕು ಉಂಟು ಮಾಡುತ್ತವೆ. ಅವು ಅನುಮೋದಕ ಜೀವಕೋಶಗಳ ಒಳಗಿನ(ಇನ್‍ಟ್ರಸೆಲ್ಯಲರ್) ಪರಾವಲಂಬಿಗಳು- ಕ್ರಿಯಾಶೀಲವಾಗಿರುತ್ತವೆ. ನಾಲ್ಕುವಿಧ: ೧.ಬಿ ಗರ್ಭಪಾತಕ, ೨.ಬಿ ಕಾನಿಸ್, ೩.ಬಿ ಮೆಲಿಟಾನ್ಸಿಸ್ ಮತ್ತು ೪.ಬಿ ಸುಯಿಸ್(suis). ಬಿ ಗರ್ಭಪಾತಕ, ಬಿ ಮೆಲಿಟಾನ್ಸಿಸ್ ಕಡಿಮೆ ವಿಷಪೂರಿತ; ಅದು ಪ್ರಮುಖವಾಗಿ ರಾಸುಗಳ ರೋಗ. ಬಿ ಕಾನಿಸ್ ನಾಯಿಗಳಿಗೆ ಸೋಂಕು ತರುವುದು. ಬಿ ಮೆಲಿಟಾನ್ಸಿಸ್ ಅತ್ಯಂತ ವಿಷಪೂರಿತ ಮತ್ತು ಆಕ್ರಮಣಕಾರಿ ಅಣುಜೀವಿ. ಇದು ಸಾಮಾನ್ಯವಾಗಿ ಆಡುಗಳನ್ನು ಆಕ್ರಮಿಸುವುದು ಮತ್ತು ಕೆಲವೊಮ್ಮೆ ಕುರಿಗಳಿಗೂ ಸೋಂಕು ತರುವುದು. ಬಿ-ಸುಯಿಸ್ ಮಧ್ಯಂತರ ವಿಷಮತೆಯೊಂದಿಗಿ ವಿಷಾಣು ಮತ್ತು ಮುಖ್ಯವಾಗಿ ಹಂದಿಗಳು ಸೋಂಕು ತರುವುದು. ಸೋಂಕಿನ ಲಕ್ಷಣಗಳು ಅಪಾರ ಬೆವರು ಮತ್ತು ಸಂಧಿ ಮತ್ತು ಸ್ನಾಯುಗಳ ತೀವ್ರ ನೋವು. ಬ್ರುಸೆಲ್ಲೊಸೊಸ್ ಸೋಂಕು 20 ನೇ ಶತಮಾನದಲ್ಲಿ ಪ್ರಾಣಿಗಳು ಮತ್ತು ಮಾನವರಲ್ಲಿ ಗುರುತಿಸಲ್ಪಟ್ಟಿದೆ.[೧][೨]

ಜಾನುವಾರುಗಳಲ್ಲಿ ಸೊಂಕು[ಬದಲಾಯಿಸಿ]

  • ಕಂದು ರೋಗ (ಕಂದ ರೋಗ) ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ. ಹಸುಗಳು ಗರ್ಭಧರಿಸಿದ ಮೂರು ನಾಲ್ಕು ತಿಂಗಳ ಸಮಯದಲ್ಲಿಯೇ ಕರುಹಾಕಿದರೆ ಅಥವಾ ಗರ್ಭಪಾವಾದರೆ 'ಕಂದಹಾಕಿದೆ'ಎನ್ನುವರು. ಅದೊಂದು ರೋಗ ಎನ್ನುವುದು ಪಶುವೈದ್ಯರ ಆಗಮನದ ನಂತರವಷ್ಟೇ ತಿಳಿದಿದೆ. ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವುದು ಬಹಳ ಕಷ್ಟ. ಈ ರೋಗವು ಜಾನುವಾರುಗಳಲ್ಲಿ ಬ್ರುಸೆಲ್ಲಾ ಅಬೋರ್ಟಸ್ ಎಂಬ ರೋಗಾಣುವಿನಿಂದ ಬರುತ್ತದೆ. ಲೈಂಗಿಕವಾಗಿ ಪ್ರಬುದ್ಧತೆ ಹೊಂದಿದ ರಾಸುಗಳಲ್ಲಿ ರೋಗಲಕ್ಷಣಗಳು ಕಂಡು ಬರುತ್ತವೆ. ರೋಗಗ್ರಸ್ಥ ಹಸುಗಳು ಮೊದಲು ಕಂದು ಹಾಕುವುದು (ಗರ್ಭಪಾತ) ಇತ್ಯಾದಿ ಲಕ್ಷಣಗಳನ್ನು ತೋರಿಸಿದರೂ ನಂತರ ಸಾಮಾನ್ಯವಾಗಿಯೇ ಕರು ಹಾಕಬಹುದು. ಆದರೆ ಈ ಕರುಗಳು ರೋಗ ತಗಲಿಸಿಕೊಂಡೇ ಜನಿಸಬಹುದು. ಇಂತಹ ಕರುಗಳು ಪ್ರೌಢಾವಸ್ಥೆಗೆ ಬರುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಗರ್ಭ ಧರಿಸಿದಾಗ ಮಾತ್ರ ರೋಗಾಣುಗಳು ಬೆಳವಣಿಗೆ ಹೊಂದುತ್ತವೆ.
ಅಪಾಯಕಾರಿ ಬ್ರುಸೆಲ್ಲಾ ಮೆಲಿಟೆನ್ಸಿಸ್-BrucellaMelitensis
  • ಸೋಂಕು ಹೊಂದಿರುವ ಹೋರಿಗಳ ವೀರ್ಯದಲ್ಲಿ ರೋಗಾಣುಗಳು ಇರುತ್ತಿದ್ದು ಇವೂ ರೋಗಪ್ರಸಾರದಲ್ಲಿ ಮಹತ್ವದ ಪಾತ್ರ ಹೊಂದಿವೆ. ಕೆಲವು ಜಾನುವಾರುಗಳು ರೋಗದ ಲಕ್ಷಣ ತೋರಿಸದಿದ್ದರೂ ರೋಗವಾಹಕಗಳಾಗಿ ಕೆಲಸ ಮಾಡಬಲ್ಲವು.[೩]

ಅಪಾಯಕಾರಿ ಸೋಂಕು[ಬದಲಾಯಿಸಿ]

