ಪಟ್ಲ ಸತೀಶ್ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಟ್ಲ ಸತೀಶ್ ಶೆಟ್ಟಿ ತೆಂಕುತಿಟ್ಟು ಯಕ್ಷಗಾನದ ಭಾಗವತರು. ಪ್ರಸ್ತುತ ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿಯ ಪ್ರಧಾನ ಭಾಗವತರು ಹಾಗೂ ಮೇಳದ ಸಂಚಾಲಕ. . ಸತೀಶ್ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹೊಗೆನಾಡು ಗ್ರಾಮದ ಪಟ್ಲ ಎಂಬ ಊರಿನಲ್ಲಿ 1 ಜನವರಿ 1978 ರಂದು ಜನಿಸಿದರು. ಇವರ ತಂದೆ ಪಟ್ಲ ಮಹಾಬಲ ಶಟ್ಟಿ ಹಾಗೂ ತಾಯಿ ಲಲಿತಾ ಶೆಟ್ಟಿ. ಇವರಿಗೆ ಒಟ್ಟು 3 ಜನ ಮಕ್ಕಳು. ಇವರ ಹೆಂಡತಿಯ ಹೆಸರು ನಿರ್ಮಿತ ಶೆಟ್ಟಿ ಮಕ್ಕಳು ಹ್ರದಾನ್ ಶೆಟ್ಟಿ ಹಾಗೂ ರಿತ್ವಿಕ ಶೆಟ್ಟಿ. ಯಕ್ಷಗಾನ ಕಲಾವಿದರಿಗಾಗಿ ಇವರು "ಯಕ್ಷಧ್ರುವ ಪಟ್ಲ ಫೌಂಡೇಶನ್‌" ಸ್ಥಾಪಿಸಿದ್ದಾರೇ, ಇವರು ಇದರ ಸ್ಥಾಪಕ ಅಧ್ಯಕ್ಷರು.[೧]

ಯಕ್ಷಗಾನ ಜೀವನ[ಬದಲಾಯಿಸಿ]

ಸತೀಶ್ ಅವರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಓದುವಾಗ ಯಕ್ಷಗಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರು ಮತ್ತು ಹಿರಿಯ ಕಲಾವಿದರಾದ ಮಾಂಬಾಡಿ ಸುಬ್ರಹ್ಮಣ್ಯ ಅವರಿಂದ ಯಕ್ಷಗಾನ ಭಾಗವತಿಕೆ, ಚೆಂಡೆ ಮತ್ತು ಮದ್ದಳೆಗಳನ್ನು ಕಲಿತರು. ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಯಕ್ಷಗಾನ ಛಂದಸ್ಸು ಕಲಿಸಿದ್ದಾರೆ ಸತೀಶ್ ಅವರು ರೋಷನ್ ಕುಮಾರ್ ಅವರಿಂದ ಕರ್ನಾಟಕ ಸಂಗೀತ ಕಲಿತರು.ಇವರು ಮೊದಲಿಗೆ ಕಟೀಲು ಮೇಳದಲ್ಲಿ ಬಲಿಪ ನಾರಾಯಣ ಭಾಗವತರ ಜೋತೆಗೆ ಸಹ ಭಾಗವತರಾಗಿ ಯಕ್ಷಗಾನದ ಪಯಣ ಪ್ರಾರಂಭಿಸಿದರು. ಪ್ರಥಮವಾಗಿ ಶ್ರೀ ಭಗವತಿ ಯಕ್ಷಗಾನ ಮಂಡಳಿ ಸಸಿಹಿತ್ಲು ಮೇಳದಲ್ಲಿ ಸೇವೆ ಸಲ್ಲಿಸಿ ಮುಂದೆ ಇವರು ಕಟೀಲಿನ 5ನೇ ಮೇಳಕ್ಕೆ ಪ್ರಧಾನ ಭಾಗವತರಾಗಿ ಆಯ್ಕೆ ಆದರು. 2019ರವರೆಗೆ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ 2020ರಿಂದ ಪಾವಂಜೆ ಮೇಳವನ್ನು ಪ್ರಾರಂಭಿಸಿದರು. [೨]

ಪ್ರಶಸ್ತಿ[ಬದಲಾಯಿಸಿ]

ಯುವ ಭಾಗವತ, ಗಾನ ಮಂದಾರ, ಗಾನ ಗಂಧರ್ವ, ಗಾನ ಕೋಗಿಲೆ ಮುಂತಾದ ಹಲವಾರು ಬಿರುದುಗಳನ್ನು ಗಳಿಸಿ, ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಶೃಂಗೇರಿಯ ಸಾಂಸ್ಕೃತಿಕ ಮಟ್ಟು ಜನಪದ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ನೀಡಲಾಗುವ ಕಾಳಿಂಗ ನಾವಡ ಪ್ರಶಸ್ತಿ ಪಡೆದಿದ್ದಾರೆ. ಕಾರ್ಕಳ ಶ್ರೀಕುಂದೇಶ್ವರ ಕ್ಷೇತ್ರದಿಂದ ಕೊಡಮಾಡುವ ಪ್ರತಿಷ್ಠಿತ ಕುಂದೇಶ್ವರ ಸಮ್ಮಾನ್‌ ಗೌರವ ಪ್ರಶಸ್ತಿ, ಮತ್ತು ಸೃಷ್ಟಿಕಲಾ ವಿದ್ಯಾಲಯ ನೀಡುವ ಸೃಷ್ಟಿಕಲಾಭೂಷಣ ಪ್ರಶಸ್ತಿ ಪಡೆದಿದ್ದಾರೆ. [೩] [೪]

ಉಲ್ಲೇಖ[ಬದಲಾಯಿಸಿ]

  1. https://buntsdaily.blogspot.com/2017/01/patlasathishshetty.html. {{cite web}}: Missing or empty |title= (help)
  2. http://www.mangaloretoday.com/profile/Satish-Shetty-Patla-Accomplished-Bhagavatha.html. {{cite web}}: Missing or empty |title= (help)
  3. https://kannada.asianetnews.com/karnataka-districts/kalabhooshan-award-to-yakshagana-artist-patla-sathish-shetty-q4umog. {{cite web}}: Missing or empty |title= (help)
  4. http://www.mangaloretoday.com/profile/Satish-Shetty-Patla-Accomplished-Bhagavatha.html. {{cite web}}: Missing or empty |title= (help)