ಬೆಳಗಾವಿ ಪರಿಸರ ದೃಶ್ಯಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಗಾವಿ ಸುತ್ತಲಿನ ಪ್ರದೇಶ ತನ್ನದೇ ಆದ ವಿಶಿಷ್ಟ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ಪರಿಸರವಾಗಿದೆ. ಕಾಸ್ಮೋ ಸಂಸ್ಕೃತಿಯ ಶಹರಿನ ಪೂರ್ವನಾಮ 'ವೇಲುಗ್ರಾಮ' ಅಥವಾ 'ವೇಣುಗ್ರಾಮ' ಎಂದಾಗಿತ್ತು. ವೇಣು ಎಂದರೆ ಬಿದಿರು . ಸಮೃದ್ದವಾದ ಬಿದಿರು ಪ್ರಾಚೀನ ಕಾಲದಲ್ಲಿ ಬೆಳೆಯುತ್ತಿದ್ದುದರಿಂದ ಈ ಹೆಸರು ಬಂದಿದೆ. ಜಿಲ್ಲೆಯಲ್ಲಿ ದೊರೆತ ಶಾಸನ , ಪ್ರತಿಮೆ , ಪಳೆಯುಳಿಕೆ ರೂಪದ ಮಡಿಕೆ ಹೆಂಚಿನ ಚೂರು ಇತ್ಯಾದಿ ಪ್ರಾಚೀನ ಆಧಾರಗಳು ಈ ಪರಿಸರದ ಸಂಸೃತಿಯ ಕುರುಹುಗಳಾಗಿವೆ. ಗೋಕಾಕ ಫಾಲ್ಸ್ಖಾ ಬಳಿ ದೊರೆತ ಮೂರು ಮುಖ ಶಿವನ ಪ್ರತಿಮೆ ಬೆಳಗಾವಿ ವಡಗಾವಿಯಲ್ಲಿ (ಮಾಧವಪುರ) ಬ್ರಾಹ್ಮಿಲಿಪಿ- ಪ್ರಾಕೃತ ಭಾಷೆಯಲ್ಲಿರುವ ಯೂಪಸ್ತಂಭ ಶಾಸನ,ಅಥಣಿಯ ಸಪ್ತಸಾಗರದ ಮಡಿಕೆ ಚರುಗಳು, ಬೆಳಗಾವಿ ಪಕ್ಕದ ಕಡೋಲಿಯಲ್ಲಿ ಸಿಕ್ಕ ಹಂಚಿನ ನುಣುಪು ಚೂರುಗಳ,ಹುಕ್ಕೇರಿ ತಾಲೂಕಿನ ಮಾವನೂರಿನಲ್ಲಿ ಕಂಡ ಮಡಿಕೆಯ ತುಣುಕು,ಬಣ್ಣದ ಕಲ್ಲಿನ ಮಣಿ ಇಂಥ ಅನೇಕ ಸಾಕ್ಷಾಧಾರಗಳು ಈ ಜಿಲ್ಲೆಯ ಪುರಾತನ ಸಂಸ್ಕೃತಿಯನ್ನು ಸಾರುತ್ತವೆ.ಬೆಳಗಾವಿ ಮಾಥವಪುರದಲ್ಲೆ(ವಡಗಾವಿ) ಸಿಕ್ಕಿರುವ ಮಣ್ಣಿನ ಕೋಟೆ,ದೊಡ್ಡ ಗಾತ್ರವುಳ್ಳ ಇಟ್ಟಿಗೆ ಮನೆ ಅವಶೇಷಗಳು,ಬಾವಿ,ಗಾಜಿನ ಬಳೆಚೂರು,ಸತುವಿನ ನಾಣ್ಯ,ಕಲಾತ್ಮಕ ಕೆತ್ತನೆಯ ಹಸ್ತಿದಂತದ ಲಕ್ಶ್ಮೀಮೂರ್ತಿಗಳು ಇತಿಹಾಸದ ವೈಭವಕ್ಕೆ ಹಿಡಿದ ಕನ್ನಡ ಆಗಿವೆ.

