ಪ್ರಶಾಂತ್ ನೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಶಾಂತ್ ನೀಲ್
ಜನನ4 ಜೂನ್ 1980
ರಾಷ್ಟ್ರೀಯತೆಭಾರತೀಯ
ಉದ್ಯೋಗಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ
ಸಕ್ರಿಯ ವರ್ಷಗಳು2014–
ಜೀವನ ಸಂಗಾತಿಲಿಖಿತ
ನೆಂಟರುಶ‍್ರೀ ಮುರುಳಿ

ಪ್ರಶಾಂತ್ ನೀಲ್ (ಜನನ 4 ಜೂನ್ 1980) ರವರು ಕನ್ನಡ ಚಿತ್ರರಂಗದಲ್ಲಿ ಕೆಲಸಮಾಡುವ ಚಲನಚಿತ್ರ ನಿರ್ದೇಶಕರು. ಶ್ರೀ ಮುರುಳಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಉಗ್ರಂ ಎಂಬ ಚಲನಚಿತ್ರವನ್ನ ನಿರ್ದೇಶಸಿಸುವ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಬ್ಲಾಕ್ ಬಾಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತು. ನಂತರ 2018ರಲ್ಲಿ ಬಿಡುಗಡೆಯಾದ ಕೆ.ಜಿ.ಎಫ್: ಅಧ್ಯಾಯ 1 ಚಿತ್ರವನ್ನು ನಿರ್ದೇಶಿಸಿದರು. ಈ ಚಲನಚಿತ್ರವನ್ನು ಕನ್ನಡ ಭಾಷೆ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಡಬ್ ಮಾಡಿದ್ದಾರೆ.ಕೆ.ಜಿ.ಎಫ್: ಅಧ್ಯಾಯ 1 ಸುಮಾರು ಪ್ರಶಾಂತ್ ನೀಲ್ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತು.

ವೃತ್ತಿ ಜೀವನ[ಬದಲಾಯಿಸಿ]

ನೀಲ್ ರವರು ಶ್ರೀಮುರುಳಿ ಮತ್ತು ಹರಿಪ್ರಿಯಾ ನಟಿಸಿರುವ ಉಗ್ರಂ ಎಂಬ ಆಕ್ಷನ್ ಚಲನಚಿತ್ರವನ್ನು ನಿರ್ದೇಶಿಸಿದರು.[೧] ಈ ಚಲನಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಿತು. ನಂತರ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿರುವ ಕೆ.ಜಿ.ಎಫ್: ಅಧ್ಯಾಯ 1 ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.[೨] ೨೦೧೮ರಲ್ಲಿ ತೆರೆಗೆ ಬಂದ ಈ ಚಲನಚಿತ್ರ ಒಂದೇ ಸಮಯದಲ್ಲಿ ಐದು ಭಾಷೆಯಲ್ಲಿ ಬಿಡುಗೊಡೆಗೊಂಡಿದೆ. ಅವರ ಮುಂದಿನ ಚಲನಚಿತ್ರ ಕೆ.ಜಿ.ಎಫ್ ಅಧ್ಯಾಯ-೨. ಇವರು ಆಂದ್ರಪ್ರದೇಶದ ದಲ್ಲಿ ಇರುವ ಅನಂತಪುರಂ ಜಿಲ್ಲೆಯ ದವರು ನೀಲಕಾಂಟ ಪುರಂ ಗ್ರಾಮದವರು

ಫಿಲ್ಮೋಗ್ರಾಫಿ[ಬದಲಾಯಿಸಿ]

ವರ್ಷ ಶೀರ್ಷಿಕೆ ಟಿಪ್ಪಣಿ
2014 ಉಗ್ರಂ ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ, ಬ್ಲಾಕ್ ಬಾಸ್ಟರ್.
2018 ಕೆ.ಜಿ.ಎಫ್: ಅಧ್ಯಾಯ 1 [೩] ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ, ಬ್ಲಾಕ್ ಬಾಸ್ಟರ್.
2020 ಕೆ.ಜಿ.ಎಫ್: ಅಧ್ಯಾಯ 2[೪] ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ
2021 ಉಗ್ರಂ ವೀರಂ[೫] ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ

ಪ್ರಶಸ್ತಿ ಮತ್ತು ನಾಮನಿರ್ದೇಶನ[ಬದಲಾಯಿಸಿ]

ವರ್ಷ ಅವಾರ್ಡ್ ವರ್ಗ ಚಲನಚಿತ್ರ ಫಲಿತಾಂಶ
2015 ಫಿಲ್ಮಫೇರ್ ಅತ್ಯುತ್ತಮ ನಿರ್ದೇಶಕ ಉಗ್ರಂ ಗೆಲುವು
ಸೈಮ ಅತ್ಯುತ್ತಮ ಡೆಬ್ಯೂಟಂಟ್ ಡೈರೆಕ್ಟರ್ ಗೆಲುವು
2018 ಫಿಲ್ಮಿಬೀಟ್ ಅವಾರ್ಡ್ ಅತ್ಯುತ್ತಮ ನಿರ್ದೇಶಕ ಕೆ.ಜಿ.ಎಫ್: ಅಧ್ಯಾಯ 1 ಗೆಲುವು
2019 ಸಿಟಿ ಸೈನ್ ಅವಾರ್ಡ್ ಗೆಲುವು
ಜೀ ಕನ್ನಡ ಹೆಮ್ಮೆಯ ಕನ್ನಡಿಗ ಗೆಲುವು
ಸೈಮ ಗೆಲುವು

ಉಲ್ಲೇಖಗಳು[ಬದಲಾಯಿಸಿ]

  1. "I now have a team that decides the work I should do: Srimurali - Times of India". The Times of India. Retrieved 1 January 2020. {{cite news}}: Cite has empty unknown parameter: |1= (help)
  2. "KGF director Prashanth Neel on working with Yash, film's core idea, and sequel plans- Entertainment News, Firstpost". Firstpost. 22 December 2018. Retrieved 1 January 2020. {{cite news}}: Cite has empty unknown parameter: |1= (help)
  3. "KGF: Chapter 1 — Yash, director Prashanth Neel on their upcoming film, and taking cues from SS Rajamouli- Entertainment News, Firstpost". Firstpost. 16 December 2018. Retrieved 1 January 2020. {{cite news}}: Cite has empty unknown parameter: |1= (help)
  4. "'KGF Chapter-2': Team commences the shoot in Cyanide hills - Times of India". The Times of India. Retrieved 1 January 2020. {{cite news}}: Cite has empty unknown parameter: |1= (help)
  5. "'Ugramm Veeram' a sequel to 'Ugramm'? - Times of India". The Times of India. Retrieved 1 January 2020. {{cite news}}: Cite has empty unknown parameter: |1= (help)