ಪ್ರಿಯತಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆವೂರು ಹರಿದಾಸ ಶೆಣೈ (ಎ.ಎಚ್.ಶೆಣೈ)
ಪ್ರಿಯತಮ
ಜನನ೧೮, ಡಿಸೆಂಬರ್, ೧೯೩೨
ಉದ್ಯಾವರದ ಸಮೀಪದ ಕಿನ್ನಿ ಮೂಲ್ಕಿ
ವೃತ್ತಿಕರ್ನಾಟಕ ಮಲ್ಲ ದಿನಪತ್ರಿಕೆಯ ಅಂಕಣಕಾರ.
ಪ್ರಕಾರ/ಶೈಲಿಪತ್ರಿಕಾ ಧರ್ಮ
ಪ್ರಮುಖ ಕೆಲಸ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಕಟಣೆಗಳಲ್ಲಿ ಹಾಸ್ಯಲೇಖನಗಳು, ಮತ್ತು ಸಣ್ಣಕಥೆಗಳ ೪ ಸಂಕಲನಗಳು ಹೊರಬಂದಿವೆ.

ಪ್ರಿಯತಮ, (೧೮, ಡಿಸೆಂಬರ್, ೧೯೩೨) ಎಂಬ ಹೆಸರಿನಿಂದ ಸಾಹಿತ್ಯ ಲೋಕದಲ್ಲಿ ಹೆಸರಾಗಿರುವ ಅಂಕಣಕಾರರ ಮನೆ ಹೆಸರು, ಅಲೆವೂರು ಹರಿದಾಸ್ ಶೆಣೈ ಎಂದು. ಮುಂಬಯಿನಿಂದ ಪ್ರಟವಾಗುವ ದೈನಿಕ ಕರ್ನಾಟಕ ಮಲ್ಲದಲ್ಲಿ ಮುಖಾಂತರ ವೆಂಬ ಅಂಕಣವನ್ನು ದಶಕಗಳ ಕಾಲ ಬರೆದಿದ್ದಾರೆ.

ಬಾಲೀವುಡ್ ಅವರ ವಿಶೇಷ ಆಸಕ್ತಿಗಳಲ್ಲೊಂದು[ಬದಲಾಯಿಸಿ]

ಲತಾ ಮಂಗೇಶ್‍‍ಕರ್ ನಿಂದ ಹಿಡಿದು, ಓ.ಪಿ.ನಯ್ಯರ್ ವರೆಗೆ, ಎಲ್ಲರ ಬಗ್ಗೆಯೂ ವಿಶೇಷ ಮಾಹಿತಿಸಂಗ್ರಹ, ಇವರಬಳಿ ದೊರೆಯುತ್ತದೆ. ಅಲೆವೂರು ಹರಿದಾಸ ಶೆಣೈರವರು. (ಪ್ರಿಯತಮರಿಗೆ), ಮುದಕೊಡುವ ಪ್ರಸಂಗಗಳ ಆಯ್ಕೆಯೆಂದರೆ, ಹಾಸ್ಯಲೇಖನಗಳು. ಹಿಂದಿ ಚಿತ್ರರಂಗದ ಬಗ್ಗೆ ಅಪಾರ ಅಸಕ್ತಿ, ಹಾಗೂ ಅದನ್ನು ಅತ್ಯಂತ ಅಚ್ಚುಕಟ್ಟಾಗಿ ತಮ್ಮ ಪ್ರೀತಿಯ ಕನ್ನಡ ದಿನಪತ್ರಿಕೆ, ಕರ್ನಾಟಕ ಮಲ್ಲ ದಲ್ಲಿ ಪ್ರಸ್ತಪಡಿಸುವ ರೀತಿ, ಎಲ್ಲರಿಗೂ ಮುದಕೊಡುವಂತಹದು. ಬಾಲೀವುಡ್ ಚಲನ-ಚಿತ್ರರಂಗದ, ನಟ-ನಟಿಯರು, ಅಥವಾ, ನಾಟಕ-ರಂಗ, ಇವೆಲ್ಲಾ 'ಪ್ರಿಯತಮ,' ರಿಗೆ, ಅತ್ಯಂತ ಮುದಕೊಡುವ ಸಂಗತಿಗಳು.

