ಬೆನ್ ಕಿಂಗ್ಸ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್

ಬೆನ್ ಕಿಂಗ್ಸ್ಲಿ, ಕ್ರಿಷ್ಣ ಪಂಡಿತ್ ಭಾಂಜಿ
ಕಿಂಗ್ಸ್ಲಿಯವರು, ೨೦೧೨ ರ, ಸನ್ಡನ್ಸ್ ಯು.ಕೆ.ಫಿಲ್ಮ್ ಫೆಸ್ಟಿವಲ್ ರಿಸೆಪ್ಷನ್ ಸಮಯದಲ್ಲಿ
ಜನನ
ಕ್ರಿಷ್ಣ ಪಂಡಿತ್ ಭಾಂಜಿ [೧]

(1943-12-31) ೩೧ ಡಿಸೆಂಬರ್ ೧೯೪೩ (ವಯಸ್ಸು ೮೦)[೨]
ಉದ್ಯೋಗಅಭಿನಯಕಾರ
ಸಕ್ರಿಯ ವರ್ಷಗಳು1966–ಇದುವರೆವಿಗೂ
ಜೀವನ ಸಂಗಾತಿ
ಮಕ್ಕಳು4; ಫಾರ್ಡಿನೆಂಡ್ ಕಿಂಗ್ಸ್ಲಿಸೇರಿದಂತೆ

ಬೆನ್ ಕಿಂಗ್ಸ್ಲಿ,(ಕ್ರಿಷ್ಣ ಪಂಡಿತ್ ಭಾಂಜಿ), ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿ ಬ್ರಿಟನ್ ನಲ್ಲಿ ನೆಲಸಿದ್ದಾರೆ. ಅವರೊಬ್ಬ ಪ್ರಸಿದ್ಧ ಚಲನಚಿತ್ರ ನಟ. ಸುಪ್ರಸಿದ್ಧ ಬ್ರಿಟಿಷ್ ಚಿತ್ರನಿರ್ದೇಶಕ, 'ರಿಚರ್ಡ್ ಅಟೆನ್‍ಬರೊ'ರವರು ನಿರ್ದೇಶಿಸಿದ ಗಾಂಧಿ, ಚಲನಚಿತ್ರದಲ್ಲಿ ಗಾಂಧೀಜಿಯವರ ಪಾತ್ರಕ್ಕೆ ಆಯ್ಕೆಯಾಗಿದ್ದರು. ಅವರು ನಟಿಸಿದ ಗಾಂಧೀಜಿಯವರ ಪಾತ್ರ, ವಿಶ್ವದ ಎಲ್ಲಾ ವರ್ಗದ ಜನರಿಗೂ ಮುದಕೊಟ್ಟಿತು.

ಜನನ, ವೃತ್ತಿ ಜೀವನ[ಬದಲಾಯಿಸಿ]

ಬೆನ್ ಕಿಂಗ್ಸ್ಲಿ (ಕ್ರಿಷ್ಣ ಪಂಡಿತ್ ಭಾಂಜಿ ಭಾಂಜಿ; ಜನನ : ೩೧, ಡಿಸೆಂಬರ್,೧೯೪೩) ರಲ್ಲಿ ಜನಿಸಿದರು. ಅವರೊಬ್ಬ ಇಂಗ್ಲೀಷ್ ಭಾಷಾ ನಟ. ತಮ್ಮ ೪ ದಶಕಗಳ ಅಭಿನಯ ಜೀವನದಲ್ಲಿ ಅವರು ಅಭಿನಯಿಸಿದ ಪಾತ್ರಗಳು ಹಲವು. ಡಾ ಬೆನ್ ಕಿಂಗ್ಸ್ಲಿ ಕಿಷ್ಣ ಪಂಡಿತ್ ಭಾಂಜಿ, ಲಂಡನ್ ನ ಯಾರ್ಕ್ ಶೈರ್ ದಾರಿಯಲ್ಲಿ ಸಿಗುವ 'ಸ್ನೇಂಟನ್' ಎಂಬ ಊರಿನಲ್ಲಿ (Snainton, North Riding of Yorkshire). ಜನಿಸಿದರು.

ಜೀವನ ಚರಿತ್ರೆ[ಬದಲಾಯಿಸಿ]

ಕಿಂಗ್ಸ್ಲಿಯವರ ತಾಯಿ, ಅನ್ನಾ ಲೈನ ಮೇರಿ (ಹುಟ್ಟಿನಿಂದಲೇ ಅಪಾರ ಭಗದ್ಭಕ್ತೆ, (೧೯೧೪-೨೦೧೦) ಮಾಡೆಲ್ ಹಾಗೂ ಅಭಿನೇತ್ರಿಯಾಗಿ ಕೆಲಸಮಾಡುತ್ತಿದ್ದರು. ೧೯೨೦-೩೦ ರ ದಶಕದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ತಂದೆ, ರಹಿಮತುಲ್ಲಾ ಹಾರ್ಜಿ ಭಾಂಜಿ (೧೯೧೪-೧೯೬೮), ಒಬ್ಬ ವೈದ್ಯಕೀಯ ಚಿಕಿತ್ಸಕರು.