  • ಬ್ರುಸೆಲ್ಲಾ ಎಂಬುದು ಮೇಲೆ ಹೇಳಿದಂತೆ ಅತಿಸೂಕ್ಷ್ಮ ಕಡ್ಡಿಯಂಥ ಏಕಾಣುಜೀವಿ. ಹಸುವಿಗೆ ಅದರ ಸೋಂಕು ತಗುಲಿತೆಂದರೆ ಅದಕ್ಕೆ ಔಷಧವಿಲ್ಲ. ಹಸು ಸಾಯುವುದಿಲ್ಲ ನಿಜ. ಅದಕ್ಕೆ ಗರ್ಭ ನಿಲ್ಲುವುದಿಲ್ಲ, ಆರೇಳನೆ ತಿಂಗಳಿಗೆ ಅಬಾರ್ಶನ್ ಆಗುತ್ತದೆ. ಎರಡನೆಯ ಬಾರಿ ಗರ್ಭ ಕಟ್ಟಿದರೆ ಅದೂ ಬಿದ್ದುಹೋಗಬಹುದು. ಮೂರನೆಯ ಬಾರಿ ಗರ್ಭ ನಿಲ್ಲುತ್ತದೆ. ಆದರೆ ತಾಯಿ ಹಸುವಿನ ಹಾಲಿನಲ್ಲಿ ರೋಗಾಣು ಇರುತ್ತದೆ. ಅಂಥ ಹಾಲನ್ನು ಕಾಯಿಸದೇ ಸೇವಿಸಿದರೆ ಕೆಲವರಿಗೆ ಬ್ರುಸೆಲ್ಲೊಸಿಸ್ ರೋಗ ಬರಬಹುದು. ಗೋಮಾಂಸವನ್ನು ಅರೆಬರೆ ಬೇಯಿಸಿ ತಿಂದರೂ ರೋಗ ಬಂದೀತು. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ರೋಗ ಬರಲಿಕ್ಕಿಲ್ಲ.
  • ಮನುಷ್ಯರಿಗೆ ಬ್ರುಸೆಲ್ಲೊಸಿಸ್ ರೋಗ ಬಂದರೆ ಸಾವು ಬರುವುದಿಲ್ಲ. ಆದರೆ ಬಿಟ್ಟು ಬಿಟ್ಟು ಜ್ವರ ಬರುತ್ತದೆ. ಮೈಕೈ ಸ್ನಾಯುಗಳಲ್ಲಿ ವಿಪರೀತ ನೋವು ಇರುತ್ತದೆ. ಜ್ವರ 102-103 ಡಿಗ್ರಿಗೂ ಏರಿ, ಸನ್ನಿ ಅಥವಾ ಭಾವೋನ್ಮಾದವೂ ಆಗಿ ಜ್ವರ ಇಳಿಯುತ್ತದೆ. ತೀರಾ ತೀರಾ ಅಪರೂಪಕ್ಕೆ ಸಾವು ಬಂದೀತು. ಪದೇ ಪದೇ ಹಾಗೆ ಜ್ವರ ಬಾರದಂತೆ ಔಷಧ ಇದೆ; ಆದರೆ ಐದಾರು ತಿಂಗಳುಗಳ ಕಾಲ ಮಾತ್ರೆ ಸೇವಿಸಬೇಕು. ಅದಕ್ಕಿಂತ ದೊಡ್ಡ ಫಜೀತಿ ಏನೆಂದರೆ ಜ್ವರಪೀಡಿತ ಗಂಡಸರ ವೃಷಣದಲ್ಲಿ ಭಾರೀ ಹಿಂಸೆಯಾಗುತ್ತದೆ.ಕ್ರಮೇಣ ಕೆಲವರಿಗೆ ಷಂಡತನ ಬರುತ್ತದೆ. ರೋಗಾಣುಭರಿತ ಹಸಿ ಹಾಲನ್ನು ಸೇವಿಸಿದ ಹೆಂಗಸರಲ್ಲೂ ಕೆಲವರು ಬಂಜೆಯಾಗುತ್ತಾರೆ.
ಬ್ರುಸೆಲ್ಲೋಸಿಸ್ ಕಾಯಿಲೆ
  • ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ನಡೆದ ಘಟನೆ. ವೈದಿಕ ವೃತ್ತಿಯಲ್ಲಿರುವರೊಬ್ಬರಿಗೆ ರಾತ್ರಿಯಲ್ಲಿ ಜ್ವರ ಮತ್ತು ಚಳಿ–ನಡುಕ, ಅಸಹನೀಯ ಕೀಲು–ಬೆನ್ನು ನೋವು... ವೈದ್ಯರು ಇದನ್ನು ಮಲೇರಿಯಾ, ಟೈಫಾಯ್ಡ್‌ ಎಂದೆಲ್ಲಾ ಹೇಳಿ ಚಿಕಿತ್ಸೆ ನೀಡಿದರು. ಪ್ರಯೋಜನ ಆಗಲಿಲ್ಲ. ಕೊನೆಗೂ ದಾವಣಗೆರೆಯ ವೈದ್ಯರೊಬ್ಬರಿಗೆ ಇದು ‘ಬ್ರುಸಲ್ಲೋಸಿಸ್’ ರೋಗ ಎಂದು ತಿಳಿದು, ಚಿಕಿತ್ಸೆ ನೀಡಿದರು. ಈಗ ಅವರು ಚೇತರಿಸಿಕೊಂಡಿದ್ದಾರೆ.
  • ವೈದಿಕರು ಸೇವಿಸಿದ ಪಂಚಗವ್ಯದಲ್ಲಿ ಯಾವುದೋ ಆಕಳಿಗೆ ಬ್ರುಸೆಲ್ಲೋಸಿಸ್ ಕಾಯಿಲೆ ಇದ್ದು ರೋಗಾಣು ಸೇರಿರುವ ಕಾರಣ ಅವರಿಗೆ ರೋಗ ಬಂದಿತ್ತು! ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಲ್ಲೋಸಿಸ್ ಎಂಬ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡಿ ಕಾಡುತ್ತದೆ.
  • ಪಶುವೈದ್ಯ ಮಿತ್ರರೊಬ್ಬರ ಪತ್ನಿಗೆ ಪದೇ ಪದೇ ಗರ್ಭಪಾತವಾಗುತ್ತಿತ್ತು. ಹಲವಾರು ಚಿಕಿತ್ಸೆಯ ನಂತರವೂ ಪರಿಣಾಮಕಾರಿಯಾಗಲೇ ಇಲ್ಲ. ನಂತರ ಅವರ ರಕ್ತ ಪರೀಕ್ಷೆ ಮಾಡಿಸಿದಾಗ ಬ್ರುಸೆಲ್ಲಾ ಕಾಯಿಲೆಯಿರುವುದು ಪತ್ತೆಯಾಯಿತು(ಡಾ. ಎನ್.ಬಿ.ಶ್ರೀಧರ).

.

