ದೇವರಾಜ್
ಕನ್ನಡದ ಅಭಿಜಾತ ಖಳನಟ ದೇವರಾಜ್ 1960ನೇ ಇಸವಿ ಸೆಪ್ಟಂಬರ್ 20ರಂದು ಬೆಂಗಳೂರಿನ ಲಿಂಗರಾಜಪುರಂನಲ್ಲಿ ಜನಿಸಿದರು. ಇವರು ರಂಗಭೂಮಿಯ ನಂಟಿನಿಂದ ಚಿತ್ರರಂಗಕ್ಕೆ ಬಂದ ಕಲಾವಿದ. ಪ್ರಾರಂಭದಲ್ಲಿ ಬಿ ಜಯಶ್ರೀ ಅವರ "ಸ್ಪಂದನ" ರಂಗ ತಂಡದಲ್ಲಿದ್ದು ಬಳಿಕ ಶಂಕರನಾಗ್ ಅವರ "ಸಂಕೇತ್" ಕಲಾತಂಡದ ಸದಸ್ಯರಾದರು. ಎಚ್‌ಎಮ್‌ಟಿಯಲ್ಲಿ ಉದ್ಯೋಗಿಯಾಗಿದ್ದ ದೇವರಾಜ್ "ತ್ರಿಶೂಲ" ಚಿತ್ರದ ಮೂಲಕ ಖಳನಟರಾಗಿ ಬೆಳ್ಳಿ ಪರದೆಗೆ ಎಂಟ್ರಿ ಪಡೆದರು. ಆದರೆ ದೇವರಾಜ್ ನಟನೆಯಲ್ಲಿ ಬಿಡುಗಡೆಯಾದ ಪ್ರಥಮ ಚಿತ್ರ "27 ಮಾವಳ್ಳಿ ಸರ್ಕಲ್". ಇದು 1986ರಲ್ಲಿ ತೆರೆಗೆ ಬಂತು.
ತನ್ನ ವಿಶಿಷ್ಟ ಹಾವ-ಭಾವ, ತೆರೆಯ ಮೇಲೆ ಖಳಪಾತ್ರಗಳಿಗೆ ಮೆರುಗು ನೀಡುವ ವಿಕೃತ ನಗು, ಅದಕ್ಕೆ ಸರಿಯಾಗಿ ಭೀತಿ ಹುಟ್ಟಿಸುವ ಮುಖಚರ್ಯೆ ಇವೆಲ್ಲದರ ಮೂಲಕ ಮೇರು ಖಳನಟ ವಜ್ರಮುನಿಯವರ ಗೆಟಪ್‌ಗೆ ಹೊಂದಿಕೆಯಾಗುತ್ತಿದ್ದ ದೇವರಾಜ್ 1980ರ ದಶಕದಲ್ಲಿ ಕನ್ನಡ ಚಿತ್ರರಸಿಕರ ಪಾಲಿನ ನೆಚ್ಚಿನ ಖಳನಟರಾದರು. ನಂತರ 1989 ರಲ್ಲಿ ಖಳನಟನ ಪಾತ್ರದಿಂದ ನಾಯಕ ನಟನ ಪಾತ್ರಕ್ಕೆ ಬಡ್ತಿ ಸಿಕ್ಕಿತು. ಲಾಕಪಡೇತ್, ಇಂದ್ರಜೀತ್ ಇಮೇಜ್ ತಂದುಕೊಟ್ಟಿತು ಆದರೆ ಪೂರ್ವಾದದಲ್ಲಿ (1989) ರಲ್ಲಿ 'ಹತ್ಯಾಕಾಂಡ' ಎಂಬ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ನಾಯಕ ನಟನ ಪಾತ್ರ ಮಾಡಿದ್ದರು.
