ಬಾಂಬೆ ಫೋರ್ಟ್ ರಾತ್ರಿ ಶಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:BPK.jpg
'ಶ್ರೀ.ಬಿ.ಪಿ.ಕೂಳೂರ್ ಕರ್'

ಮುಂಬಯಿ ಫೋರ್ಟ್ ರಾತ್ರಿ ಹೈಸ್ಕೂಲ್, ಮುಂಬಯಿನ ಅತಿ ಹಳೆಯ ಕನ್ನಡ ಶಾಲೆಗಳಲ್ಲೊಂದು. ಈಗ ಶತಮಾನೋತ್ಸವವನ್ನು ಆಚರಿಸುತ್ತಿದೆ. ಇದನ್ನು ’ಫೋರ್ಟ್ ಎಜುಕೇಶನ್ ಸೊಸೈಟಿ’ ನಡೆಸಿಕೊಂಡು ಬರುತ್ತಿದೆ. ಆಗ 'ಕರಾವಳಿ' ಪ್ರದೇಶದಿಂದ 'ಉದ್ಯೋಗಕ್ಕೋಸ್ಕರ ಬಂದ ತುಳುಕನ್ನಡಿಗರು' ಬೊಂಬಾಯಿನಲ್ಲಿ ಹಲವಾರು ಉದ್ಯೋಗಗಳನ್ನು ಕೈಗೆತ್ತಿಕೊಂಡರು. ಬಡತನದ ಶಾಪಕ್ಕೆ ಗುರಿಯಾದ ತುಳುನಾಡಿಗರಿಗೆ ಮತ್ತೊಂದು ಅಭಿಶಾಪವೆಂದರೆ ಅವರಲ್ಲಿ ಹೆಚ್ಚಿನವರು, ನಿರಕ್ಷರಸ್ತರು. ಅವರಿಗೆ ಬೊಂಬಾಯಿನ ಕೋಟೆ ಪ್ರದೇಶ ಅನೇಕ ಉದ್ಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲು ಅವಕಾಶ ಕಲ್ಪಿಸಿತು. ಆ ಜನಸಮುದಾಯಕ್ಕೆ ಧರ್ಮಾರ್ಥವಾಗಿ ಹಲವು ಶಾಲೆಗಳು ಹುಟ್ಟಿಕೊಂಡವು. ಅವೆಲ್ಲಾ ರಾತ್ರಿವೇಳೆಯಲ್ಲಿ ನಡೆಸಲ್ಪಡುತ್ತಿದ್ದವು. ಬೆಳಿಗ್ಯೆ ಹೋಟೆಲ್ ಗಳಲ್ಲಿ ಖಾನಾವಳಿಗಳಲ್ಲಿ, ಕಾರ್ಖಾನೆಗಳಲ್ಲಿ, ದುಡಿಯುತ್ತಿದ್ದ ಜನರಿಗೆ ರಾತ್ರಿಯ ಬಿಡುವಿನ ವೇಳೆ ಕಲಿಯಲು ಇವು ಬಹಳ ಸಹಕಾರಿಯಾದವು.

ಚಿತ್ರ:APK.jpg
'ಶ್ರೀ.ಎ.ಪಿ.ಕಿರೋಡಿಯನ್'

ರಾತ್ರಿ ಹೈಸ್ಕೂಲ್[ಬದಲಾಯಿಸಿ]

ಚಿತ್ರ:Kdmulki.jpg
'ಶ್ರೀ.ಕೆ.ಡಿ.ಮುಲ್ಕಿ'