  • ಸೋಂಕು ಹರಡುವಿಕೆ: ಬ್ರುಸೆಲ್ಲಾ ರೋಗಾಣು ಭಾರೀ ಸಾಂಸರ್ಗಿಕವಂತೂ ಹೌದು. ಅಂದರೆ ಅದರ ಸೆಗಣಿ, ಗಂಜಳ, ಅದು ತಿಂದು ಬಿಟ್ಟ ಮೇವು, ಅದರ ಮೈತೊಳೆದ ನೀರು ಎಲ್ಲವನ್ನೂ ಪ್ರತ್ಯೇಕ ಇಡದಿದ್ದರೆ ಅಕ್ಕಪಕ್ಕದ ಇತರ ಹಸು, ಎಮ್ಮೆ, ಹೋರಿ ಎಲ್ಲವಕ್ಕೂ ರೋಗ ಬರುತ್ತದೆ. ಡೇರಿಯಲ್ಲಿ ಒಂದಕ್ಕೆ ಬ್ರುಸೆಲ್ಲೊಸಿಸ್ ಬಂದರೆ ಅದರ ಲಕ್ಷಣಗಳು ಗೊತ್ತಾಗುವ ಮೊದಲೇ ಇತರ ಹಸುಗಳೆಲ್ಲ ರೋಗಗ್ರಸ್ತ ಆಗಬಹುದು. ಗೊತ್ತಾದರೂ ಏನೂ ಮಾಡುವಂತಿಲ್ಲ. ಈ ಕಾಯಿಲೆಗೆ ಔಷಧಿ ಇಲ್ಲ. ಕರುಗಳಿಗೆ ರೋಗ ತಗುಲದ ಹಾಗೆ ಲಸಿಕೆ ಹಾಕಿಸಬಹುದು. ಆದರೆ ಲಸಿಕೆ ಹಾಕಿಸುವ ಮೊದಲೇ ರೋಗಾಣುಗಳು ಅದರ ದೇಹದಲ್ಲಿದ್ದರೆ ಏನೂ ಮಾಡುವಂತಿಲ್ಲ. ಆ ರೋಗ ಬೇರೆಡೆ ಹರಡದ ಹಾಗೆ ದಯಾಮರಣ ಕೊಡಿಸಬಹುದು.
  • ಭಾರತದ ಅಪ್ಪಟ ನಾಟಿ ದನಗಳಿಗೆ ಬ್ರುಸೆಲ್ಲೊಸಿಸ್ ರೋಗ ಬರುವುದಿಲ್ಲ. ಆದರೆ ಈಗೀಗ ಎಲ್ಲೆಲ್ಲೂ ಸಂಕರ ತಳಿಗಳೇ ಕಾಣುತ್ತವೆ. ಗಿರ್ ಹಸುಗಳಲ್ಲೂ ಈ ಕಾಯಿಲೆ ಪತ್ತೆಯಾಗಿದೆ.
  • ಶಿರಸಿಯ ಸರ್ಕಾರಿ ಪಶುವೈದ್ಯ ಡಾ. ಗಣೇಶ ನೀಲೇಸರ ಸ್ವತಃ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ಅನೇಕ ಬಾರಿ ನರಳಿದವರು. ಜ್ವರ ತಾರಕಕ್ಕೇರಿ ವಿಭ್ರಮೆಯುಂಟಾದಾಗಿನ ತಮ್ಮ ಅನುಭವವನ್ನು ತುಂಬ ಸ್ವಾರಸ್ಯಕರವಾಗಿ ಅವರು ‘ಡೇರಿ ಡಾಕ್ಟರ್, ಹೋರಿ ಮಾಸ್ಟರ್’ ಪುಸ್ತಕದಲ್ಲಿ ಬರೆದಿದ್ದಾರೆ. ಹಸುಗಳು ಸಾಲುಸಾಲಾಗಿ ಈ ಕಾಯಿಲೆಗೆ ಸಿಕ್ಕು ಒಂದರ ಮೇಲೊಂದು ಗರ್ಭಸ್ರಾವವಾಗಿ ಇಡೀ ಡೇರಿ ಫಾರ್ಮ್ ದಿವಾಳಿ ಆಗಿರುವ ಉದಾಹರಣೆಯೂ ಅವರ ಕಥನದಲ್ಲಿದೆ. ಅದಕ್ಕೆ ‘ಗರ್ಭಸ್ರಾವದ ಬಿರುಗಾಳಿ’ (ಸ್ಟಾರ್ಮ್ ಆಫ್ ಅಬಾರ್ಶನ್) ಎಂಬ ಗುಣವಾಚಕವೇ ಇದೆಯಂತೆ. ಅದು ಹಾಗಿರಲಿ, ‘ಪಂಚಗವ್ಯ ಸೇವನೆ ಮಾಡಿ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ನರಳಿದ ವೈದಿಕರೂ ನನಗೆ ಗೊತ್ತು’ ಎಂದು ಅವರು ಹೇಳುತ್ತಾರೆ.[೪]

ರೋಗ ಲಕ್ಷಣ[ಬದಲಾಯಿಸಿ]

  • ಹಾಲಸ್ಟೈನ್ ತಳಿಯ ದನ
  • ರೋಗ ಅಂಟುವಿಕೆ:ಕಾಯಿಲೆಯು ಮನುಷ್ಯರಿಗೆ ರೋಗಪೀಡಿತ ಹಸುವಿನ ಮೂತ್ರವನ್ನು ಸೇವಿಸುವುದರಿಂದ, ಹಾಲನ್ನು ಕಾಯಿಸದೇ ಕುಡಿಯುವುದರಿಂದ, ಸತ್ತೆ ಮತ್ತು ಇತರ ವಸ್ತುಗಳ ಸಂಪರ್ಕ ಇತ್ಯಾದಿಗಳಿಂದ ಬರುತ್ತದೆ.
  • ಮನುಷ್ಯರಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ ಪದೇ ಪದೇ ಜ್ವರ ಬರುವುದು, ಅಸಾಧ್ಯ ಬೆನ್ನು ನೋವು, ಕೀಲು ನೋವು, ರಾತ್ರಿ ಬೆವರುವುದು ಮತ್ತು ಶರೀರದ ತೂಕ ಕ್ರಮೇಣ ಕಡಿಮೆಯಾಗುವುದು ಇತ್ಯಾದಿ. ಈ ಕಾಯಿಲೆಯನ್ನು ಅಂಡ್ಯುಲೇಂಟ್ ಜ್ವರವೆಂದೂ ಕರೆಯುತ್ತಾರೆ. ಸ್ತ್ರೀಯರಲ್ಲಿ ಈ ಎಲ್ಲ ರೋಗ ಲಕ್ಷಣಗಳ ಜೊತೆ ಗರ್ಭಿಣಿಯಾದರೆ ಗರ್ಭಪಾತವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಮಲೇರಿಯಾ, ಕ್ಷಯ, ವಿಷಮಶೀತಜ್ವರ ಮತ್ತಿತರ ಕಾಯಿಲೆಗಳನ್ನು ಹೋಲುವುದು. ಕೆಲವೇ ಆಸ್ಪತ್ರೆಗಳಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವ ಸೌಲಭ್ಯಗಳಿವೆ. ಈ ರೋಗದ ಬಗ್ಗೆ ಪರಿಕಲ್ಪನೆ ಹೊಂದಿರುವ ತಜ್ಞ ವೈದ್ಯರು ಮಾತ್ರ ಸೂಕ್ತ ಪ್ರಯೋಗಶಾಲಾ ಪರೀಕ್ಷೆಯ ಸಹಾಯದಿಂದ ಈ ರೋಗವನ್ನು ಪತ್ತೆಹಚ್ಚಿ ಉತ್ತಮ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲರು. ಕಂದು ರೋಗ ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ.[೫]

ರೋಗದ ಬೆಳವಣಿಗೆ[ಬದಲಾಯಿಸಿ]

