ನವತೇಜ್ ಸರ್ನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಗ್ಲೆಂಡಿನ ಭಾರತದ ಹೈ ಕಮಿಷನರ್ ನವತೇಜ್ ಸರ್ನಾ ಅವರು ಸೆಪ್ಟೆಂಬರ್ 22(ಗುರುವಾರ) ಅಮೆರಿಕದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. 1980ನೇ ಸಾಲಿನಲ್ಲಿ ಭಾರತೀಯ ವಿದೇಶಾಂಗ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು, ಜನವರಿಯಲ್ಲಿ ಲಂಡನ್‍ಗೆ ವರ್ಗವಾಗಿ ಹೋಗಿದ್ದರು. ೨೦೧೬ ನವೆಂಬರ್ ರಿಂದ ನವತೇಜ್ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಭಾರತದ ರಾಯಭಾರಿಯಾಗಿದ್ದಾರೆ.

ಸರ್ನಾರ ಸಂಕ್ಷಿಪ್ತ ಪರಿಚಯ[ಬದಲಾಯಿಸಿ]

ನವತೇಜ್ ಸರ್ನಾ ಅವರು ಜಲಂಧರ್‍ನಲ್ಲಿ 1957ರ ಡಿ 2ರಂದು ಜನಿಸಿದ ಇವರು ತಂದೆ ಪ್ರಸಿದ್ಧ ಪಂಜಾಬಿ ಲೇಖಕ ಮೊಹಿಂದರ್ ಸಿಂಗ್ ಸರ್ನಾ. ಇವರಿಗೆ ಎರಡು ಮಕ್ಕಳು(ಪುತ್ರ ಮತ್ತು ಪುತ್ರಿ) ಪುಟ್ಟ ಸಂಸಾರ ನವತೇಜ್ ಅವರದ್ದು. ಪತ್ನಿ ಡಾ.ಅವಿನಾ ಸರ್ನಾ. ಇಂಗ್ಲಿಷ್, ಹಿಂದಿ,ಪಂಜಾಬಿ, ರಷ್ಯನ್, ಪೊಲಿಷ್ ಭಾಷೆಗಳ ಪ್ರಾವಿಣ್ಯತೆ ಸರ್ನಾರಿಗೆ ಇದೆ.

ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಹಂತ ಹಂತವಾಗಿ ಬಡ್ತಿ ಪಡೆದು ರಾಯಭಾರಿಯಾಗಿ ನಿಯೋಜನೆಗೊಳ್ಳುವುದು, ನಿವೃತಿಯಾಗುವುದು ಸಹಜ ಬೆಳವಣಿಗೆ. ಕೆಲವರಷ್ಟೇ, ನಿವೃತ್ತಿ ನಂತರದಲ್ಲಿ ವೃತ್ತಜೀವನದ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಾರೆ. ಆದರೆ ವೃತ್ತಿಯಲ್ಲಿದ್ದುಕೊಂಡು ಅಂಕಣ ಬರಹಗಾರ, ಲೇಖಕನಾಗಿ ಕಾಣಿಸಿಕೊಂಡವರು ವಿರಳ. ಅಂಥವರ ಪೈಕಿ ಜ್ಯೋತೀಂದ್ರನಾಥ್ ದೀಕ್ಷಿತ್ (ಎರಡನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದರು),ಶಶಿ ತರೂರ್ ಮುಂತಾದವರು ಕಾಣಸಿಗುತ್ತಾರೆ. ಅವರನ್ನು ಬಿಟ್ಟಿರೆ, ಸದ್ಯ ಸೇವೆಯಲ್ಲಿದ್ದುಕೊಂಡೇ ಲೇಖನ, ಅಂಕಣಬರಹ ಹಾಗೂ ಪುಸ್ತಕ ರಚನೆ (ಪ್ರಮುಖ ಪುಸ್ತಕಗಳು tales of Poland, we weren’t lovers like that, the book of Nanak the Exile ) ಗಳ ಮೂಲಕ ಸದ್ದು ಮಾಡುತ್ತಿರುವವರು ನವತೇಜ್ ಸರ್ನಾ. ಲೇಖಕನಾದ ಬಗೆಯನ್ನು ಅವರು ತಮ್ಮ ಅಂತರ್ಜಾಲ ತಾಣ (http://www.navtejsarna.com/bio.htm)ದಲ್ಲಿ ವಿವರಿರುವ ಬಗೆ ಇದು-

