ಪಾಮ್ ಅಯ್ರೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಪಾಮ ಅಯಾರ್ಸ್

ಆರಂಭಿಕ ಜೀವನ[ಬದಲಾಯಿಸಿ]

ಪಾಮ್ ಅಯ್ರೆಸ್ ರವರು ೧೪ನೆ ಮಾರ್ಚ್, ೧೯೪೭ರೆಂದು ಜನಿಸಿದರು. ಬೆರ್ಕಶೈರ್ ಸ್ಟ್ಯಾನ್ಫೋರ್ಡ್ ವೇಲ್ ಇವರ ಜನ್ಮ ಸ್ಥಳ.ಈಕೆ ಆಂಗ್ಲಾ ಕವಿಯಿತ್ರಿ,ಹಾಸ್ಯಗಾರ್ತಿ, ಗೀತರಚನೆಗಾರ್ತಿ ಹಾಗು ರೇಡಿಯೋ ಮತ್ತು ದೂರದರ್ಶನ ಕಾರ್ಯಕ್ರಮಗಳ ನಿರೂಪಕಿಯೂ ಕೂಡ ಹೌದು.

ಪಾಮ್ ಅಯ್ರೆಸ್ ನವರು ತಮ್ಮ ಶಿಕ್ಷಣವನ್ನು ಫಾರಿಂಗ್ಡನ್ ಶಾಲೆಯಲ್ಲಿ ಪೂರ್ಣಗೋಳಿಸಿದರು.ಅವರಿಗೆ ಹದಿನೈದು ವರ್ಷವಿರುವಾಗಲೇ ನಾಗರಿಕ ಸೇವೆಯ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು.ಪಾಮ್ ಇಂಗ್ಲೀಷ್ ಹಾಗು ಆರ್ಟ್ಸ ವಿಷಯಗಳಲ್ಲಿ ವೇದಾವಿಗಿಯಾಗಿದ್ದರು. ಅವರು ೧೧ನೇ ತರಗತಿಯಲ್ಲಿ ವಿಫಲವಾಗಿದ್ದರು ಸಹ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತಿರ್ಣರಾಗುವುದರ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.ಮೊದಲು ಅವರು ಕ್ಲೆರಿಕಲ್ ಸಹಾಯಕರಾಗಿ ಬೈಸೆಸ್ಟರ್ ನಲ್ಲಿ ಸೇರಿಕೊಂಡರು.ಆನಂತರ ಅವರು ಕೇಂದ್ರ ರಕ್ಷಣಾ ದಳಕ್ಕೆ ಸೇರ್ಪಡೆಯಾದರು.ಸ್ವಲ್ಪ ಕಾಲ ಅಲ್ಲಿ ಕೆಲಸ ಮಾಡಿ ಆನಂತರ ಪಾಮರವರು ಅಲ್ಲಿಂದ ಹೊರಟು ಮಹಿಳೆಯರ ವಾಯುಪಡೆಯ ಡ್ರಾಯಿಂಗ್ ಆಫೀಸ್ ನಲ್ಲಿ ಕಾರ್ಯನಿರ್ವಹಿಸಿದರು. ಕಾರ್ಯಚರಣೆಯ ನಕ್ಷೆ ತಯಾರಿಸುವಲ್ಲಿ ಭಾಗಿಯಾದರು.ಅಲ್ಲಿ ಕೆಲಸ ಮಾಡುತಿದ್ದ ಕಾಲಾವಧಿಯಲ್ಲೇ ಆಂಗ್ಲಾ ಭಾಷೆ ಹಾಗು ಸಾಹಿತ್ಯ ವಿಷಯದಲ್ಲಿ ಒ-ಲೆವೆಲ್ ನಲ್ಲಿ ಅವರು ಉತ್ತೀರ್ಣರಾದರು.

