ಡೇವಿಡ್ ವುಡಾರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೇವಿಡ್ ವುಡಾರ್ಡ್
2020 ರಲ್ಲಿ ವುಡಾರ್ಡ್
ಜನನDavid Woodard
(೧೯೬೪-೦೪-೦೬)೬ ಏಪ್ರಿಲ್ ೧೯೬೪
ಸಾಂಟಾ ಬಾರ್ಬರಾ,
ಕ್ಯಾಲಿಫೊರ್ನಿಯ,
ಅಮೇರಿಕ ಸಂಯುಕ್ತ ಸಂಸ್ಥಾನ
ಬಾಳ ಸಂಗಾತಿಸೋನ್ಜಾ ವೆಕ್ಟೊಮೊವ್

ಡೇವಿಡ್ ವುಡಾರ್ಡ್ (ಹುಟ್ಟಿದ್ದು ಏಪ್ರಿಲ್ 6, 1964) ಒಬ್ಬ ಅಮೆರಿಕನ್ ಬರಹಗಾರರು ಮತ್ತು ಸಂಗೀತಗಾರರು. 1990 ದಶಕದಲ್ಲಿ ಅವರು ಪ್ರೇಕ್ವಿಯಂ (prequiem) ಎಂಬ ಪದವನ್ನು ಕಂಡುಹಿಡಿದರು. ಇದು ಪ್ರಿಎಂಪ್ಟಿವ್ (preemptive) ಮತ್ತು ರಿಕ್ವಿಯಂ (requiem) ಎಂಬ ಎರಡು ಪದಗಳ ಸಂಗಮವಾಗಿದೆ. ಇದು ಓರ್ವ ವ್ಯಕ್ತಿಯ ಮರಣದ ಸಮಯದಲ್ಲಿ ಅಥವಾ ಮರಣದ ಸ್ವಲ್ಪ ಸಮಯದ ಮುಂಚೆ ಅವರಿಗಾಗಿಯೇ ಸಂಯೋಜಿಸಿದ ಸಂಗೀತವನ್ನು ನುಡಿಸುವ ಒಂದು ಬೌದ್ಧ ಸಂಪ್ರದಾಯದ ಹೆಸರು.[೧][೨]

ಲಾಸ್ ಎಂಜಿಲೆಸ್ ಮೆಮೋರಿಯಲ್ ಸರ್ವಿಸಸ್ ನಲ್ಲಿ ವುಡಾರ್ಡ್ ಸಂಗೀತಗಾರರಾಗಿ ಕೆಲಸ ಮಾಡುತಿದ್ದಾಗ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿದ್ದರು, ಅದರಲ್ಲಿ 2001ರಲ್ಲಿ ಏಂಜಲ್ಸ್ ಫ್ಲೈಟ್ ಫುನಿಕ್ಯುಲರ್ ರೈಲ್ವೆಯಲ್ಲಿ (ಈಗ ಬಳಕೆಯಲ್ಲಿಲ್ಲ) ಲಿಯಾನ್ ಪ್ರಪೋರ್ಟ್ ಮತ್ತು ಅವರ ಗಾಯಗೊಂಡ ವಿಧವೆ ಲೋಲ ಅವರ ಅಪಘಾತದ ಸಂದರ್ಭದ ನೆನಪಿಗಾಗಿ ನಡೆಸಿಕೊಟ್ಟ ನಾಗರಿಕ ಸಮಾರಂಭವೂ ಒಂದು.[೩][೪]: 125  ಅವರು ಕಾಡುಪ್ರಾಣಿಗಳ ರಿಕ್ವಿಯಂ ನಡೆಸಿಕೊಟ್ಟಿದ್ದಾರೆ, ಅದರಲ್ಲಿ ಕ್ಯಾಲಿಫೋರ್ನಿಯಾ ಬ್ರೌನ್ ಪೆಲಿಕನ್ ಕಡಲಿನಲ್ಲಿ ಗಾಯಗೊಂಡಿದ್ದಾಗ ನಡೆಸಿಕೊಟ್ಟ ಕಾರ್ಯಕ್ರಮವೂ ಸೇರಿದೆ.[೫]