ದೇವರಾಜ್ ಆರಂಭದಲ್ಲಿ ಖಳಪಾತ್ರಗಳಲ್ಲಿ ಮಿಂಚತೊಡಗಿದರೆ ಜೊತೆಜೊತೆಯಲ್ಲಿ ಪೊಲೀಸ್ ಪಾತ್ರಗಳೂ ಅವರನ್ನು ಹುಡುಕಿಕೊಂಡು ಬರಲಾರಂಭಿಸಿದವು. ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರಗಳು ದೇವರಾಜ್ ಅವರಿಗೆ ಖಾಯಂ ಆಗತೊಡಗಿದ ಉದಾಹರಣೆಗಳೂ ಸಿಗುತ್ತವೆ.
ಲಾಕಪ್‌ಡೆತ್, ಗೋಲಿಬಾರ್, ಗ್ಯಾಂಗ್ ಲೀಡರ್, ಸರ್ಕಲ್ ಇನ್‌ಸ್ಪೆಕ್ಟರ್ ಇವಿತ್ಯಾದಿಗಳು ದೇವರಾಜ್ ಅವರಿಗೆ ಹೆಸರು ತಂದುಕೊಟ್ಟ ಮತ್ತು ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಯಾಗಲು ಕಾರಣವಾದ ಕೆಲವು ಪ್ರಮುಖ ಚಿತ್ರಗಳಾಗಿವೆ.
ಕಾಡುಗಳ್ಳ ವೀರಪ್ಪನ್ ಕುರಿತಾಗಿ ಬಂದ "ವೀರಪ್ಪನ್" ಚಿತ್ರ ದೇವರಾಜ್ ಅವರ ಚಿತ್ರ ಜೀವನದಲ್ಲಿ ಪ್ರಮುಖವಾದುದಾಗಿದೆ. ದಂತಚೋರ ಜೀವಂತವಾಗಿದ್ದಾಗಲೇ ತೆರೆಕಂಡ ಈ ಚಿತ್ರ ಆ ದಿನಗಳಲ್ಲಿ ಬಹಳ ಸುದ್ದಿಗೆ ಕಾರಣವಾಗಿತ್ತು. ವೀರಪ್ಪನ್ ಚಿತ್ರದಲ್ಲಿನ ನಟನೆಗಾಗಿ ದೇವರಾಜ್ ಆ ಸಾಲಿನ ಉತ್ತಮ ನಟ ರಾಜ್ಯಪ್ರಶಸ್ತಿಗೂ ಪಾತ್ರರಾಗಿದ್ದರು. ದೇವರಾಜ್ ಅವರೊಳಗಿದ್ದ ನಟನಾ ಪ್ರತಿಭೆಯನ್ನು ಇನ್ನಷ್ಟು ಒರೆಗೆ ಹಚ್ಚಿದ ಚಿತ್ರಗಳೆಂದರೆ, ಕಂಬಾರಪಳ್ಳಿ, ಹುಲಿಯಾ, ಬಂಗಾರದ ಮನೆ, ಉತ್ಕರ್ಷ ಇತ್ಯಾದಿ.
2000ನೇ ಇಸವಿ ಬಳಿಕ ದೇವರಾಜ್ ಹೆಚ್ಚು ಹೆಚ್ಚು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಇದೇ ಸಮಯದಲ್ಲಿ ಅವರು ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಡಾ. ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ದೇವರಾಜ್ ಅವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು.ಹುಲಿಯಾ ಚಿತ್ರದಲ್ಲಿ ದೇವರಾಜ್ ಅವರ ಅಭಿನಯ ಕಂಡು ಸ್ವತಃ ವಿಷ್ಣುವರ್ಧನ್ ಅಚ್ಚರಿಪಟ್ಟು ಬೆನ್ನುತಟ್ಟಿದ್ದನ್ನು ಇಂದಿಗೂ ದೇವು ನೆನಪಿಸಿಕೊಳ್ಳುತ್ತಾರೆ.
ಇದೀಗ ಅವರ ಪುತ್ರ ಪ್ರಜ್ವಲ್ ದೇವರಾಜ್ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ.
ಕನ್ನಡದ ಅಭಿಜಾತ ಕಲಾವಿದ, ನಮ್ಮೆಲ್ಲರ ಪಾಲಿನ ಪ್ರೀತಿಯ ದೇವು ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಉನ್ನತಕ್ಕೇರಲಿ ಎಂಬುದಾಗಿ ಶುಭ ಹಾರೈಕೆ.