ವೃತ್ತಿ ಜೀವನ[ಬದಲಾಯಿಸಿ]

ಇದಾದ ನಂತರ ಅವರ ವೃತ್ತಿ ಜೀವನವನ್ನು ಮನೊರಂಜನಾಗಾರರಾಗಿ ಪ್ರಾರಂಭಿಸಿದರು.ಮೊದಮೊದಲಿಗೆ ಪಾಮರವರು ತಮ್ಮ ಕಾವ್ಯಗಳನ್ನು ಆಕ್ಸ್ಫಾರ್ಡ ನಲ್ಲಿರುವ ಸ್ಥಳೀಯ ಜಾನಪದ ಸಂಘಗಳಲ್ಲಿ ಹಾಡಲಾರಂಭಿಸಿದರು.ಇದರಿಂದ ಮೆಚ್ಚುಗೆ ಪಡೆದ ಅವರು ಬಿಬಿಸಿ ರೇಡಿಯೊ ಸ್ಟೇಷನ್ ಗೆ ಕಾಲಿಟ್ಟರು.೧೯೭೪ರಲ್ಲಿ ತಮ್ಮ ಕಾವ್ಯಗಳನ್ನು ರೇಡಿಯೊ ಶೊ ಗಳಲ್ಲಿ ಹಾಡಲಾರಂಭಿಸಿದರು.ಅವರ ಕಾವ್ಯಗಳು ಬಹಳ ಬೇಗನೆ ಜನರ ಮನಸ್ಸಿಗೆ ಹತ್ತಿರವಾದವು.ಆದುದರರಿಂದ ಅವರ ಕಾವ್ಯಗಳನ್ನು ರಾಷ್ಟ್ರಾದ್ಯಂತ ಪ್ರಸಾರಮಾಡಲಾಗಿತ್ತು. ಅವರ ಕಾವ್ಯಗಳು "ಬಿಬಿಸಿ ಪಿಕ್ ಆಫ್ ದ ಇಯರ್ "ಗೆ ಆಯ್ಕೆಯಾದವು.