ಬೆಳಗಾವಿ ನಗರದ ವಡಗಾವಿ ಹಿಂದಿನ ಮಾದವಪುರ. ಇಲ್ಲಿ ದೊರತ ಶಾಸನ ಅತೀ ಪ್ರಾಚೀನ. ಕ್ರಿ.ಶ. ೧-೨ನೇ ಶತಮಾನದ ಸ್ತಂಭ ಶಾಸನ ಮೂಲಕ ಪ್ರಾಚಿನ ನಾಗರಿಕ ಸಮಾಜ ಜೀವನ, ಸಂಸ್ಕ್ರತಿಯನ್ನು ಅರಿಯಬಹುದು. ಹಳೆ ಬೀಡು ಬೇಲೂರು ನೆನಪಿಸುವ ಮಾದರಿಯ ಕಲಾತ್ಮಕ ಆಕರ್ಷಕ ಶಿಲ್ಪವೈಭವ ಇಲ್ಲಿ ಮಡುಗತ್ತಿದೆ. ಪ್ರವೇಶದ್ವಾರ ಸುಂದರ ಕೆತ್ತನೆಯ ಕೌಶಲ್ಯ ಪಡೆದಿದೆ ಒಳ ಬಾಗದಲ್ಲಿ ಉದ್ದನಯ ಹಜಾರ ೮ ಕಂಬಹಳು ಕೆತ್ತನೆಯ ಕುಸುರಿ ಕಲೆಯಿಂದ ಸಿಂಗರಿಸಿವೆ. ಕೆಲ ಕಂಬಗಳಲ್ಲಿ ಕಲಾವಿದರ ಹೆಸರಿದೆ. ಕೆಲವಲ್ಲಿ ಶಾಸನ ಬರಹಗಳು ಇವೆ. ೩ ಗರ್ಭ ಗುಡಿಯಲ್ಲಿ ಲಕ್ಶ್ಮೀನಾರಾಯಣ ಮತ್ತು ವಿಷುವಿನ ಸುಂದರ ವಿಹ್ರಹಗಳು ಇವೆ.

