ತಿರುಅರುಟ್ ಪ್ರಕಾಶ ವಳ್ಳಲಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಿರುಅರುಟ್ ಪ್ರಕಾಶ ವಳ್ಳಲಾರ್ ಎನ್ನುವುದು ರಾಮಲಿಂಗಂ ರವರ ವಿಶೇಷ ಹೆಸರಾಗಿದೆ.ರಾಮಲಿಂಗಂನವರು ೫ನೇ ತಾರೀಖು,ಅಕ್ಟೋಬರ್ ೧೮೨೩ ಸುಭಾನು ವರ್ಷ,ಚಿತ್ತ ನಕ್ಷತ್ರ, ಭಾನುವಾರದಂದು ಜನಿಸಿದರು.ಇವರನ್ನು ಭಾರತಾದ್ಯಾಂತ ಮತ್ತು ವಿಶ್ವದ್ಯಾಂತವಾಗಿ, "ವಳ್ಳಲಾರ್" ಎಂದು ಸಾಮಾನ್ಯವಾಗಿ ಕರೆಯಲ್ಪಟ್ಟಿದೆ.[೧] ತಮಿಳು ಸಂತರ ಸಾಲಿನಲ್ಲಿ ಇವರೊಬ್ಬ ಖ್ಯಾತ ಸಂತರೆನಿಸಿಕೊಂಡಿದ್ದಾರೆ.ಹಾಗೆಯೆ ೧೯ನೇ ಶತಮಾನದ ತಮಿಳಿನ ಖ್ಯಾತ ಕವಿಯೂ ಸಹ ಹೌದು. ರಾಮಲಿಂಗಂನವರು ತಮಿಳು ಸಂತರ ಸಾಲಿನಲ್ಲಿ,"ಜ್ಞಾನ ಸಿದ್ದರ್" ಎಂಬ ಗುಂಪಿಗೆ ಸೇರುತ್ತಾರೆ (ಇಲ್ಲಿ ಜ್ಞಾನ ಎಂದರೆ ಅರಿವು). 'ಸಮರಸ ಶುದ್ದ ಸನ್ಮಾರ್ಗ ಸತ್ಯ ಸಂಗ' ಎಂಬ ಸಂಗದ ಬಗ್ಗೆ ಅವರ ಪುಸ್ತಕಗಳ್ಳಲ್ಲಿ ಮತ್ತು ಅವರ ಭಾಷನೆಗಳಲ್ಲಿ ಮಾತ್ರ ಅಲ್ಲದೆ,ಅದರ ತತ್ವವನ್ನು ತಮ್ಮ ಜೀವನದಲ್ಲಿಯೂ ಸಹ ಅಳವಡಿಸಿಕೊಂಡರು,ಈ ತಮ್ಮ ಸ್ವಂತ ಅಡವಳಿಕೆಯೇ ಅವರನ್ನು ಅನುಸರಿಸುವವರಿಗೂ ಸಹ ಸ್ಪೂರ್ತಿಯಾಯಿತು.ಇದರ ಮೂಲಕ ಅವರು ಜಾತಿ ಪದ್ಧತಿಯನ್ನು ನೀಗಿಸಲು ಪ್ರಯತ್ನಿಸಿದರು.ಶುದ್ಧ ಸನ್ಮಾರ್ಗ ಸಂಗದ ಪ್ರಕಾರ,ಪ್ರೀತಿ ಎಂಬ ಭಾವನೆಯನ್ನು ಮತ್ತು ಅದರ ಜೊತೆಗೆ ದೈವಿಕ ಅನುಬವದ ಅಂಶವನ್ನೂ ಸಹ ರೂಡಿಮಾಡಿಕೊಂಡು ಒಂದು ಸತ್ಯ ಜ್ಞಾನವನ್ನು ಅರಿಯುವುದೇ,ಈ ಮನುಷ್ಯ ಜೀವನದ ಪ್ರಧಾನ ಆಂಶವಾಗಿರುತ್ತದೆಂಬುದನ್ನು ಹೇಳಿದ್ದಾರೆ.ರಾಮಲಿಂಗ ಸ್ವಾಮಿಗಳು 'ಪ್ರಕಾಶಿತ ದೀಪ'ವನ್ನೇ "ಶಿವನ" ಚಿಹ್ನೆಯನ್ನಾಗಿ ಇಟ್ಟುಕೊಂಡು ಪ್ರಾರ್ಥಿಸಬಹುದು ಎನ್ನುವ ಪರಿಕಲ್ಪನೆಯನ್ನು ಸಲಹಿಸಿದರು.

ರಾಮಲಿಂಗಂ ಅಡಿಗಳ್ ಅವರ ಆರಂಭಿಕ ಜೀವನ[ಬದಲಾಯಿಸಿ]

ರಾಮಲಿಂಗಂನವರು'ಕರುನೀರ್'ಎಂಬ ಕುಟುಂಬದಲ್ಲಿ ಜನಿಸಿದರು.ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ ಚಿದಂಬರಂ ನಿಂದ ೧೫ ಕಿ.ಮೀ ದೂರದಲ್ಲಿರುವ, ದಕ್ಷಿಣ ಆರ್ಕೋಟ್ ಜಿಲ್ಲೆಯಲ್ಲಿನ, ಮರುದೂರ್ ಎನ್ನುವ ಗ್ರಾಮ ಇವರ ಜನ್ಮ ಸ್ಥಳವಾಗಿದೆ.ತಂದೆಯಾದ ರಾಮಯ್ಯ ಪಿಳೈ ಮತ್ತು ಅವರ ಆರನೇ ಹೆಂಡತಿಯಾದ ಚಿನ್ನಮಯಾರ್ ರವರಿಗೆ ಐದನೇ ಮಗನಾಗಿ ಜನಿಸಿದರು.ರಾಮಯ್ಯ ಪಿಳೈರವರ ಮೊದಲ ಐದೂ ಹೆಂಡತಿಯರು ಮಕ್ಕಳ ಭಾಗ್ಯ ಇಲ್ಲದೆಯೇ ಶೀಘ್ರ ಅನುಕ್ರಮದಲ್ಲಿ ನಿಧನರಾದರು.ಆರನೇ ಹೆಂಡತಿಯಾದ ಚಿನ್ನಮಯಾರ್ ರವರಿಗೆ ಮೊದಲೆರಡು ಗಂಡು ಮಕ್ಕಳಾಯಿತು,ಅವರ ಹೆಸರು,ಸಭಾಪತಿ ಮತ್ತು ಪರಷುರಾಮನ್,ನಂತರ ಎರಡು ಹೆಣ್ಣು ಮಕ್ಕಳಾಯಿತು,ಸುಂದರಮ್ಮಾಳ್ ಮತ್ತು ಉಣ್ಣಮಲಿ.ನಂತರ ಕೊನೆಯದಾಗಿ ಹುಟ್ಟಿದ ಮಗುವಿಗೆ 'ರಾಮಲಿಂಗಂ' ಎಂಬ ಹೆಸರಿಟ್ಟರು.

ಬಾಲ್ಯ ಜೀವನ ಮತ್ತು ದೈವಿಕ ಅನುಭವದ[ಬದಲಾಯಿಸಿ]

