ತೆರೆದ ಹಸ್ತ ಸ್ಮಾರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೆರೆದ ಹಸ್ತ ಸ್ಮಾರಕ
ಚಂಡೀಗಡದ ತೆರೆದ_ಹಸ್ತ_ಸ್ಮಾರಕ
ಕಲಾವಿದಲೆ ಕಾರ್ಬುಸಿಯರ್‍
ವರ್ಷ೧೯೬೪ (೧೯೬೪)
ಉದ್ದಳತೆ೨೬ m (85 ft)
ಸ್ಥಳಚಂಡೀಗಡ

ತೆರೆದ ಹಸ್ತ ಸ್ಮಾರಕವು ಭಾರತದ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡ ನಗರದಲ್ಲಿರುವ ಸಂಕೇತಿಕ ರಚನೆಯಾಗಿದೆ. ಈ ಸ್ಮಾರಕವನ್ನು ಲೆ ಕಾರ್ಬುಸಿಯರ್ ಎಂಬ ಫ್ರಾನ್ಸಿನ ವಾಸ್ತುಶಿಲ್ಪಿಯು ವಿನ್ಯಾಸ ಮಾಡಿದ್ದಾರೆ. ಇದು ಈಗಿನ ಚಂಡೀಗಡ ಸರ್ಕಾರದ ಲಾಂಛನವಾಗಿದ್ದು, "ಕೊಡುವ ಮತ್ತು ಸ್ವೀಕರಿಸುವ ಹಸ್ತ; ಶಾಂತಿ ಹಾಗೂ ಸಮೃದ್ದಿ, ಮತ್ತು ಮಾನವಕುಲದ ಐಕ್ಯತೆಯನ್ನು" ಸಾರುವ ಸಂಕೇತವಾಗಿದೆ..[೧] ಇದು ೨೬ ಮೀ(೮೫ ಅಡಿ) ಉದ್ದವಿದ್ದು, ಲೆ ಕಾರ್ಬುಸಿಯರ್‍ಅವರ ಅನೇಕ ತೆರೆದ ಹಸ್ತ ಸ್ಮಾರಕಗಳಲ್ಲಿ ಅತಿ ದೊಡ್ಡದಾಗಿದೆ.[೨]  ಲೋಹದ ರಚನೆಯು ೧೪ ಮೀ(೬೪ ಅಡಿ) ಉದ್ದವಿದ್ದು, ೫೦ ಟನ್‍ಗಳಷ್ಟು ತೂಕವಿದೆ ಮತ್ತು ಗಾಳಿ ಬೀಸಿದಾಗ ತಿರುಗುವ ಹಾಗೆ ರೂಪಿಸಲಾಗಿದೆ.[೧][೩][೪]

ಸಂಕೇತ[ಬದಲಾಯಿಸಿ]

ಚಂಡೀಗಡದಲ್ಲಿನ ತೆರೆದ ಹಸ್ತವು(ಲ ಮೇನ್ ಔರ್ಟೆ) ಲೆ ಕಾರ್ಬುಸಿಯರ್‍ಅವರ ವಿನ್ಯಾಸಗಳಲ್ಲಿ ಪುನರಾವರ್ತಿಸುವ ತಿರುಳಾಗಿದೆ. ಇವರಿಗೆ ಈ ರಚನೆಯು, "ಶಾಂತಿ ಮತ್ತು ಸಾಮರಸ್ಯದ, ಮುಕ್ತವಾಗಿ ಕೊಡುವ ಮತ್ತು ಸ್ವೀಕರಿಸುವ ಸಂಕೇತವಾಗಿದೆ.[೨]

ಸ್ಥಳ[ಬದಲಾಯಿಸಿ]

ತೆರೆದ ಹಸ್ತವು ಚಂಡೀಗಡದ ಕ್ಯಾಪಿಟಲ್ ಸಂಕೀರ್ಣದ ಸೆಕ್ಟರ್ ೧ ರಲ್ಲಿದೆ. ಇದರ ಹಿಂದೆಯೆ ಹಿಮಾಲಯ ಪರ್ವತ ಶ್ರೇಣಿಯ ಶಿವಾಲಿಕ ಬೆಟ್ಟಗಳಿವೆ.[೪][೫]

ಚಂಡೀಗಡ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ ೨೨ ಮತ್ತು ೨೧ರ(ಚಂಡೀಗಡ - ಮನಾಲಿ) ಮೂಲಕ ತಲುಪಬಹುದಾಗಿದೆ.

ರೂಪವೈಶಿಷ್ಟ್ಯಗಳು[ಬದಲಾಯಿಸಿ]

ಮುಕ್ತ ಹಸ್ತ ಸ್ಮಾರಕವು ೧೨.೫ × ೯ ಮೀ (೪೧ ಅಡಿ × ೩೦ ಅಡಿ) ಕಂದಕದ ಮೇಲೆ ೨೬ ಮೀ (೮೫ ಅಡಿ) ಎತ್ತರವಿದೆ.[೫] ಕಾಂಕ್ರೀಟ್ ನಿಲುಗಟ್ಟೆಯ ಮೇಲೆ ನಿಲ್ಲಿಸಿದ ಲೋಹದ ವಾಯು ದಿಕ್ಸೂಚಿಯು ೧೪ ಮೀ (೪೬ ಅಡಿ) ಉದ್ದವಿದ್ದು, ೫೦ ಟನ್‍ಗಳಷ್ಟು ತೂಕವಿದೆ ಮತ್ತು ಹಾರುವ ಹಕ್ಕಿಯ ಹಾಗೆ ಕಾಣುತ್ತದೆ.[೬] ಸ್ಮಾರಕವನ್ನು ಶೀಟ್ ಲೋಹದಿಂದ ನಂಗಲ್‍ನಲ್ಲಿರುವ ಭಾಕ್ರ ನಂಗಲ್ ನಿರ್ವಹಣಾ ಸಮಿತಿಯ ಯಂತ್ರ-ನಿರ್ಮಾಣ ಸ್ಥಳದಲ್ಲಿ ಹ್ಯಾಂಡ್-ಕ್ಯಾಷ್ಟ್ ಮಾಡಲಾಗಿದೆ. ವಾಯು ದಿಕ್ಸೂಚಿಯ ಮೇಲ್ಮೈಯನ್ನು ಪಾಲಿಷ್ ಮಾಡಿದ ಸ್ಟೀಲ್‍ನಿಂದ ಹೊದಿಸಲಾಗಿದೆ ಮತ್ತು ಗಾಳಿ ಬೀಸಿದಾಗ ಸರಾಗವಾಗಿ ತಿರುಗಲು ಬಾಲ್ ಬಿಯರಿಂಗ್‍ಗಳಿರುವ ಸ್ಟೀಲ್ ಶಾಷ್ಟ್ ಮೇಲೆ ಜೋಡಿಸಲಾಗಿದೆ.[೫]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Betts & McCulloch 2014, p. 61-62.
  2. ೨.೦ ೨.೧ Shipman 2014, p. 7.
  3. Jarzombek & Prakash 2011, p. 1931.
  4. ೪.೦ ೪.೧ "Capitol Complex". Tourism Department Government of Chandigarh.
  5. ೫.೦ ೫.೧ ೫.೨ Sharma 2010, p. 132.
  6. Betts & McCulloch 2014, p. 61.