ದೀವಗಾಂವ ಹತ್ತಿಕೊಂಡೇ ದೀಗುಲಹಳ್ಳಿ ಇದೆ. ಇದೊಂದು ಸಾಮನ್ಯ ದೇವಾಲಯ ಎಂದೆನಿಸಿದರು ಶಿಲ್ಪ ಕಲೆ ಆಕರ್ಶಕ ಹಾಗು ಗಮನ ಸೆಳೆಯುವಂತದು. ಒಳಾಂಗಣ ಕಂಭಗಳು ಹಲವು ನಕ್ಶೆಗಳ ಕೆತ್ತನೆ ಹೊಂದಿದೆ. ಹರ್ಭ ಗುಡಿಯಲ್ಲಿ ಈಶ್ವರ ಲಿಂಗವಿದೆ. ಒಳಾಂಗಣದಲಿ ಕಂಭಗಳ ಕೆತ್ತನೆ ದೀವತೆಗಳ ಚಿತ್ರಣಗಳಿದೆ.ದೀಗಿಲದ ಮೆಲ್ಚಾವಣಿಯಲ್ಲಿ ಎಂಟು ಕೈಗಳ ರಾಕ್ಶಸಮರ್ದನದ ನಟರಾಜ ವಿಗ್ರಹ ಅಪೂರ್ವ ಕಲಾಕ್ರುತಿಯಾಗಿದೆ. ದೀಗುಲದ ಎದುರಿನ ಸುಂದರ ಕೊಳವು ಪರಿಸರದ ಸೌಂದರ್ಯವನ್ನು ಹೆಚ್ಚಿಸಿದೆ.ಬೆಳಗಾವಿಯಲ್ಲಿ ಬೌದ್ದ ಧರ್ಮದ ವಾಸ್ತು ಶಿಲ್ಪ ಇಂದಿನ ವಡಗಾವ ಮೊದಲಿನ ಮಾದವಪುರದಲ್ಲಿ ಶಾತವಾಹನ ಕಾಲದ ರುಂಡ ದೊರೆತಿದೆ. ಇದು ಬುದ್ದನ ಮುಕಖವಾಗಿರಬಹುದೆಂದು ಡಾ.ಅ ಸುಂದರ ಅಭಿಪ್ರಾಯ ಪಡುತ್ತರೆ. ಸುಟ್ಟ ಮಣ್ಣಿನ ರೋಪದ ಟೊಲೂ ಬೊಂಬೆಗೆ ಕಪ್ಪು ಲೀಪನೆ ಇದ್ದಂತಿದೆ. ತಲೆಗೂದಲು ಗುಂಗುರು ರೇಖೆಗಳಿಂದ ರಚಿಸಲಾಗಿದೆ. ಕೂದಲಿನ ಒಪ್ಪಾದ ರೀತಿ, ಕಣ್ಣು ಕಿರಿದಾದ ಹಣೆ, ಕಣ್ಮಣಿಯ ರೀಕೆಗಳು ದಪ್ಪನೆ ತಿಟಿ,ದುಡು ಗಲ್ಲ, ಉದ್ದನೆಯ ಚಪ್ಪಟಯಂತಿರುವ ಕಿವಿಗಳು ಸುಂದರವಾಗಿವೆ. ಇವುಗಳ ವಿನ್ಯಾಸ ಅಪರೋಪ ಶೈಲಿ ಹೊಂದಿದೆ. ಬೆಳಗಾವಿ ಕೋಟೆಗಳು ನಗರದ ಪ್ರಾಚೀನ ಕೋಟೆ ಪ್ರಸಿದ್ದವಾದುದ್ದು. ಅದರ ಸುತ್ತಳತೆ ಅಂದಾಜು ಒಂದು ಮೈಲಿ ೫ ಪರ್ಲಾಂಗು. ಇದರ ರಚನೆ ವ್ಯೋಹ ರೋಪದಲ್ಲಿದೆ. ಆದಿ ಕದಮ್ಬರಿಂದ ಹಿಡಿದು ಆದಿಲ್ಶಾಹಿಗಳ ತನಕ ವಿನ್ಯಾಸದ ರೋಪ ಹಲವು ಹಂತಗಳಲ್ಲಿ ನಡೆದಿರಬಹುದು. ಇಲ್ಲಿ ಅನೀಕ ರಾಜ ಮನೆತನಗಳು ಬದುಕಿ ಹೋದವು. ಕನ್ನಡ ರಾಜ ಮನೆತನ, ಬನವಾಸಿ ಕದ್ಂಬ, ಚಾಲುಕ್ಯ ರಾಶ್ಟ್ರ ಕೋಟರು ಈ ಕೋಟೆ ರಚನೆಯಲ್ಲಿ ತಮ್ಮ ಪಾಲು ಇಟ್ಟಿದ್ದಾರೆ. ರಟ್ಟರ ಕಾಲದಲ್ಲಿ ಇದು ಪೋರ್ಣ ಜೀರ್ಣೊದ್ದಾರ ಕಂಡಿತು. ಆ ಬಳಿಕದಲ್ಲಿ ಅಸದ ಕಾನನು ವಿಶಿಶ್ತ ವಿನ್ಯಾಸ ನೀಡಿದನು. ಪರ್ಶಿಯನ್ ಶಾಸನದ ಉಲ್ಲೆಕದಂತೆ ಕೋಟೆಯ ವಾಸ್ತು ಸೌಂದರ್ಯದ ಕಲಾಂಕ ನಿರ್ಮಾಣದಲ್ಲಿ ಯಾಕೂಬ ಆಲಿಕಾನನ ಕೊಡುಹೆ ಇದೆ.