ರಾಮಲಿಂಗ ಅಡಿಗಳ್ ರವರು ಐದು ತಿಂಗಳು ಮಗುವಾಗಿದ್ದಾಗ ಅವರ ತಂದೆ ತಾಯಿ ಅವರನ್ನು ಚಿದಂಬರಂ ದೇವಸ್ಥಾನಕ್ಕೆ ಕರೆದೊಯ್ದರು.ಆ ಸಮಯದಲ್ಲಿ ಅರ್ಚಕರು ದೇವರಿಗೆ ದೀಪಾರಾಧನೆ ಮಾಡುವುದನ್ನು ಕಂಡು ಅವರು ಜೋರಾಗಿ ನಕ್ಕರು ಎಂದು ಹೇಳಲಾಗುತ್ತದೆ.ಈ ರೀತಿಯ ಪ್ರತಿನಿತ್ಯದ ದೇವಸ್ಥಾನದ ಬೇಟಿಯಿಂದ ಅವರಲ್ಲಿ ಪ್ರಥಮ ಆಧ್ಯಾತ್ಮಿಕದ ಅನುಭವ ಪ್ರಾಪ್ತಿಯಾಯಿತು.೧೮೨೪ರಲ್ಲಿ ಅವರ ತಂದೆ ತೀರಿಕೊಂಡರು.ಆ ನಂತರ ಅವರ ತಾಯಿ ತನ್ನ ಮಕ್ಕಳೊಂದಿಗೆ ಚೆನೈಗೆ ತೆರಳಿದರು.ರಾಮಲಿಂಗಂ ರವರಿಗೆ ಐದು ವಯಸ್ಸಾಗಿದ್ದಾಗ ತನ್ನ ಅಣ್ಣನಾದ ಸಭಾಪತಿರವರು ಅವರಿಗೆ ಚೌಪಚಾರಿಕ ಶಿಕ್ಷಣವನ್ನು ಕೊಡಬೇಕೆಂದು ನಿರ್ಧರಿಸಿದರು.ಆದರೆ ಯುವ ಹುಡುಗನಾದವನು ಇದಕ್ಕೆ ಆಳವಾದ ನಿರಾಸಕ್ತಿಯನ್ನು ತೋರಿಸಿದನು.ಆದರೆ ಇನ್ನೊಂದು ಕಡೆ,ಸ್ಥಳೀಯ ಕಂದಸ್ವಾಮಿ ದೇವಸ್ಥಾನದ ಪ್ರಾಯಣಕ್ಕೆ ಆಧ್ಯತೆ ನೀಡಿದರು.ಸಭಾಪತಿಯವರಿಗೆ ತನ್ನ ತಮ್ಮನಾದವನು ಸ್ವಯಂ ನಾಶದ ಮಾರ್ಗದ ಕಡೆ ನಡೆಯುತ್ತಿದ್ದಾನೆಂದು ಮನವರಿಸಿದರು.ಅವರ ಸಹಾನುಭೂತಿ ಗುಣವುಳ್ಳ ನಾದಿನಿಯು,ವಿಧ್ಯಾಭ್ಯಾಸವನ್ನು ಮನೆಯಲ್ಲಿಯೇ ಗಂಭೀರವಾಗಿ ಮುಂದುವರೆಸೆಂದು ಪ್ರೀತಿಯಿಂದ ಉದ್ಭವಿಸಿದರು.ರಾಮಲಿಂಗಂನವರು ಮರು ಮಾತಾಡದೆಯೇ ಇದಕ್ಕಾಗಿ ತನಗೆಂದು ಸ್ವಂತವಾದ ಪ್ರತ್ಯೇತ ಕೋಣೆಯನ್ನು ನೀಡಬೇಕೆಂದು ಹೇಳಿದರು.