ದೇವೇಂದ್ರ ಜಝಾರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವೇಂದ್ರ ಜಝಾರಿಯಾ
ದೇವೇಂದ್ರ ಜಝಾರಿಯಾ
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ(Indian)
ಜನನ (1981-06-10) ೧೦ ಜೂನ್ ೧೯೮೧ (ವಯಸ್ಸು ೪೨)
Sport
ದೇಶ ಭಾರತ
ಕ್ರೀಡೆAthletics/ಅತ್ಲೆಟಿಕ್ಸ್,
ಸ್ಪರ್ಧೆಗಳು(ಗಳು)F46 Javelin/ಜಾವಲಿನ್ ಎಸೆತ,
ತರಬೇತುದಾರರುR.D.Singh/ಆರ್.ಡಿ.ಸಿಂಗ್,
Achievements and titles
ಪ್ಯಾರಲಂಪಿಕ್ ಫ಼ೈನಲ್‌ಗಳು2004

ದೇವೇಂದ್ರಗೆ ಜಾವೆಲಿನ್ ಎಸೆತದಲ್ಲಿ ಚಿನ್ನ[ಬದಲಾಯಿಸಿ]

  • ದೇವೇಂದ್ರ ಜಝಾರಿಯಾ (ಜೂನ್ 1981 10 ರಂದು ಜನಿಸಿದರು) ಒಬ್ಬ ಭಾರತೀಯ ಪ್ಯಾರಾಲಿಂಪಿಕ್ ಜಾವೆಲಿನ್ ಎಸೆತಗಾರ (ಎಫ್46ವಿಭಾಗ) ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ, ಅವರ ಮೊದಲ ಚಿನ್ನ ಅಥೆನ್ಸ್ನಲ್ಲಿ 2004 ಬೇಸಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ದಲ್ಲಿ ಬಂತು. ಪ್ಯಾರಾಲಿಂಪಿಕ್ಸ್ನಲ್ಲಿ ಎರಡನೇ ಚಿನ್ನದ ಪದಕ ಪಡೆದ ತಮ್ಮ ದೇಶದ ಕ್ರೀಡಾಪಟು. ರಿಯೊ ಡಿ ಜನೈರೊ 2016 ಬೇಸಿಗೆ ಪ್ಯಾರಾಲಿಂಪಿಕ್ಸ್ನಲ್ಲಿ, ಅವರು ಇದೇ ಕ್ರೀಡೆಯಲ್ಲಿ ಎರಡನೇ ಚಿನ್ನದ ಪದಕ ಪಡೆದು,, ತನ್ನ ಹಿಂದಿನ ದಾಖಲೆಯನ್ನು ಉತ್ತಮ ಗೊಲಿಸಿದರು.. ದೇವೇಂದ್ರ ಪ್ರಸ್ತುತ ಗೊಸ್ಪೊಟ್ರ್ಸs ಫೌಂಡೇಶನ್ ಮೂಲಕ [3] ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮಕ್ಕೆ ಬೆಂಬಲ ಪಡೆದಿದ್ದಾರೆ. [೧]
  • ಪೋಟೊ:[[೧]]
  • ಫೋಟೊ & ವಿಡಿಯೊ:[[೨]]

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

  • ದೇವೇಂದ್ರ ಜಝಾರಿಯಾ ರಾಜಸ್ಥಾನದ ಚೂರೂ ಜಿಲ್ಲೆಯಲ್ಲಿ 1981 ರಲ್ಲಿ ಜನಿಸಿದರು. ಎಂಟನೇ ವಯಸ್ಸಿನಲ್ಲಿ, ಒಂದು ಮರ ಹತ್ತಲು ಹೋದಾಗ ಅಲ್ಲಿ ಸಜೀವ ವಿದ್ಯುತ್ ಕೇಬಲ್ ಮುಟ್ಟಿದರು. ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಟ್ಟರು; ಆದರೆ ವೈದ್ಯರು ಬದುಕಿ ಉಳಿಯಲು ಅವರ ಎಡಗೈ ಕತ್ತರಿಸಿ ತೆಗೆಯಲು ಒತ್ತಾಯಿಸಿದರು. 1997 ರಲ್ಲಿ ಅವರು ಶಾಲೆಯ ಕ್ರೀಡಾ ದಿನಾಚರಣೆಯ ಸ್ಪರ್ಧೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ಆರ್.ಡಿ. ಸಿಂಗ್ ಅವರು ಇವರ ಪ್ರತಭೆಯನ್ನು ಗುರುತಿಸಿದರು. ಆ ಹಂತದಿಂದ ಅವರು ಸಿಂಗ್ ರಿಂದ ತರಬೇತಿಪಡೆದರು. ಅವರು 2004 ಪ್ಯಾರಾಲಿಂಪಿಕ್ ಚಿನ್ನದ ಪದಕ ಪಡೆದ ಕೀರ್ತಿಯನ್ನು ತಮ್ಮ ವೈಯಕ್ತಿಕ ತರಬೇತುದಾರ ಆರ್.ಡಿ. ಸಿಂಗ್ ಗೆ ನೀಡಿದರು: "ಅವರು ನನಗೆ ಬಹಳಷ್ಟು ಸಲಹೆ ನೀಡಿದ್ದಾರೆ ಮತ್ತು ತರಬೇತಿ ಸಮಯದಲ್ಲಿ ನನಗೆ ಬಹಳ ಸಹಾಯ ಮಾಡಿದ್ದಾರೆ" ಎಂದರು.[೨]