ಬೆಳಗಾವಿಯ ಕಲಾ ಶಿಕ್ಶಕರೆಂದಾಗ ತಟ್ಟನೆ ಎದುರು ನಿಲ್ಲುವ ವ್ಯಕ್ತಿ ನೆನಪಾಗುವ ಹೆಸರು ಜಿ.ಸ್ ದಂದಾವತಿ ಮಟ ಗುರುಗಳದ್ದು. ಮುಂಬಯಿನ ನೋತನ ಕಲಾಮಂದಿರ ಮೂಲಕ ರಾಜ್ಯಕ್ಕೆ ರಾಶ್ಟ್ರಕ್ಕೆ ಅವರ ಶೈಕ್ಶೆಣಿಕ ಕೊಡುಗೆ ಅಮೋಗವಾದದ್ದು. ದಂಡಾವತಿ ಮಟ ಗುರುಗಳು ಬೆಳಗಾವಿ ಜಿಲ್ಲೆಯವರು ಎಂದು ಹೀಳಿ ಕೊಳೂವುದೇ ನಮಗೆ ಒಂದು ಗೌರವ. ಅಬಿಮಾನ ಸ್ವಂತ ಕಲೆಗಿಂತ ಶಿಕ್ಶ್ಣಕ್ಕ್ರೆ ಮಹತ್ವ ನೀಡಿ ಕಲಾವಿದರನ್ನು ಹುಟ್ಟು ಹಾಕಿದವರು. ಕನ್ನಡ ವಿದಾರ್ಥಿಗಳಿಗೆ ಅವರು ಎಲ್ಲಾ ವಿದಗಳಿಂದ ನೆರವು ನೀಡಿದವರು. ಸ್ವಾತಂತ್ರ್ಯ ಪೋರ್ವದಿಂದ ನಂತರ ತನಕದ ಕಲಾ ಶಿಕ್ಶಣದ ಕೊಂಡಿಯಾಗಿ ಸ್ರೇಶ್ಟ ಕಲಾಗುರುಗಳಾಗಿ ನಮಗೆಲ್ಲಾ ಗೌರವದ ವ್ಯಕ್ತಿಗಳು.

ಬೆಳಗಾವಿಯ ಸಾಹಿತ್ಯ ಮತ್ತು ಕಲೆ[ಬದಲಾಯಿಸಿ]

ಈ ಕ್ರುತಿ ಅಂತರ ಸ್ತೀಯ ಅಧಯನ ಕುರಿತಾದದ್ದು. ಕಲೆ ಮತ್ತು ಸಾಹಿತ್ಯ ನಡುವಿನ ಸಂಬಂದಗಳು ಮಾನವ ಅಭಿವ್ಯಕ್ತಿಯ ಮಾದ್ಯಮಗಳಾಗಿವೆ. ಆದ್ದರಿಂದ ಮನುಶ್ಯ ಕೇಂದ್ರಿತ ಚಟುವಟಿಕೆಗಳ ಕುರಿತು ಚಿಂತನೆಯನ್ನು ಈಎ ಕ್ರುತಿಯಲ್ಲಿ ಮಾಡಲಾಗಿದೆ. ಇದರ ವಿವರವಾದ ಆಲೋಚನೆಗಳು ಓದುಗನಿಗ್ರ್ ಕಲೆಯ ಕುರಿತು ಅರಿವಿ ನೀಡುತ್ತವೆ. ಪಾಚಿಮಾತ್ಯ ದೀಶಗಳಲ್ಲಿಯ ಈ ಸಂಗಳ ಪರಿಚಯ ಹಾಗು ಭಾರತೀಯ ಚಿತ್ರ ಕಲೆಯ ಮೀಲೆ ಆದಂತಹ ಪರಿಣಾಮಗಳನ್ನು ಪ್ರಭಾವ ಗಳನ್ನು ಗುರುತಿಸಲಾಗಿದೆ. ಬೆಂಗಾಲ್ ಸ್ಕೋಲ್ ಅಫ್ ಆರ್ಟ್ ತಂತ್ರ ಕಲೆಮಿನಿಚರ್ ಇವುಗಳ ಬಗ್ಗೆ ಹೊಸ ಪರಿಸರ ದಲ್ಲಿ ಉಂಟಾದ ಪ್ರಭಾವಗಳನ್ನು ಪ್ರಸ್ತಾಪಿಸಲಾಗಿದೆ. ಅನೇಕ ಪಾಶಿಮಾತ್ಯ ಕಲಾ ವಿಮರ್ಶಕರ ಮತ್ತು ಭಾರತೀಯರ ಕಲಾ ಚಿಂತಕರ ವಿಚಾರಗಳನ್ನು ಪ್ರಸ್ತುತ ಪಡಿಸಲಾಗಿದೆ. ಈ ಪರಿ ಪ್ರೇಕ್ಶ ದಲ್ಲಿ ಲೇಕಕರು ತಮ್ಮದೇ ಆದ ಹೊಸ ಪರಿ ಕಲ್ಪನೆಗಳನ್ನು ತೋರಿಸಿದ್ದಾರೆ. ಸಂದರ್ಭ ಸೋಚಿಯಲ್ಲಿ ಅನೇಕ ಗ್ರಂಥಗಳನ್ನು ಉಲ್ಲೇಕಿಸಲಾಗಿದೆ. ಇದರಿಂದ ಪೋರಕ ಮಾಹಿತಿಯನ್ನು ಸಂಗ್ರಹಿಸಲು ಓದುಗರಿಗೆ ಅನುಕೂಲವಾಗುತ್ತದೆ.

