ವಿಷಯಕ್ಕೆ ಹೋಗು

ತಿಲಪುಷ್ಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿಲಪುಷ್ಪಿ
ಡಿಜಿಟೇಲಿಸ್ ಪರ್ಪುರಿಯ(Digitalis purpurea)
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಲಾಮಿಯಲೆಸ್(Lamiales)
ಕುಟುಂಬ:
ಪ್ಲಾಂಟಜಿನೇಸಿಯಾ (Plantaginaceae)
ಕುಲ:
Digitalis

Species

Over 20 species, including:

ತಿಲಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಡಿಜಿಟೇಲಿಸ್ ಪರ್ಪುರಿಯ(Digitalis purpurea). ಲಾಮಿಯಲೆಸ್ ಎಂಬ ಗಣಕ್ಕೆ ಸೇರಿದ ತಿಲಪುಷ್ಪಿಯು ಪ್ಲಾಂಟಜಿನೇಸಿಯ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.[]

ಸಸ್ಯ ವಿವರಣೆ

[ಬದಲಾಯಿಸಿ]
ತಿಲಪುಷ್ಪಿ

ಇದರ ಹೂವು ಎಳ್ಳಿನ ಹೂವನ್ನು ಹೋಲುವುದರಿಂದ ಇದಕ್ಕೆ ತಿಲಪುಷ್ಪಿ ಎಂಬ ಹೆಸರು ಬಂದಿದೆ. ಇದನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಇದರ ಗಿಡವು ೧.೨ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಎಲೆಯು ೧೫-೨೦ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರದಿಂದಿರುತ್ತದೆ. ಎಲೆಗಳು ರೋಮಗಳಿಂದ ಕೂಡಿರುತ್ತದೆ.

ಇತರ ಭಾಷೆಗಳಲ್ಲಿನ ಹೆಸರುಗಳು

[ಬದಲಾಯಿಸಿ]
  • ಸಂಸ್ಕೃತ: ಹೃತ್ಪತ್ರಿ, ತಿಲಪುಷ್ಪಿ[]
  • ಹಿಂದಿ: ತಿಲಪುಷ್ಪಿ
  • ಇಂಗ್ಲೀಷ್:ಫೊಕ್ಸ್‌ಗ್ಲೋವ್ (Foxglove), Common foxglove, Purple foxglove, Lady’s glove
  • ಮಲಯಾಳಂ: ತಿಲಪುಷ್ಪಿ, ಹೃದ್ಪತ್ರಿ

ಉಪಯೋಗಗಳು

[ಬದಲಾಯಿಸಿ]
ತಿಲಪುಷ್ಪಿ drawings by Franz Köhler
  • ತಿಲಪುಷ್ಪಿಯನ್ನು ಹೃದಯದ ಖಾಯಿಲೆಗಲ ನಿವಾರಣೆಗಾಗಿ ಉಪಯೋಗಿಸುತ್ತಾರೆ.[]

ಇದರ ಎಲೆಯನ್ನು ಕತ್ತರಿಸಿ ನಂತರ ೬೦ಡಿಗ್ರಿ ಸೆ. ಉಷ್ಣಾಂಶದಲ್ಲಿ ಒಣಗಿಸಿ ಮಾಡಿದ ರಸವನ್ನು ಉಪಯೋಗಿಸಬೇಕು.

ಈ ದ್ರವ್ಯವು ಹೃದಯದ ಕರೋನರಿ ಎಂಬ ನಾಳದಲ್ಲಿ ಹೆಚ್ಚು ರಕ್ತ ಪ್ರವಹಿಸುವಂತೆ ಮಾಡುತ್ತದೆ. ಇದರಿಂದಾಗಿ ಹೃದಯದ ಕ್ರಿಯೆಯು ಸರಿಯಾಗಿ ನಡೆಯುತ್ತದೆ. ಮೂತ್ರ ಜನಕಾಂಗದಲ್ಲಿ ಹೆಚ್ಚಿನ ಪ್ರಮಾಣದ ರಕ್ತವನ್ನು ಹರಿಯುವಂತೆ ಮಾಡುವ ತಿಲಪುಷ್ಪಿ ಮೂತ್ರಲ ಗುಣವನ್ನು ಹೊಂದಿದೆ.

  • ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ಇದನ್ನು ಲೇಪಿಸಬಹುದಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. https://books.google.co.in/books?id=njLtCAAAQBAJ&pg=PA191&lpg=PA191&dq=tilapushpi+uses&source=bl&ots=dFMJ_elc5q&sig=SJSmXiVxmBcFApuSZK2TsxA8_M8&hl=en&sa=X&ved=0ahUKEwjA-PftosbQAhUGN48KHTiyAqUQ6AEIIDAB#v=onepage&q=tilapushpi%20uses&f=false
  2. http://www.toxicologycentre.com/tilapushpi-%E0%B4%A4%E0%B4%BF%E0%B4%B2%E0%B4%AA%E0%B5%81%E0%B4%B7%E0%B5%8D%E0%B4%AA%E0%B4%BF/
  3. "ಆರ್ಕೈವ್ ನಕಲು". Archived from the original on 2017-12-19. Retrieved 2016-11-26.

ಬಾಹ್ಯಸಂಪರ್ಕಗಳು

[ಬದಲಾಯಿಸಿ]