೧೯೭೫ ರಲ್ಲಿ ತಮ್ಮ ಸ್ನೇಹಿತರ ಒತ್ತಾಯದ ಮೇರೆಗೆ ಪಾಮರವರು 'ಆಫರ್ಚುನಿಟಿ ನಕ್ಸ್' ಎಂಬ ದೂರದರ್ಶನದ ಕಾರ್ಯಕ್ರಮಕ್ಕೆ ಆಡಿಷನ್ ನೀಡಿದರು.ಅದರಲ್ಲಿ ಆಯ್ಕೆ ಯಾದರು. ಪಾಮ್ 'ಆಫರ್ಚುನಿಟಿ ನಕ್ಸ್' ಎಂಬ ಪ್ರತಿಭಾ ಕಾರ್ಯಕ್ರಮದ ಮೂಲಕ ಮೊದಲನೆಯ ಬಾರಿಗೆ ದೂರದರ್ಶನದಲ್ಲಿ ಕಾಣಿಸಿಕೊಂಡರು.ಇದು ಅವರ ವೃತ್ತಿ ಜೀವನದ ಬಹಳ ದೊಡ್ಡ ತಿರುವಾಗಿತ್ತು.ಅವಾಕಾಶಗಳು ಪಾಮರವರನ್ನು ಹುಡುಕುತ್ತಾ ಬರತೊಡಗಿವು. ಮೊದಮೊದಲಿಗೆ ದೂರದರ್ಶನದಲ್ಲಿ ವಿವಿಧ ರೀತಿಯ ಅತಿಥಿ ಪಾತ್ರಗಳು ಅವರನ್ನು ಆಮಂತ್ರಿಸಿದವು.ಆನಂತರ ಅವರು ವೃತ್ತಿಪರಜೀವನದಲ್ಲಿ ಬಹಳ ನಿರತರಾದರು.೬ ಕವಿತಾಪುಸ್ತಕಗಳನ್ನು ಪ್ರಕಟಿಸಿದರು,ಮಹಿಳಾ ವೇದಿಕೆಗಳಲ್ಲಿ ಪ್ರದರ್ಶನ ನೀಡುವುದರಿಂದ ಜನಪ್ರಿಯತೆಯನ್ನು ಗಳಿಸಲು ಆರಂಭಿಸಿದರು. ಅವರದ್ದೆ ಆದ ದೂರದರ್ಶನ ಕಾರ್ಯಕ್ರಮದಲ್ಲಿ ನಿರೂಪಕರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಅವರ ಕವಿತೆಗಳ ಬಗ್ಗೆ ಹೇಳುವುದಾದರೆ ಅವುಗಳು ಬಹಳ ಸರಳ ಹಾಗು ಅಚ್ಚುಕಟ್ಟಾಗಿರುತ್ತವೆ.ಅವರ ಕವಿತೆಗಳು ಹೆಚ್ಚಾಗಿ ದಿನನಿತ್ಯದ ವಿಷಯಗಳು ಬಗ್ಗೆ ಮಾತನಾಡುತ್ತದೆ.ಬಿಬಿಸಿಯವರು ರಾಷ್ಟ್ರದ ೧೦೦ ಅತ್ಯುತ್ತಮ ಹಾಸ್ಯ ಕವಿತೆಗಳ ಸಮೀಕ್ಷೆಯನ್ನು ಮಾಡಿದಾಗ ಪಾಮರವರ "ಒಹ್ ಏ ವಿಶ್ ಏ ಹ್ಯಾಡ್ ಲುಕ್ಕಡ್ ಆಫ್ಟೆರ್ ಮಿ,ಟೀತ್" ಎಂಬ ಕವಿತೆ ಶ್ರೇಷ್ಠ ೧೦ ರಲ್ಲಿ ಆಯ್ಕೆಯಾಯಿತು..ದಿ ಬ್ಯಾಟರಿ ಹೆನ್,ವಿಲ್ಲ್ ಯು ಟೇಕ್ ಚಿಲ್ಲ್ರೆನ್ ಹೋಮ್ ಬಿಫೋರ್ ಐ ಡು ದೆಮ್ ಇನ್,ಐಲ್ಲ್ ಮ್ಯಾರಿ ಯು,ದೆಯ್ ಶುಡ್ ಹ್ಯಾವ್ ಆಸ್ಕಡ್ ಮೈ ಹಸಬೆನ್ಡ್ ಇತರ ಹೆಸರುವಾಸಿ ಕವನಗಳು. ಯುನೈಟಡ್ ಕಿಂಗ್ಡಮನ ಆರ್ಟ್ಸ್ ಕೌನ್ಸಿಲ್ ೧೯೯೮ ಹಾಗು ೧೯೯೯ರಲ್ಲಿ ಮಾಡಿದ ವರದಿಯ ಪ್ರಕಾರ ಬ್ರಿಟೇನ ನಲ್ಲಿ ಪಾಮರವರನ್ನು ಏದನೇ ಅತೀ ಹೆಚ್ಚು ಮಾರಟವಾಗುವ ಕವಿ ಎಂದು ಗುರುತಿಸಲಾಗಿದೆ.ಅವರ ಕವಿತೆಗಳಲ್ಲಿ ಹಾಸ್ಯದ ಗುಣಮಟ್ಟತೆ ,ವಿಲಕ್ಷಣಾ ವಿತರಣೆ ಹಾಗು ಮೂಖ್ಯವಾಗಿ ಅವರ ವಿಭಿನ್ನ ಉಚ್ಚಾರಣೆ ಎಲ್ಲರ ಮನ್ಸನ್ನು ಸೆಳೆದಿವೆ.೨೦೧೫ ರಲ್ಲಿ ಯುನೈಟೆಡ್ ಕಿಂಗ್ಡಮನ ಗ್ರಂಥಾಲಯದಲ್ಲಿ ಅತೀ ಹೆಚ್ಚು ಎರವಲು ಪಡೆದ ಪುಸ್ತಕ ಬೇರೆಯಾರದ್ದು ಅಲ್ಲ,ಪಾಮ್ ರವರದ್ದೇ!!!೧೯೯೬ ರಿಂದ ಪಾಮ್ ರವರು ಬಿಬಿಸಿ ರೇಡಿಯೊದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳಲಾರಂಭಿಸಿದರು.