ಲಲಿತ ಕಲಾ ಮಂದಿರ, ಚಿಕ್ಕೋಡಿ[ಬದಲಾಯಿಸಿ]

೧೯೯೦ ರಲ್ಲಿ ಶುರುವಾದ ಚಿಕ್ಕೋಡಿಯ ಲಲಿತ ಕಲಾ ಮಂದಿರ ಕಳೆದ ದಶಕದಲ್ಲಿ ಗಮನಾರ್ಹ ಸಾದನೆ ಮಾಡಿದೆ. ಹತ್ತು ವರ್ಶದ ಅವದಿಯಲ್ಲಿ ಗಿರೀಶ್ ಆದ್ದನ್ ಅವರ ಸುನೀಲ ಮಟದ ಜಗದೀಶ್ ಗಸ್ತಿ ಯಂತ ಪ್ರತಿಭಾವಂತರನ್ನು ಈ ಕಲಾ ಶಾಲೆ ನಾಡಿಗೆ ನೀಡಿದೆ. ಸುನೀಲ ಮಟದ ವಾಸ್ತವ ನೆಲೆಯ ಕಲಾವಿದ ರಾಗಿ ದಿಲ್ಲಿ, ಮುಂಬಯಿ ಮುಂತಾದ ಕಡೆ ಕಲಾ ಪ್ರದರ್ಶನ ನೀಡಿದ್ದಾರೆ. ಅವರ ಕಲಾ ಕ್ರುತಿಗಳು ಅನೇಕ ಸಂಗ್ರಹ ಕಾರರ ಮನೆ ಸೇರಿವೆ. ಇವರಂತೆ ಜಗದೇಶ್ ಗಸ್ತಿ ದಯಾನಂದ ಹಿರೇಮಟ್ ರು ಚಿತ್ರ ಕಲೆಯಲ್ಲಿಯ ತಮ್ಮ ಅಭಿವ್ಯಕ್ತಿ ಮೂಲಕ ಗಮನ ಸೆಳೆದಿದ್ದಾರೆ.

ಆಧಾರ[ಬದಲಾಯಿಸಿ]

ಈ ಮಾಹಿತಿಯನ್ನು 'ಬಣ್ಣ- ನನ್ನ ಕಣ್ಣೊಳಗೆ' ಎಂಬ ಡಿ.ಎಸ್.ಚೌಗಲೆ ಯವರು ಬರೆದಿರುವ ಪುಸ್ತಕದಿಂದ ತಗೆದುಕೊಳ್ಳಲಾಗಿದೆ.