ಈಗ ಆ ಒಂಟಿ ಸೀಮತೆಯ ಕೋಣೆಯಲ್ಲಿ,ಒಂದು ಕಣ್ಣಡಿ ಮತ್ತು ಅದರ ಮುಂದೆ ಉರಿದ ದೀಪವನ್ನಿಟ್ಟು ಕುಳಿತು ಧ್ಯಾನ ಮಾಡುತ್ತಿದ್ದರು.ಈ ಒಂದು ಸಂದರ್ಭದಿಂದಲೇ ಆ ಯುವಕನ ಆಧ್ಯಾತ್ಮಿಕ ಪಯಣ ಶುರುವಾಯಿತು.ಒಂದು ದಿನ ರಾಮಲಿಂಗಂನವರು ತನ್ನ ಅಣ್ಣನ ಬದಲಿಗೆ ಉಪನ್ಯಾಸಕ ಅಧಿವೇಶನವನ್ನು ಕೈಗೊಳ್ಳಬೇಕಾಯಿತು.ಆಗ ಅವರು 'ಸೆಕ್ಕಿಲಾರ್'ರವರು ಬರೆದ ಮಹಾಕಾವ್ಯವಾದ "ಪೆರಿಯಪುರಾಣಂ" ಎಂಬ ಕವಿತೆಯಿಂದ ಒಂದು ಪದ್ಯವನ್ನು ನಿರಂತರವಾಗಿ ಮತ್ತು ಅದ್ಭುತವಾಗಿ ಪ್ರತಿಪಾಧಿಸಿದರು.ನಂತರ ಅಣ್ಣನೂ ಸಹ ತಮ್ಮನ ಮಾನಸಿಕ ಹಾಗೂ ಆಧ್ಯಾತ್ಮಿಕ ಶ್ರೇಷ್ಟತೆಯನ್ನು ಕಂಡು ಮನೋಹರರಾದರು.ಹಾಗೆಯೇ ಮುಂದುವರೆಯುತ್ತಾ,'ಶಿವನ' ಧರ್ಮನಿಷ್ಠ ಭಕ್ತನಾಗಿದ್ದವರು ಒಂದು ನಿರಾಕಾರ ಭಕ್ತಿ ಮತ್ತು ಪೂಜೆಯ ಕಡೆಗೆ ಪ್ರಗತಿಸಿದರು.ನಂತರ ಹಣಕಾಸನ್ನು ಸಂಪೂರ್ಣವಾಗಿ ತ್ಯಜಿಸಿದರು,ಮುಂದೆ ಊಟ ಮತ್ತು ನಿದ್ರೆಯನ್ನೂ ಸಹ ಬಿಟ್ಟರು.ಕೊನೆಯದಾಗಿ ಹದಿಮೂರನೆ ವಯಸ್ಸಿನಲ್ಲಿ ಈ ಜಗತನ್ನೇ ತ್ಯಜಿಸಿದರು.ಆಶ್ಚರ್ಯಕರವಾಗಿ,ಈ ಎಲ್ಲವನ್ನೂ ತ್ಯಜಿಸಿದರೂ ಅವರಿಗೆ ದೈಹಿಕವಾಗಾದರೂ ಅಥವಾ ರೂಪದಲ್ಲಾದರೂ,ಯಾವುದೇ ಒಂದು ತೊಂದರೆಯಾಗಲಿಲ್ಲ.ಈ ಒಂದು ಸಾಧ್ಯತೆಯು ಭಾವಿಸಲಾದ ದೈಹಿಕ ರೂಪಾಂತರದ ಪರಿಣಾಮದಿಂದಲೇ ಇರಬಹುದು ಎಂದು ಹೇಳಬಹುದು.