  • ಶರೀರವನ್ನು ಪ್ರವೇಶಿಸಿದ ರೋಗಾಣುವು ದುಗ್ಧ ಗ್ರಂಥಿಗಳನ್ನು ಸೇರಿಕೊಂಡು ಅಲ್ಲಿ ವೃದ್ಧಿಗೊಳ್ಳುತ್ತದೆ. ನಂತರ ಗುಲ್ಮ, ಕೆಚ್ಚಲು, ಮೂತ್ರಾಶಯ ಮತ್ತು ಭ್ರೂಣವನ್ನು ಹೊಂದಿದ ಗರ್ಭಕೋಶದಲ್ಲಿ ಮನೆಮಾಡುತ್ತದೆ. ಗರ್ಭಕೋಶದಲ್ಲಿ ಇವು ಹುಣ್ಣುಗಳನ್ನು ಉಂಟು ಮಾಡುವುದರಿಂದ ಗರ್ಭಕೋಶಕ್ಕೆ ಧಕ್ಕೆ ತಗುಲಿ ಗರ್ಭಪಾತವಾಗುತ್ತದೆ. ಕೆಚ್ಚಲಿನಲ್ಲಿ ರೋಗಾಣುಗಳು ಸೇರಿಕೊಳ್ಳುವುದರಿಂದ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಈ ಹಾಲನ್ನು ಕಾಯಿಸದೇ ಕುಡಿದರೆ ರೋಗ ಬರುವುದು.
  • ಜಾನುವಾರುಗಳಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ 5–8 ತಿಂಗಳ ಅವಧಿಯಲ್ಲಿ ಗರ್ಭಪಾತವಾಗುವುದು, ಸತ್ತೆ ಬೀಳದೇ ಇರುವುದು ಮತ್ತು ಗರ್ಭಕಟ್ಟದಿರುವುದು. ಯಾವುದೇ ವಯಸ್ಸಿನ ರಾಸುಗಳಲ್ಲಿ ಈ ಕಾಯಿಲೆ ಕಂಡುಬರಬಹುದು. ಹೋರಿಗಳಲ್ಲಿ ವೃಷಣದ ವ್ರಣ ಅಥವಾ ಉರಿಯೂತ ಕಾಣಿಸಿಕೊಳ್ಳಬಹುದು. ಕೆಲವು ಜಾನುವಾರುಗಳಲ್ಲಿ ಕೀಲು ಊದಿಕೊಳ್ಳುವಿಕೆ, ಕೀಲು ನೋವು ಇತ್ಯಾದಿ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಹಂದಿಗಳಲ್ಲಿ ಬ್ರುಸೆಲ್ಲಾ ಕ್ರಿಮಿಯು ಗರ್ಭಪಾತವನ್ನುಂಟು ಮಾಡುವುದಿಲ್ಲ. ಆದರೆ ಕುರಿ, ಮೇಕೆ ಮತ್ತು ಕುದುರೆಗಳಲ್ಲಿ ಗರ್ಭಪಾತವಾಗುವುದನ್ನು ಗಮನಿಸಲಾಗಿದೆ. ರೋಗವನ್ನು ರಕ್ತಪ್ರಸರಣದ ಮಾದರಿಯನ್ನು ಪರೀಕ್ಷಿಸುವುದರಿಂದ ಪತ್ತೆ ಮಾಡುವುದು ಕಷ್ಟ. ರಕ್ತಸಾರವನ್ನು(ಸೀರಂ)ಆಧುನಿಕ ವಿಧಾನಗಳಿಂದ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವುದರಿಂದ ಅಥವಾ ಹಾಲನ್ನು ಪರೀಕ್ಷೆಯಿಂದ ಈ ರೋಗವನ್ನು ಪತ್ತೆ ಹಚ್ಚಬಹುದು.

ಚಿಕಿತ್ಸೆ[ಬದಲಾಯಿಸಿ]

ನಾಲ್ಕು ಹೊಟ್ಟೆ ತೋರಿಸುವ, ಬೊವಿನ್ ದನದ ಅಂಗರಚನೆ ಮಾದರಿ(a bovine (cow))
  • ಮಾನವರಿಗೆ:ಮನುಷ್ಯರಲ್ಲಿ ಈ ರೋಗವನ್ನು ಡಾಕ್ಸಿಸೈಕ್ಲಿನ್ ಮತ್ತು ರಿಫಾಮೈಸಿನ್ ಔಷಧಿಗಳ ಸಂಯುಕ್ತ ಚಿಕಿತ್ಸೆಯಿಂದ ಪರಿಣಾಮಕಾರಿಯಾಗಿ ವಾಸಿ ಮಾಡಬಹುದು.
  • ರಾಸುಗಳಿಗೆ:ಆದರೆ ಆಕಳು ಅಥವಾ ಇತರ ನಾಲ್ಕು ಹೊಟ್ಟೆ ಹೊಂದಿರುವ ಪ್ರಾಣಿಗಳಲ್ಲಿ ಅವುಗಳ ದೊಡ್ಡಹೊಟ್ಟೆಯಲ್ಲಿ(ರುಮೆನ್) ಈ ಔಷಧಿಗಳು ನಿಷ್ಕ್ರಿಯಗೊಳ್ಳುವುದರಿಂದ ಚಿಕಿತ್ಸೆ ಪರಿಣಾಮಕಾರಿಯಾಗುವುದಿಲ್ಲ. ಆದರೂ ಇತ್ತೀಚಿಗೆ ಮಾರುಕಟ್ಟೆಗೆ ಬಂದ ಹಲವು ಆಧುನಿಕ ಜೀವನಿರೋಧಕ ಚುಚ್ಚುಮದ್ದುಗಳನ್ನು ಬಳಸಿ ತಜ್ಞ ಪಶುವೈದ್ಯರು ಈ ರೋಗವನ್ನು ವಾಸಿ ಮಾಡಬಹುದಾದರೂ ಚಿಕಿತ್ಸಾವೆಚ್ಚ ದುಬಾರಿ.
  • ರೋಗ ಬರದಂತೆ ತಡೆಗಟ್ಟುವುದು ಅತ್ಯಂತ ಉಪಯುಕ್ತ ವಿಧಾನ. ಲಸಿಕಾ ಪ್ರಯೋಗವು ಅತಿ ಮುಖ್ಯವಾದ ಮಾರ್ಗ. ಬ್ರುಸೆಲ್ಲಾ ಅಬೊರ್ಟಸ್ ಪ್ರಭೇದ 19 ಜೀವಂತ ರೋಗಾಣುವನ್ನು ಹೊಂದಿದ ಲಸಿಕೆಯನ್ನು 4–8 ತಿಂಗಳಿನ ವಯಸ್ಸಿನಲ್ಲಿ ಕೊಮರೆ ರೋಗವನ್ನು ಪರಿಣಾಮಕಾರಿಯಗಿ ತಡೆಗಟ್ಟಲು ಸಾಧ್ಯ. ತುಂಬು ಗರ್ಭಧರಿಸಿದ ರಾಸುಗಳಿಗೆ ಈ ಲಸಿಕೆಯನ್ನು ನೀಡಿದರೆ ಗರ್ಭಪಾತವಾಗುವ ಸಾಧ್ಯತೆ ಇದೆ. ಸದ್ಯ ಇತರ ಉತ್ತಮ ಲಸಿಕೆಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ.[೬]

ರೋಗ ನಿರ್ಣಯ[ಬದಲಾಯಿಸಿ]