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

೧೯೩೨ ರ ಡಿಸೆಂಬರ್, ೧೮ ಉದ್ಯಾವರದ ಸಮೀಪದ 'ಕಿನ್ನಿ ಮೂಲ್ಕಿ'ಯಲ್ಲಿ ಜನನ. ಹೊಲಗದ್ದೆಗಳು ಇದ್ದವು. ಈಗ ದೊಡ್ಡ ದೊಡ್ಡ ಕಟ್ಟಡಗಳು ಎದ್ದು ನಿಂತಿವೆ. ತಂದೆ ಗೋಪಾಲಕೃಷ್ಣ ಶೆಣೈ. ಉಡುಪಿಯ ಸಂತೆಕಟ್ಟೆಯಲ್ಲಿ ಒಂದು ದಿನಸಿ ಅಂಗಡಿ ಹಾಗೂ ಹೋಟೆಲ್ ನಡೆಸುತ್ತಿದ್ದರು. ತಾಯಿ ಸುಂದರಿ ಬಾಯಿ ಶೆಣೈ, ೩ ಜನ ತಂಗಿಯರು. 'ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್' ನಲ್ಲಿ ಎಲ್.ಎಸ್.ಎಲ್.ಸಿ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೆ ಶಿಕ್ಷಣ ಹಿಂದಕ್ಕೆ ಸರಿಯಿತು.

ವೃತ್ತಿ ಜೀವನ[ಬದಲಾಯಿಸಿ]

ದೊಡ್ಡ ಸಂಸಾರದ ಹೊಣೆಗಾಗಿ ನೌಕರಿಯನ್ನು ಅರಸುವುದು ಅನಿವಾರ್ಯವಾಯಿತು. ಕೆಲವು ಸಮಯ ಮುನಿಸಿಪಾಲಿಟಿಯ ತೆರಿಗೆ ಸಂಗ್ರಹದ ಕೆಲಸ ಒಪ್ಪಿಕೊಂಡರು. ಉಡುಪಿಯ ವಿಮಾಕಂಪೆನಿಯೊಂದರಲ್ಲಿ ೨೫ ರೂಪಾಯಿ ವೇತನದ ನೌಕರಿ ದೊರೆಯಿತು. ಮುಂಬಯಿನಗರಕ್ಕೆ ವರ್ಗವಾಯಿತು. ಬಾಂಬೆ ಲೈಫ್ ಇನ್ಶೂರೆನ್ಸ್ ಕಂಪೆನಿ ಕಛೇರಿಯಲ್ಲಿ ಕೆಲಸ ಹಾಗೂ ರಾತ್ರಿ ಕಛೇರಿಯಲ್ಲೇ ಬಿಡಾರ. ೭೫ ರೂ ಸಂಬಳ. ಆಗ ಬೊಂಬಾಯಿನಲ್ಲಿ ವಸ್ತುಗಳು ಅಗ್ಗದ ದರದಲ್ಲಿ ಸಿಕ್ಕುತ್ತಿದ್ದವು. ಹೊಟ್ಟೆತುಂಬಾ ಊಟ ೮ ಆಣೆಗೆ ಸಿಕ್ಕುತ್ತಿತ್ತು. ಊರಿಗೆ ೨೫ ರೂ ಕಳಿಸುತ್ತಿದ್ದರು. ಆದರೂ ಕಷ್ಟದ ಜೀವನ. ಕಾರಣಾಂತರಗಳಿಂದ ಆ ಕೆಲಸಕ್ಕೆ ಶರಣು ಹೊಡೆಯಬೇಕಾಯಿತು. ೧೯೫೪ ರಲ್ಲಿ ೧೫೦ ರೂಪಾಯಿನ ಟೈಪಿಸ್ಟ್ ನೌಕರಿ ಸಿಕ್ಕಿತು. ಅಲ್ಲೇ ಸತತವಾಗಿ ೩೭ ವರ್ಷ ಕೆಲಸಮಾಡಿ ನಿವೃತ್ತರಾದರು. ಬೊಂಬಾಯಿನಲ್ಲಿ ಗಿರ್ಗಾಂವ್, ಅಪೆರಾ ಹೌಸ್, ವಿಲೇಪಾರ್ಲೆ ಗಳಲ್ಲಿ ವಾಸ್ತವ್ಯ ಹೂಡಿ ಕೊನೆಗೆ ಮಲಾಡ್ ನಲ್ಲಿ ನೆಲೆಸಿದರು. 'ಮನುಕುಲ ತ್ರೈಮಾಸಿಕ ಪತ್ರಿಕೆ' ಯನ್ನು ಹೊರಡಿಸುತ್ತಿದ್ದರು.