ಪರಂಪರೆ[ಬದಲಾಯಿಸಿ]

ಬೆನ್ ಕಿಂಗ್ಸ್ಲಿಯ ಪೂರ್ವಿಕರು ಆಫ್ರಿಕಾದೇಶದ ಪೂರ್ವಭಾಗದಲ್ಲಿರುವ ಝಾಂಝಿಬಾರ್ ದ್ವೀಪಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಭಾರತದ ಗುಜರಾತ್ ರಾಜ್ಯದವರಾದ ಆಫ್ರಿಕದ ಕಿನ್ಯಾದಲ್ಲಿ ಜನಿಸಿದ (ಇಸ್ಮೈಲ್ ಮುಸ್ಲಿಮ್ ಖೋಜಾ ಪಂಧೀಯರು) ತಂದೆಕಡೆ ಅಜ್ಜನವರು, ಬಹಳ ಹೆಸರುವಾಸಿಯಾದ ಸಾಂಬಾರ ಪದಾರ್ಥಗಳ ವ್ಯಾಪಾರಿ, ರಹಿಮತುಲ್ಲಾ ಹಾರ್ಜಿ ಭಾನ್ಜಿಯವರು. ತಮ್ಮ ೧೪ ನೆಯ ವಯಸ್ಸಿನವರೆಗೆ ಅಲ್ಲಿ ವಾಸವಾಗಿದ್ದು ಅಲ್ಲಿಂದ ಮುಂದೆ ಬ್ರಿಟನ್ ಗೆ ವಲಸೆ ಹೋದರು. ತಾಯಿ ಬ್ರಿಟಿಷ್ ಮೂಲದವರು. ಮದುವೆಯ ಕಟ್ಟುಗಳಿಗೊಳಪಡದ ತಂದೆ ತಾಯಿಗಳಿಗೆ ಜನಿಸಿದ್ದ ಆಕೆ, ತನ್ನ ಹುಟ್ಟಿನ ಬಗ್ಗೆ ಎಲ್ಲೂ ಹೇಳಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ತಾಯಿಯ ಕಡೆ ಪೂರ್ವಿಕರು, ಅಜ್ಜ, ರಶಿಯನ್ ಅಥವಾ ಜರ್ಮನ್-ಯಹೂದಿ ಪಂಗಡಕ್ಕೆ ಸೇರಿದವರೆಂದು ನಂಬಿದ್ದರು. ಅಜ್ಜಿ ಇಂಗ್ಲೀಷ್ ಮೂಲದವರು. ಪೂರ್ವ ಇಂಗ್ಲೆಂಡ್ ನ ಜವಳಿ ಉತ್ಪಾದನಾ ಜಿಲ್ಲೆಯಲ್ಲಿ ಕೆಲಸಮಾಡುತ್ತಿದ್ದರು.

ಜೀವನದ ಉತ್ಕರ್ಷವನ್ನು ಅತಿಯಾಗಿ ಹಚ್ಚಿಕೊಂಡಿದ್ದ ಬೆನ್, ತಮ್ಮ ಭಾರತೀಯ ಮೂಲದ 'ಕ್ರಿಷ್ಣ ಭಾಂಜಿ', ಎಂಬ ಹೆಸರಿನಿಂದ ಅಷ್ಟೇನೂ ಆಕರ್ಷಿತರಾಗಿರಲಿಲ್ಲ. ಹಾಗಾಗಿ, ೧೯೯೪ ರಲ್ಲಿ ವೃತ್ತ ಪತ್ರಿಕೆಗಳಿಗೆ ಒಂದು ಹೇಳಿಕೆ, ಕೊಟ್ಟು, "ನಾನು ಜ್ಯೂ ಅಲ್ಲ...ರಶಿಯನ್ ಜ್ಯೂ ರಕ್ತಸಂಬಂಧ ಇದೆಯೆಂದು ನಮ್ಮ ಪೂರ್ವಿಕರು ಹೇಳುತ್ತಿದ್ದರೂ, ತಾಯಿಯವರ ಸಂಬಂಧಿಗಳಕಡೆ, ಅದಕ್ಕೆ ಹೆಚ್ಚು ಪುರಾವೆಗಳಿಲ್ಲ", ವೆಂದು ಪ್ರತಿಷ್ಟಿತ ಪತ್ರಿಕೆಗಳಲ್ಲಿ ಸ್ಪಸ್ಠೀಕರಿಸಿ ಪ್ರಕಟಿಸಿದರು.