ವಿದ್ಯಾಭ್ಯಾಸ ಪಡೆದ ಆ ಅವಧಿಯದ್ದೇ ಒಂದು ಕಥೆ ಬಿಡಿ. ಡೆಹಗರಾಡೂನ್ ಸೇಂಟ್ ಜೋಸೆಫ್‍ಸ್ ಅಕಾಡೆಮಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ್ದೆ. ಎಲ್ಲರೂ ವಿಜ್ಞಾನದಲ್ಲೇ ಪದವಿ ಬಯಸುತ್ತಿದ್ದ ಕಾಲವದು. ಅದು ಹೇಗೋ ನಾನು ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದರು. ಲೆಕ್ಕ ಪರಿಶೋಧಕ ವೃತ್ತಿಯಲ್ಲಿ ಮುನ್ನಡೆವವರಿಗೆ ಸೂಕ್ತ ವಿಷಯವದು. ನಾನೇಕೆ ಅದನ್ನು ಆಯ್ದುಕೊಂಡೆದ್ದೆನೋ ಗೊತ್ತಿಲ್ಲ. ಅದೀಗಲೂ ನನಗೆ ಅಚ್ಚರಿಯ ವಿಷಯವೇ. ನನಗೆ ನಿಜವಾಗಿಯೂ ಇತಿಹಾಸ, ಸಾಹಿತ್ಯಗಳ ಬಗ್ಗೆ ಅತೀವ ಆಸಕ್ತಿ ಇತ್ತು. ಬರವಣಿಗೆಯ ಬಗ್ಗೆ ತುಡಿತವೂ ಇತ್ತು. ಲೇಖನಗಳನ್ನು ಬರೆದರೆ ಪತ್ರಿಕೆಗಳು ಪ್ರಕಟಿಸುತ್ತವೆ ಎಂಬುದನ್ನೂ ಅರಿತ್ತಿದ್ದರು. ಮುಂದೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಸೇರ್ಪಡೆಯಾದರು. ಆದರು ಲೇಖನವನ್ನು ಬರೆಯಲು ಸಮಯವನ್ನು ಹೊಂದಾಣಿಕೆ ಮಾಡಿಕೊಂಡೆ. ಬಿಳ್ಳಗೆ ಫ್ರೆಂಚ್ ಭಾಷಾ ತರಗತಿ, ನಂತರ ಕಾಲೇಜು, ಸಂಜೆ ನಾಗರಿಕ ಸೇವಾ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೆ ಎನ್ನುತ್ತಾರೆ. ನಾನಾಗ ದೆಹಲಿ ವಿಶ್ವವಿದ್ಯಾಲಯದ ಜುಬಿಲಿ ಹಾಸ್ಟೆಲ್‍ನಲ್ಲಿದ್ದೆ. ಬಾನುವಾರ ಬಂದರೆ ಹಾಸ್ಟೆಲ್ ಕಾರಿಡಾರ್ ಬಿಕೋ ಎನ್ನುತ್ತಿತ್ತು. ಅಂಥ ಕಾರಿಡಾರ್‍ನಲ್ಲಿ ಅತ್ತಿಂದತ್ತ, ಇತ್ತಿಂದತ್ತ ನಡೆಯುತ್ತ ‘ದ ಹಿಂದುಸ್ಥಾನ್ ಟೈಮ್ಸ್’ನ ಭಾನುವಾರದ ಸಂಚಿಕೆಗಾಗಿ ಪ್ರತಿವಾರವೂ ಕಾಯುತ್ತಿದ್ದೆ. ಅದೊಂದು ಬೇಸಿಗೆ ಕಾಲದ ಭಾನುವಾರದ ಬೆಳ್ಳಂಬೆಳಗಿನ ಸಮಯ. ನಾನು ಬರೆದಿದ್ದ ಲೇಖನವೊಂದು ಮೊದಲ ಬಾರಿಗೆ ‘ಹಿಂದುಸ್ತಾನ್ ಟೈಮ್’ನ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಖುಷಿಗೆ ಪಾರವೇ ಇರಲಿಲ್ಲ. ನನ್ನ ಮೊದಲ ಲೇಖನ ಪ್ರಕಟವಾದ ಆ ಸಂಚಿಕೆ ನನ್ನ ಮಟ್ಟಿಗೆ ಚಿನ್ನಕಿಂತ ಹೆಚ್ಚು ಮೌಲ್ಯಯುತವೆನಿಸಿತು. ಅದು ಕಾಫಿ ಹೌಸ್‍ಗಳಲ್ಲಿನ ರೊಮಾನ್ಸ್ ಮತ್ತು ಇತಿಹಾಸ ಕುರಿತಾದ್ದಾಗಿತ್ತು. ‘ಓವರ್ ಎ ಕಪ್ ಆಪ್ ಕಾಫಿ’ ಎಂಬ ಶೀರ್ಷಿಕೆಯಡಿ ಅದು ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ನನ್ನ ಹೆಸರು ಅಚ್ಚಾಗಿತ್ತು ಎಂಬ ಕಾರಣಕ್ಕಷ್ಟೇ ಆದ ಖುಷಿಯಲ್ಲ ಅದು ‘ಅದೊಂಥರಾ ಗೀಳು ಮಗನೆ’ ಹತ್ತಿಕೊಂಡು ಬಿಟ್ಟಿತ್ತು. ಕಾಲೇಜು ದಿನಗಳಲ್ಲಿ ಹಾಸ್ಯ, ಮಾನವಾಸಕ್ತಿಯ ವಿಷಯ, ಸಂದರ್ಶನ ಹೀಗೆ ಹಲವು ಪ್ರಕಾರದ ಬರವಣಿಗೆಗಳನ್ನು ಮಾಡಿದೆ. ಇವೆಲ್ಲದರ ಪರಿಣಾಮ, ಅಂದಿನ ಪ್ರಸಿದ್ಧ ‘ದ ಈವ್‍ನಿಂಗ್ ನ್ಯೂಸ್’ ಪತ್ರಿಕೆಯಲ್ಲಿ ಒಂದು ಅಂಕಣವೂ ನನ್ನ ಬರವಣಿಗೆ ಪ್ರಾಪ್ತವಾಯಿತು. ಕನೌಟ್ ಪ್ಲೇಸ್(ರಾಜೀವ್ ಚೌಕ್)ಗೆ ಯಾರೇ ಸುಶಿಕ್ಷಿತ ಬಂದರೂ, ಅಲ್ಲಿಂದ ಹಿಂತಿರುಗುವಾಗ ಅವರ ಕೈಲಿ ‘ದ ಈವ್‍ನಿಂಗ್ ನ್ಯೂಸ್’ ಸಂಚಿಕೆ ಇದ್ದೇ ಇರುತ್ತಿತ್ತು. ಅದರಲ್ಲಿ ನನ್ನ ಅಂಕಣಬರಹ ವಿಶ್ವವಿದ್ಯಾಲಯಗಳ ಕುರಿತ ವಿಷಯಗಳಿಗೆ ಮೀಸಲಾಯಿತು.