ನಟಿಸಿದ ಚಿತ್ರಗಳು
[ಬದಲಾಯಿಸಿ]- Sundaranga Jaana (2016) ಸುಂದರಾಂಗ ಜಾಣ
- Santhu Straight Forward (2016) ಸಂತು ಸ್ಟ್ರೇಟ್ ಫಾರ್ವರ್ಡ್
- Mukunda Murari (2016) ಮುಕುಂದ ಮುರಾರಿ
- Kotigobba 2 (2016) ಕೋಟಿಗೊಬ್ಬ 2
- Preethiyalli Sahaja (2016) ಪ್ರೀತಿಯಲ್ಲಿ ಸಹಜ
- Nithya Jothe Sathya (2016) ನಿತ್ಯ ಜೊತೆ ಸತ್ಯ
- Run Anthony (2016) ರನ್ ಆಂಟೋನಿ
- Karvva (2016) ಕರ್ವ
- Ranna (2015) ರನ್ನ
- Arjuna (2015) ಅರ್ಜುನ
- Cauvery Nagara (2013) ಕಾವೇರಿ ನಗರ
- (2012) ದಶಮುಖ
- Jarasandha (2011) ಜರಾಸಂಧ
- Aacharya (2011) ಆಚಾರ್ಯ
- Aidondla Aidu (2011) ಐದೊಂದ್ಲ ಐದು
- Panchamrutha (2011) ಪಂಚಾಮೃತ
- Mr. Duplicate (2011) ಮಿಸ್ಟರ್ ಡೂಪ್ಲಿಕೇಟ್
- Chinnada Thali (2011) ಚಿನ್ನದ ತಾಳಿ
- Jolly Boy (2011) ಜಾಲಿ ಬಾಯ್
- Deadly-2 (2010) ಡೆಡ್ಲಿ-2
- Gang Leader (2010) ಗ್ಯಾಂಗ್ ಲೀಡರ್
- Gandede (2010) ಗಂಡೆದೆ
- Meshtru (2010) ಮೇಷ್ಟ್ರು
- Aparadhi (2010) ಅಪರಾಧಿ
- Porki (2010) ಪೊರ್ಕಿ
- School Master (2010) ಸ್ಕೂಲ್ ಮಾಸ್ಟರ್
- Anishchitha (2010) ಅನಿಶ್ಚಿತ
- IPC Section 300 (2009) ಐಪಿಸಿ ಸೆಕ್ಷನ್ 300
- Ee Shathamanada Veera Madakari (2009) ಈ ಶತಮಾನದ ವೀರ ಮದಕರಿ
- Nanda Deepa (2008) ನಂದಾ ದೀಪ
- Prachanda Ravana (2008) ಪ್ರಚಂಡ ರಾವಣ
- Gaja (2008) ಗಜ
- Bhanamathi (2007) ಭಾನಾಮತಿ
- Kallarali Hoovagi (2006) ಕಲ್ಲರಳಿ ಹೂವಾಗಿ
- Pandavaru (2006) ಪಾಂಡವರು
- Chellata (2006) ಚೆಲ್ಲಾಟ
- Nidhi (2006) ನಿಧಿ
- Deadly Soma (2005) ಡೆಡ್ಲಿ ಸೋಮ
- Jyeshta (2004) ಜ್ಯೇಷ್ಟ
- Mourya (2004) ಮೌರ್ಯ
- Gowdru (2004) ಗೌಡ್ರು
- Crime Story (2004) ಕ್ರೈಂ ಸ್ಟೋರಿ
- Devasura (2004) ದೇವಾಸುರ
- Avale Nanna Gelathi (2004) ಅವಳೇ ನನ್ನ ಗೆಳತಿ
- Khaki (2003) ಖಾಕಿ
- Inspector Jayasimha (2003) ಇನ್ಸ್ಪಕ್ಟರ್ ಜಯಸಿಂಹ
- Market Raja (2003) ಮಾರ್ಕೆಟ್ ರಾಜಾ
- Thalwar (2003) ತಲ್ವಾರ್
- Prathidhwani (2003) ಪ್ರತಿಧ್ವನಿ
- Tada Khaidi (2003) ಟಾಡಾ ಕೈದಿ
- Lankesh Pathrike (2003) ಲಂಕೇಶ್ ಪತ್ರಿಕೆ
- Yardo Duddu Yellammana Jathre (2003) ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ
- Ai Nan Bheeshma Kano (2003) ಏಯ್ ನಾನ್ ಭೀಷ್ಮ ಕಣೋ
- Kambala Halli (2002) ಕಂಬಾಲ ಹಳ್ಳಿ
- Dharma Devathe (2002) ಧರ್ಮ ದೇವತೆ
- Halu Sakkare (2001) ಹಾಲು ಸಕ್ಕರೆ
- Neelambari (2001) ನೀಲಾಂಬರಿ
- Kotigobba (2001) ಕೋಟಿಗೊಬ್ಬ
- Sathyameva Jayathe (2001) ಸತ್ಯಮೇವ ಜಯತೆ
- Kanoonu (2001) ಕಾನೂನು
- Jenu Goodu (2001) ಜೇನು ಗೂಡು
- Prema Rajya (2001) ಪ್ರೇಮ ರಾಜ್ಯ
- Mathadana (2001) ಮತದಾನ
- Naxalite (2000) ನಕ್ಸಲೈಟ್
- Bannada Hejje (2000) ಬಣ್ಣದ ಹೆಜ್ಜೆ
- Billa Ranga (2000) ಬಿಲ್ಲಾ ರಂಗಾ
- Bhoomi (2000) ಭೂಮಿ
- Asthra (2000) ಅಸ್ತ್ರ
- Dandanayaka (2000) ದಂಡನಾಯಕ
- Minchu (2000) ಮಿಂಚು
- Om Shakthi (1999) ಓಂ ಶಕ್ತಿ
- Durga Shakthi (1999) ದುರ್ಗಾ ಶಕ್ತಿ
- Aaryabhata (1999) ಆರ್ಯಭಟ
- Garuda (1999) ಗರುಡ
- Habba (1999) ಹಬ್ಬ
- Mr. X (1999) ಮಿಸ್ಟರ್ ಎಕ್ಸ್
- Tharikere Yerimele (1999) ತರೀಕೆರೆ ಏರಿಮೇಲೆ
- Karnataka Police (1998) ಕರ್ನಾಟಕ ಪೊಲೀಸ್
- Dayadi (1998) ದಾಯಾದಿ
- Agni Sakshi (1998) ಅಗ್ನಿ ಸಾಕ್ಷಿ
- Jai Hind (1998) ಜೈ ಹಿಂದ್
- High Command (1998) ಹೈಕಮಾಂಡ್
- ಮಾನವ 2022 (1997)
- ಸಾಂಗ್ಲಿಯಾನ ಭಾಗ-3 (1997)
- Yuddha (1997) ಯುದ್ಧ
- Gandede Bhaira (1997) ಗಂಡೆದೆ ಭೈರ
- Choo Baana (1997) ಛೂ ಬಾಣ
- Kempu Mugilu (1996) ಕೆಂಪು ಮುಗಿಲು
- Bangarada Mane (1996) ಬಂಗಾರದ ಮನೆ
- Simhadri (1996) ಸಿಂಹಾದ್ರಿ
- Huliya (1996) ಹುಲಿಯಾ
- Circle Inspector (1996) ಸರ್ಕಲ್ ಇನ್ಸ್ಪೆಕ್ಟರ್
- Veera Bhadra (1996) ವೀರಭದ್ರ
- Emergency (1995) ಎಮರ್ಜೆನ್ಸಿ
- Revenge (1995) ರಿವೇಂಜ್
- Police Power (1995) ಪೊಲೀಸ್ ಪವರ್
- Samara (1995) ಸಮರ