ರಾಮಲಿಂಗ ಅಡಿಗಳ್ ರವರ ಭೋದನೆಗಳು[ಬದಲಾಯಿಸಿ]

ಮೊದಲನೆಯದಾಗಿ ಜಾತಿ ವ್ಯವಸ್ಥತೆಯ ವಿರುದ್ಧವಾಗಿ ಮತ್ತು ಅದರಿಂದ ಸಮಾಜಕ್ಕಾಗುವ ನಕಾರಾತ್ಮಕ ಪ್ರಭಾವದ ಬಗ್ಗೆ ಮನ ತೆರೆದರು.ಈ ಒಂದು ಪರಿಸ್ಥಿತಿಯನ್ನು ಪರಿಹರಿಸಲು,"ಸಮರಸ ವೇದ ಸನ್ಮಾರ್ಗ ಸಂಗಂ"ಅನ್ನು ಸ್ಥಾಪಿಸಲಾಯಿತು.ನಂತರ ೧೮೭೨ರಲ್ಲಿ ಈ ಸಂಗದ ಹೆಸರನ್ನು "ಸಮರಸ ಶುದ್ಧ ಸನ್ಮಾರ್ಗ ಸತ್ಯ ಸಂಗಂ" ಎಂದು ಬದಲಾಯಿಸಲಾಯಿತು.ನಂತರ ಎಲ್ಲಾ ಬಗೆಯ ಜನಾಂಗಕ್ಕು ಉಚಿತ ಆಹಾರ ಸೇವನೆಯ ಮನೆಯನ್ನು ಸ್ಥಾಪಿಸಿದರು,ಇದನ್ನು "ಸತ್ಯ ಧರ್ಮ ಸಾಲೈ" ಎಂದು ಹೆಸರಿಸಲಾಗಿದೆ.ಇಂತಹದೊಂದು ಮನೆಯು ವಡಲೂರ್ ಎಂಬ ಊರಿನಲ್ಲಿ,೧೮೬೭ರಂದು ಸ್ಥಾಪಿಸಲಾಯಿತು,ಎಲ್ಲಿ ಎಲ್ಲರೂ ಸಹ ಯಾವುದೇ ಭಿನ್ನತೆ ಇಲ್ಲದೆ ಆಹಾರ ಸೇವಿಸಬಹುದಾಗಿತ್ತು.ರಾಮಲಿಂಗಂನವರು ಜನವರಿ ೨೫,೧೮೭೨ರಂದು "ಸತ್ಯ ಜ್ಞಾನ ಸಭೆ"[೨] ಎಂಬ ಸಭೆಯನ್ನು ವಡಲೂರಿನಲ್ಲಿ ಸ್ಥಾಪಿಸಿದರು.'ಜೀವಾರಾಶಿಗಳ ಸೇವೆಯೇ ಮೋಕ್ಷ/ವಿಮೋಚನೆಗೆ ಮಾರ್ಗ' ಎನ್ನುವುದು ವಳ್ಳಲಾರ್ ರವರ ಮೊದಲ ಬೋಧನೆಯಾಗಿದೆ.ಅವರು ಸಸ್ಯಹಾರಿಯಾಗಿರುವುದರ ಬಗ್ಗೆ ಒತ್ತಿ ಹೇಳುತ್ತಿದ್ದರು.ಅವರ ಪ್ರಕಾರ ದೇವರೆಂದರೆ,"ಅರುಳ್ ಪೆರುಂ ಜ್ಯೋದಿ" ಅಂದರೆ ಅನುಗ್ರಹ,ಕರುಣೆ ಮತ್ತು ಜ್ಞಾನಕ್ಕೆ ವ್ಯಕ್ತೀಕರಣನಾಗಿದ್ದಾನೆ ಎನ್ನುತ್ತಾರೆ.ಹಾಗೆಯೇ ಸಹಾನುಭೂತಿ ಮತ್ತು ಕರುಣೆ ಮಾತ್ರವೇ ದೇವರನ್ನು ಕಾಣುವ ಮಾರ್ಗ ಎಂದು ಹೇಳಿದ್ದಾರೆ.ಜಾತಿ,ಬೇಧ-ಭಾವವಿಲ್ಲದ ಸಮಾಜವನ್ನು ಸ್ಥಾಪಿಸಲು ಸಲಹಿಸಿದರು.ವಳ್ಳಲಾರ್ ರವರು ಮೂಢನಂಬಿಕೆ ಮತ್ತು ಆಚರಣೆಗಳಿಗೆ ವಿರುದ್ಧವಾಗಿದ್ದರು.ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇದಿಸಿದರು.ಬಡವರಿಗೆ ಅನ್ನಧಾನ ಮಾಡುವುದೇ ಉನ್ನತವಾದ ಪೂಜೆ ಎಂದು ಸಲಹಿಸಿದ್ದಾರೆ.

