ಡ್ಯಾನ್ ಆಂಡರ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡ್ಯಾನ್ ಆಂಡರ್ಸನ್
ಡ್ಯಾನ್ ಆಂಡರ್ಸನ್, 1917.
ಜನನಡೇನಿಯಲ್ ಆಂಡರ್ಸನ್
(೧೮೮೮-೦೪-೦೬)೬ ಏಪ್ರಿಲ್ ೧೮೮೮
Ludvika, Sweden
ಮರಣ16 September 1920(1920-09-16) (aged 32)
Stockholm, Sweden
ವೃತ್ತಿAuthor / poet
ಸಾಹಿತ್ಯ ಚಳುವಳಿNaturalism

ಡ್ಯಾನ್ ಆಂಡರ್ಸನ್(6 ಎಪ್ರಿಲ್ 1888 – 16 ಸೆಪ್ಟೆಂಬರ್ 1920) [೧] ಸ್ವೀಡನ್ನಿನ ಕಾದಂಬರಿಕಾರ ಮತ್ತು ಕವಿ.

ಜೀವನ[ಬದಲಾಯಿಸಿ]

ಇವನು ೧೯೮೮ರಲ್ಲಿ ಸ್ವೀಡನ್‍ನ ಲುಡ್ವಿಕದಲ್ಲಿ ಜನಿಸಿದನು'ಡಾಲ್ರಾನಾ ಎಂಬ ಸ್ಥಳದಲ್ಲಿ ಇದ್ದಲು ಮಾಡಿ ಮಾರಿ ಜೀವನ ಸಾಗಿಸುತ್ತಿದ್ದ.

ಸಾಹಿತ್ಯ ರಚನೆ[ಬದಲಾಯಿಸಿ]

ಸ್ವೀಡನ್ನಿನ ಅರಣ್ಯಪ್ರಾಂತ್ಯದ ಇದ್ದಲು ತಯಾರಿಕೆಗಾರರ ಕಡು ಕಷ್ಟಮಯವಾದ ಜೀವನವನ್ನು ಚಿತ್ರಿಸುವ ಕಾದಂಬರಿಗಳನ್ನು ಸಣ್ಣಕಥೆಗಳನ್ನೂ ರಚಿಸಿದ್ದಾನೆ. ಆದರೆ ಅವನ ಅತ್ಯಂತ ಆತ್ಮೀಯವಾದ ಕೃತಿಗಳು ಅವನ ಕವಿತೆಗಳು. ಆಧುನಿಕ ಜಗತ್ತಿನ ಪ್ರಭಾವಗಳ ಪರಿಣಾಮವಾಗಿ ಹದಗೆಟ್ಟ ಅವನ ಮನಸ್ಸು, ನೆಮ್ಮದಿಗಾಗಿ ಪಡುವ ಪಾಡು ಈ ಕವನಗಳ ಮುಖ್ಯ ವಿಷಯ. ಈ ತೆರದ ಚಿತ್ತಕ್ಷೋಭೆ, ಒಂಟಿತನ, ಭೀತಿಗಳು ಪ್ರಪಂಚದ ಮಹಾಯುದ್ಧಗಳೆರಡರ ನಡುವಣ ಅವಧಿಯ ಹಲವು ಸ್ವೀಡಿಷ್ ಕವಿಗಳಲ್ಲಿ ಕಂಡುಬರುತ್ತದೆ.

ನಿಧನ[ಬದಲಾಯಿಸಿ]

೧೬ ಸೆಪ್ಟೆಂಬರ್ ೧೯೨೦ರಲ್ಲಿ ಸ್ಕಾಕ್‍ಹೋಮ್‍ನಲ್ಲಿ ನಿಧನ ಹೊಂದಿದನು.

ಉಲ್ಲೇಖಗಳು[ಬದಲಾಯಿಸಿ]

  1. Dan Andersson britannica.com, 2013. Retrieved: July 31, 2013.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

English

Translations

Streaming audio

Videos
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: