ಪ್ಲಾಂಟಿಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಲಾಂಟಿಕ್ಸ್
ಅಭಿವೃದ್ಧಿಪಡಿಸಿದವರುPEAT GmbH
ಮೊದಲು ಬಿಡುಗಡೆ೨೦೧೫
ಕಾರ್ಯಾಚರಣಾ ವ್ಯವಸ್ಥೆಆಂಡ್ರಾಯ್ಡ್
ಅಧೀಕೃತ ಜಾಲತಾಣhttps://plantix.net/kn

ಪ್ಲಾಂಟಿಕ್ಸ್ [೧][೨]ರೈತರು, ಕೃಷಿ ಅಧಿಕಾರಿಗಳು ಮತ್ತು ತೋಟಗಾರರಿಗಾಗಿ ಇರುವ ಒಂದು ಮೊಬೈಲ್ ಬೆಳೆ ಸಲಹಾ ಅಪ್ಲಿಕೇಶನ್. ಪ್ಲಾಂಟಿಕ್ಸ್ ಅನ್ನು ಬರ್ಲಿನ್ ಮೂಲದ ಎಐ ಸ್ಟಾರ್ಟ್ಅಪ್ PEAT GmbH[೩] ಅಭಿವೃದ್ಧಿಪಡಿಸಿದೆ. ಕೀಟ ಹಾನಿ, ಸಸ್ಯ ರೋಗಗಳು ಮತ್ತು ಬೆಳೆಗಳ ಮೇಲೆ ಪರಿಣಾಮ ಬೀರುವ ಪೋಷಕಾಂಶಗಳ ಕೊರತೆಯನ್ನು ಪತ್ತೆಹಚ್ಚಿ, ಅನುಗುಣವಾದ ಚಿಕಿತ್ಸಾ ಕ್ರಮಗಳನ್ನು ನೀಡುವುದಾಗಿ ಅಪ್ಲಿಕೇಶನ್ ಹೇಳಿಕೊಂಡಿದೆ. ಸಸ್ಯ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಲು ಬಳಕೆದಾರರು ಆನ್‌ಲೈನ್ ಸಮುದಾಯದಲ್ಲಿ ಭಾಗವಹಿಸಬಹುದು. ಅಲ್ಲಿ ಅವರು ವಿಜ್ಞಾನಿಗಳು, ರೈತರು ಮತ್ತು ಸಸ್ಯ ತಜ್ಞರನ್ನು ಸಂಪರ್ಕಿಸಬಹುದು. ರೈತರು ಸ್ಥಳೀಯ ಹವಾಮಾನವನ್ನು ನೋಡಬಹುದು, ಋತುವಿನುದ್ದಕ್ಕೂ ಉತ್ತಮ ಕೃಷಿ ಸಲಹೆಯನ್ನು ಪಡೆಯಬಹುದು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದಾದರೂ ರೋಗ ಹರಡಿದರೆ ಅದರ ಕುರಿತು ರೋಗ ಎಚ್ಚರಿಕೆಗಳನ್ನು ಪಡೆಯಬಹುದು.

ಇತಿಹಾಸ[ಬದಲಾಯಿಸಿ]