ಸನ್ ೧೯೧೫ ರಲ್ಲಿ 'ಬೊಂಬಾಯಿನ ಕೋಟೆ ಪ್ರದೇಶ'ದಲ್ಲಿ ಸ್ಥಾಪಿಸಲ್ಪಟ್ಟಿತು. ಈ ಶಾಲೆಯ ಹುಟ್ಟುವಿಕೆಗೆ ಕಾರಣರಾದ ಹಲವರಲ್ಲಿ ಬಿ.ಪಿ.ಕೂಳೂರ್ ಕರ್, ಎ.ಪಿ.ಕಿರೋಡಿಯನ್ ಹಾಗೂ ಹಲವಾರು ವಿದ್ಯಾಪ್ರೇಮಿಗಳು ಮುಖ್ಯರು. ಇವರೆಲ್ಲಾ ದಿನರಾತ್ರಿ ಪಟ್ಟ ಪರಿಶ್ರಮ ಹಾಗೂ ತ್ಯಾಗಗಳಿಂದ ಇಂದು 'ಶಾಲೆ ತನ್ನ ೯೬ ನೆಯ ವಾರ್ಷಿಕೋತ್ಸವದ ಆಚರಣೆಯ ಸಂಭ್ರ'ಮದಲ್ಲಿದೆ. ರವರು ಸುಮಾರು ೩೦ ವರ್ಶಗಳ ಕಾಲ ಸತತವಾಗಿ ಶ್ರಮಿಸಿ ಕಟ್ಟಿದ್ದಾರೆ. ಆಡಳಿತವನ್ನು ಅತ್ಯುತ್ತಮವಾಗಿ ನಿರ್ವಹಿಸಿ ಪ್ರಗತಿಗೆ ಕಾರಣ. ನಂತರ ಬಂದವರು, ಕೆ.ಡಿ.ಮೂಲ್ಕಿಯವರು. ಸಂಸ್ಥೆಯ ಕಾರ್ಯದರ್ಶಿಯಾಗಿ ಅವರು ೪೦ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದ್ದಲ್ಲದೆ ಅದನ್ನು ಸಮರ್ಥವಾಗಿ ಕಾಯ್ದುಕೊಂಡುಬಂದರು. ಅತ್ಯಂತ ಕಾಳಜಿಹಾಗೂ ಮಹದಾಸೆಯಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯನ್ನು ಚೆನ್ನಾಗಿ ನಡೆಸಿಕೊಂಡು ಬರುವುದು ಆದ್ಯಕರ್ತವ್ಯವೆಂದು ಭಾವಿಸಿ ಈಗಿನ ಅಧ್ಯಕ್ಷರು,ಆರ್.ಕೆ.ಮುಲ್ಕಿ, ಶಾಲೆಯ ನೇತೃತ್ವವನ್ನು ವಹಿಸಿಕೊಂಡು ಶಾಲೆಯನ್ನು ಸಮರ್ಥವಾಗಿ ನಡೆಸಿಕೊಂಡು ಮುನ್ನಡೆಯುತ್ತಿದ್ದಾರೆ. ಇವರ ಜೊತೆ ಭುಜಕ್ಕೆ ಭುಜಕೊಟ್ಟು ಹಲವಾರು ಸಹೃದಯರು ದುಡಿಯುತ್ತಿದ್ದಾರೆ. ಮುಲ್ಕಿಯವರು, ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಮಾಡಿ, ಶಾಲೆಯ ಸರ್ವತೋಮುಖದ ಪ್ರಗತಿಗೆ ಕಾರಣರಾಗಿದ್ದಾರೆ. ಅವರ ದಾರಿಯಲ್ಲಿ ಅಡ್ಡವಾಗಿ ಬಂದಸಮಸ್ಯೆ ಸಂಕಷ್ಟಗಳು ಹಲವಾರು. ಅವನ್ನೆಲ್ಲಾ ಧರ್ಯದಿಂದ ಎದುರಿಸಿ ಹಳೆಯ ವಿದ್ಯಾರ್ಥಿಗಳನ್ನು ಸಂಘಟಿಸಿ, ತನ್ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ.