ವುಡಾರ್ಡ್ ಅವರು ಡ್ರೀಮ್ ಮಷೀನ್ ನ ನಕಲುಗಳಿಗೆ ಪ್ರಖ್ಯಾತರಾಗಿದ್ದರು, ಅದು ಒಂದು ಮನಃಪರಿವರ್ತನೆ ಮಾಡಬಲ್ಲ ದೀಪವಾಗಿತ್ತು. ಪ್ರಪಂಚದ ಹಲವಾರು ವಸ್ತು ಸಂಗ್ರಹಾಲಯಗಳಲ್ಲಿ ಅದನ್ನು ವೀಕ್ಷಿಸಬಹುದು. ಜರ್ಮನಿ ಮತ್ತು ನೇಪಾಳದಲ್ಲಿ ಡೇರ್ ಫ್ರೆಂಡ್ ಎಂಬ ಪತ್ರಿಕೆಗೆ ಅವರ ಕೊಟ್ಟ ಕೊಡುಗೆಗೆ ಹೆಸರುವಾಸಿ. ಈ ಪತ್ರಿಕೆಯಲ್ಲಿ ಅವರು ಇಂಟೆರ್ ಸ್ಪೀಸೀಸ್ ಕರ್ಮ, ಸಸ್ಯ ಪ್ರಜ್ಞೆ ಮತ್ತು ಪರಾಗ್ವ ಸೆಟಲ್ಮೆಂಟ್ ನೇವ ಜೆರ್ಮನಿಯ ಎಂಬ ಬರಹಗಳಿಗೆ ಪ್ರಖ್ಯಾತರು.[೬]

ಶಿಕ್ಷಣ[ಬದಲಾಯಿಸಿ]

ವುಡಾರ್ಡ್ ಅವರು ದಿ ನ್ಯೂ ಸ್ಕೂಲ್ ಫಾರ್ ಸೋಶಿಯಲ್ ರಿಸರ್ಚ್ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸಾಂಟಾ ಬಾರ್ಬರಾ ದಲ್ಲಿ ಶಿಕ್ಷಣ ಪಡೆದಿದ್ದಾರೆ.

ನೇವ ಜೆರ್ಮನಿಯ[ಬದಲಾಯಿಸಿ]

2003ರಲ್ಲಿ ವುಡಾರ್ಡ್ ಜುನಿಪರ್ ಹಿಲ್ಸ್ (ಲಾಸ್ ಎಂಜೆಲಸ್ ಕೌಂಟಿ) ಕೌನ್ಸಿಲ್ ಮ್ಯಾನ್ ಆಗಿ ಆಯ್ಕೆಯಾಗಿದ್ದರು. ಈ ಸಮಯದಲ್ಲಿ ಅವರು ನೇವ ಜೆರ್ಮನಿಯ ನಗರದೊಂದಿದೆ ಉತ್ತಮ ಬಾಂದವ್ಯ ಹೊಂದುವಲ್ಲಿ ಕೆಲಸ ಮಾಡಿದರು. ಅವರ ಈ ಯೋಜನೆಗಾಗಿ, ವುಡಾರ್ಡ್ ಹಿಂದೆ ಸಸ್ಯಾಹಾರಿ ಮತ್ತು ಸ್ತ್ರೀವಾದಿ ತತ್ವದ ಯುಟೋಪಿಯ ಗೆ ತೆರಳಿ ಅಲ್ಲಿನ ಮುನಿಸಿಪಲ್ ನಾಯಕರನ್ನು ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲಿ ಸಂಬಂಧ ಮುಂದುವರೆಸಬಾರದೆಂದು ತಿಳಿದ ಅವರು ನಂತರ ಅವರ ಬರವಣಿಗೆಗೆ ಉತ್ತಮ ಆಯ್ಕೆ ಎಂದು ಅರಿತರು. ಅವರಿಗೆ ಪ್ರತ್ಯೇಕವಾಗಿ ಇವರ ಬಗ್ಗೆ ಒಲವಿತ್ತು—ಮೂಲ ಮಾನವತಾವಾದಿ ತತ್ವಗಳನ್ನು ಪ್ರಚಾರ ಮಾಡಿದ ರಿಚರ್ಡ್ ವಾಗ್ನರ್ ಮತ್ತು 1886 ರಿಂದ 1889 ವರೆಗೂ ಒಂದು ಒಂದು ಹೊಸ ವಸಾಹತುವಿನಲ್ಲಿ ತನ್ನ ಗಂಡ ಬರ್ನಾರ್ಡ್ ಫೋರ್ಸ್ಟರ್ ನ ಜೊತೆ ವಾಸವಿದ್ದ ಎಲಿಸಬೆತ್ ಫೋರ್ಸ್ಟರ್-ನಿಯೇಟ್ಜ್ಷೆ.