ಮ್ಯಾಂಚೆಸ್ಟರ್ ನಗರದ ಹತ್ತಿರದ 'ಪೆಂಡಲ್ಬುರಿ'ಯಲ್ಲಿ ಬೆಳೆದರು (Pendlebury) 'ಮ್ಯಾಂಚೆಸ್ಟರ್ ಗ್ರಾಮರ್ ಶಾಲೆ'ಯಲ್ಲಿ ವಿದ್ಯಾಭ್ಯಾಸಮುಂದುವರೆಯಿತು. ಅವರ ಜೊತೆಗಾರ, 'ರಾಬರ್ಟ್ ಪೊವೆಲ್' ಹೆಸರಾಂತ ನಟ, ಬೆನ್, ಬೆನ್ ತಮ್ಮ ಸ್ಟೇಜ್ ಹೆಸರನ್ನು ತಂದೆಯ ಅಡ್ಡಹೆಸರಿನಿಂದ ಗಳಿಸಿದರು.(at Dulwich College) ಬೆನ್ಜಿ ತಂದೆ ಕಡೆಯಿಂದ ಕಿಂಗ್ ಕ್ಲೋವ್ಸ್ ಎಂಬ ಹೆಸರಿನಿಂದ ಕಿಂಗ್ ಎನ್ನುವ ಪದವನ್ನು ಇಟ್ಟುಕೊಂಡರು.

ಮುಂದೆ ಉನ್ನತ ವಿದ್ಯಾಭ್ಯಾಸ ಸ್ಯಾಲ್ಫರ್ಡ್ ವಿಶ್ವದ್ಯಾನಿಲಯದ ಪೆಂಡ್ಲ್ಟನ್ ಕಾಲೇಜಿನಲ್ಲಿ ನಡೆಯಿತು. ಅದೇ ಸಂಸ್ಥೆ ಮುಂದೆ 'ಬೆನ್ ಕಿಂಗ್ಸ್ಲಿ ಥಿಯೇಟರ್' ಎಂಬಹೆಸರಿನಿಂದ ಮನೆಮಾತಾಯಿತು. ಕಾಲೇಜಿನಲ್ಲಿರುವಾಗ ಹವ್ಯಾಸಿ ನಾಟಕಗಳಲ್ಲಿ ಅಪಾರ ಆಸಕ್ತಿ ಬೆಳೆಯಿತು. ಮ್ಯಾಂಚೆಸ್ಟರ್ ನ ಪದವಿಯನಂತರ ನಾಟಕವನ್ನೇ ವೃತ್ತಿಜೀವನವನ್ನಾಗಿ ಆರಿಸಿಕೊಂಡರು. ೧೯೬೭ ರಲ್ಲಿ ಅವರ ೨೩ ನೆಯ ವಯಸ್ಸಿನಲ್ಲಿ ಪಾದಾರ್ಪಣೆ. ಪ ಲಂಡನ್ ವೆಸ್ಟ್ ಎಂಡ್ ನಲ್ಲಿದ್ದ ಆಲ್ಡ್ವಿಚ್ ಥಿಯೇಟರ್ ನಲ್ಲಿ ಕೆಲಸಮಾಡಿದರು. ಆ ಸಮಯದಲ್ಲಿ ಸಂಗೀತ ನಿಯೋಜಕ, ಹಾಗೂ ನಿರ್ಮಾಹಕ, ಡಿಕ್ ಜೇಮ್ಸ್ ಗುರುತಿಸಿದರು. ಒಬ್ಬ ಪಾಪ್ ಸಿಂಗರ್ ಆಗುವ ಪ್ರೋತ್ಸಾಹವನ್ನು ನೀಡಿದರು. ಟ್ರೆವರ್ ನನ್ ಆಡೀಶನ್ ಮಾಡಿದ ಮೇಲೆ, ಕಿಂಗ್ಸ್ಲಿ ರಾಯಲ್ ಶೇಕ್ಸ್ ಪಿಯರ್ ಕಂಪೆನಿಗೆ ಸೇರಿದರು. ಮುಂದಿನ ೧೫ ವರ್ಷಗಳಲ್ಲಿ ಇಂಗ್ಲೀಷ್ ರಂಗಭೂಮಿಗೆ ತಮ್ಮ ತನುಮನಗಳನ್ನು ಮುಡಿಪಾಗಿಟ್ಟರು. ೧೯೭೧ ರಲ್ಲಿ ಆರ್.ಎಸ್.ಸಿ (Royal Shakespeare company) ಜೊತೆ ಸೇರಿ, 'ಬ್ರಾಡ್ವೇ ಥಿಯೇಟರ್'ಗೆ, ಪಾದಾರ್ಪಣೆಮಾಡಿದರು. ೧೯೭೭ ರ ಪೀಟರ್ ಹಾಲ್ಸ್ (Peter Hall's) ರವರ ಪ್ರೊಡಕ್ಷನ್ ನಲ್ಲಿ 'ಮೋಸ್ಕ' ಎಂಬ (Mosca) ಪಾತ್ರಮಾಡಿದರು. ರಾಯಲ್ ನ್ಯಾಶನಲ್ ಥಿಯೇಟರ್ (Royal National Theatre), ನ ವೊಲ್ಪೊನ್ (Volpone) ಪಾತ್ರ, ಪೀಟರ್ ಬ್ರೂಕ್ ರ ಹೆಸರಾಂತ ಪ್ರೊಡಕ್ಷನ್ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ (A Midsummer Night's Dream) ನಾಟಕಗಳು ಅವರ ಯಶಸ್ಸಿಗೆ ಕಾರಣವಾದವು.ಇದೇ ಸಮಯದಲ್ಲಿ ಕ್ರಿಷ್ಣ ಭಾಂಜಿ ತಮ್ಮ ಹೆಸರನ್ನು 'ಬೆನ್ ಕಿಂಗ್ಸ್ಲಿ' ಎಂದು ಬದಲಾಯಿಸಿಕೊಂಡರು. ಅಜ್ಜನವರ ಅಡ್ಡಹೆಸರು, ಕಿಂಗ್ ಕ್ಲೋವ್.("King Clove") ಮುಂದೆ, ವಿಲ್ಲಿ ಲೊಮನ್ ಪಾತ್ರದಲ್ಲಿ ಹೆಸರುಗಳಿಸಿದರು. ೧೯೮೨ ರ ಪ್ರೊಡಕ್ಷನ್ ನ 'ಮೆಲ್ ಗಿಬ್ಸನ್'(Mel Gibson) ವಿರುದ್ಧ ಅಭಿನಯಿಸಿದ 'ಡೆತ್ ಆಫ್ ಅ ಸೇಲ್ಸ್ ಮನ್'(Death of a Salesman) ಆಸ್ಟ್ರೇಲಿಯದ ಸಿಡ್ನಿ ನಗರದಲ್ಲಿ ಪ್ರದರ್ಶಿಸಲ್ಪಟ್ಟು ಅತಿಪ್ರಸಿದ್ಧಿ ಪಡೆಯಿತು.

