ಬೆಟ್ಟದ ಜೀವ (ಚಲನಚಿತ್ರ)
ಬೆಟ್ಟದ ಜೀವ | |
---|---|
Directed by | ಪಿ. ಶೇಷಾದ್ರಿ |
Written by | ಕೆ. ಶಿವರಾಮ ಕಾರಂತ |
Based on | ಬೆಟ್ಟದ ಜೀವ by ಕೆ. ಶಿವರಾಮ ಕಾರಂತ |
Produced by | ಬಸಂತ ಕುಮಾರ್ ಪಾಟಿಲ್ |
Starring | ಹೆಚ್. ಜಿ. ದತ್ತಾತ್ರೇಯ, ಸುಚೇಂದ್ರ ಪ್ರಸಾದ್, ರಾಮೇಶ್ವರಿ ವರ್ಮ |
Cinematography | ಅನಂತ್ ಅರಸ್ |
Edited by | ಬಿ. ಎಸ್. ಕೆಂಪರಾಜು |
Music by | ವಿ. ಮನೋಹರ್ |
Distributed by | ಬಸಂತ್ ಪ್ರೊಡಕ್ಷನ್ಸ್ |
Release date | 2011 ರ ಜೂನ್ 17 |
Country | ಭಾರತ |
Language | ಕನ್ನಡ |
ಬೆಟ್ಟದ ಜೀವ ಪಿ. ಶೇಷಾದ್ರಿಯವರು ನಿರ್ದೇಶಿಸಿದ ರಾಷ್ಟ್ರೀಯ ಪ್ರಶಸ್ತಿ ವಿಜೇತ (2011) ಚಿತ್ರವಾಗಿದ್ದು, ಸುಶೇಂದ್ರ ಪ್ರಸಾದ್, ರಮೇಶ್ವರಿ ವರ್ಮಾ ಮತ್ತು ಹೆಚ್. ಜಿ. ದತ್ತಾತ್ರೇಯ ನಟಿಸಿದ್ದಾರೆ. ಕಥೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕೆ. ಶಿವರಾಮ ಕಾರಂತ ಅವರ ಕಾದಂಬರಿ ಬೆಟ್ಟದ ಜೀವ ವನ್ನು ಆಧರಿಸಿದೆ.ಇದು ಭಾರತದ ಸ್ವಾತಂತ್ರ್ಯಾ ಪೂರ್ವದ ದಿನಗಳಲ್ಲಿ ಪಶ್ಚಿಮ ಘಟ್ಟಗಳ ದೂರದ ಪ್ರದೇಶಗಳಲ್ಲಿ ವಾಸಿಸುವ ಜನರ ಸಂಪ್ರದಾಯವನ್ನು ಚಿತ್ರಿಸುತ್ತದೆ.[೧]
ಕಥೆ
[ಬದಲಾಯಿಸಿ]ಕಥೆಯು ಆರಂಭಿಕ ನಲವತ್ತರ ದಶಕದಲ್ಲಿ ನಡೆಯುತ್ತದೆ.ಯುವ ಸ್ವಾತಂತ್ರ್ಯ ಹೋರಾಟಗಾರ ಶಿವರಾಮು ಅವರು ಸುಬ್ರಹ್ಮಣ್ಯದ ಸಮೀಪವಿರುವ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಕಾಡಿನಲ್ಲಿ ದಾರಿತಪ್ಪುತ್ತಾರೆ , ಎರಡು ಗ್ರಾಮಸ್ಥರು ದರ್ಣ್ಣ ಮತ್ತು ಭಟ್ಯಾ ಎಂಬುವವರು ಭೇಟಿಯಾಗುತ್ತಾರೆ . ಅವರು ಶಿವರಾಮು ಅವರನ್ನು , ಶಂಕರಮಾಳೊಂದಿಗೆ ಕೆಲಾಬೈಲ್ನಲ್ಲಿ ವಾಸಿಸುತ್ತಿರುವ ಗೋಪಾಲಯಾಯ ಮನೆಯಲ್ಲಿ ವಾಸಿಸಲು ಸಲಹೆ ನೀಡುತ್ತಾರೆ.ದಂಪತಿಗಳು ಶಿವರಾಮುನನ್ನು ಚೆನ್ನಾಗಿ ಸತ್ಕರಿಸುತ್ತಾರೆ ಮತ್ತು ಹೆಚ್ಚು ದಿನಗಳವರೆಗೆ ಉಳಿಯಲು ಅವನನ್ನು ಕೇಳುತ್ತಾರೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ.ತಮ್ಮ ಮಗ ಶಂಭು ಅವರನ್ನು ವರ್ಷಗಳ ಹಿಂದೆ ಬಿಟ್ಟುಹೋಗಿರುತ್ತಾನೆ ಶಿವರಾಮುವಿನಲ್ಲಿ ತಮ್ಮ ಮಗನನ್ನು ಕಾಣುತ್ತಾರೆ.
