ನೂಪುರಭ್ರಮರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೂಪುರಭ್ರಮರಿ - 2007ರಲ್ಲಿ ಪುಟ್ಟದಾಗಿ ಆರಂಭವಾದ, ನೃತ್ಯಜಗತ್ತಿಗೆ ಒಂದು ಪರಿಭ್ರಮಣ ಮಾಡಿಸುವ ಪತ್ರಿಕೆ. ಪತ್ರಿಕೋದ್ಯಮ ಮತ್ತು ಭರತ ನಾಟ್ಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ನೃತ್ಯ-ಪತ್ರಿಕೋದ್ಯಮ ಗಳಿಗೆ ಸಂಬಂಧಪಟ್ಟು ಪಿ.ಎಚ್.ಡಿ ಪದವಿ ಪಡೆದ ಡಾ. ಮನೋರಮಾ ಬಿ ಎನ್ ಇದರ ಸಂಪಾದಕರಾಗಿದ್ದಾರೆ. 2011ರಲ್ಲಿ ಟ್ರಸ್ಟ್ ಆಗಿ ನೋಂದಣೆಗೊಂಡು ಯಶಸ್ವಿಯಾಗಿ 15 ವರ್ಷ ಪೂರೈಸಿದೆ. ಅಂತರರಾಷ್ಟ್ರೀಯ ಮನ್ನಣೆಯ ISSN ಮಾನ್ಯತೆ ಹೊಂದಿದ ನೃತ್ಯ ಸಂಶೋಧನ ನಿಯತಕಾಲಿಕೆ ಎಂದು ಹೆಸರುಪಡೆದಿದೆ. ಈ ಸಂಸ್ಥೆಯು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಸಮ್ಮೇಳನಗಳನ್ನೂ ವಿಚಾರ ಸಂಕಿರಣಗಳನ್ನೂ ನಡೆಸಿಕೊಂಡು ಬಂದಿದೆ. ನೃತ್ಯ, ನಾಟ್ಯ, ಶಾಸ್ತ್ರ, ಸಂಶೋಧನೆಗಳ ವಿಷಯಗಳುಳ್ಳ ಹಲವಾರು ಪುಸ್ತಕಗಳನ್ನು ಪ್ರಕಾಶಿಸಿದೆ. ನೂಪುರಭ್ರಮರಿ, ಮುದ್ರಾರ್ಣವ , ನೃತ್ಯ ಮಾರ್ಗ ಮುಕುರ, ನಾಯಿಕಾಂತರಂಗ , ನಾಟ್ಯಾಯನ , ಭರತ ನಾಟ್ಯ ಬೋಧಿನಿ ಇವು ಕೆಲವು ಪುಸ್ತಕಗಳು. ಆಸಕ್ತರಿಗೆ ಡಿಪ್ಲೊಮಾ ತರಹದ ಕೋರ್ಸ್ಗಳನ್ನೂ ಆನ್ಲೈನ್ ನಲ್ಲಿ ನಡೆಸುತ್ತಿದೆ. ನಾಟ್ಯಶಾಸ್ತ್ರ, ನಟ್ಟುವಾಂಗ, ನಾಯಿಕಾನಾಯಕ, ನೃತ್ಯಾನುಕೀರ್ತನ ಇತ್ಯಾದಿ ಕೋರ್ಸ್ ಗಳು ಜನಮನ್ನಣೆ ಪಡೆದಿವೆ.