ಬಣಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮ್ಮನವರ ಸುಗ್ಗಿ ಹಬ್ಬ

ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ, ಬಣಕಲ್ ಹೋಬಳಿ, ಫಲ್ಗುಣಿ ಎಂಬ ಗ್ರಾಮದಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವು ಪ್ರತಿವರ್ಷ ಮೇ ತಿಂಗಳಲ್ಲಿ ನಡೆಯುತ್ತದೆ. ಪ್ರತಿಯೊಂದು ಊರಿನಲ್ಲೂ ಕೂಡ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ ಆದರೆ ಎಲ್ಲಾ ಊರಿನ ಸುಗ್ಗಿ ಹಬ್ಬ ಮುಗಿದ ಮೇಲೆ ಕೊನೆಗೆ ನಮ್ಮ ಊರಿನಲ್ಲಿ ಸುಗ್ಗಿ ಹಬ್ಬವನ್ನು ಆಚರಿಸುವುದು ಒಂದು ವಿಶೇಷವಾದಂತಹ ವಿಷಯವಾಗಿದೆ. ಎಲ್ಲಾ ಗ್ರಾಮದ ಮುಖ್ಯಸ್ಥರು ಸೇರಿ ಸುಗ್ಗಿ ಹಬ್ಬದ ದಿನಾಂಕವನ್ನು ನಿಗದಿ ಪಡಿಸುತ್ತಾರೆ. ಆ ದಿನದಂದು ಅಮ್ಮನವರ ಸುಗ್ಗಿ ಹಬ್ಬವೂ ಅತಿ ಅದ್ದೂರಿಯಾಗಿ ನಡೆಯುತ್ತದೆ. ಸುಮಾರು ಹದಿನೈದು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬ ಪ್ರಾರಂಭವಾದ ಮೊದಲ ದಿನದಿಂದಲೂ ಮನೆಯಲ್ಲಿ ಯಾವುದೇ ರೀತಿಯ ತಿಂಡಿ, ಮಾಂಸದ ಅಡುಗೆಯನ್ನು ಮಾಡುವಂತಿಲ್ಲ. ಹಾಗೆಯೇ ತಲೆಬಾಚು ಅಂತಿಲ್ಲ, ಹೊಸ ಬಟ್ಟೆ ತರುವಂತಿಲ್ಲ ಧರಿಸುವಂತಿಲ್ಲ, ಪಾದರಕ್ಷೆಯನ್ನು ಹಾಕುವಂತಿಲ್ಲ, ಹಸಿ ಮರಗಿಡಗಳನ್ನು ಕಡಿಯುವಂತಿಲ್ಲ, ಸಾಂಬಾರಿಗೆ ಒಗ್ಗರಣೆ ಹಾಕುವಂತಿಲ್ಲ. ಮೊದಲು ಹೊನ್ನಾರವನ್ನು ಮಾಡುತ್ತಾರೆ. ಅದರಲ್ಲಿ ಇಬ್ಬರು ಗಂಡಸರನ್ನ ಎತ್ತುಗಳಂತೆ ಮಾಡಿ ನೇಗಿಲಿಗೆ ಚಿನ್ನದ ಕುಳವನ್ನು ಜೋಡಿಸಿ ಗದ್ದೆ ಉಳುಮೆ ಮಾಡಿ ಹೊಸ ಬೀಜವನ್ನು ಬಿತ್ತನೆ ಮಾಡುತ್ತಾರೆ. ಹಾಗೆಯೇ ಊರಿನಲ್ಲಿ ಚೌತ ಎಂಬ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸುತ್ತಾರೆ. ಅದು ಯಾವ ರೀತಿ ಎಂದರೆ ಮನೆಯನ್ನೆಲ್ಲ ಸ್ವಚ್ಛಗೊಳಿಸುತ್ತಾರೆ, ಹೊಸ ಭತ್ತ ವನ್ನು ತಂದು ಕುಟ್ಟಿ, ಅಕ್ಕಿಯನ್ನು ಬೇರ್ಪಡಿಸಿ ಅದರಲ್ಲಿ ತುಳಸಿ ಹಿಟ್ಟನ್ನು ಮಾಡುತ್ತಾರೆ.ಜೊತೆಗೆ ಮಾವಿನಕಾಯಿ ಚಟ್ನಿ, ಈರುಳ್ಳಿ- ಬೆಲ್ಲ ಪಚಡಿ, ಕಾಯಿಹಾಲು ಮಾಡಿ ದೇವರಿಗೆ ಎಡೆ ಒಪ್ಪಿಸುತ್ತಾರೆ. ಇದೇ ರೀತಿ 15 ದಿನಗಳವರೆಗೂ ಶುದ್ಧವಾಗಿರುತ್ತಾರೆ . ಹದಿನೈದು ದಿನಗಳ ನಂತರ, ಹಬ್ಬದ ಕೊನೆಯ ದಿನವಾಗಿರುತ್ತದೆ. ಅಂದು ಬಗೆಬಗೆಯ ತಿಂಡಿ, ತಿನಿಸು, ಮಾಂಸದ ಅಡುಗೆಯನ್ನು ಮಾಡಿ ಮೊದಲು ದೇವರಿಗೆ ಎಡೆ ಇಟ್ಟಾದ ನಂತರ ಮನೆಯವರೆಲ್ಲರೂ ಊಟವನ್ನು ಮಾಡುತ್ತಾರೆ. ಅಮ್ಮನವರ ಸುಗ್ಗಿ ಹಬ್ಬದ ಕೊನೆಯಲ್ಲಿ ಜಾತ್ರೆಯನ್ನು ನಡೆಸುತ್ತಾರೆ. ಜಾತ್ರೆಯಲ್ಲಿ ಹಲವಾರು ಗ್ರಾಮದ ದೇವತೆಗಳು, ಅಂದರೆ ಸುಮಾರು 15 ದೇವರುಗಳು ಬಂದು ಗದ್ದೆಯಲ್ಲಿ ಒಟ್ಟುಗೂಡುತ್ತಾರೆ. ಇದರ ವೈಶಿಷ್ಟತೆ ಏನೆಂದರೆ ಪುರಾತನ ಕಾಲದಲ್ಲಿ ಅಕ್ಕ, ತಂಗಿ, ತಾಯಿ ಮತ್ತು ಮಗ ಬೇರೆ ಬೇರೆಯಾಗಿರುತ್ತಾರೆ, ಇವರೆಲ್ಲರೂ ವರ್ಷಕ್ಕೊಮ್ಮೆ ಒಟ್ಟುಗೂಡಿ ತಾಯಿ- ಮಗನಿಗೆ ಹಾಲುಣಿಸುವುದೇ ಈ ಸುಗ್ಗಿ ಜಾತ್ರೆಯಾ ವೈಶಿಷ್ಟತೆ ಯಾಗಿದೆ.

"https://kn.wikipedia.org/w/index.php?title=ಬಣಕಲ್&oldid=1090337" ಇಂದ ಪಡೆಯಲ್ಪಟ್ಟಿದೆ