ಸಾಹಿತ್ಯದಲ್ಲಿ ಪ್ರಿಯತಮರ ಕೊಡುಗೆ[ಬದಲಾಯಿಸಿ]

ಸಾಹಿತ್ಯದಲ್ಲಿನ ಆಸಕ್ತಿ ಬಾಲ್ಯದಿಂದ ಜೊತೆಜೊತೆಯಾಗಿ ಬಂದದ್ದು. 'ಒಂಟಿ ವಿಪ್ಲವ' ಎನ್ನುವ ಕಾದಂಬರಿ ಜೀವತಾಳಿತು. ಓದು ಬರಹ ಅತಿ ಪ್ರಿಯವಾದ ಹವ್ಯಾಸಗಳು. ಅ.ನ.ಕೃಷ್ಣರಾಯರು, ಶಿವರಾಮ ಕಾರಂತ್. ನಿರಂಜನ, ಬೀಚಿ, ಪ್ರಿಯ ಲೇಖಕರು. ಬೀಚಿಯವರ 'ಟೋಪಿ' ಹಾಸ್ಯಕೃತಿಯಿಂದ ಸ್ಪೂರ್ತಿಗೊಂಡು ತಾವೂ ಸುಮಾರು ೯ ಕೃತಿಗಳನ್ನು ರಚಿಸಿದರು. ಸಣ್ಣಕತೆಗಳನ್ನು ರಚಿಸತೊಡಗಿದರು. ಸನ್. ೧೯೫೯ ರಲ್ಲಿ ಖ್ಯಾತ ಸಾಹಿತಿ ಪಾಟೀಲ್ ಪುಟ್ಟಪ್ಪನವರ ಸಂಪಾದಕತ್ವದ 'ಪ್ರಪಂಚ' ಎಂಬ ಪತ್ರಿಕೆಯಲ್ಲಿ ಮೊಟ್ಟಮೊದಲ ಲೇಖನ 'ಶಶಿಪ್ರಭೆ ಪ್ರಕಟವಾಯಿತು. 'ದಿಗಂತ', 'ನಾಗಾನಂದ' ಪತ್ರಿಕೆಗಳಲ್ಲೂ ಲೇಖನಗಳು ಬರತೊಡಗಿದವು. ಮುಂಬಯಿ ಲೇಖಕರ ಪುಸ್ತಕಗಳನ್ನು ಕನ್ನಡದ ಓದುಗರಿಗೆ ತಲುಪಿಸಬೇಕಾದ ಆವಶ್ಯಕತೆ ಇರುವುದನ್ನು ಅವರು ಮನಗಂಡರು. ಕನ್ನಡದ ಓದುಗರಿಗೆ ತಮ್ಮ ಪುಸ್ತಕಗಳ ಮಾಹಿತಿ ನೀಡಿದ ಬಳಿಕ ಅಂಚೆಯ ಮೂಲಕ ಮಾರಾಟವಾದ ಹಣ ಗಳಿಸಿದರು.

ಪ್ರಕಟಣೆಗಳು[ಬದಲಾಯಿಸಿ]

  1. ಟೋಪಿ,
  2. ಕಟ್ ಪೀಸ್,
  3. ಶುಭ ವರ್ತಮಾನ
  4. ಟಾನಿಕ್ ಬೇಕೆ ಟಾನಿಕ್,
  5. ಗೊನುಚಾ ಕಥೆಗಳು,
  6. ಹೆಂಡ್ತಿ-ಖರೀದಿ-ಚೌಕಾಶಿ ಇತ್ಯಾದಿ.
  7. ಕಾಕ ಪುರಾಣ
  8. ರೈಲು ಪ್ರಯಾಣದ ಜೋಕುಗಳು,
  9. ಮುಲ್ಲಾ ನಾಸಿರುದ್ದೀನ್ ಕಥೆಗಳು,
  10. ಹಿಕಮತ್ತು-ಕರಾಮತ್ತು-ಮಾಲಾಮತ್ತು, ಮೊದಲಾದ ಹಾಸ್ಯ ಕೃತಿಗಳ ರಚನೆ.
  11. ಕ್ರಿಕೆಟ್ ವೈಭವ ಮುಕ್ತಾ ಫಲಗಳು.
  12. ನಿತ್ಯ ಜೀವನಕ್ಕೆ ೧೫೧ ಸೂತ್ರಗಳು ಇವೆ

ಇತರ ಕೃತಿಗಳು[ಬದಲಾಯಿಸಿ]