ಗಾಂಧಿ ಚಿತ್ರ[ಬದಲಾಯಿಸಿ]

೧೯೮೨ ರಲ್ಲಿ ಸರ್. ಅಟೆನ್ಬರೋ, ನಿರ್ಮಿಸಿದ ಗಾಂಧಿ ಚಿತ್ರ, ಬೆನ್ ಕಿಂಗ್ಸ್ಲಿ ರವರಿಗೆ ಜೀವಮಾನದಲ್ಲಿ ಅತ್ಯಂತ ಹೆಚ್ಚುಕೀರ್ತಿ ತಂದು ಕೊಟ್ಟಿ ಚಿತ್ರವಾಗಿತ್ತು. 'ಮೋಹನ್ ದಾಸ್ ಕರಮ ಚಂದ್ ಗಾಂಧಿ'ಯವರ ಸಂಪೂರ್ಣ ಜೀವಮಾನದ ಮಹತ್ವದ ಘಟನೆಗಳನ್ನು ಆಧರಿಸಿದ್ದ ಚಿತ್ರದಲ್ಲಿ 'ಬೆನ್ ಕಿಂಗ್ಸ್ಲಿರವರು, ತಮ್ಮ ಅನುಪಮ ಅಭಿನಯವನ್ನು ನೀಡಿದ್ದಾರೆ. ಅವರು ನಟಿಸಿದ ಇನ್ನಿತರ ಚಿತ್ರಗಳು :

  1. Schindler's List (1993),
  2. Sexy Beast (2000),
  3. Lucky Number Slevin (2006),
  4. Shutter Island (2010),
  5. Prince of Persia: The Sands of Time (2010),
  6. Hugo (2011),
  7. Iron Man 3 (2013).

ಪ್ರಶಸ್ತಿಗಳು[ಬದಲಾಯಿಸಿ]

  1. ಆಸ್ಕರ್,
  2. ಗ್ರಾಮಿ ಬಫ್ಟಾ,
  3. ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು
  4. ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್,
  5. Knight Bachelor at Buckingham Palace in 2002 for services to the British film industry
  6. star on the Hollywood Walk of Fame 2010
  7. the BAFTA Los Angeles Britannia Award for Worldwide Contribution to Filmed Entertainment.2013
  1. https://familysearch.org/ark:/61903/1:1:QV7M-2TG2
  2. ಟೆಂಪ್ಲೇಟು:Who's Who (subscription required)