ಕಣ್ಮರೆಯ ಸ್ಥಿತಿ[ಬದಲಾಯಿಸಿ]

ಜನವರಿ ೩೦,೧೮೭೪ರಂದು ರಾಮಲಿಂಗಂ ಅಡಿಗಳ್ ರವರು ಕಣ್ಮರೆಯಾದರು.ಒಂದು ದಿನ ತಮ್ಮ ಕಟ್ಟಕಡೆಯ ಉಪನ್ಯಾಸದಲ್ಲಿ,'ಎಲ್ಲರು ಈ ಆಧ್ಯಾತ್ಮಿಕದ ದಾಹವನ್ನು ಕೈಗೊಳ್ಳಬೇಕು ಮತ್ತು ನಮ್ಮೆಲ್ಲರ ಶಕ್ತಿಯನ್ನು ಮೀರಿ ನಮ್ಮನ್ನು ನಡೆಸುವ ಈ ಪ್ರಕೃತಿಯ ಶಕ್ತಿ ಮತ್ತು ರಹಸ್ಯವನ್ನು ಕಾಣಬೇಕು' ಎಂದು ನಂತರ 'ಪ್ರಕಾಶಿತ ದೀಪದ ಮೇಲೆ ಮನಸ್ಸಿಟ್ಟು ಧ್ಯಾನ ಮಾಡಬೇಕು' ಎಂದು ತಮ್ಮೆಲ್ಲರ ಶಿಕ್ಷಕರಿಗೆ ಅಂದು ಸಲಹಿಸಿದರು.ಜನವರಿ ೩೦,೧೮೭೪ರಲ್ಲಿ ಅಡಿಗಳ್ ರವರು ತಮ್ಮ ಕೊಠಡಿಯೊಳಗೆ ಹೋಗಿ,'ಯಾರೂ ಬಾಗಿಲನ್ನು ತೆಗೆಯಕೂಡದು' ಎಂದು ತನ್ನ ಅನುಯಾಯಿಗಳಿಗೆ ಹೇಳಿ ಬಾಗಿಲನ್ನು ಬಂಧಿಸಿಕೊಂಡರು.ಬಾಗಿಲನ್ನು ತೆಗೆದದ್ದೇ ಆದರೆ,'ಯಾರೂ ಏನನ್ನು ಕಾಣಲಾಗುವುದಿಲ್ಲ' ಎಂದೂ ಸಹ ಹೇಳಿ ದರು(ಅಂದರೆ ಪ್ರಕೃತಿಯೊಂದಿಗೆ ಐಕ್ಯವಾಗುವುದು-ಇದರ ಬಗ್ಗೆ ಅವರದೇ ಆದ ಒಂದು ಕವಿತೆ "ಜ್ಞಾನ ಪಾರಿಯೈ" ಎಂಬಲ್ಲಿ ಹೇಳಿದ್ದಾರೆ).ಅವರ ಇಂತಹದ ಏಕಾಂತ ಸ್ಥಾನವು ಎಲ್ಲರಿಗೂ ವದಂತಿಯಾಗಿ ಪ್ರಚೋದವಾಯಿತು.ಕೊನೆಯದಾಗಿ ಸರ್ಕಾರದ ಒತ್ತಡದಿಂದ ಮೇ ತಿಂಗಳು ಆ ಕೊಠಡಿಯ ಬಾಗಿಲನ್ನು ತೆರೆಯಲಾಯಿತು.ಆಗ ಯಾವುದೇ ಒಂದು ಸುಳಿವಿಲ್ಲದೆ ಕೊಠಡಿಯು ಖಾಲಿಯಾಗಿತ್ತು.೧೯೦೬ರಲ್ಲಿ ದಕ್ಷಿಣ ಆರ್ಕೋಟ್ ಜಿಲ್ಲೆ ಪ್ರಕಟಿಸಿದ ದಿ ಮಡ್ರಾಸ್ ಡಿಸ್ರ್ಟಿಕ್ಟ್ ಗಾಜೆಟ್ಟೀರ್ ಎನ್ನುವುದರಲ್ಲಿ ಅವರ ಈ ರೀತಿಯ ಒಂದು ಕಣ್ಮರೆಯ ಬಗ್ಗೆ ದಾಖಲಿಸಿದೆ.[೩]