  1. ವ್ಯಾಮೋಹ, (ಅಪರಾಧಿ ಸತ್ಯ ಕಥೆಗಳು),
  2. ಸಮರ್ಪಯಾಮಿ,
  3. ಭಾವ ಭಂಗ,
  4. ಒಂಟಿ ವಿಪ್ಲವ
  5. ಅಂತರಂಗ-ಬಹಿರಂಗ
  6. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಕಟಣೆಗಳಲ್ಲಿ ಹಾಸ್ಯಲೇಖನಗಳು, ಮತ್ತು ಸಣ್ಣಕಥೆಗಳ ೪ ಸಂಕಲನಗಳು ಹೊರಬಂದಿವೆ.
  7. ಜನಸಾಮಾನ್ಯರ ನಿತ್ಯಜೀವನದಲ್ಲಿ ಉಪಯೋಗಕ್ಕೆ ಬರುವ ೧೫೧ ಉಕ್ತಿಗಳು.
  8. ಪ್ರಿಯ ತೆಂಡುಲ್ಕರ್ ಜೀವನ ಚರಿತ್ರೆ, 'ಪಂಚ ತಾರಾಂಕಿತ' ಮರಾಠಿಯಿಂದ ಕನ್ನಡಕ್ಕೆ.
  9. ಮುಲ್ಲ ನಝರುದ್ದೀನರ ೨೦೩ ಕಿರುಕಥೆಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
  10. ಹಿಂದಿ-ಮರಾಠಿ ಕಥೆಗಳನ್ನು ಕನ್ನಡಕ್ಕೆ ಈ ಕೃತಿಗಳು,ಪ್ರಜಾಮತ, ಪ್ರಪಂಚ, ಮಲ್ಲಿಗೆ ಅಜಂತ, ಪ್ರಜಾವಾಣಿ, ಸುಧಾ, ಮಯೂರ, ಕರ್ಮವೀರ,ಕನ್ನಡಪ್ರಭ, ಉದಯವಾಣಿ, ತರಂಗ, ಮುಂತಾದ ದೈನಿಕ, ಸಾಪ್ತಾಹಿಕ,ಮಾಸಿಕ ಪತ್ರಿಕೆಗಳಲ್ಲಿ ಅಚ್ಚಾಗಿವೆ.
  11. 'ಕರ್ನಾಟಕ ಮಲ್ಲ'ದಲ್ಲಿ ಸುಮಾರು ವರ್ಷಗಳಿಂದ ಸತತವಾಗಿ ವಾರದ ಅಂಕಣದಲ್ಲಿ ಅವರ ಲೇಖನ ಪ್ರಕಟವಾಗುತ್ತಿದೆ.
  12. 'ಮನುಕುಲ ಪಬ್ಲಿಶಿಂಗ್ ಹೌಸ್' ಪ್ರಾರಂಭಿಸಿದರು.

ಗೌರವ ಸನ್ಮಾನಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ನಲಸೋಪಾರಾ ಜಿ.ಎಸ್.ಬಿ.ಸಭಾದ ಸಂಸ್ಥಾಪನಾ ದಿನಾಚರಣೆಯಂದು ಸನ್ಮಾನಿಸಿದೆ.
  • ಬಂಟ್ಸ್ ಸಂಘ ಮುಂಬಯಿ, ೨೦೦೧ ರಲ್ಲಿ ಸನ್ಮಾನಿಸಿದೆ.
  • ಜಿ.ಎಸ್.ಬಿ.ಸಭಾ ದಹಿಸರ್-ಬೋರಿವಲಿ, ರಜತಮಹೋತ್ಸವ ಸಂದರ್ಭದಲ್ಲಿ ಸನ್ಮಾನ,
  • 'ಸಾಧನ ಶಿಖರ ಗೌರವ ಪುರಸ್ಕಾರ' (ಮುಂಬಯಿ ಕರ್ನಾಟಕ ಸಂಘವು ನೀಡುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ, ಎನ್ನುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.)

ಪ್ರಿಯತಮರ ವಿಶೇಷಬರಹಗಳು[ಬದಲಾಯಿಸಿ]

  • 'ಭಾರತೀಯ ಚಿತ್ರರಂಗದಲ್ಲಿ ಮಿಂಚಿ ಮೆರೆದು ಮರೆಯಾದವರು' ಈ ಲೇಖನ, ಕಸ್ತೂರಿ ಮಾಸಪತ್ರಿಕೆ ಯಲ್ಲಿ ತಿಂಗಳ ಲೇಖನವಾಗಿಬರುತ್ತಿತ್ತು. ಕೆಲವು ನಿರ್ದಿಷ್ಟ ಜನಪ್ರಿಯ ಕಲಾವಿದರ ಮೌಲಿಕ ಪಾತ್ರಾಭಿನಯ, ಹಾಗೂ, ಅವರು ನಟಿಸಿದ ಚಿತ್ರಗಳನ್ನು ಕುರಿತ, ಸಂವೇದನಾಶೀಲ ಬರಹಗಳನ್ನೊಳಗೊಂಡಿದೆ. ಈ ಲೇಖನಗಳಲ್ಲಿ, ಅಪಾರ ಮಾಹಿತಿಗಳು ಲಭ್ಯ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಪ್ರಿಯತಮ&oldid=960065" ಇಂದ ಪಡೆಯಲ್ಪಟ್ಟಿದೆ