ಅವರ ಜೀವನ ಚರಿತ್ರೆ "ದಿ ನೆಸಸರಿ ಆಪ್ಟಿಟ್ಯುಡ್"ವನ್ನು ೨೦೧೧ರಲ್ಲಿ ಪ್ರಕಟಿಸಿದರು.ಇದರಲ್ಲಿ ಆವರ ಹುಟ್ಟು,೬ ಮಕ್ಕಳಲ್ಲಿ ಕಿರಿಯವಳಾಗಿ ಪಾಮ್ ಬೆಳೆದ ರೀತಿ,ಮಹಿಳೆಯರ ವಾಯುಪಡೆಯಲ್ಲಿ ಅವರು ಕಳೆದ ಸಮಯ,'ಆಫರ್ಚುನಿಟಿ ನಕ್ಸ್'ಗೆ ದಾರಿ ತೋರಿದ ಘಟನೆಗಳ ಸರಮಾಲೆ ಎಲ್ಲವನ್ನು ಅವರು ವಿವರಿಸಿದ್ಧಾರೆ.೨೦೧೧ ರಲ್ಲಿ ಯುನೈಟೆಡ್ ಕಿಂಗ್ಡಮ ನ ಅತ್ಯುತ್ತಮ ಸ್ತ್ರೀ ಆತ್ಮಚರಿತ್ರೆ ಪಾಮರವರು ಬರೆದ"ದಿ ನೆಸಸರಿ ಆಪ್ಟಿಟ್ಯುಡ್"ಗೆ ಲಭಿಸಿತು.

೨೦೧೩ರಲ್ಲಿ ಎಬ್ಯೂರಿ ಪ್ರೆಸ್ ಪಾಮರವರ ಇತ್ತೀಚಿನ ಕೃತಿಯಾದ "ಯು ಮೇಡ್ ಮಿ ಲೇಟ್ ಅಗೇನ್"ವನ್ನು ಬಿಡುಗಡೆ ಮಾಡಿದರು.ಇತ್ತೀಚಿನ ದಿನಗಳಲ್ಲಿ ಪಾಲ್ ಒ ಗ್ರಾಡಿ, ದಿ ಒನ್ ಶೊ ,ಗಾರ್ಡೆನರ್ಸ್ ವರ್ಲ್ಡ್, ಕೌಂಟ್ಡೌನ್ ಹಾಗು ಅಲಾನ್ ಟೀಚ್ಚಮಾರ್ಶ್ ಎಂಬ ಹಲವಾರು ಟಿ.ವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತಿದ್ದರು. ಇತ್ತೀಚೆಗೆ ಬಿ.ಬಿ.ಸಿ ಯವರು ಗ್ರೇಟ್ ಬ್ರಿಟೇನ್ ರಿಯೊ ಒಲಿಂಪಿಕ್ಸ್ ನಲ್ಲಿ ನೀಡಿದ ಯಶಸ್ವಿ ಪ್ರದರ್ಶನದ ಬಗ್ಗೆ ಕವಿತೆ ಬರೆಯಲು ಪಾಮ ರವರನ್ನು ನೇಮಿಸಿದರು .

thumb|ಪಾಮ್ ಆಯರ್ಸ್

[೧]


ವೈಯಕ್ತಿಕ ಜೀವನ[ಬದಲಾಯಿಸಿ]