- State Rowdy (1995) ಸ್ಟೇಟ್ ರೌಡಿ
- Mother India (1995) ಮದರ್ ಇಂಡಿಯಾ
- Killer Diary (1995) ಕಿಲ್ಲರ್ ಡೈರಿ
- Kidnap (1995) ಕಿಡ್ನಾಪ್
- Nyayakkagi Saval (1994) ನ್ಯಾಯಕ್ಕಾಗಿ ಸವಾಲ್
- Indian (1994) ಇಂಡಿಯನ್
- Hettha Karulu (1994) ಹೆತ್ತ ಕರುಳು
- Curfew (1994) ಕರ್ಫ್ಯೂ
- Vijaya Kankana (1994) ವಿಜಯ ಕಂಕಣ
- Lockup Death (1994) ಲಾಕಪ್ ಡೆತ್
- Mayor Prabhakar (1994) ಮೇಯರ್ ಪ್ರಭಾಕರ್
- Looti Gang (1994) ಲೂಟಿ ಗ್ಯಾಂಗ್
- Gold Medal (1994) ಗೋಲ್ಡ್ ಮೆಡಲ್
- Adhipathi (1994) ಅಧಿಪತಿ
- Time Bomb (1994) ಟೈಂ ಬಾಂಬ್
- Hosa Love Story (1993) ಹೊಸ ಲವ್ ಸ್ಟೋರಿ
- Jailer Jagannath (1993) ಜೈಲರ್ ಜಗನ್ನಾಥ್
- Mojina Maduve (1993) ಮೋಜಿನ ಮದುವೆ
- Vijaya Kranthi (1993) ವಿಜಯ ಕ್ರಾಂತಿ
- Golibar (1993) ಗೋಲಿಬಾರ್
- Abhijith (1993) ಆಭಿಜಿತ್
- Sidukabeda Singari (1993) ಸಿಡುಕಬೇಡ ಸಿಂಗಾರಿ
- Rajakeeya (1993) ರಾಜಕೀಯ
- Bahaddur Hennu (1993) ಬಹದ್ದೂರ್ ಹೆಣ್ಣು
- Gharshane (1992) ಘರ್ಷಣೆ
- Prajegalu Prabhugalu (1992) ಪ್ರಜೆಗಳು ಪ್ರಭುಗಳು
- Roshagara (1992) ರೋಷಗಾರ
- Bhale Keshava (1992) ಭಲೇ ಕೇಶವ
- Police File (1992) ಪೊಲೀಸ್ ಫೈಲ್
- Nanna Thangi (1992) ನನ್ನ ತಂಗಿ
- Goonda Rajya (1992) ಗೂಂಡಾ ರಾಜ್ಯ
- Pruthviraj (1992) ಪೃಥ್ವಿರಾಜ್
- Chithralekha (1992) ಚಿತ್ರಲೇಖ
- Nagini (1991) ನಾಗಿಣಿ
- Mathru Bhagya (1991) ಮಾತೃ ಭಾಗ್ಯ
- Gruha Pravesha (1991) ಗೃಹ ಪ್ರವೇಶ
- Veera Dheera (1991) ವೀರ ಧೀರ
- Shwethagni (1991) ಶ್ವೇತಾಗ್ನಿ
- Aranyadalli Abhimanyu (1991) ಅರಣ್ಯದಲ್ಲಿ ಅಭಿಮನ್ಯು
- Veerappan (1991) ವೀರಪ್ಪನ್
- SP Bhargavi (1991) ಎಸ್ಪಿ ಭಾರ್ಗವಿ
- Rollcall Ramakrishna (1991) ರೋಲ್ಕಾಲ್ ರಾಮಕೃಷ್ಣ
- Ide Police Belt (1991) ಇದೇ ಪೊಲೀಸ್ ಬೆಲ್ಟ್
- Kadana (1991) ಕದನ
- Sundara Kanda (1991) ಸುಂದರ ಕಾಂಡ
- Poli Kitty (1990) ಪೋಲಿ ಕಿಟ್ಟಿ
