ಪ್ರಜ್ವಲ್ ರೇವಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಜ್ವಲ್ ರೇವಣ್ಣ

ಮಾಜಿ ಸಂಸದರು
ಹಾಲಿ
ಅಧಿಕಾರ ಸ್ವೀಕಾರ 
೨೩ ಮೇ ೨೦೧೯
ಪೂರ್ವಾಧಿಕಾರಿ ಹೆಚ್.ಡಿ.ದೇವೇಗೌಡ
ಉತ್ತರಾಧಿಕಾರಿ ಸ್ಥಾನಿಕ
ಮತಕ್ಷೇತ್ರ ಹಾಸನ
ವೈಯಕ್ತಿಕ ಮಾಹಿತಿ
ಜನನ ಪ್ರಜ್ವಲ್ ರೇವಣ್ಣ
(1990-08-05) ೫ ಆಗಸ್ಟ್ ೧೯೯೦ (ವಯಸ್ಸು ೩೩)
ಹಾಸನ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಜನತಾ ದಳ (ಜಾತ್ಯಾತೀತ)
ಸಂಬಂಧಿಕರು ಹೆಚ್.ಡಿ.ದೇವೇಗೌಡ (ಅಜ್ಜ)
ಸೂರಜ್ ರೇವಣ್ಢ (ಹಿರಿಯ ಅಣ್ಣ)
ಹೆಚ್.ಡಿ.ಕುಮಾರಸ್ವಾಮಿ (chikkappa)
ಅನಿತಾ ಕುಮಾರಸ್ವಾಮಿ (chikkamma)
ನಿಖಿಲ್ ಕುಮಾರಸ್ವಾಮಿ (ಸೋದರಸಂಬಂಧಿ)
ತಂದೆ/ತಾಯಿ ಎಚ್.ಡಿ.ರೇವಣ್ಣ
ಭವಾನಿ ರೇವಣ್ಣ
ವಾಸಸ್ಥಾನ ಹಾಸನ, ಕರ್ನಾಟಕ

ಪ್ರಜ್ವಲ್ ರೇವಣ್ಣ ಒಬ್ಬ ಭಾರತೀಯ ರಾಜಕಾರಣಿ. ಹಾಸನ ಕ್ಷೇತ್ರದಿಂದ ೧೭ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಸ್ತುತ ಲೋಕಸಭೆಯ ೩ನೇ ಕಿರಿಯ ಸಂಸದರಾಗಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಪ್ರಜ್ವಲ್ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಕರ್ನಾಟಕ ಸರ್ಕಾರದ ಸಾರ್ವಜನಿಕ ಕಲ್ಯಾಣ ಇಲಾಖೆ ಸಚಿವರಾಗಿರುವ ಹೆಚ್. ಡಿ. ರೇವಣ್ಣರವರ ಮಗ. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣರ ಚಿಕ್ಕಪ್ಪ.

ರಾಜಕೀಯ ಜೀವನ[ಬದಲಾಯಿಸಿ]

೨೦೧೫ರಲ್ಲಿ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ​​(ಸಿಪಿಎ) ನಿಂದ ಆಯ್ಕೆಯಾದ ೧೦ ಯುವ ರಾಜಕಾರಣಿಗಳಲ್ಲಿ ಅವರು ಒಬ್ಬರಾಗಿದ್ದರು.[೧] ಜನತಾದಳದ(ಜಾತ್ಯತೀತ) ಸದಸ್ಯರಾಗಿರುವ ಇವರು, ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದಾಗ ಅವರ ರಾಜಕೀಯ ಪ್ರವೇಶ ವಿಳಂಬವಾಯಿತು.

ಹಾಗಿದ್ದರೂ ಹಾಸನದ ರಾಜಕೀಯದಲ್ಲಿ ಪ್ರಜ್ವಲ್ ಭಾಗಿಯಾಗಿದ್ದರು.[೨][೩]

ಉಲ್ಲೇಖ[ಬದಲಾಯಿಸಿ]