  • ಬ್ರುಸೆಲಾ ನಿರ್ದಿಷ್ಟ ರೋಗನಿರ್ಣಯವನ್ನು ಮಾಡಲು, ರಕ್ತದಿಂದ, ಯಾ ದೇಹದ ದ್ರವಗಳಿಂದ ಅಥವಾ ಅಂಗಾಂಶಗಳಿಂದ ಅಣುಜೀವಿಯನ್ನು ಪ್ರತ್ಯೇಕಿಸುವ ಅಗತ್ಯವಿದೆ, ಆದರೆ ಅನೇಕ ಸೆಟ್ಟಿಂಗ್ಗಳಲ್ಲಿ ಮಾಡುವ ಸೀರಮ್ ಶಾಸ್ತ್ರೀಯ ವಿಧಾನಗಳು ಮಾತ್ರಾ ಲಭ್ಯವಿದೆ. ಧನಾತ್ಮಕ ರಕ್ತ ಸಂಸ್ಕೃರಣ ಇಳುವರಿ 40% ಮತ್ತು 70% ನಡುವಿನ ವ್ಯಾಪ್ತಿಯಲ್ಲಿ ಸಿಗಬಹುದು. ಮತ್ತು ಸಾಮಾನ್ಯವಾಗಿ ಬಿ ಮೆಲಿಟೆನೆನ್ಸಿಸ್ ಸಿಗುವುದು ಕಡಿಮೆ ಸಾದ್ಯತೆ ಇದೆ,ಅಥವಾ ಬಿ ಮೆ. ಗಿಂತ ಬಿ ಅಬಾರ್ಶಸ್ ಹೆಚ್ಚು ಸುಲಭವಾಗಿ ಸಿಗುವುದು. ಬ್ಯಾಕ್ಟೀರಿಯಾದ ಲಿಪೊಪೊಲಿಚರಯಡ್ ಮತ್ತು ಇತರ ಪ್ರತಿಜನಕಗಳ ವಿರುದ್ಧ ನಿರ್ದಿಷ್ಟ ಪ್ರತಿಕಾಯಗಳ ಗುರುತು ‘ಪ್ರಮಾಣಿತ ಅಂಟಿಕೊಂಡಿರುವಿಕೆಯು ಪರೀಕ್ಷೆ’ (standard agglutination test-ಎಸ್.ಎ.ಟಿ.) ಮೂಲಕ ಕಂಡುಹಿಡಿಯಲ್ಪಡುತ್ತವೆ, 'ಗುಲಾಬಿ ಬಂಗಾಳ',2-ಮರ್ಕಾಪ್ಟಯಿತೆನೊಲ್ ( mercaptoethanol (2-ME) ) (2 ಎಮ್.ಇ), ಯ್ಯಂಟಿ ಹ್ಯೂಮನ್ ಗ್ಲಾಬ್ಯುಲಿನ್ (ಕೂಂಬ್ಸ್ ') ಮತ್ತು ಪರೋಕ್ಷ ಪ್ರತಿರಕ್ಷ ಅಸೇ (ಎಲಿಸಾ) ಎಸ್.ಎ.ಟಿ. ( standard agglutination test) ಎಂಜೈಮ್ ಸಂಬಂದಿತ ಸ್ಥಳೀಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ ಸೀರಮ್ ಶಾಸ್ತ್ರ ಆಗಿದೆ.[೭][೮]
ಯೂರೋಪಿನಲ್ಲಿ ಬ್ರುಸೆಲೊಸಿಸ್ ಬಿ ಮೆಲಿಟೆನ್ಸಿಸ್ ಸೊಂಕು ತೋರಿಸುವ ನಕ್ಷೆ; ಕೆಂಪು ಬಣ್ಣವಿರುವ ದೇಶಗಳಲ್ಲಿ ಸೊಂಕು ಕಂಡುಬಂದಿದೆ; ಹಸಿರು ಹಳದಿ ಬಣ್ಣವಿರುವಲ್ಲಿ ಸೊಂಕು ವರದಿ ಬಂದಿಲ್ಲ -2006. (Disease incidence map of B. melitensis infections in animals in Europe during the first half of 2006
  never reported
  not reported in this period
  confirmed clinical disease
  confirmed infection
  no information

ವಿದೇಶಗಳಲ್ಲಿ ರೋಗ ತಡೆಗಟ್ಟುವಿಕೆ[ಬದಲಾಯಿಸಿ]

  • ಅರ್ಜೆಂಟೀನಾ:
  • 2002 ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಅಂದಾಜು 10-13%ನಷ್ಟು ಪ್ರಾಣಿಗಳು ಬ್ರುಸೆಲ್ಲಾ ಜಾತಿ ಸೋಂಕಿಗೆ ಒಳಗಾಗಿವೆ. ಈ ಕಾಯಿಲೆಯಿಂದ ವಾರ್ಷಿಕ ಸುಮಾರು 60 ಮಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಲೆಕ್ಕ ಮಾಡಲಾಯಿತು. 1932 ರಿಂದ, ಸರ್ಕಾರಿ ಸಂಸ್ಥೆಗಳು ರೋಗ ನಿಯಂತ್ರಿಸಲು ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತ, 3-8 ತಿಂಗಳ ವಯಸ್ಸಿನ ಎಲ್ಲಾ ಜಾನುವಾರುಗಳಿಗೆ ‘ಬ್ರುಸೆಲ್ಲಾ ಅಬೊರ್ಟಸ್ ಸ್ಟ್ರೈನ್ 19’ ಲಸಿಕೆ ನೀಡುವ ಅಗತ್ಯ ಕಂಡುಬಂದಿದೆ.
  • ಆಸ್ಟ್ರೇಲಿಯಾ:
  • ಆಸ್ಟ್ರೇಲಿಯಾದಲ್ಲಿ, ಕುರಿ ಅಥವಾ ಆಡುಗಳ ಬ್ರುಸೆಲ್ಲೊಸೊಸ್ ಸೊಂಕಿನ ವರದಿ ಎಂದಿಗೂ ಬಂದಿಲ್ಲ; ಆದರೂ ಹಿಂದೆ (ಜಾನುವಾರು-ಬ್ರುಸೆಲಾ) ಹಂದಿಗಳಿಗೆ ಬ್ರುಸೆಲ್ಲೊಸೊಸ್ ಸಂಭವಿಸುತ್ತು. ಕಾಡು ಹಂದಿಗಳು ಮಾನವ ಸೋಂಕುಗಳಿಗೆ ವಿಶಿಷ್ಟ ಮೂಲವಾಗಿದೆ.[೯][೧೦]
  • ಕೆನಡಾ:
  • ಕೆನಡಾದ ಸರ್ಕಾರ, ಸೆಪ್ಟೆಂಬರ್ 19 1985ರಲ್ಲಿ ಜಾನುವಾರುಗಳು 'ಬ್ರುಸೆಲಾಸಿಸ್ ರಹಿತ' ವಾಗಬೇಕೆಂದು ಘೋಷಿಸಿದರು. ಹಾಲು ಮತ್ತು ಕೆನೆ, ಬ್ರುಸೆಲಾ ಸೊಂಕು ಪರೀಕ್ಷೆ, ಹಾಗೂ ಜಾನುವಾರು ಪರೀಕ್ಷೆ ಮತ್ತು ಅದರ ಹತ್ಯೆ, ಏಪ್ರಿಲ್ 1, 1999ರಂದು ಕೊನೆಗೊಂಡಿತು. ಆದರೂ ಪರಿಶೀನೆ (ಮಾನಿಟರಿಂಗ್) ಹರಾಜು ಮಾರುಕಟ್ಟೆಗಳಲ್ಲಿ ಪ್ರಮಾಣಿತ ಪರೀಕ್ಷೆಯ ಮೂಲಕ ಮುಂದುವರಿಯುತ್ತಿದೆ. ರೋಗ ವರದಿ ಪ್ರಕ್ರಿಯೆಗಳ ಮೂಲಕ, ಮತ್ತು ಅರ್ಹತೆಯುಳ್ಳವನ್ನು ಬೇರೆ ದೇಶಗಳಿಗೆ ರಫ್ತು ಮಾಡುವಾಗ ದನ ಪರೀಕ್ಷೆಯ ಮೂಲಕವೇ ಮಾಡುವರು. (ಯುನೈಟೆಡ್ ಸ್ಟೇಟ್ಸ್ ಗೆ ರಫ್ತು ಹೊರತು ಪಡಿಸಿ?)[೧೧]

ಮಾಲ್ಟಾ[ಬದಲಾಯಿಸಿ]

  • 20 ನೇ ಶತಮಾನದವರೆಗೆ, ಈ ರೋಗ "ಮಾಲ್ಟೀಸ್ ಜ್ವರ" ಎಂದು ಕರೆಸಿಕೊಳ್ಳುತ್ತಿತ್ತು. ಅದು ಮಾಲ್ಟಾದಲ್ಲಿ ಸ್ವಾಭಾವಿಕವೆಂಬಂತೆ ನೆಲೆಯೂರಿತ್ತು. ಹಾಗೂ ಈ ಅನಾರೋಗ್ಯ ಕಾಯಿಸದ ಹಸೀ ಹಾಲು ಬಳಕೆಯ ನಡುವೆ ಸಂಬಂಧಪಟ್ಟಿರುವುದು, ಡೇವಿಡ್ ಬ್ರೂಸ್ ಮತ್ತು ಅವರ ಸಹಯೋಗಿಗಳಿಂದ ಧೃಡಪಡಿಸಲಾಯಿತು. ಅವರ ಸಂಶೋಧನೆಯನ್ನು ಮಾಲ್ಟೀಸ್ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನೈಟ್ಸ್ 'ಹಾಲ್ (ಮೆಡಿಟರೇನಿಯನ್ ಕೇಂದ್ರ)ದಲ್ಲಿ ಒಂದು ಸ್ಮರಣಿಕೆಯ ಮೇಲೆ ಬರೆದು ಸ್ಮರಿಸಲಾಗುತ್ತಿದೆ. ಈ ಕಟ್ಟಡದಲ್ಲಿ, ಬ್ರೂಸ್, ಒಟ್ಟಿಗೆ ಜೋಸೆಫ್ ಕರಾನಾ ಸಿಕ್ಲುನಾ, ಅವರು 1887 ರಲ್ಲಿ ಮಾನವ ಗುಲ್ಮದಲ್ಲಿ (ಸ್ಪ್ಲೀನ್) ಸೂಕ್ಷ್ಮಜೀವಿಯ ಅಸ್ತಿತ್ವವನ್ನು ಹೇಳಿದರು, ಈ ಮಾಲ್ಟ ಜ್ವರ ಪ್ರಾಣಿಜನ್ಯ ರೋಗವೆಂದು ದೃಢಪಡಿಸಿದರು. ಈ ಕಾರಣದಿಂದ ಪ್ರಾಣಿಗಳ ಹಾಲನ್ನು (ಉತ್ಪನ್ನ ಆಹಾರವನ್ನು) ಪ್ರಮಾಣೀಕರಣ ಮತ್ತು ಪಾಶ್ಚರೀಕರಣ ಮಾಡುವುವನ್ನು (ಕಾಯಿಸಿ ಉಪಯೋಗೊಸುವುದು) ವ್ಯಾಪಕವಾಗಿ ಅನುಸರಿಸಿದ್ದಲ್ಲದೆ, ಈ ಬಗ್ಗೆ ಕಟ್ಟುನಿಟ್ಟಾದ ಕಟ್ಟುಪಾಡು ಮಾಡಿದ್ದರಿಂದ ಮಾಲ್ಟಾದಲ್ಲಿ ಈಗ ಈ ಅನಾರೋಗ್ಯವು /ರೋಗವು ಸಂಪೂರ್ಣ ನಿರ್ಮೂಲನೆ ಆಗಿದೆ.[೧೨]

ಯು.ಎಸ್.ಎ.[ಬದಲಾಯಿಸಿ]

  • ಅಮೇರಿಕಾ ಡೈರಿ ದನಗಳ ಹಿಂಡುಗಳನ್ನು ಬ್ರುಸೆಲಾ ಮುಕ್ತ ಎಂದು ವರ್ಷದಲ್ಲಿ ಒಮ್ಮೆಯಾದರೂ "ಬ್ರುಸೆಲ್ಲಾ ಹಾಲು ರಿಂಗ್ ಟೆಸ್ಟ್" ಎಂಬ ಕ್ರಮದಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ಪ್ರಮಾಣೀಕರಿಸಲಾಗುತ್ತದೆ. ಸೋಂಕು ದೃಢಪಡಿಸಿದರೆ ಹಸುಗಳನ್ನು ಸಾಮಾನ್ಯವಾಗಿ ಸಾಯಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ, ಪಶುವೈದ್ಯರ ಮೂಲಕ ಎಲ್ಲಾ ಯುವ ದನಕರುಗಳಿಗೆ ಸೋಂಕುನಿವಾರಕ ವ್ಯಾಕ್ಸಿನೇಶನ್ ಮಾಡಿ ಸಂವಹನದ ಸೋಂಕು ಸಾಧ್ಯತೆಯನ್ನು ಕಡಿಮೆ ಮಾಡಲಾಗುತ್ತದೆ. ಈ ಲಸಿಕೆ ಸಾಮಾನ್ಯವಾಗಿ "ಕಾಫ್‍ಹುಡ್" ವ್ಯಾಕ್ಸಿನೇಷನ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಜಾನುವಾರುಗಳಿಗೆ ಈ ಲಸಿಕೆ ಹಾಕಿದ ಪುರಾವೆಯಾಗಿ ಅವುಗಳ ಕಿವಿಗಳಿಗೆ ಒಂದು ಹಚ್ಚೆ ಗುರುತು ಮಾಡಲಾಗುವುದು. ಈ ಹಚ್ಚೆ ಗುರುತಿನಲ್ಲಿ ಅವು ಹುಟ್ಟಿದ ವರ್ಷದ ಕೊನೆಯ ಎರಡು ಅಂಕಿಯನ್ನು ಒಳಗೊಂಡಿರುತ್ತದೆ. ಈ ಬಗೆಯ ಬ್ರುಸೆಲಾ ನಿರ್ಮೂಲನ ಕ್ರಮವನ್ನು ಫೆಡರಲ್ ಸಹಕಾರಿ ಪ್ರಯತ್ನಗಳ ಮೂಲಕ 1934 ರಲ್ಲಿ ಆರಂಭಿಸಿದರು.

ಚಿಕಿತ್ಸೆ[ಬದಲಾಯಿಸಿ]