- College Hero (1990) ಕಾಲೇಜ್ ಹೀರೋ
- Uthkarsha (1990) ಉತ್ಕರ್ಷ
- Prathap (1990) ಪ್ರತಾಪ್
- Policena Hendthi (1990) ಪೊಲೀಸ್ನ ಹೆಂಡತಿ
- Bannada Gejje (1990) ಬಣ್ಣದ ಗೆಜ್ಜೆ
- Aavesha (1990) ಆವೇಶ
- Thrinethra (1990) ತ್ರಿನೇತ್ರ
- SP Sangliyana Part-2 (1990) ಎಸ್ಪಿ ಸಾಂಗ್ಲಿಯಾನ ಭಾಗ-2
- Ranabheri (1990) ರಣಭೇರಿ
- Nammoora Hammeera (1990) ನಮ್ಮೂರ ಹಮ್ಮೀರ
- Poli Huduga (1989) ಪೋಲಿ ಹುಡುಗ
- Idu Sadhya (1989) ಇದು ಸಾಧ್ಯ
- CBI Shankar (1989) ಸಿಬಿಐ ಶಂಕರ್
- Hendthighelbedi (1989) ಹೆಂಡ್ತಿಗ್ಹೇಳ್ಬೇಡಿ
- Deva (1989) ದೇವ
- Hathyakanda (1989) ಹತ್ಯಾಕಾಂಡ
- Indrajith (1989) ಇಂದ್ರಜಿತ್
- Avathara Purusha (1989) ಅವತಾರ ಪುರುಷ
- Amanusha (1989) ಅಮಾನುಷ
- Jockey (1989) ಜಾಕಿ
- Hrudaya Geethe (1989) ಹೃದಯ ಗೀತೆ
- Tharka (1989) ತರ್ಕ
- Yuddha Kanda (1989) ಯುದ್ಧ ಕಾಂಡ
- Meenakshi Mane Meshtaru (1988) ಮೀನಾಕ್ಷಿ ಮನೆ ಮೇಷ್ಟ್ರು
- Nee Nanna Daiva (1988) ನೀ ನನ್ನ ದೈವ
- Daada (1988) ದಾದಾ
- Krishna Rukmini (1988) ಕೃಷ್ಣ ರುಕ್ಮಿಣಿ
- Ramanna Shamanna (1988) ರಾಮಣ್ಣ ಶಾಮಣ್ಣ
- Anjada Gandu (1988) ಅಂಜದ ಗಂಡು
- Sangliyana (1988) ಸಾಂಗ್ಲಿಯಾನ
- Jana Nayaka (1988) ಜನ ನಾಯಕ
- Samyuktha (1988) ಸಂಯುಕ್ತ
- Elu Sutthina Kote (1988) ಏಳು ಸುತ್ತಿನ ಕೋಟೆ
- Nava Bharatha (1988) ನವ ಭಾರತ
- Sambhavami Yuge Yuge (1988) ಸಂಭವಾಮಿ ಯುಗೇ ಯುಗೇ
- Arjun (1988) ಅರ್ಜುನ್
- Aapadbandhava (1987) ಆಪತ್ಬಾಂಧವ
- Sangrama (1987) ಸಂಗ್ರಾಮ
- Bandha Muktha (1987) ಬಂಧ ಮುಕ್ತ
- Dance Raja Dance (1987) ಡ್ಯಾನ್ಸ್ ರಾಜಾ ಡ್ಯಾನ್ಸ್
- Kendada Male (1987) ಕೆಂಡದ ಮಳೆ
- Ravana Rajya (1987) ರಾವಣ ರಾಜ್ಯ
- Anthima Theerpu (1987) ಅಂತಿಮ ತೀರ್ಪು
- Aaganthuka (1987) ಆಗಂತುಕ
- Preethi (1986) ಪ್ರೀತಿ
- 27 Mavalli Circle (1986) ಮಾವಳ್ಳಿ ಸರ್ಕಲ್
- Thrishula (1985) ತ್ರಿಶೂಲ