ವೃತ್ತಿಜೀವನ[ಬದಲಾಯಿಸಿ]

  • 2002 ರಲ್ಲಿ ದೇವೇಂದ್ರ ಕೊರಿಯಾದ 8 ನೇÉಫ್.ಇಎಸ್.ಪಿಐಸಿ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2004 ರಲ್ಲಿ ದೇವೇಂದ್ರ ಅಥೆನ್ಸ್ ಬೇಸಿಗೆಯ ಪ್ಯಾರಾಲಿಂಪಿಕ್ಸ್ನಗೇಮ್ಸ್ ಗೆ ಭಾರತದಿಂದ ಅವರ ಮೊಟ್ಟಮೊದಲ ಅರ್ಹತೆ ಸಿಕ್ಕಿತು. ಅವರು ಹಳೆಯ 59.77 ಮೀ.ಎಸೆತದ ದಾಖಲೆ ಮೀರಿ 62.15m ದೂರದ ಹೊಸ ವಿಶ್ವದಾಖಲೆಯನ್ನು ಮಾಡಿದರು. ಈ ಎಸೆತ ಅವರಿಗೆ ಚಿನ್ನದ ಪದಕ ನೀಡಿತು. ಅವರು ತಮ್ಮ ದೇಶದಲ್ಲಿ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕಪಡೆದ ಎರಡನೇ ಆಟಗಾರ.[(ಭಾರತದ ಪ್ರಥಮ ಚಿನ್ನದ ಪದಕ ಮುರಲಿಕಾಂತ ಪೇಟ್ಕರ್ ಅವರಿಗೆ ಬಂದಿದೆ).[೩]
* ಇತರ ವಿವರ
  • ಹೆಸರು=ದೇವೇಂದ್ರ ಜಝಾರಿಯಾ
  • ರಾಜ್ಯ=ರಾಜಸ್ಥಾನ
  • ಕ್ರೀಡೆ= ಅಥ್ಲೆಟಿಕ್ಸ್;ಜಾವಲಿನ್ ಎಸೆತ,
  • ರಾಷ್ಟ್ರ= ಭಾರತ
  • ಲಿಂಗ= ಪುರುಷ
  • ವಯಸ್ಸು= 35
  • ಜನನ= ಚುರು, ಭಾರತ
  • ಎತ್ತರ= 1.86 ಮೀ
  • ತೂಕ= 85 ಕೆಜಿ
  • ಪತ್ನಿ=ಮಾಂಜು (ಮಂಜು)
  • ಮಕ್ಕಳು=ಎರಡು:ಜಿಯಾ ಮತ್ತು ಕವ್ಯಾನ್
.

ವೈಯಕ್ತಿಕ ಜೀವನ[ಬದಲಾಯಿಸಿ]

  • ಮಾಜಿ ಭಾರತೀಯ ರೈಲ್ವೆ ಉದ್ಯೋಗಿ, ಜಝಾರಿಯಾ ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗಿ. ಅವರ ಪತ್ನಿ, ಮಂಜು, ಮಾಜಿ ರಾಷ್ಟ್ರೀಯ-ಮಟ್ಟದಲ್ಲಿ ಕಬಡ್ಡಿ ಆಟಗಾರಳು; ಒಬ್ಬ ಪುತ್ರಿ ಜೀಯಾ (ಆರು ವರ್ಷ) ಮತ್ತು ಮಗ ಕಾವ್ಯನ್(ಎರಡು ವರ್ಷ).

ಪ್ರಶಸ್ತಿಗಳು ಮತ್ತು ಮಾನ್ಯತೆ[ಬದಲಾಯಿಸಿ]

  • ಎಫ್ಐಸಿಸಿಐ ಪ್ಯಾರಾ-ಕ್ರೀಡಾಪಟು (2014 ವರ್ಷದ)
  • ಪದ್ಮಶ್ರೀ. (2012; ಮೊದಲ ಪ್ಯಾರಾಲಿಂಪಿಯನ್; ಆದ್ದರಿಂದ ಗೌರವಾನ್ವಿತರಾದ)
  • ಅರ್ಜುನ ಪ್ರಶಸ್ತಿ (2004)[೪]

ನೋಡಿ[ಬದಲಾಯಿಸಿ]

  1. ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ
  2. ೨೦೦೮ ಒಲಂಪಿಕ್ ಕ್ರೀಡಾಕೂಟ
  3. ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
  4. ರಿಯೊ ಒಲಿಂಪಿಕ್ಸ್ 2016
  5. ಲಂಡನ್ ಬೇಸಿಗೆ ಒಲಂಪಿಕ್ಸ್ 2012
  6. ಒಲಿಂಪಿಕ್ಸ್‌ನಲ್ಲಿ ಭಾರತ=ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)
  7. ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತ
  8. ೨೦೧೬ ರ ಬೇಸಿಗೆ ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತ

ಉಲ್ಲೇಖ[ಬದಲಾಯಿಸಿ]

  1. Devendra Jhajharia breaks World Record to win Gold at Paralympics
  2. gosportsfoundation
  3. india-sports-awards-for-2014
  4. ""Padma Awards"" (PDF). Archived from the original (PDF) on 2015-10-15. Retrieved 2016-09-14.