ವಿಷಯಕ್ಕೆ ಹೋಗು

ಪರಿಣಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಣಾಮವು (ಫಲಿತಾಂಶ) ಗುಣಾತ್ಮಕವಾಗಿ ಅಥವಾ ಪರಿಣಾಮಾತ್ಮಕವಾಗಿ ಕಾರ್ಯಗಳು ಅಥವಾ ಘಟನೆಗಳ ಅನುಕ್ರಮದ ಅಂತಿಮ ಫಲ. ಸಂಭಾವ್ಯ ಪರಿಣಾಮಗಳಲ್ಲಿ ಅನುಕೂಲತೆ, ಅನಾನುಕೂಲತೆ, ಲಾಭ, ನಷ್ಟ, ಹಾನಿ ಮತ್ತು ಗೆಲುವು ಸೇರಿವೆ. ದೃಷ್ಟಿಕೋನ, ಐತಿಹಾಸಿಕ ದೂರ ಅಥವಾ ಪ್ರಸ್ತುತತೆಯನ್ನು ಅವಲಂಬಿಸಿ, ಒಂದು ಘಟನೆಯೊಂದಿಗೆ ಸಂಬಂಧಿಸಿದ ಅನೇಕ ಸಂಭಾವ್ಯ ಫಲಿತಾಂಶಗಳಿರಬಹುದು. ಯಾವುದೇ ಪರಿಣಾಮವನ್ನು ಮುಟ್ಟದಿರುವುದರ ಅರ್ಥ ಕಾರ್ಯಗಳು ನಿಷ್ಫಲ, ನಿಷ್ಪ್ರಭಾವಿ, ಅರ್ಥರಹಿತ ಅಥವಾ ದೋಷಪೂರ್ಣವಾಗಿವೆ ಎಂದು.

ಪರಿಣಾಮದ ಕೆಲವು ಬಗೆಗಳೆಂದರೆ:

  • ಸಾಮಾನ್ಯವಾಗಿ, ಯಾವುದೇ ರೀತಿಯ ಸಂಶೋಧನೆ, ಕ್ರಿಯೆ ಅಥವಾ ವಿದ್ಯಮಾನದ ಫಲಿತಾಂಶ
  • ಆಟಗಳಲ್ಲಿ (ಉದಾ. ಕ್ರಿಕೆಟ್, ಲಾಟರಿ) ಅಥವಾ ಯುದ್ಧಗಳಲ್ಲಿ, ಫಲಿತಾಂಶವು ಗೆದ್ದ ಪಕ್ಷದ ಗುರುತನ್ನು ಮತ್ತು ಸಂಭಾವ್ಯವಾಗಿ ಪರಿಸರದ ಮೇಲಾದ ಪ್ರಭಾವಗಳನ್ನು ಒಳಗೊಳ್ಳುತ್ತದೆ
  • ಗಣಿತದಲ್ಲಿ, ಒಂದು ಗಣನೆ (ಉದಾ. ಅಂಕಗಣಿತದ ಕ್ರಿಯೆ), ಫಲನ ಅಥವಾ ಸಂಖ್ಯಾಶಾಸ್ತ್ರೀಯ ಉಕ್ತಿಯ ಅಂತಿಮ ಮೌಲ್ಯ, ಅಥವಾ ಸಾಬೀತುಮಾಡಿದ ಪ್ರಮೇಯದ ಅಂತಿಮ ಹೇಳಿಕೆ
"https://kn.wikipedia.org/w/index.php?title=ಪರಿಣಾಮ&oldid=955613" ಇಂದ ಪಡೆಯಲ್ಪಟ್ಟಿದೆ