ಕಲಿಯುವ ಮಕ್ಕಳಿಗೆ ನೆರವು[ಬದಲಾಯಿಸಿ]

ಚಿತ್ರ:Mail1.jpg
'ಮುಂಬಯಿ ಫೋರ್ಟ್ ರಾತ್ರಿ ಶಾಲೆ' ಯ ೯೬ ನೆಯ ವಾರ್ಷಿಕೋತ್ಸವದ ಸ್ಮರಣ ಸಂಚಿಕೆ'

ಶಾಲೆಯ ಮಕ್ಕಳಿಗೆ ಪಠ್ಯಪುಸ್ತಕಗಳು, ಉಚಿತ ರೈಲ್ವೆ ಪಾಸ್, ಸ್ಕೂಲ್ ಬ್ಯಾಗ್, ಇನ್ನಿತರ ಕಲಿಕೆಯ ವಸ್ತುಗಳನ್ನು ಒದಗಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆಯ ಚಟುವಟಿಕೆಗಳಲ್ಲಿ ಆಸಕ್ತಿ ಬರುವಂತಾಗಿದೆ. ಅವರ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆಯ ಬಗ್ಗೆಯೂ ಅಂದರೆ, ವಾರ್ಷಿಕ ಕ್ರೀಡಾಕೂಟಗಳು, ವಾರ್ಷಿಕ ಸ್ಕೌಟ್ ಶಿಬಿರಗಳು, ವಿಹಾರಕೂಟಗಳು 'ಅಂತಾರ್ಶಾಲಾಕ್ರಿಕೆಟ್ ಪಂದ್ಯಾವಳಿ', ನೆರವೇರುತ್ತಿವೆ.

ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ[ಬದಲಾಯಿಸಿ]

ಚಿತ್ರ:Bombay fort high school, turns 96 year today ! 054.JPG
'೯೬ ನೇ ವಾರ್ಷಿಕೋತ್ಸವದ ಸಂಭ್ರಮದ ಸಮಯದಲ್ಲಿ ಶ್ರೀ ಆರ್.ಕೆ.ಮುಲ್ಕಿ ದಂಪತಿಗಳನ್ನು ಸನ್ಮಾನಿಸಲಾಯಿತು'

'ಶಿಬಿರ', 'ಕವಿಗೋಷ್ಟಿ', 'ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್', ಉಚಿತವಾಗಿ, ಪ್ರತಿವರ್ಷವೂ ವಾರ್ಷಿಕೋತ್ಸವ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವಿತರಣೆ ಎರ್ಪಡಿಸಲಾಗುತ್ತಿದೆ. 'ವಾರ್ಷಿಕೋತ್ಸವದ ಸ್ಮರಣ ಸಂಚಿಕೆ'ಯ ಜಾಹಿರಾತುಗಳಿಂದ ಸಂಗ್ರಹವಾದ ಹಣದಿಂದ ವಿಧ್ಯಾರ್ಥಿಗಳ ಆದ್ಯತೆಗಳಿಗೆ ಹಣ ನಿಯೋಗಮಾಡುತ್ತಾಬಂದಿದ್ದಾರೆ. 'ಫೋರ್ಟ್ ಎಜುಕೇಷನ್ ಸೊಸೈಟಿ' ಮತ್ತು 'ಬಾಂಬೇ ಫೋರ್ಟ್ ರಾತ್ರಿ ಹೈಸ್ಕೂಲ್' ನ ೯೬ ನೇ ವಾರ್ಷಿಕೋತ್ಸವ ಜನವರಿ ೨೩ ರಂದು 'ಮಾಹೀಮ್ ನ ಕರ್ನಾಟಕ ಸಂಘ'ದ,'ಸರ್,ವಿಶ್ವೇಶ್ವರಯ್ಯ ಸಭಾಗೃಹ'ದಲ್ಲಿ ನೆರವೇರಿತು.

ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ[ಬದಲಾಯಿಸಿ]

ಶಾಲೆಯಲ್ಲಿ ಓದಿ, ತಮ್ಮ ಜೀವನದಲ್ಲಿ ಪ್ರಬುದ್ಧಮಾನಕ್ಕೆ ಬಂದ ಹಲವರನ್ನು ಸನ್ಮಾನಿಸಲಾಯಿತು. ಸಮಾರಂಭದ ದಿನದಂದು ನಿಸ್ವಾರ್ಥಸೇವೆ ಸಲ್ಲಿಸಿದ ವಿಶ್ರಾಂತಿ ಹೊಂದಿದ, ಹಾಗೂ ಸಲ್ಲಿಸುತ್ತಿರುವ ಮಹನೀಯರುಗಳನ್ನು ಶಾಲುಹೊದಿಸಿ ಫಲಪುಷ್ಪಗಳನ್ನು ಅರ್ಪಿಸಿ ಸನ್ಮಾನಿಸಲಾಯಿತು. ಎಮ್.ಜಿ.ಶೆಟ್ಟಿ, ಸತೀಶ್ ಎನ್. ಬಂಗೇರ, ಮಹೇಶ್ ಶಂಕರ ಪೂಜಾರಿ (ವಿದ್ಯಾರ್ಥಿ), ಶಂಕರ್ ಗಾವ್ಡೆ, ಕ್ರಿಷ್ಣ ಎನ್.ಸುವರ್ಣ,ದಿ.ಜಿ.ಬೋಳಾರ್, ಪಿ.ಕೆ.ಮೂಡ್ಬಿದ್ರಿ, ಟಿ.ಕೆ.ಕೊಟ್ಯಾನ್,ಎಲ್.ಕೊಟ್ಯಾನ್, ಎ.ಕೊಟ್ಯಾನ್, ಬಿ.ಟಿ.ಬಂಗೇರ, ಆರ್.ಗಾಣಿಗ, ದಯಾನಂದ್ ಬಿ.ಅಮೀನ್, ಸತ್ಯಬೋಧ್. ಎಸ್. ಆಡೂರ್, ರಾಮ್ಜಿ ಮೌರ್ಯ, ಕೆ.ಟಿ.ಪೂಜಾರಿ, ಎಸ್.ಎ.ಪೂಜಾರಿ, ಪಿ.ವಿ.ಭಾಸ್ಕರ್, ಎ.ಬಿ.ಶೆಟ್ಟಿ, ಮುಂತಾದವರು ಪ್ರಮುಖರು. ಆಹ್ವಾನಿತ ಅತಿಥಿ ಗಣದಲ್ಲಿ,ಚಿನ್ನಯ್ಯ ಇ.ವಿ.ಗೌಡ, ಡಾ.ಪಿ.ಡಿ.ಆರ್.ಶೆಟ್ಟಿ, ಡಾ.ಜಿ.ಡಿ.ಜೋಶಿ, ಮುಂತಾದವರು ಪ್ರಧಾನವಾಗಿ ಪಾಲ್ಗೊಂಡಿದ್ದರು.

'ಸದಾನಂದ ಎ.ಶೆಟ್ಟಿ, ರಾತ್ರಿ ಶಾಲೆಯ ವಿದ್ಯಾರ್ಥಿ',[ಬದಲಾಯಿಸಿ]