ರಾಮಲಿಂಗ ಅಡಿಗಳ್ ರವರ ಸಾಹಿತ್ಯಗಳು[ಬದಲಾಯಿಸಿ]

  • ಕವಿ ಮತ್ತು ಸಂಗೀತಹಾರನಾಗಿ,ಸಾರ್ವತ್ರಿಕ ಪ್ರೀತಿ ಮತ್ತು ಶಾಂತಿಯ ಬಗ್ಗೆ ೫೮೧೮ ಕವಿತೆಗಳನ್ನು

ಸಂಯೋಜಿಸಿದ್ದಾರೆ.ಈ ಎಲ್ಲಾ ಕವಿತೆಗಳು ಆರು ತಿರುಮುರೈಗಳ್ ಎಂದು ಸಂಕಲನಗೊಂಡಿದೆ.ಇಂದು ಇದು "ತಿರುವರುಟ್ಪ" ಎಂಬ ಒಂದು ಪುಸ್ತಕದ ಹೆಸರಿನಲ್ಲಿ ದೊರೆಯುತ್ತದೆ.

  • ಮನು ನೀದಿ ಚೋಳನ್ ಎಂಬವರ ಬಗ್ಗೆ "ಮನುಮುರೈ ಕಂಡ ವಾಸಗಂ" ಎಂಬ ಸಾಹಿತ್ಯದಲ್ಲಿ ಬರೆದಿದ್ದಾರೆ.
  • "ಜೀವ ಕಾರುಣ್ಯ ಒಳುಕ್ಕಂ" ಎಂಬ ಪುಸ್ತಕವನ್ನು ಬರೆದಿದ್ದಾರೆ.

ಗೀತೆಗಳು[ಬದಲಾಯಿಸಿ]

  • ರಾಮಲಿಂಗ ಅಡಿಗಳ್ ರವರ "ತಿರುವರುಟ್ಪ" ಎಂಬ ಗೀತೆಗಳನ್ನು ಸಂಗೀತ ಕಾರ್ಯಕ್ರಮದಲ್ಲಿ ಹಾಡಲಾಗಿದೆ.ಈಗ ಕನಿಷ್ಟಪಕ್ಷ ೨೫ ಗೀತೆಗಳಿಗೆ(ತಿರು ವರುಟ್ಪ ಇಸೈ ಮಾಲೈನಲ್ಲಿ) ಸ್ವರ ತಾಳದೊಂದಿಗೆ ಹಾಡಲಾಗಿದೆ.
  • ತಾಯಗಿ ತಂತೈಯುಮೈ(ಹಂಸಧ್ವನಿ), ಇದು ನಲ್ಲ ತರುಣಂ(ಶಂಕರಾಬರನಂ)
  • ವರುವಾರ್ ಅಳೈತು ವಡಿ(ಬೆಗಡ) ಮತ್ತು ತೇನ್ ಎನ ಇನಿಕ್ಕುಂ

ಅವರ ಕೆಲವು ಗೇತೆಗಳಿಗೆ,"ಸಿರ್ಕಳಿ ಗೋವಿಂದರಾಜನ್" ಎನ್ನುವವರು ಸಂಗೀತವನ್ನು ನೀಡಿದ್ದಾರೆ.

ಕೃತಿಗಳು[ಬದಲಾಯಿಸಿ]

  • ತಿರುವರುಟ್ಪ
  • ಅರಂ ತಿರುಮುರೈ

ಉಲ್ಲೇಖನಗಳು[ಬದಲಾಯಿಸಿ]

https://www.scribd.com/doc/30437097/Vallalar-Messanger-http://

http://www.vallalarspace.com/Samathur

http://vadalur.blogspot.in/2008/03/in-12th-standard-text-books.htmlhttp: