ಪುಷ್ಪಾಂಜಲಿ
ಗೋಚರ
ಪುಷ್ಪಾಂಜಲಿ (ಪುಷ್ಪ - ಹೂವು , ಅಂಜಲಿ - ಮಡಚಿದ ಕೈಗಳಿಂದ ಅರ್ಪಣೆ) ಭಾರತೀಯ ದೇವತೆಗಳಿಗೆ ಹೂವುಗಳ ಅರ್ಪಣೆ. ಪುಷ್ಪಾಂಜಲಿ ಒಂದು ಪ್ರದರ್ಶನದಲ್ಲಿನ ಮೊದಲ ನೃತ್ಯ. ಅದು ನೃತ್ಯದ ಅಧಿಪತಿ ನಟರಾಜ, ಗುರು, ಸಂಗೀತಗಾರರು ಮತ್ತು ಪ್ರೇಕ್ಷಕರಿಗೆ ವಂದನೆ.
ಲಕ್ಷಣಗಳು
[ಬದಲಾಯಿಸಿ]- ಸ್ವರ ಅಥವಾ ಶೊಲ್ಕಟ್ಟನ್ನು, ರಾಗ, ತಾಳಕ್ಕೆ ಸರಿಯಾಗಿ ಜೋಡಿಸಿ ಪುಷ್ಪಾಂಜಲಿಯನ್ನು ರಚಿಸಲಾಗುತ್ತದೆ.
- ಕೆಲವು ಪುಷ್ಪಾಂಜಲಿಯಲ್ಲಿ ಸಾಹಿತ್ಯವಿರುತ್ತದೆ. ಸಾಹಿತ್ಯವು ದೇವರ ಕುರಿತು ಇರುತ್ತದೆ.
- ಪುಷ್ಪಾಂಜಲಿಯು ಭಕ್ತಿ ಪ್ರಧಾನವಾಗಿರುತ್ತದೆ.
ನರ್ತನ ವಿಧಾನ
[ಬದಲಾಯಿಸಿ]ನರ್ತಕಿಯರು ಕೈಯಲ್ಲಿ, ಪುಷ್ಪಪುಟ ಹಸ್ತದಲ್ಲಿ ಹೂವನ್ನು ಹಿಡಿದು ರಂಗವನ್ನು ಪ್ರವೇಶಿಸಬೇಕು. ನಂತರ ಹೂವನ್ನು ಹಿಡಿದು ನೃತ್ಯ ಮಾಡುತ್ತಾ, ನಟರಾಜ, ಇಷ್ಟ ದೇವತೆ, ಗುರು-ಹಿರಿಯರಿಗೆ, ರಂಗಮಂಟಪಕ್ಕೆ ಪುಷ್ಪವನ್ನು ಅರ್ಪಿಸಿ ವಂದಿಸಬೇಕು. ಪ್ರತೀ ದೇವರಿಗೂ ಪ್ರತ್ಯೇಕ ಹೂವುಗಳನ್ನು ಅರ್ಪಿಸಬೇಕು ಎಂಬ ನಿಯಮವಿದೆ.