ಖ್ಯಾತ ಉದ್ಯೋಗಪತಿ, ’ಫೋರ್ ಎಸ್ ಗ್ರೂಪ್ ಆಫ್ ಕಂಪೆನಿ’ಯ ಮಾಲೀಕರಾಗಿದ್ದು ಈಗ ಕಣ್ಮರೆಯಾಗಿರುವ 'ಸದಾನಂದ ಎ. ಶೆಟ್ಟಿಯವರು' ಈ ರಾತ್ರಿಶಾಲೆಯ ಒಬ್ಬ ವಿದ್ಯಾರ್ಥಿಯಾಗಿದ್ದರು. ತಮ್ಮ ಅನುಪಮ ನಿಷ್ಠೆ, ಪರಿಶ್ರಮದಿಂದ ಸುಮಾರು ೧,೭೦೦ ಜನ ಕಾರ್ಮಿಕರಿಗೆ ಉದ್ಯೋಗವಕಾಶಗಳನ್ನು ತಮ್ಮ ಕಂಪೆನಿಯಲ್ಲಿ ಒದಗಿಸಿಕೊಟ್ಟರು. ಅವರು ಮುಂಬಯಿನ ಹಲವಾರು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಮತ್ತು, ಮುಂಬಯಿ ಕರ್ನಾಟಕ ಸಂಘದ ಸಮರ್ಥ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆರ್ಟ್ಸ್ ಮತ್ತು ಕಾನೂನಿನಲ್ಲಿ ಪದವಿ ಗಳಿಸಿದ ಬಳಿಕ, ಎಂ.ಬಿ.ಎ ಪದವಿಯನ್ನು ಸ್ಟಾನ್ ಫರ್ಡ್ ಮತ್ತು ನ್ಯೂಯಾರ್ಕ್ ವಿ.ವಿ.ಗಳಲ್ಲಿ ಗಳಿಸಿದರು. ಕೆಲವು ಕಾಲ ಕಂಪೆನಿಗಳಲ್ಲಿ ದುಡಿದು,೧೯೬೦-೬೧ ರಲ್ಲಿ, ಮುಂಬಯಿ ,ವಿ.ವಿ. ದ 'ಜಮನಾಲಾ ಬಜಾಜ್ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್' ನಲ್ಲಿ ಅತಿಥಿ-ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೬೨ ರಲ್ಲಿ ತಮ್ಮದೇ, ಫೋರ್ ಎಸ್.ಕಂಪೆನಿ ಯನ್ನು ಸ್ಥಾಪಿಸಿದರು. ಇಂಡಸ್ಟ್ರಿಯಲ್ ವಾಲ್ವ್ಸ್ ನಿಂದ ಟರ್ಬೈನ್ಸ್ ವರೆಗೆ, ಪವರ್ ಉತ್ಪಾದನೆ, ರಬ್ಬರ್ ವಸ್ತುಗಳ ಉತ್ಪಾದನೆಯನ್ನು ತಮ್ಮ ೪೪ ವರ್ಷಗಳ ಕಾಲದಲ್ಲಿ ತಯಾರಿಸಿದ್ದರು. 'ಅಂಧ ಹುಡುಗರ ಶಾಲೆ', 'ಮಕ್ಕಳ ಕಾಯಿಲೆಯ ಆಸ್ಪತ್ರೆ', ಮುಂತಾದ ಸಂಸ್ಥೆಗಳಿಗೆ ಹಣ ಸಹಾಯವನ್ನು ಮಾಡಿದ್ದರು. ತಮ್ಮ ಹೆಣ್ಣುಮಕ್ಕಳು ಭರತನಾಟ್ಯದಲ್ಲಿ ಹೆಸರಾಗಿದ್ದರು. ಅವರ ಭರತನಾಟ್ಯ ಕಾರ್ಯಕ್ರಮಗಳನ್ಞು ಪ್ರತಿಶ್ಠಿತ ರಂಗಮಂದಿರಗಳಲ್ಲಿ ಆಯೋಜಿಸಿ ಹಣ ಸಂಗ್ರಹಿಸಿ, ಅದನ್ನು 'ಅಂಧ ಮಕ್ಕಳ ಸಂಸ್ಥೆ', 'ಹಿರಿಯ ನಾಗರಿಕರ ಸಂಸ್ಥೆ', ಹಾಗೂ 'ಮಕ್ಕಳ ಆಸ್ಪತ್ರೆಯ ನೆರವಿಗೆ ದಾನ'ಮಾಡಿದ್ದರು.

  • 'ಮಾಟುಂಗದ 'ಶಣ್ಮುಖಾನಂದ ಫೈನ್ ಆರ್ಟ್ಸ್ ಸಭಾಂಗಣ'ಕ್ಕೆ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದರು.
  • 'ಮುಂಬಯಿ ವಿಶ್ವ-ವಿದ್ಯಾಲಯದ ಮ್ಯಾನೇಜ್ಮೆಂಟ್ ಕೌನ್ಸಿಲ್'ನ ಸದಸ್ಯ.
  • 'ಇಂಡೋ ಅಮೆರಿಕನ್ ಸೊಸೈಟಿ' ಸದಸ್ಯರು.
  • 'ಮುಂಬಯಿರೋಟರಿಕ್ಲಬ್' ನ,ಸದಸ್ಯರು.