ಪ್ರಸುತ್ತ ಹುದ್ದೆ[ಬದಲಾಯಿಸಿ]

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಜಾಗತಿ ಮಟ್ಟದಲ್ಲಿ ಭಾರತದ ಛಾಯೆ ಕೂಡ ಬದಲಾಗಿದೆ. ಈ ಹಿನ್ನಲೆಯಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ, ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಪ್ರಭಾವ ಬೀರುವ ಕೆಲಸ ಪ್ರಮುಖವಾದುದು. ಅದು ಆಯಕಟ್ಟಿನ ಹುದ್ದೆಯೂ ಹೌದು. ಅದರಲ್ಲೂ ವಿಶೇಷವಾಗಿ ಅಮೆರಿಕದಂಥ ದೇಶದಲ್ಲಿ ರಾಯಭಾರದ ಕರ್ತವ್ಯ ನಿರ್ವಹಿಸುವುದು ಸವಾಲೂ ಹೌದು. ಇವರು 2016 ಸೆಪ್ಟೆಂಬರ್ 22ರಂದು ಹಿರಿಯ ರಾಜತಾಂತ್ರಿಕ ಅಧಿಕಾರಿ ನವತೇಜ್ ಸರ್ನಾರನ್ನು ಅಮೆರಿಕದ ರಾಯಭಾರಿಯನ್ನಾಗಿ ಸರ್ಕಾರ ನಿಯೋಜಿಸಿದೆ. ನಿವೃತರಾಗಿರುವ ಹಿರಿಯ ಐಎಫ್‍ಎಸ್ ಅಧಿಕಾರಿ ಅರುಣ್ ಸಿಂಗ್ ಅವರ ಸ್ಥಾನವನ್ನು ಇವರು ತುಂಬಲಿದ್ದಾರೆ. ಸರ್ನಾ ಅವರು ಇತರೆ ರಾಜತಾಂತ್ರಿಕ ಅಧಿಕಾರಿಗಳಂತೆ ಪ್ರಭಾವಿ ಅಷ್ಟೆ ಅಲ್ಲ, ಅವರೊಳಗೊಬ್ಬ ವಕ್ತಾರ, ಲೇಖಕನೂ ಇದ್ದಾನೆ.

ಸರ್ನಾ ಶಿಕ್ಷಣ ಹಾಗೂ ಸೇವೆ[ಬದಲಾಯಿಸಿ]

1980ರಲ್ಲಿ ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್)ಗೆ ಸೇರ್ಪಡೆಗೊಂಡಾಗ ನನ್ನ ಮನಸ್ಸು ರಾಜಕೀಯಕ್ಕಿಂತಲೂ, ಸಾಹಿತ್ಯದ ಕಡೆಗೆ ಹೆಚ್ಚು ವಾಲಿತು. ಪುಸ್ತಕ ವಿಮರ್ಶೆ, ಲಘು ಬರಹಗಳನ್ನು ಬರೆಯುತ್ತ, ಅಪ್ರಜ್ಞಾಪೂರ್ವಕವಾಗಿ ವಿಮರ್ಶೆ ಮಾಡುವುದನ್ನೂ ಕರಗತಮಾಡಿಕೊಂಡೆ. ಎರಡು ವರ್ಷಗಳ ತರಬೇತಿ ನಂತರ ಮಾಸ್ಕೋದಲ್ಲಿ ಭಾರತೀಯ ರಾಯಭರ ಕಚೇರಿಯ ಮೂರುನೇ ಕಾರ್ಯದರ್ಶಿ(1982ಸೆ – 1983ಅ)ಯಾಗಿ ನಿಯೋಜನೆಗೊಂಡ ಬಳಿಕ, ಅಲ್ಲಿ ‘ದ ಮಾಸ್ಟರ್ ಪೀಸ್’ ಎಂಬ ಮೊದಲ ಸಣ್ಣಕಥೆಯನ್ನು ಬರೆದ. ಆಲಾನ್ ರೋಸ್ ಎಂಬ ಭಾರತಪ್ರೀಮಿ ಸಂಪಾದಕರು ಈ ಕಥೆಯನ್ನು ತಮ್ಮ ಲಂಡನ್ ಮ್ಯಾಗಜಿನ್‍ನಲ್ಲಿ ಪ್ರಕಟಿಸಿದೆ. ಅದು ಎಲ್ಲರ ಗಮನಸೆಳೆಯಿತ್ತಲ್ಲದೆ, ಬಿಬಿಸಿ ವಲ್ಡ್ ಸರ್ವಿಸ್ ರೇಡಿಯೋ ಅದನ್ನು ದ್ವನಿರೂಪದಲ್ಲಿ ಪ್ರಸಾರಮಾಡಿತು. ಮುಂದೆ ಕೆಲವು ಸಣ್ಣಕಥೆಗಳು, ಕಾದಂಬರಿ ಮುಂತಾದವನ್ನು ಬರೆದರು. ವಿವಿದ ಆಂಗ್ಲ ಪತ್ರಿಕೆಗಳಿಗೆ ಅಂಕಣಬರಹಗಾರನಾಗಿಯೂ ವಿದೇಶಾಂಗ ನೀತಿಗಳ ಬಗ್ಗೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬರೆದರು. ಹೀಗೆ ಅವರ ಬರವಣಿಗೆಗಳ ಕುರಿತು ಮಾಹಿತಿ ಮುಂದುವರಿಯುತ್ತದೆ. ತಂದೆಯೂ ಲೇಖಕರಾಗಿದ್ದದರಿಂದ ಬರಣಿಗೆ ಅವರಿಗೆ ವಂಶವಾಹಿಯಲೇ ಹರಿದಬಂದಿದೆ ಎನ್ನಬಹುದು.

ರಾಜತಾಂತ್ರಿಕ ಅಧಿಕಾರಿಯಾಗಿ ಇವರ ಕಾರ್ಯ[ಬದಲಾಯಿಸಿ]