  • ಟೆಟ್ಟ್ರಾಸೈಕ್ಲೀನ್ ರಿಫಾಂಪಿಸಿನ್, ಮತ್ತು ಅಮೈನೋಗ್ಲೈಕೋಸೈಡ್ಗಳು ಸ್ಟ್ರೆಪ್ಟೊಮೈಸಿನ್ ಮತ್ತು ಜೆಂಟಾಮೈಸಿನ್ ಇಂತಹ ಪ್ರತಿಜೀವಕಗಳು ಬ್ರುಸೆಲ್ಲಾ ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿ. ಆದಾಗ್ಯೂ, ಹಲವಾರು ವಾರಗಳ ಕಾಲ ಒಂದಕ್ಕಿಂತ ಹೆಚ್ಚು ಪ್ರತಿಜೀವಕಗಳ ಬಳಕೆ ಅಗತ್ಯವಿದೆ. ಏಕೆಂದರೆ ಈ ಬ್ಯಾಕ್ಟೀರಿಯಾಗಳು ಜೀವಕೋಶಗಳ ಒಳಗೆ ಬೆಳೆಯುತ್ತವೆ.
ಸರ್ ತೆಮಿಸ್ಟೊಕ್ಲೆಸ್ ಜೆಮಿಟ್ ಮತ್ತು ಮೆಡಿಟರೇನಿಯನ್ ಫೀವರ್ ಆಯೋಗದವರು ಬ್ರುಸೆಲೊಸಿಸ್ ಬಗ್ಗೆ 1904 ರಿಂದ 1906 ರ ವರೆಗೆ ಸಂಶೋಧನೆ ನಡೆಸಿದ ಲ್ಯಾಬ್. ಕಸ್ಟಲೆನಿಯ ಲೋರೆಲ್ಲೀ ಷೆಲ್ಲಿಸ್ಟ್, ಮಾಲ್ಟಾದಲ್ಲಿದೆ
  • ಜಾನುವಾರಿಗೆ:
  • ಹಾಲು-ರಿಂಗ್ ಪರೀಕ್ಷೆ ಹಾಲು ಸೀರಮ್‍ಗಳ ಶಾಸ್ತ್ರೀಯ ಪರೀಕ್ಷೆಗಳು, ಹಾಗೂ ಪರೀಕ್ಷೆಗಳನ್ನು ಕಣ್ಗಾವಲಿಗಾಗಿ ನಡೆಸಬಹುದು., ಕಾಯಿಲೆಯ ನಿರ್ಮೂಲನೆಗೆ ಸ್ಕ್ರೀನಿಂಗ್ ಬಳಸಬಹುದು ಮತ್ತು ಪ್ರಚಾರಗಳು ಪ್ರಮುಖ ಪಾತ್ರ ವಹಿಸುವಂತೆ ಮಾಡಬಹುದು. ಅಲ್ಲದೆ, ವೈಯಕ್ತಿಕವಾಗಿ ಪ್ರಾಣಿ ವ್ಯಾಪಾರ ಮತ್ತು ರೋಗ ನಿಯಂತ್ರಣ ಎರಡೂ ಉದ್ದೇಶಗಳಿಗಾಗಿ ಪರೀಕ್ಷೆ ಅಗತ್ಯವಿದೆ. ಸ್ಥಳೀಯವಾಗಿ ವ್ಯಾಪಿಸಿರುವ ಕ್ಷೇತ್ರಗಳಲ್ಲಿ, ಸಾಮಾನ್ಯವಾಗಿ ಸೋಂಕಿನ ಪರಿಣಾಮವನ್ನು ಕಡಿಮೆ ಮಾಡಲು ಲಸಿಕೆ ಬಳಸಲಾಗುತ್ತದೆ. ಹಲವಾರು ಲಸಿಕೆಗಳು ಬಳಕೆ ಯಲ್ಲಿವೆ. ಪರ್ಯಾಯವಾಗಿ ನೇರ ವೈರಸ್ಗಳು ಲಭ್ಯವಿದೆ. ಅನಿಮಲ್ ಹೆಲ್ತ್ ಮ್ಯಾನುಯಲ್ ಡಯಾಗ್ನೋಸ್ಟಿಕ್ ಪರೀಕ್ಷೆ ಮತ್ತು ಲಸಿಕೆಗಳ ವಿವರ ‘ಟೆರೆಸ್ಟ್ರಿಯಲ್ ಪ್ರಾಣಿಗಳ ವಿಶ್ವ ಸಂಸ್ಥೆ ಲಸಿಕೆ ತಯಾರಿಸುವಲ್ಲಿ’ ವಿವರವಾದ ಮಾರ್ಗದರ್ಶನ ಒದಗಿಸುತ್ತದೆ. ಈಗ ರೋಗ ನಿರ್ಮೂಲನೆ ಸ್ಥಿತಿಗೆ ಬಹಳ ಸನಿಹವಾಗಿದೆ. ನಿಗದಿತ ಪರೀಕ್ಷೆ ಮತ್ತು ಕಾರ್ಯಕ್ರಮದ ಔಟ್ ಸ್ಟಾಂಪಿಂಗ್ ಕಾರ್ಯಕ್ರ ಮ ಈ ರೊಗವನ್ನು ಸಂಪೂರ್ಣವಾಗಿ ತೊಡೆದುಹಾಕಲು ಅಗತ್ಯವಿದೆ.
  • ಮಾನವರಿಗೆ
  • ವಯಸ್ಕರಿಗೆ ಚಿನ್ನದ ಗುಣಮಟ್ಟ ಚಿಕಿತ್ಸೆ, ಸ್ಟ್ರೆಪ್ಟೊಮೈಸಿನ್ 1 ಗ್ರಾಂ ದೈನಂದಿನ ಸ್ನಾಯುವಿನೊಳಗೆ ಚುಚ್ಚುಮದ್ದು, ಪ್ರತಿದಿನ 14 ದಿನಗಳ ಕಾಲ; ಮೌಖಿಕ ಡಾಕ್ಸಿಸೈಕ್ಲಿನ್ 100 ಮಿಗ್ರಾಂ ದಿನಕ್ಕೆ ಎರಡು ಬಾರಿ 45 ದಿನಗಳ (ಸಮಕಾಲೀನವಾಗಿ) ವರೆಗೆ ಕೊಡಬೇಕು. ಸ್ಟ್ರೆಪ್ಟೊಮೈಸಿನ್ ಲಭ್ಯವಿರದಿದ್ದಲ್ಲಿ ಅಥವಾ ಒಮ್ಮೆ ಅದು ವಿರುದ್ಧ ಚಿಹ್ನೆಯನ್ನು ತೋರಿದಲ್ಲಿ, ಅಲ್ಲ ಜೆಂಟಮಯಸಿನ್ 5 ಮಿಗ್ರಾಂ / ಕೆಜಿ, ದೇಹಕ್ಕೆ ಸ್ನಾಯು ಇಂಜೆಕ್ಷನ್; ಏಳು ದಿನಗಳವರೆಗೆ ದಿನನಿತ್ಯ ಒಂದು ಸ್ವೀಕಾರಾರ್ಹ ಪರ್ಯಾಯವಾಗಿದೆ. [25] ಮತ್ತೊಂದು ವ್ಯಾಪಕವಾಗಿ ಬಳಸುವ ಚುಚ್ಚು ಮದ್ದು ದೈನಂದಿನ ಎರಡು ಬಾರಿ ಕನಿಷ್ಠ ಆರು ವಾರಗಳ ಡಾಕ್ಸಿಸೈಕ್ಲಿನ್, ಜೊತೆಗೆ ರಿಫಾಂಪಿನ್’ ಆಗಿದೆ. ಈ ಪ್ರಕಾರ ತ್ರಿಮುಖ ಚಿಕಿತ್ಸೆ /ತ್ರಿ ಚಿಕಿತ್ಸೆ -ಡಾಕ್ಸಿಸೈಕ್ಲಿನ್, ರಿಫಾಂಪಿನ್ಗಳಿಗೆ ಮತ್ತು ಸಹ ಟ್ರಿಮಕ್ಸಜೋಲ್ ಜೊತೆ ಚಿಕಿತ್ಸೆ ಯಶಸ್ವಿಯಾಗಿ ಬಳಸಲಾಗಿದೆ.

ಇತಿಹಾಸ[ಬದಲಾಯಿಸಿ]

ಡೇವಿಡ್ ಬ್ರೂಸ್ -ಮಧ್ಯದಲ್ಲಿ; ಮೆಡಿಟರೇನಿಯನ್ ಫೀವರ್ ಆಯೋಗ (ಬ್ರುಸೆಲ್ಲೊಸೊಸ್) ಸದಸ್ಯರು.
  • "ಮಾಲ್ಟಾ ಜ್ವರ" ಹೆಸರಿನ ಅಡಿಯಲ್ಲಿ ಕರೆಯುವ, ಈಗ 'ಬ್ರುಸೆಲಾ' ಎಂಬ ರೋಗ ಮೊದಲ ಕ್ರಿಮೀಯನ್ ಯುದ್ಧದ ಸಮಯದಲ್ಲಿ ಮಾಲ್ಟಾದಲ್ಲಿ 1850 ರಲ್ಲಿ ಬ್ರಿಟಿಷ್ ವೈದ್ಯಕೀಯ ಅಧಿಕಾರಿಗಳ ಗಮನಕ್ಕೆ ಬಂದಿತು. ಜೆಫ್ರಿ ಅಲೆನ್ ಮಾರ್ಸ್ಟನ್ (1831-1911) 1861ರಲ್ಲಿ ರೋಗದ ಬಗೆಗೆ ತನ್ನ ಪ್ರಕರಣವನ್ನು ವಿವರಿಸಿದ. ಅಣುಜೀವಿ ಮತ್ತು ರೋಗದ ನಡುವೆ ಇರುವ ಸಂಬಂಧವನ್ನು ಮೊದಲ ಬಾರಿ ಡೇವಿಡ್ ಬ್ರೂಸ್ 1887 ರಲ್ಲಿ ಧೃಡಪಡಿಸಿದ. 1897 ರಲ್ಲಿ, ಡ್ಯಾನಿಶ್ ಪಶುವೈದ್ಯ ಬರ್ನಾರ್ಡ್ ಬ್ಯಾಂಗ್ ಏಜೆಂಟ್ 'ಬಿ ಅಬೊರ್ಟಸ್' ರೋಗಾಣುವನ್ನು ಬೇರ್ಪಡಿಸಿದ್ದರು, ಮತ್ತು ಅದಕ್ಕೆ ಹೆಚ್ಚುವರಿ ಹೆಸರನ್ನು "ಬ್ಯಾಂಗ್ ರೋಗ" ಎಂದು ನಿಯೋಜಿಸಲಾಗಿತ್ತು.
  • ಮಾಲ್ಟೀಸ್ ವೈದ್ಯ ಮತ್ತು ಶಾಸ್ತ್ರಜ್ಞ ಸರ್ ತೆಮಿಸ್ಟೊಕ್ಲಸ್ ಜೆಮಿಟ್ 1905 ರಲ್ಲಿ ರೋಗಕಾರಕದ ಪ್ರಮುಖ ಕಾರಣ ಅಥವಾ ಮೂಲವಾಗಿ ಪಾಶ್ಚರೀಕರಿಸದ (ಚೆನ್ನಾಗಿ ಕಾಯಿಸದಿರುವ) ಹಾಲು ಎಂದು ಗುರುತಿಸಿದರು. ಆ ಸಂಶೋಧನೆಗೆ ಅವರು ನೈಟ್ ಹುದ್ದೆ ಗಳಿಸುತ್ತಾರೆ. ಇದಕ್ಕಾಗಿ (ಮಾಲ್ಟಾದಲ್ಲಿ ಮೊಸಲು ಗುರುತಿಸಿದ್ದು) ಅದನ್ನು 'ಮಾಲ್ಟಾ ಜ್ವರ' ಎನ್ನಲಾಗುತ್ತದೆ. ಜಾನುವಾರುಗಳಲ್ಲಿ, ಈ ರೋಗವು ಸಾಮಾನ್ಯವಾಗಿ ರೋಗಾಣು 'ಬಿ ಅಬೊರ್ಟಸ್' ನಿಂದ ಉಂಟಾಗುತ್ತದೆ . ಇದನ್ನು "ಸಾಂಕ್ರಾಮಿಕ ಗರ್ಭಪಾತ" ಮತ್ತು "ರೋಗಾಣು ಸೊಂಕಿತ ಗರ್ಭಪಾತ" ಎಂದು ಕರೆಯಲಾಗುತ್ತದೆ.
  • ಪ್ರಸಿದ್ಧವಾದ ಹೆಸರು "ಮಾಲ್ಟ ಜ್ವರ" ವಿಶಿಷ್ಟ ಪ್ರಾಣಿಸೋಂಕಿನ ಜ್ವರ (ಅಥವಾ ಜ್ವರ "ತರಂಗ ರೀತಿಯ" ಪ್ರಕೃತಿಯುಳ್ಳದ್ದು) ಏರುತ್ತದೆ ಮತ್ತು ಚಿಕಿತ್ಸೆ ಮಾಡದ ರೋಗಿಗಳಲ್ಲಿ ವಾರಗಳಲ್ಲಿ ಜ್ವರ ಏರುತ್ತದೆ ಮತ್ತು ಇಳಿಯುತ್ತದೆ. 19 ನೇ ಶತಮಾನದಲ್ಲಿ ಹುಟ್ಟಿದ ಮೆಡಿಟರೇನಿಯನ್ ಜ್ವರ ಮತ್ತು ಮಾಲ್ಟಾ ಜ್ವರ ಹೆಸರುಗಳು, ಬದಲಾಗಿ, ನಂತರ 20 ನೇ ಶತಮಾನದಲ್ಲಿ, ಈ ಹೆಸರು ಕ್ರಮೇಣ. ಬ್ರುಸೆಲಾ ಜೊತೆಗೆ ಬ್ರುಸೆಲೊಸಿಸ್ ಎಂದು (ಬ್ರುಸೆಲ್ಲಾ, ಡೇವಿಡ್ ಬ್ರೂಸ್‍ನ ಹೆಸರಿಗೆ ಜೋಡಿಸಿ) ಹೆಸರಿಸಲಾಗಿದೆ,[೧೩]
  • 1989 ರಲ್ಲಿ ಸೌದಿ ಅರೇಬಿಯಾದಲ್ಲಿ ನರವಿಜ್ಞಾನಿಗಳು , ಬ್ರುಸೆಲಾ ದಲ್ಲಿ "ನರಸಂಬಂಧವಿರುವುದನ್ನು ಕಂಡುಹಿಡಿದರು. ಈ ಬಳಕೆಯಲ್ಲಿಲ್ಲದ ರೋಗಕ್ಕೂ ಹಿಂದಿನ ಬ್ರುಸೆಲಾ ಹೆಸರುಗಳನ್ನು ಅನ್ವಯಿಸಲಾಗಿದೆ.[೧೪]

ನೋಡಿ[ಬದಲಾಯಿಸಿ]

  • ದನ
  • ‘ಟ್ರೈಪಾನೊಸೋಮಿಯಾಸಿಸ್‌’ (ನಿದ್ರಾ ಕಾಯಿಲೆ) ಸೋಂಕು:[೧][ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖ[ಬದಲಾಯಿಸಿ]

  1. http://www.cdc.gov/brucellosis/transmission/index.html
  2. brucellosis-symptoms-treatment
  3. "ಆರ್ಕೈವ್ ನಕಲು". Archived from the original on 2016-09-13. Retrieved 2016-09-14.
  4. "ಪಂಚಗವ್ಯದಿಂದಲೂ ಬಂದೀತು ಬ್ರುಸೆಲ್ಲಾ". Archived from the original on 2016-09-08. Retrieved 2016-09-15.
  5. "Human Neurobrucellosis with Intracerebral Granuloma Caused by a Marine Mammal Brucella spp". Archived from the original on 2016-05-17. Retrieved 2016-09-15.
  6. "ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ಎನ್.ಬಿ.ಶ್ರೀಧರ". Archived from the original on 2016-09-13. Retrieved 2016-09-14.
  7. "Diagnosis and Management of Acute Brucellosis in Primary Care" (PDF). Brucella Subgroup of the Northern Ireland Regional Zoonoses Group. August 2004.
  8. Franco, María Pía; Mulder, Maximilian; Gilman, Robert H; Smits, Henk L (December 2007). "Human brucellosis". The Lancet Infectious Diseases. 7
  9. State of Queensland (Queensland Health). 2010-11-24. Retrieved 2011-06-06.
  10. Lehane,Robert (1996) Beating the Odds in a Big Country: The eradication of bovine brucellosis and tuberculosis in Australia, CSIRO PUBLISHING
  11. Accredited Veterinarian’s Manual. Canadian Food Inspection Agency. Retrieved 2007-03-18.
  12. Rizzo Naudi, John (2005). Brucellosis,
  13. Who Named It?
  14. Neurobrucellosis: Clinical and Neuroimaging Correlation