ಪದ್ಮರಾಜ ದಂಡಾವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪದ್ಮರಾಜ ದಂಡಾವತಿ
ಪದ್ಮರಾಜ ದಂಡಾವತಿ
ಜನನ೩೦ ಅಗಸ್ಟ್ 195೫
ದಂಡಾವತಿ
ವೃತ್ತಿಪತ್ರಿಕೆಯ ಸಂಪಾದಕ, ಅಂಕಣಕಾರ.
ಪ್ರಕಾರ/ಶೈಲಿಪತ್ರಿಕಾ ಧರ್ಮ

ಪ್ರಜಾವಾಣಿ ಪತ್ರಿಕೆಯ ಅಂಕಣಕಾರರಾಗಿ ಕೆಲಸ ನಿರ್ವಹಿಸಿರುವ ದಂಡಾವತಿಯವರು, ಸಾಹಿತ್ಯಿಕ ಚಟುವಟಿಕೆಗಳ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.

ಹುಟ್ಟು[ಬದಲಾಯಿಸಿ]

ಆಗಸ್ಟ್‌ 30, 1955ರಲ್ಲಿ ವಿಜಯಪುರ ಜಲ್ಲೆಯ ಮುದ್ದೆಬಿಹಾಳ ತಾಲೂಕಿನ ದಂಡಾವತಿಯವರು, ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ ಇವರ ಮಗನಾಗಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ವೃತ್ತಿ[ಬದಲಾಯಿಸಿ]

ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ ಅವರು ಹಂತ ಹಂತವಾಗಿ ಮೇಲೆ ಏರಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಆ ಹುದ್ದೆಯಲ್ಲಿಅವರು ಹತ್ತು ವರ್ಷಗಳ ಕಾಲ ಇದ್ದರು.1970 ರ ದಶಕದಲ್ಲಿ ಪ್ರಜಾವಾಣಿ ಪತ್ರಿಕೆಯ ಸಂಪಾದಕರಾಗಿದ್ದಟಿ.ಎಸ್‌.ರಾಮಚಂದ್ರರಾವ್ ಅವರನ್ನು ಬಿಟ್ಟರೆ ಇಷ್ಟು ದೀರ್ಘಕಾಲ ಆ ಹುದ್ದೆಯಲ್ಲಿ ಇದ್ದವರು ದಂಡಾವತಿ ಮಾತ್ರ. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯದಿಂದಾಗಿ, ದಿಟ್ಟತನದಿಂದಾಗಿ, ನಿಲುವಿನ ಖಚಿತತೆಯಿಂದಾಗಿ, ಹೊಸ ಒಳನೋಟಗಳಿಂದಾಗಿ, ನಿಷ್ಪಕ್ಷಪಾತತನದಿಂದಾಗಿ ತುಂಬ ಜನಪ್ರಿಯವಾಗಿತ್ತು. ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕನಂಥ ಉನ್ನತಹುದ್ದೆಯಲ್ಲಿ ಇದ್ದ ಒಬ್ಬರು ಅತಿದೀರ್ಘ ಅವಧಿಗೆ ಬರೆದ ಅಂಕಣ ಇದು ಎಂಬುದೂ ಒಂದು ದಾಖಲೆ.

ಪುಸ್ತಕಗಳು[ಬದಲಾಯಿಸಿ]

