ಧರ್ಮಣ್ಣ ಕಡೂರು
ಧರ್ಮಣ್ಣ ಕಡೂರು | |
---|---|
ಜನನ | ಧರ್ಮಣ್ಣ ಕಡೂರು ೮ ಫೆಬ್ರವರಿ ೧೯೮೪ |
ವೃತ್ತಿ | ಚಲನಚಿತ್ರ ನಟ |
ಸಕ್ರಿಯ ವರ್ಷಗಳು | ೨೦೦೫ರಿಂದ ಪ್ರಸ್ತುತ |
"ಧರ್ಮಣ್ಣ ಕಡೂರು" ಓರ್ವ ಕನ್ನಡ ಚಲನಚಿತ್ರ ನಟರಾಗಿದ್ದು, ರಾಮಾ ರಾಮಾ ರೇ... ಎಂಬ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.[೧]
ಕೌಟುಂಬಿಕ ಹಾಗೂ ಶೈಕ್ಷಣಿಕ ಹಿನ್ನಲೆ
[ಬದಲಾಯಿಸಿ]೧೯೮೪ರ ಫೆಬ್ರವರಿ ಎಂಟನೇ ತಾರೀಕಿನಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ, ಹನುಮಣ್ಣ ಹಾಗೂ ಮಲ್ಲಮ್ಮ ದಂಪತಿಗಳಿಗೆ ಜನಿಸಿದರು. ಕುವೆಂಪು ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಹಾಗೂ ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರ ಪತ್ನಿಯ ಹೆಸರು ಕಾವ್ಯ. ಶಶಾಂಕ್ ಹಾಗೂ ಹಂಸಿಕಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ವೃತ್ತಿಜೀವನ
[ಬದಲಾಯಿಸಿ]ಕಡೂರಿನಲ್ಲಿ ಪದವಿ ಓದುತ್ತಿದ್ದ ಸಂದರ್ಭದಿಂದಲೂ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಬಳಿಕ ಯಶವಂತ ಸರದೇಶಪಾಂಡೆಯವರ ನಾಟಕ ತಂಡದಲ್ಲಿ ನಟರಾಗಿ ದೇಶ ಹಾಗೂ ವಿದೇಶಗಳಲ್ಲಿ ಪ್ರದರ್ಶನ ನೀಡಿದರು. ಈ ನಾಟಕಗಳಲ್ಲಿ ಪ್ರಮುಖವಾದವು,"ತೆರೆಗಳು" "ಒಂದು ಬೊಗಸೆ ನೀರು", "ಕಲ್ಕಿ", "ಜಲಗಾರ", "ಆಲ್ ದಿ ಬೆಸ್ಟ್", "ಸಹೀ ರೀ ಸಹೀ", "ಹಿಂಗಾದ್ರ ಡಾಟ್ ಕಾಮಿಡಿ", "ಒಂದ್ ಆಟ ಭಟ್ಟರದ್ದು" ಮುಂತಾದವು. ಬಳಿಕ "ಜಯನಗರ ಫೋರ್ತ್ ಬ್ಲಾಕ್"[೨] ಹಾಗೂ "ಐ ಲವ್ ಯು" ಎಂಬ ಕನ್ನಡ ಕಿರುಚಿತ್ರಗಳಲ್ಲಿ ನಟಿಸಿದರು. "ಐ ಲವ್ ಯು" ಕಿರುಚಿತ್ರವು ಫ್ರಾನ್ಸ್ ನ ಕಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು.
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಧರ್ಮಣ್ಣ ತಮ್ಮ ವೃತ್ತಿ ಜೀವನದಲ್ಲಿ ನಟಿಸಿರುವ ಚಲನಚಿತ್ರಗಳ ಪಟ್ಟಿ ಹೀಗಿದೆ[೩]:
ವರ್ಷ | ತಲೆಬರಹ | ಪಾತ್ರ | ಟಿಪ್ಪಣಿಗಳು | ನಿರ್ದೆಶಕರು |
---|---|---|---|---|
೨೦೧೬ | ರಾಮಾ ರಾಮಾ ರೆ... | ಧರ್ಮ | ಪೋಷಕ ನಟ,ಈ ಚಿತ್ರವು ಪ್ರಥಮ ನಿರ್ದೇಶನದ ಅತ್ಯತ್ತಮ ಚಿತ್ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದೆ | ಡಿ. ಸತ್ಯ ಪ್ರಕಾಶ್ |
೨೦೧೭ | ಮುಗುಳುನಗೆ[೪] | ಗೋಪಿ | ಹಾಸ್ಯ ನಟ | ಯೋಗರಾಜ ಭಟ್ |
೨೦೧೭ | ಅಂಜನೀ ಪುತ್ರ[೫] | ಎ. ಹರ್ಷ | ||
೨೦೧೮ | ಲಂಬೋದರ[೬] | ಕೆ. ಕೃಷ್ಣರಾಜ್ | ||
೨೦೧೯ | ಸ್ಟ್ರೈಕರ್ | ಪವನ್ ತ್ರಿವಿಕ್ರಮ್ | ||