ಪಾಮ್ ಅಯ್ರೆಸ್ ನವರ ತಂದೆ ವಿದ್ಯುತ್ ಮಂಡಳಿಯಲ್ಲಿ ರೇಖಾವೀಕ್ಷಕರಾಗಿ ೪೪ ವರ್ಷ ಕೆಲಸ ಮಾಡಿದರು.ಅವರು ಸೈನ್ಯದಲ್ಲಿ ಗ್ರನೇಡಿಯರ್ ಗಾರ್ಡ್ಸನ ಪೋಲೀಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು.ಪಾಮ್ ಅಯ್ರೆಸ ನವರ ತಾಯಿ ಬಹಳ ಮೃದು ಸ್ವಭಾವದವರು.ಪಾಮ್ ರವರಿಗೆ ೪ ಜನ ಅಣ್ಣಂದಿರು.ಟೋನಿ,ಜೆಫ್,ರೋಗರ್ ಹಾಗು ಆಲನ್.ಅವರ ಅಣ್ಣಂದಿರು ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಪಾಮನವರು ಥಿಯೇಟರ್ ನಿರ್ಮಾಪಕರಾದ ಡುಡಲೆ ರುಸ್ಸೆಲ್ ನವರನ್ನು ವಿವಾಹವಾದರು.ಅವರಿಗೆ ೨ ಮಕ್ಕಳು.ವಿಲ್ಲಿಯಮ್ ಹಾಗು ಜೇಮ್ಸ್.ಅವರು ಈಗ ಕಾಟ್ವೊಲ್ಡಸ್ ನಲ್ಲಿ ವಾಸವಾಗಿದ್ದಾರೆ.ಪಾಮ್ ರವರಿಗೆ ತೋಟಗಾರಿಕೆ ಹಾಗು ಜೇನುಸಾಕರ್ಣೆ ಮಾಡುವುದೆಂದರೆ ಬಹಳ ಇಷ್ಟ.ಇದಲ್ಲದೆ ಅವರು ಅಪರೂಪದ ಜಾನುವಾರುಗಳಾದ ಕುರಿ,ಕೋಳಿ ಮರಿ,ಹಂದಿ ಹಾಗು ಗಿನಿಕೋಳಿಗಳನ್ನು ಬೆಳೆಸುತ್ತಾರೆ.ಈಗ ಅವರು ಬ್ರಿಟಿಷ್ ಕಲ್ಯಾಣ ಸಂಸ್ಥೆಯ ಪೋಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.೨೦೦೪ ರಲ್ಲಿ ಸಾಹಿತ್ಯ ಹಾಗು ಮನೋರಂಜನೆಗೆ ನೀಡಿದ ಕೊಡುಗೆಗಾಗಿ ಅವರನ್ನು ಎಂ.ಬಿ.ಇ( ಮೆಂಬರ್ ಆಫ್ ಮೋಸ್ಟ್ ಎಕ್ಸಿಲ್ಲೆನ್ಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಮಪೈರ್) ಯಾಗಿ ಬ್ರಿಟಿಷ್ ಸಾಮ್ರಜ್ಯಯವು ಆರಿಸಿತು. ಪಾಮರವರ ಸಾಕಷ್ಟು ಪದ್ಯಗಳನ್ನು ಪ್ರಮುಖ ದೇಶಗಳಾದ ಯು.ಎಸ್.ಎ,ಯೂ.ಕೆ,ಚೀನಾ,ನ್ಯೂಜಿಲ್ಯಾಂಡ್,ಹಾಲೆಂಡ್,ಸಿಂಗಾಪುರ್ ಮತ್ತು ಏರ್ಲೆಂಡ್ ನಲ್ಲಿ ಶಾಲಾ ಮಕ್ಕಳ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ.ಇಂದಿಗೂ ಪಾಮ್ ಅಯ್ರೆಸ್ ನವರು ಕವಿತೆಗಳನ್ನು ಬರೆಯುತ್ತಾರೆ.ಪಾಮ ರವರಿಗೆ ೭೦ ಆದರು ಯುನೈಟೆಡ್ ಕಿಂಗ್ಡಮನ ಅತೀ ಶ್ರೇಷ್ಟ ಹಾಸ್ಯಗಾರರಲ್ಲಿ ಒಬ್ಬರಾಗಿರುವುದು ಹೆಮ್ಮೆಯ ವಿಷಯ .[೨][೩]


ಉಲೇಖಗಳು[ಬದಲಾಯಿಸಿ]