ಧ್ರುವ ಸರ್ಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧ್ರುವ ಸರ್ಜಾ
Born
ಧ್ರುವ ಸರ್ಜಾ

೬ನೇ ಅಕ್ಟೋಬರ್ 1984
ಬೆಂಗಳೂರು, ಕರ್ನಾಟಕ
Nationalityಭಾರತೀಯ
Occupationನಟ
Years active೨೦೧೨-ವರ್ತಮಾನ ಕಾಲ
Relativesಅರ್ಜುನ್ ಸರ್ಜಾ (ಸೋದರಮಾವ )
ಶಕ್ತಿ ಪ್ರಸಾದ್ (ಅಜ್ಜ)
ಐಶ್ವರ್ಯ ಸರ್ಜಾ (ಸೋದರಸಂಬಂಧಿ)
Familyಚಿರಂಜೀವಿ ಸರ್ಜಾ (ಸಹೋದರ )

ಧ್ರುವ ಸರ್ಜಾ ರವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟ. ಅವರು ನಟ ಚಿರಂಜೀವಿ ಸರ್ಜಾರವರ ಸಹೋದರ ಹಾಗೂ ನಟ ಮತ್ತು ನಿರ್ದೇಶಕ ಅರ್ಜುನ್ ಸರ್ಜಾರವರ ಸೋದರಳಿಯ.

ವೈಯಕ್ತಿಕ ಜೀವನ[ಬದಲಾಯಿಸಿ]

ಧ್ರುವ ಸರ್ಜಾರವರು ೧೯೮೮ ರ ಅಕ್ಟೋಬರ್ ೬ ರಂದು ಬೆಂಗಳೂರಿನಲ್ಲಿ ಜನಿಸಿದರು. ಧ್ರುವರವರ ಸಹೋದರ ಚಿರಂಜೀವಿ ಸರ್ಜಾರವರು ಕೂಡ ಕನ್ನಡ ಚಲನಚಿತ್ರದ ನಟರಾಗಿದ್ದಾರೆ. ಅವರ ಚಿಕ್ಕಪ್ಪ ಅರ್ಜುನ್ ಸರ್ಜಾರವರು ದಕ್ಷಿಣ ಭಾರತೀಯ ನಟ ಮತ್ತು ಅವರ ಅಜ್ಜ ಶಕ್ತಿ ಪ್ರಸಾದ್ ಸಹ ಕನ್ನಡ ಚಿತ್ರಗಳಲ್ಲಿ ಒಬ್ಬ ನಟರಾಗಿದ್ದಾರೆ. ಧ್ರುವ ರವರು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ರೊಂದಿಗೆ ಡಿಸೆಂಬರ್ ೯ ೨೦೧೮ ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.[೧]ಅವರ ವಿವಾಹವು ನವೆಂಬರ್ ೨೪ ೨೦೧೯ ರಂದು ಬೆಂಗಳೂರಿನ ಸಂಸ್ಕೃತಿ ಬೃಂದಾವನ ಸಭಾಂಗಣದಲ್ಲಿ ನಡೆಯಿತು.

ವೃತ್ತಿ ಜೀವನ[ಬದಲಾಯಿಸಿ]

ಧ್ರುವ ಸರ್ಜಾರವರು ಯುವಕರಾಗಿದ್ದಾಗ, ತಮ್ಮ ಚಿಕ್ಕಪ್ಪ ಅರ್ಜುನ್ ಸರ್ಜಾ ರವರೊಂದಿಗೆ ಚಲನಚಿತ್ರಗಳನ್ನು ನೋಡುತ್ತಿದ್ದರು ಮತ್ತು ಅವರು ಚಲನಚಿತ್ರ ನಾಯಕರಾಗಬೇಕೆಂದು ಬಯಸಿದರು. ಅರ್ಜುನ್ ಸರ್ಜಾರವರು ಉತ್ತರಿಸುತ್ತಾ ಒಬ್ಬ ನಾಯಕನಾಗುವ ಮೊದಲು ಉತ್ತಮ ನಟನಾಗಬೇಕು ಮತ್ತು ತರಬೇತಿಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಧ್ರುವರವರು ತರಬೇತಿ ಪಡೆದುಕೊಂಡು ಅಭಿನಯಕ್ಕಾಗಿ ಸಿದ್ದರಾದರು. ಎ.ಪಿ.ಅರ್ಜುನ್ ಅವರ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ಆಡಿಷನ್ ಕರೆ ಬಗ್ಗೆ ಕೇಳಿದಾಗ,ಅವರು ಆಡಿಷನ್ ಗೆ ಹಾಜರಾಗಿ ಆಯ್ಕೆಯಾದರು. ಅವರು ಆಯ್ಕೆಯಾಗುವವರೆಗೂ ಅರ್ಜುನ್ ಸರ್ಜಾ ಅವರ ಸೋದರಳಿಯ ಎಂದು ಬಹಿರಂಗ ಪಡಿಸಲಿಲ್ಲ. ೨೦೧೨ ರಲ್ಲಿ ಬ್ಲಾಕ್ಬಸ್ಟರ್ ಚಿತ್ರ'ಅದ್ದೂರಿ'ಯಲ್ಲಿ ರಾಧಿಕಾ ಪಂಡಿತ್ ಅವರ ಎದುರು ಪುರುಷನಾಯಕನಾಗಿ ಅಭಿನಯಿಸಿದ್ದಾರೆ. ಅವರು ತಮ್ಮ ಮುಂದಿನ ಚಿತ್ರ'ಬಹದ್ದೂರ್'ಗಾಗಿ ೨೦೧೩ ರಲ್ಲಿ ಅವರ ಆತ್ಮೀಯ ಸ್ನೇಹಿತ ಚೇತನ್ ಕುಮಾರ್ ರೊಂದಿಗೆ ಸಹಿ ಹಾಕಿದರು. ಮತ್ತೆ ಅವರು ರಾಧಿಕಾ ಪಂಡಿತ್ ರವರ ಜೊತೆ ನಾಯಕನಟನಾಗಿ ಅಭಿನಯಿಸಿದರು. ಏಪ್ರಿಲ್ ೨೦೧೫ ರಲ್ಲಿ ಅವರು ತಮ್ಮ ಇನ್ನೊಂದು ಚಿತ್ರ'ಭರ್ಜರಿ'ಗಾಗಿ ಸಹಿ ಮಾಡಿದರು. ಇದು ಸೆಪ್ಟೆಂಬರ್ ೨೦೧೭ ರಲ್ಲಿ ಬಿಡುಗಡೆಯಾಯಿತು.'ಪೊಗರು' ಅವರ ಪ್ರಸ್ತುತ ಚಿತ್ರ.[೨]