  1. . ಪತ್ರಿಕಾಭಾಷೆ (ನಾಲ್ಕನೇ ಮುದ್ರಣ) ಕರ್ನಾಟಕ ಮಾಧ್ಯಮ ಅಕಾಡೆಮಿ.
  2. . ರಿಪೋರ್ಟಿಂಗ್(ಮೂರನೇ ಮುದ್ರಣ) ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಬೆಂಗಳೂರು ಪ್ರೆಸ್ಕ್ಲಬ್
  3. . ಅವಲೋಕನ(ದ್ವಿತೀಯ ಮುದ್ರಣ)- ಹೇಮಂತ ಪ್ರಕಾಶನ
  4. . ನಾಲ್ಕನೇ ಆಯಾಮ(ಆರು ಸಂಪುಟಗಳು)– ನಾಲ್ಕು ಸಂಪುಟ ಸಪ್ನ ಪ್ರಕಾಶನ ಎರಡು ಸಂಪುಟ ವಸಂತ ಪ್ರಕಾಶನ
  5. . ಗೊಮ್ಮಟ, ಕನ್ನಡ ಇಂಗ್ಲಿಷ್ಮತ್ತು ಹಿಂದಿ ಭಾಷೆಯಲ್ಲಿ ಶ್ರವಣಬೆಳಗೊಳದ ಪ್ರಾಗಿತಿಹಾಸ ತಿಳಿಸುವ ಏಕೈಕ ಪುಸ್ತಕ – ಕರ್ನಾಟಕ ಸರ್ಕಾರದ ಪ್ರಕಟಣೆ
  6. . ಆರಂಭ - - ಸಪ್ನ ಪ್ರಕಾಶನ
  7. . ಚೌಕಟ್ಟಿ ನಾಚೆ[೧] – ಅಕ್ಷರ ಪ್ರಕಾಶನ ಹೆಗ್ಗೋಡು
  8. . ಹೆಜ್ಜೆ ಮೂಡಿಸಿದ ಹಾದಿ – ಕನ್ನಡ ವಿಶ್ವವಿದ್ಯಾಲಯ ಹಂಪಿ
  9. .ರೂವಾರಿ (ಎಸ್.ಜಿತೇಂದ್ರ ಕುಮಾರ್ ಅಭಿನಂದನ ಗ್ರಂಥ) : ಪ್ರಧಾನ ಸಂಪಾದಕ
  10. . ಸುರಂಗದ ಕತ್ತಲೆ … (ಅಚ್ಚಿನಲ್ಲಿ)- ಕನ್ನಡ ವಿಶ್ವವಿದ್ಯಾಲಯ ಹಂಪಿ
  11. . ಮಾಧ್ಯಮ ಮಾರ್ಗ – ಸಪ್ನ ಪ್ರಕಾಶನ

ಭೇಟಿ ನೀಡಿದ ಇತರ ದೇಶಗಳು[ಬದಲಾಯಿಸಿ]

ನೇಪಾಳ, ಥೈಲ್ಯಾಂಡ್, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಸಿಂಗಾಪುರ,ಜೋರ್ಡಾನ್ , ಆಸ್ಟ್ರೇಲಿಯಾ ಮತ್ತುಇಂಗ್ಲೆಂಡ್‌.

ಪ್ರಶಸ್ತಿ[ಬದಲಾಯಿಸಿ]

  1. . ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
  2. . ಕರ್ನಾಟಕ ಮಾಧ್ಯಮ ಅಕಾಡೆಮಿಯ ಜೀವಮಾನ ಸಾಧನೆಯ ಪ್ರಶಸ್ತಿ,
  3. . ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ,[೨]
  4. . ಚಾವುಂಡರಾಯ ಪ್ರಶಸ್ತಿ[೩]
  5. . ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌
  6. . ಶ್ರವಣಬೆಳಗೊಳದ ಗೊಮ್ಮಟೇಶ ವಿದ್ಯಾಪೀಠ (ಮಾಧ್ಯಮ) ಪ್ರಶಸ್ತಿ.
  7. . ದಕ್ಷಿಣಭಾರತ ಜೈನ ಮಹಾಸಭೆಯ ಆದರ್ಶಪತ್ರಕಾರ ಪ್ರಶಸ್ತಿ
  8. . ಮುರುಘಾ ಮಠದ ಶೂನ್ಯಪೀಠ ಚನ್ನಬಸವ ಪ್ರಶಸ್ತಿ
  9. . ಬೆಳಗಾವಿಯ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ
  10. . ಬೆಳಗಾವಿಯಗ.ಗೋ.ರಾಜಾಧ್ಯಕ್ಷ ಪ್ರಶಸ್ತಿ.
  11. . ರಾಯಚೂರು ಮಹಾತಪಸ್ವಿ ಕುಮಾರಸ್ವಾಮಿ ಪತ್ರಿಕೋದ್ಯಮ ಪ್ರಶಸ್ತಿ
  12. . ರಾಣೆಬೆನ್ನೂರು ನಲಧ್ವಾ ಪ್ರತಿಷ್ಠಾನ ಪ್ರಶಸ್ತಿ.
  13. . ಇಂದೋರ್ ನ ಶ್ರೀಫಲಪತ್ರಕಾರಿತಾ ಪುರಸ್ಕಾರ
  14. . ಬೆಂಗಳೂರು ಮಹಾನಗರಪಾಲಿಕೆಯ ಕೆಂಪೇಗೌಡ ಪ್ರಶಸ್ತಿ
  15. . ಹುಬ್ಬಳ್ಳಿಯ ಅವ್ವ ಪ್ರಶಸ್ತಿ[೪]
  16. .ಆಳ್ವಾಸ್ ನುಡಿಸಿರಿ ಪ್ರಶಸ್ತಿ[೫]

ಗೌರವ ಮತ್ತು ಸಾಧನೆ[ಬದಲಾಯಿಸಿ]

  1. .ಅಮೆರಿಕಾ ಸರ್ಕಾರ 2009ನೇ ಇಸವಿಯಲ್ಲಿ ತನ್ನ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂದರ್ಶಕರ ನಾಯಕತ್ವ ಶಿಬಿರಕ್ಕೆ ದಂಡಾವತಿಯವರನ್ನುಆಹ್ವಾನಿಸಿತ್ತು. ಈ ಶಿಬಿರಕ್ಕೆದೆಹಲಿಬಿಟ್ಟರೆ ಇಡೀ ಭಾರತವನ್ನು ಪ್ರತಿನಿಧಿಸಿದ ಏಕೈಕವ್ಯಕ್ತಿ ದಂಡಾವತಿ ಆಗಿದ್ದರು. ಪ್ರಜಾವಾಣಿಯಿಂದ ಈ ಶಿಬಿರಕ್ಕೆ ಆಯ್ಕೆಯಾದ ಏಕೈಕ ವ್ಯಕ್ತಿ ಅವರು. ಅದೇ ವರ್ಷ ಇಟಲಿಯಲ್ಲಿ ನಡೆದ ಜಿ-8 ಮತ್ತು ಜಿ-5 ರಾಷ್ಟ್ರಗಳ ಶೃಂಗಸಭೆಗೆ ಪ್ರಧಾನಿಡಾ.ಮನಮೋಹನಸಿಂಗ್ ಅವರ ಜತೆಗಿನ ಮಾಧ್ಯಮನಿಯೋಗದಲ್ಲಿ ದಂಡಾವತಿ ಇದ್ದರು.
  2. .ಶ್ರವಣಬೆಳಗೊಳ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ 2006 ಮತ್ತು 2018 ರ ಮಾಧ್ಯಮ ಸಮಿತಿ ನಿರ್ದೇಶಕರಾಗಿ, ಕರ್ನಾಟಕ ಮಾಧ್ಯಮ ಅಕಾಡೆಮಿಯ ನಾಮನಿರ್ದೇಶಿತ ಸದಸ್ಯರಾಗಿಯೂ ಸೇರಿದಂತೆ ಅನೇಕ ಸಂಘಸಂಸ್ಥೆಗಳಲ್ಲಿ ಚುನಾಯಿತ ಹಾಗೂ ನಾಮಕರಣ ಸದಸ್ಯರಾಗಿ ಕೆಲಸ ಮಾಡಿರುವ ಪದ್ಮರಾಜ ದಂಡಾವತಿಯವರು ರಾಮದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಬೋರಗಾಂವಿಯ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು.

ಉಲ್ಲೇಖ[ಬದಲಾಯಿಸಿ]

  1. http://www.navakarnatakaonline.com/bookslist?aid=750[ಶಾಶ್ವತವಾಗಿ ಮಡಿದ ಕೊಂಡಿ]
  2. http://www.varthabharati.in/article/karnataka/21594
  3. https://www.prajavani.net/news/article/2017/09/11/519272.html
  4. https://www.civicnews.in/news/karnataka/general/18126-achievement-award-for-journalist-padma-raja-including-14-others
  5. https://kannada.oneindia.com/news/mangalore/15-people-selected-for-alvas-nudisiri-award-2017-129315.html