'ಆರ್.ಕೆ.ಮುಲ್ಕಿ'ಯವರಿಗೆ ಸನ್ಮಾನ[ಬದಲಾಯಿಸಿ]

ಕಾರ್ಯಕ್ರಮದ ಕೊನೆಯಲ್ಲಿ, ಶಾಲೆಯ ಈಗಿನ ಅಧ್ಯಕ್ಷ, ಸಮಾಜ ಸೇವಕ,'ಆರ್.ಕೆ.ಮುಲ್ಕಿ'ಯವರ ೪ ದಶಕಗಳ ಅನವರತ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಇವರ ಸಮಾಜಸೇವಾ ಚಟುವಟಿಕೆಗಳನ್ನು ಗುರುತಿಸಿ, ಶಾಲೆಯ ಹಿತೈಷಿಗಳು, ಹಾಗೂ ಹಿರಿಯ ವಿದ್ಯಾರ್ಥಿಗಳು, ಮತ್ತು ಮುಂಬಯಿನ ಕಲಾಸಕ್ತರು, ಅವರಿಗೆ ಸನ್ಮಾನವನ್ನು ಮಾಡಿದರು. ಕರ್ನಾಟಕ ಸಂಘದ ಈಗಿನ ಅಧ್ಯಕ್ಷ, 'ಡಾ.ಜಿ.ಡಿ.ಜೋಶಿ'ಯವರು, 'ಮುಲ್ಕಿ'ಯವರಿಗೆ, ಶಾಲುಹೊದಿಸಿ ಫಲ-ತಾಂಬೂಲಗಳನ್ನು ಅರ್ಪಿಸಿ ಗೌರವಿಸಿದರು.

ಶತಮಾನೋತ್ಸವ ಆಚರಣೆ[ಬದಲಾಯಿಸಿ]

೨೦೧೫ ರಲ್ಲಿ ಮುಂಬಯಿನಲ್ಲಿ ಶತಮಾನೋತ್ಸವಾಚರಣೆಯನ್ನು ನಡೆಸಲಾಯಿತು.[೧]

೧೦೨ ವರ್ಷಗಳ ಸುದೀರ್ಘ ಇತಿಹಾಸ[ಬದಲಾಯಿಸಿ]

ಮುಂಬಯಿನಗರದ ಫೋರ್ಟ್ ಪ್ರದೇಶದ ರಾತ್ರಿ ಹೈಸ್ಕೂಲಿಗೆ, ೧೦೨ ವರ್ಷಗಳ ಸುದೀರ್ಘ ಇತಿಹಾಸದ ಸಂಬ್ರಮದ ಆಚರಣೆಯನ್ನು ಮುಂಬಯಿ ಕನ್ನಡಿಗರು ನೆರೆವೇರಿಸಿದರು.[೨]

ಉಲ್ಲೇಖಗಳು[ಬದಲಾಯಿಸಿ]

  1. ಉದಯವಾಣಿ,ಪು.೧೨, ೨೪,ಫೆಬ್ರವರಿ,೨೦೧೫, 'ಬೋಂಬೆ ಫೋರ್ಟ್ ನೈಟ್ ಹೈಸ್ಕೂಲ್ ನ ಶತಮಾನೋತ್ಸವದ ಸಮಾರೋಪ-ಇತಿಹಾಸ ನಿರ್ಮಿಸಿದ ಸಂಸ್ಥೆ' : ಸಚಿವ ವಿನಯಕುಮಾರ್ ಸೊರಕೆ
  2. ಕರ್ನಾಟಕ ಮಲ್ಲ, ೦೪,೦೩,೨೦೧೭, ಪು.೧೦, ಬಾಂಬೇ ಫೋರ್ಟ್ ಹೈಸ್ಕೂಲಿಗೆ ೧೦೨ನೇ ವಾರ್ಷಿಕೋತ್ಸವದ ಸಂಭ್ರಮ ![ಶಾಶ್ವತವಾಗಿ ಮಡಿದ ಕೊಂಡಿ]