ಚಲನಚಿತ್ರಗಳು[ಬದಲಾಯಿಸಿ]

ಧ್ರುವ ಸರ್ಜಾರವರು ೨೦೧೨ ರಲ್ಲಿ'ಅದ್ದೂರಿ'ಚಿತ್ರದಲ್ಲಿ ಅರ್ಜುನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಜೂನ್ ೧೫ ೨೦೧೨ ರಂದು ಬಿಡುಗಡೆಯಾಯಿತು.೨೦೧೪ ರಲ್ಲಿ'ಬಹದ್ದೂರ್'ಚಿತ್ರದಲ್ಲಿ ಅಶೋಕ್ ಪಾತ್ರವನ್ನು ನಿರ್ವಹಿಸಿದ್ದಾರೆ.ಈ ಚಿತ್ರ ಅಕ್ಟೋಬರ್ ೩ ೨೦೧೪ ರಂದು ಬಿಡುಗಡೆಯಾಯಿತು. ಇದನ್ನು 'ಶ್ರೀರಸ್ತು ಶುಭಮಸ್ತು'ಎಂದು ೨೦೧೬ ರಲ್ಲಿ ತೆಲುಗು ಭಾಷೆಯಲ್ಲಿ ಮರುನಿರ್ದೇಶಿಸಲಾಯಿತು. ೨೦೧೭ ರಲ್ಲಿ 'ಭರ್ಜರಿ'ಚಿತ್ರದಲ್ಲಿ ಸೂರ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ ೧೫ ೨೦೧೭ ರಂದು ಬಿಡುಗಡೆಯಾಯಿತು.[೩]

ಪ್ರಶಸ್ತಿಗಳು[ಬದಲಾಯಿಸಿ]

ಧ್ರುವ ಸರ್ಜಾರವರಿಗೆ ಅದ್ದೂರಿ ಚಿತ್ರಕ್ಕೆ ಅವರ ನಟನೆಯಿಂದಾಗಿ ಉದಯ ಚಲನಚಿತ್ರ ಪ್ರಶಸ್ತಿ, ಸೈಮಾ ಪ್ರಶಸ್ತಿ ಹಾಗೂ ಸುವರ್ಣ ಪ್ರಶಸ್ತಿ ಲಭಿಸಿದೆ. ಬಹದ್ದೂರ್ ಚಿತ್ರಕ್ಕಾಗಿ ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಭರ್ಜರಿ ಚಿತ್ರಕ್ಕಾಗಿ ಲವ್ ಲವಿಕೆ ರೀಡರ್ಸ್ ಚಾಯ್ಸ್ ಪ್ರಶಸ್ತಿ, ಸೈಮಾ ಪ್ರಶಸ್ತಿಗೆ ಕೂಡ ಆಯ್ಕೆಯಾಗಿದ್ದರು.[೪]

ಉಲ್ಲೇಖಗಳು[ಬದಲಾಯಿಸಿ]

  1. https://superstarsbio.com/bios/dhruva-sarja/
  2. https://www.filmibeat.com/celebs/dhruva-sarja/biography.html
  3. https://www.filmibeat.com/celebs/dhruva-sarja/filmography.html
  4. https://www.filmibeat.com/celebs/dhruva-sarja/awards.html