ಅವರು ಮಹತ್ವದ ಹೊಣೆಗಾರಿಕೆಗಳನ್ನು ನಿಭಾಯಿಸಿದ್ದಾರೆ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ನೇಮಕವಾಗುವ ಎಂಟು ತಿಂಗಳ ಮುನ್ನವಷ್ಟೆ ಲಂಡನ್‍ನಲ್ಲಿ ಭಾರತದ ರಾಯಭಾರಿಯಾಗಿ ನಿಯೋಜಿತರಾಗಿದ್ದರು. ಆದಕ್ಕೂ ಮುನ್ನ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯದರ್ಶಿಯಾದ್ದರು. ಆ ಸಂದರ್ಭದಲ್ಲಿ 2015ರ ಅಕ್ಟೋಬರ್‍ನಲ್ಲಿ ನಡೆದ ಭಾರತ-ಆಪ್ರಿಕಾ ದೇಶಗಳ ಶೃಂಗ ಸಭೆಯನ್ನು ಯಶಸ್ವಿಯಾಗಿ ಆಯೋಜಿತರಾಗಿದ್ದರು. ಅದರಲ್ಲಿ 53 ಆಪ್ರಿಕನ್ ದೇಶದ ಪ್ರತಿನಿಧಿಗಳು ಭಾಗವಹಿಸಿದ್ದು ಇತಿಹಾಸ. ಅಷ್ಟೇ ಅಲ್ಲ, ಅತಿ ದೀರ್ಘ ಅವಧಿಗೆ ವಿದೇಶಾಂಗ ಸಚಿವಾಲಯದ ವಕ್ತಾರ (2002-2008)ರಾಗಿ ಕರ್ತವ್ಯ ನಿರ್ವಹಿಸಿದ ಕೀರ್ತಿಯೂ ಅವರದ್ದು. ಒಟ್ಟಾರೆ ವೃತ್ತಿ ಬದುಕಿನ ಕಡೆಗೆ ಗಮಸಿಸಿದರೆ, ಇಸ್ರೇಲ್‍ನಲ್ಲಿ ಭಾರತದ ರಾಯಭಾರಿಯಾಗಿ 2008ರ ನವೆಂಬರ್ 2012 ಆಗಸ್ಟ್ ವರೆಗೆ ಹಾಗೂ ವಾಷಿಂಗ್ಟನ್‍ನಲ್ಲಿ ಭಾರತದ ರಾಯಭಾರ ಕಛೇರಿಯಲ್ಲಿ ಮಿನಿಸ್ಟರ್/ ಕೌನ್ಸಲರ್ (1998ರ ಸೆ-2002 ಜೂ) ತೆಹ್ರಾನ್‍ನಲ್ಲಿ ಭಾರತದ ರಾಯಭಾರಿ ಕಛೇರಿಯಲ್ಲಿ ಮಿನಿಸ್ಟರ್/ ಕೌನ್ಸಲರ್ (1997ರಿಂದ 1998), ಜಿನೇವಾದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಯೋಜನೆಯ ಕೌನ್ಸಲರ್‍ರಾಗಿ (1994-1997ಮಾರ್ಚ್), ವಿದೇಶಾಂಗ ಸಚಿವಾಲಯದಲ್ಲಿ ವಿಶ್ವಸಂಸ್ಥೆಯ ಉಪಕಾರ್ಯದರ್ಶಿಯಾಗಿ (1993 ರಿಂದ 1994)ವಿದೇಶಾಂಗ ಸಚಿವಾಲಯದಲ್ಲಿ ಪ್ರೋಟೋಕಾಲ್ ವಿಭಾಗದ ಡೆಪ್ಯುಟಿ ಚೀಫ್ ಆಗಿ(1992-1993) ಮುಂತಾದ ಹೊಣೆಗಾರಿಕೆಗಳನ್ನು ಅವರು ನಿಭಾಯಿಸಿದ್ದಾರೆ. ಇದೀಗ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ದೊಡ್ಡ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಸರ್ನಾ. ಇವರ ಮುಂದೆ ಅನೇಕ ಸವಾಲುಗಳಿವೆ. ನವೆಂಬರ್‍ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ನಂತರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಇದೇ ಮಟ್ಟದಲ್ಲಿ ಕಾಯ್ದುಕೊಳ್ಳುವ ಬಹುದೊಡ್ಡ ಸವಾಲು ಇವರ ಮುಂದಿದೆ.

ಉಲ್ಲೇಖ[ಬದಲಾಯಿಸಿ]

  1. ಉಮೇಶ್ ಕುಮಾರ್ ಶಿಮ್ಲಡ್ಕ, ವ್ಯಕ್ತಿ ವಿಶೇಷ, ವಿಜಯವಾಣಿ ದಿನ ಪತ್ರಿಕೆ, ಸಂಚಿಕೆ: ೨೫.೦೯.೨೦೧೬.

[೧] [೨] [೩]

  1. http://www.thehindubusinessline.com/news/navtej-sarna-appointed-indias-new-envoy-to-us/article9136128.ece
  2. www.navtejsarna.com
  3. "ಆರ್ಕೈವ್ ನಕಲು". Archived from the original on 2016-04-19. Retrieved 2017-02-24.