ಶಿವರಾಮುವಿನೊಂದಿಗೆ ಮಾತನಾಡುವಾಗ ಎಲ್ಲರೂ ಶಂಭುವಿನ ಕಣ್ಮರೆಗೆ ತಮ್ಮದೇ ವಿವರಣೆಯನ್ನು ನೀಡುತ್ತಾರೆ ಭಟ್ಟರು ತಮ್ಮ ಸ್ವಂತ ಮಗಳು-ಅಳಿಯನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದ ಲಕ್ಷ್ಮಿ, ನಾರಾಯಣರ ಮನೆಗೆ ಹೋದಾಗ ಲಕ್ಷ್ಮಿಯು "ಶಂಭು ( ಭಟ್ಟರ ಮಗ) ,ತನ್ನ ಜತೆ ಸಲುಗೆ ಮೀರಿ ವರ್ತಿಸಿದ ವಿಚಾರವನ್ನು ಅರುಹುತ್ತಾಳೆ. ಆದರೆ ತಾನು ಅದಕ್ಕೆ ಯಾವ ಪ್ರೋತ್ಸಾಹವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟುಹೋದ ’ ಎಂದು ಹೇಳುತ್ತಾಳೆ. ಭಟ್ಟರ ಪತ್ನಿ- "ತಾನು ಮಗನಿಗೆ ಚಿನ್ನವನ್ನು ನೀಡದೆ ಇದ್ದುದಕ್ಕೆ ಆತ ಮನೆ ಬಿಟ್ಟು ಹೋದನೆಂದು ಹೇಳಿ ಚಿನ್ನವನ್ನು ಶಿವರಾಮುವಿನ ಕೈಗೊಪ್ಪಿಸುತ್ತಾಳೆ . ಭಟ್ಟರು ಚಳುವಳಿಗೆಂದು ಮನೆ ಬಿಟ್ಟು ಹೋದ ಮಗನ ಸಂಗತಿಯನ್ನು ತಿಳಿಸುತ್ತಾರೆ.ಚಲನಚಿತ್ರ ಆಧುನಿಕ ಕಾಲದಲ್ಲಿ ವಯಸ್ಕ ಶಿವರಾಮು ಅವರು ಮಗನ ಜತೆ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬರುವುದು,ಅಲ್ಲಿಯ ಪ್ರಕೃತಿಯನ್ನು ಆರಾಧಿಸುವುದು, ಮತ್ತು ವೃದ್ಧ ದಂಪತಿಗಳ ಮಾತನ್ನು ಮೆಲುಕು ಹಾಕುವಲ್ಲಿ ಚಲನಚಿತ್ರಕ್ಕೆ ತೆರೆ ಬೀಳುತ್ತದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ಬೆಟ್ಟದ ಜೀವ ಚಿತ್ರಕ್ಕೆ ಪ್ರಶಸ್ತಿ www.prajavani.net[ಶಾಶ್ವತವಾಗಿ ಮಡಿದ ಕೊಂಡಿ]
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಏಪ್ರಿಲ್ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Short description is different from Wikidata
- Pages using infobox film with nonstandard dates
- ಕನ್ನಡ ಚಲನಚಿತ್ರಗಳು
- ವರ್ಷ-೨೦೧೧ ಕನ್ನಡಚಿತ್ರಗಳು