೨೦೧೯ | ಪಡ್ಡೆಹುಲಿ | ಗುರು ದೇಶಪಾಂಡೆ | ||
೨೦೧೯ | ಅಳಿದು ಉಳಿದವರು | ಸಿದ್ಧೇಶ್ | ಅರವಿಂದ ಶಾಸ್ತ್ರಿ | |
೨೦೧೯ | ಕನ್ನಡ್ ಗೊತ್ತಿಲ್ಲ | ಮಂಜುನಾಥ್ | ಮಯೂರ ರಾಘವೇಂದ್ರ | |
೨೦೨೦ | ಕಾಣದಂತೆ ಮಾಯವಾದನು | ಧರ್ಮ | ರಾಜ್ ಪತ್ತಿಪಾಟಿ | |
೨೦೨೧ | ಇನ್ಸ್ಪೆಕ್ಟರ್ ವಿಕ್ರಮ್ | ನರಸಿಂಹ | ||
೨೦೨೧ | ಸಖತ್ | ಆಂಜನೇಯ | ಸಿಂಪಲ್ ಸುನಿ | |
೨೦೨೧ | ರಾಬರ್ಟ್ | ಮದನ | ತರುಣ್ ಸುದೀರ್ | |
೨೦೨೧ | ಮದಗಜ | ಮಹೇಶ್ ಕುಮಾರ್ | ||
೨೦೨೨ | ಬೈ ಟು ಲವ್ | ಹರಿ ಸಂತೋಷ್ | ||
೨೦೨೨ | ಮ್ಯಾನ್ ಆಫ್ ದಿ ಮ್ಯಾಚ್[೭] | ಧರ್ಮಣ್ಣ | ನಿಜ ಜೀವನದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ | ಡಿ. ಸತ್ಯ ಪ್ರಕಾಶ್ |
೨೦೨೫ | ಗ್ರಾಮಾಯಾಣ | ಬಿಡುಗಡೆಯಾಗಬೇಕಾಗಿದೆ | ದೇವನೂರು ಚಂದ್ರು | |
೨೦೨೩ | ಐ ಯಾಮ್ ಪ್ರಗ್ನೆಂಟ್[೮] | ಬಿಡುಗಡೆಯಾಗಬೇಕಾಗಿದೆ | ಸಂಜಯ್ | |
೨೦೨೨ | ಅಮರ ಪ್ರೇಮಿ ಅರುಣ್ | ಬಿಡುಗಡೆಯಾಗಬೇಕಾಗಿದೆ | ಪ್ರವೀಣ್ ಕುಮಾರ್ | |
೨೦೨೨ | ಶುಗರ್ ಲೆಸ್ | ಚಿನ್ನಸ್ವಾಮಿ | ಶಶಿಧರ್ ಕೆ ಎಂ | |
೨೦೨೨ | ಗಾಜನೂರು[೯] | ಚಿತ್ರೀಕರಣ ಹಂತದಲ್ಲಿದೆ | ಕೀರ್ತಿ | |
೨೦೨೩ | ಗರಡಿ[೧೦] | ಯೋಗರಾಜ್ ಭಟ್ | ||
೨೦೨೪ | ಉಪಾಧ್ಯಕ್ಷ | ಚಿತ್ರೀಕರಣ ಹಂತದಲ್ಲಿದೆ | ಅನಿಲ್ ಕುಮಾರ್ | |
೨೦೨೨ | ಹ್ಯಾಪಿಲಿ ಮ್ಯಾರಿಡ್ | ಚಿತ್ರೀಕರಣ ಹಂತದಲ್ಲಿದೆ | ಸಾಬು ಅಲೋಶಿಯಸ್ | |
೨೦೨೩ | ಕ್ರಾಂತಿ | ವಿ.ಹರಿಕೃಷ್ಣ | ||
೨೦೨೨ | ಯದುವೀರ | ಚಿತ್ರೀಕರಣ ಹಂತದಲ್ಲಿದೆ | ಮಂಜು ಅಥರ್ವ | |
೨೦೨೨ | ತ್ರೀವೇದಂ | ಚಿತ್ರೀಕರಣ ಹಂತದಲ್ಲಿದೆ | ಅರುಣ್ ಜಯರಾಂ |
,
ಉಲ್ಲೇಖಗಳು
[ಬದಲಾಯಿಸಿ]- ↑ "ಫಿಲ್ಮೀಬೀಟ್ ಜಾಲತಾಣದಲ್ಲಿರುವ ಮಾಹಿತಿ".
- ↑ ""ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆಯಲ್ಲಿ ಪ್ರಕಟವಾದ ಲೇಖನ".
- ↑ ""ಟೈಮ್ಸ್ ಆಫ್ ಇಂಡಿಯಾ" ಲೇಖನ".
- ↑ ""ಝೀ ಫೈವ್" ಜಾಲತಾಣದ ಮಾಹಿತಿ".
- ↑ ""ವಿಜಯ ಕರ್ನಾಟಕ" :ಅಂಜನಿ ಪುತ್ರದಲ್ಲಿ ಧರ್ಮಣ್ಣ ಕಮಾಲ್". ವಿಜಯ ಕರ್ನಾಟಕ.
- ↑ ""ಟೈಮ್ಸ್ ಆಫ್ ಇಂಡಿಯಾ" ಪತ್ರಿಕೆಯಲ್ಲಿ ಪ್ರಕಟವಾದ ಲೇಖನ".
- ↑ ""ದ ಹಿಂದೂ" ಪತ್ರಿಕೆಯ ವರದಿ".
- ↑ ""ಫಿಲ್ಮ್ ಬೀಟ್" ವರದಿ".
- ↑ "Dr Rajkumar's birthplace Gajanur is the title of this new film". "ಟೈಮ್ಸ್ ಆಫ್ ಇಂಡಿಯಾ".
- ↑ "ಕನ್ನಡಪ್ರಭ:ಯೋಗರಾಜಭಟ್ಟರ 'ಗರಡಿ' ಸೇರಿದ ಧರ್ಮಣ್ಣ ಕಡೂರು". Archived from the original on 2022-03-18. Retrieved 2022-06-02.