PEAT GmbH 2015 ರಲ್ಲಿ ಪ್ಲಾಂಟಿಕ್ಸ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು[೪]. ಏಪ್ರಿಲ್ 2020 ರಲ್ಲಿ PEAT ಸ್ವಿಸ್-ಇಂಡಿಯನ್ ಸ್ಟಾರ್ಟ್ಅಪ್ ಆದ ಸೇಲ್ಸ್‌ಬೀ ಅನ್ನು ಸ್ವಾಧೀನಪಡಿಸಿಕೊಂಡಿತು[೫]. ಕಂಪನಿಯು ಬಿಬಿಸಿ[೬], ಫಾರ್ಚೂನ್[೭], ವೈರ್ಡ್[೮], ಎಂಐಟಿ ಟೆಕ್ನಾಲಜಿ ರಿವ್ಯೂ ಮತ್ತು ನೇಚರ್ [೯]ನಂತಹ ಪ್ರಮುಖ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಕರ್ನಾಟಕದ ವೃತ್ತಪತ್ರಿಕೆಗಳಾದ ಪ್ರಜಾವಾಣಿ[೧೦], ಉದಯವಾಣಿಗಳಲ್ಲೂ[೧೧], ಇದರ ಬಗೆಗೆ ಲೇಖನಗಳು ಬಂದಿವೆ. ಇದಕ್ಕೆ ವಿಶ್ವಸಂಸ್ಥೆಯಿಂದ ಸಿಬಿಐಟಿ ಇನ್ನೋವೇಶನ್ ಪ್ರಶಸ್ತಿ ಮತ್ತು ಯುಎಸ್ಐಐಡಿ ಡಿಜಿಟಲ್ ಸ್ಮಾರ್ಟ್ ಫಾರ್ಮಿಂಗ್ ಪ್ರಶಸ್ತಿ ಮತ್ತು ವರ್ಲ್ಡ್ಸ್ ಸಮಿಟ್ ಪ್ರಶಸ್ತಿ ದೊರೆತಿದೆ.[೧೨][೧೩][೧೪]

ಸಹಯೋಗಿಗಳು[ಬದಲಾಯಿಸಿ]

ಪ್ಲಾಂಟಿಕ್ಸ್ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ಅಂತರ್ ಸರ್ಕಾರಿ ಸಂಸ್ಥೆಗಳಾದ ಇಕ್ರಿಸಾಟ್ (ಇಂಟರ್ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ-ಅರಿಡ್ ಟ್ರಾಪಿಕ್ಸ್), ಸಿಐಎಂಎಂವೈಟಿ (ಅಂತರರಾಷ್ಟ್ರೀಯ ಮೆಕ್ಕೆ ಜೋಳ ಮತ್ತು ಗೋಧಿ ಸುಧಾರಣಾ ಕೇಂದ್ರ) ಮತ್ತು ಸಿಎಬಿಐ (ಕೃಷಿ ಮತ್ತು ಜೈವಿಕ ವಿಜ್ಞಾನ ಕೇಂದ್ರ) ಕೇಂದ್ರಗಳೊಂದಿಗೆ ಸಹಯೋಗ ಹೊಂದಿದೆ.[೧೫][೧೬]

ಉಲ್ಲೇಖಗಳು[ಬದಲಾಯಿಸಿ]

  1. https://www.eco-business.com/news/from-identifying-plant-pests-to-picking-fruit-ai-is-reinventing-how-farmers-produce-your-food/
  2. https://fortune.com/2017/09/07/change-the-world-ones-to-watch/
  3. https://www.fastcompany.com/40468146/machine-learning-helps-small-farmers-identify-plant-pests-and-diseases
  4. "ಆರ್ಕೈವ್ ನಕಲು". Archived from the original on 2021-06-14. Retrieved 2021-02-22.
  5. https://www.startupticker.ch/en/news/april-2020/plantix-expands-market-reach-through-acquisition-of-the-swiss-startup-salesbee
  6. https://www.bbc.com/news/business-41580890
  7. https://www.wired.de/collection/tech/peat-pflanzen-plantix-app-gruen-schaedlinge-landwirte
  8. https://www.technologyreview.com/s/602001/the-business-of-climate-change/
  9. https://www.nature.com/articles/d41586-020-03319-9
  10. https://www.prajavani.net/technology/gadget-news/best-agriculture-app-plantix-581505.html
  11. https://www.udayavani.com/district-news/bangalore-city-news/agriculture-minister-nh-shivshankar-reddy-released-the-plantix-app
  12. https://www.worldsummitawards.org/winner/plantix/
  13. https://datadrivenfarming.challenges.org/2017/09/08/u-s-data-driven-farming-prize-awards-300000-innovative-agricultural-solutions-nepal/
  14. https://web.archive.org/web/20180712215247/https://www.cebitaward.de/de/1-platz-plantix-1760.html
  15. "ಆರ್ಕೈವ್ ನಕಲು". Archived from the original on 2021-03-27. Retrieved 2021-02-22.
  16. "ಆರ್ಕೈವ್ ನಕಲು". Archived from the original on 2020-06-23. Retrieved 2021-02-22.