ವುಡಾರ್ಡ್ ಮತ್ತು ಬರೋಸ್ ವಿತ್ ಡ್ರೀಮ್ ಮಷೀನ್, ಸಿರ್ಕಾ 1997[೭]: 98–101 

2004 ರಿಂದ 2006 ರವರೆಗೆ ವುಡಾರ್ಡ್ ಅವರು ಆಗಿನ ಅಮೇರಿಕಾ ಉಪಾಧ್ಯಕ್ಷ ಡಿಕ್ ಚೆನೇ ಅವರ ಪರವಾಗಿ ನೇವ ಜೆರ್ಮನಿಯದಲ್ಲಿ ಹಲವಾರು ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದರು.[೮] 2011ರಲ್ಲಿ ವುಡಾರ್ಡ್ ಸ್ವಿಸ್ ಕಾದಂಬರಿಕಾರ ಕ್ರಿಶ್ಚಿಯನ್ ಕ್ರಾಚ್ ಅವರಿಗೆ ತಮ್ಮ ನೇವ ಜೆರ್ಮನಿಯಗೆ[೯]: 113–138  ಸಂಬಂಧಿಸಿದ ಎರಡು ಸಂಪುಟಗಳ ಬರಹವನ್ನು ಹ್ಯಾನೋವರ್ ವಿಶ್ವವಿದ್ಯಾಲಯದ ಅಡಿಯಲ್ಲಿ (ಮುದ್ರಣ—ವರ್ಹಾನ್ ವೆರ್ಲಾಗ್) ಪ್ರಕಟಿಸಲು ಆಮೋದಿಸಿದರು.[೧೦]: 180–189  ಪತ್ರಗಳ ಮೂಲಕ, ಫ್ರಾಂಕ್ಫುರ್ಟರ್ ಅಲ್ಜಿಮೀನ್ ಜಿತಂಗ್ “[ವುಡಾರ್ಡ್ ಮತ್ತು ಕ್ರಾಚ್) ಜೀವನ ಮತ್ತು ಕಲೆಯ ಗಡಿಯನ್ನು ಅಳಿಸುವರು” ಎಂದು ಹೇಳಿದ್ದಾರೆ.[೧೧] ದರ್ ಸ್ಪೀಗಲ್ ರವರು ಫೈವ್ ಇಯರ್ಸ್ (Five Years)[೧೨] ಸಂಪುಟ ಒಂದನ್ನು ಕ್ರಾಚ್ ರವರ ಇಂಪಿರಿಯಂ ಕಾದಂಬರಿಗೆ “ಆಧ್ಯಾತ್ಮಿಕ ತಯಾರಿಯ ಬರಹ” ಎಂದಿದ್ದಾರೆ.[೧೩]

ಆಂಡ್ರೂ ಮೆಕ್ಕಾನ್ ಅವರ ಪ್ರಕಾರ, ವುಡಾರ್ಡ್ ಅವರು “ಮೂಲ ನಿವಾಸಿಗಳ ವಾರಸುದಾರರು ಪಳಯುಳಿಕೆಗಳಲ್ಲಿ ವಾಸಿಸುವ ಸ್ಥಳಕ್ಕೆ ದಾರಿ” ಎಂದು ಕೊಂಡಾಡಿದ್ದಾರೆ.[೧೪][ಟಿ ೧] ವುಡಾರ್ಡ್ ಅವರು “ಸಮುದಾಯದ ಉತ್ಕೃಷ್ಟ ಸಂಪ್ರದಾಯಕ್ಕೆ ಹೋಗಿ ಎಲಿಸಬೆತ್ ಫೋರ್ಸ್ಟರ್-ನಿಯೇಟ್ಜ್ಷೆ ಅವರ ಪೂರ್ವಜರ ಮನೆಯ ಜಾಗದಲ್ಲಿ ಬೇರುತ್ ಒಪೇರಾ ಹೌಸ್ ನಿರ್ಮಿಸಲು ಹೋಗಿದ್ದಾರೆ” ಎಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನೇವ ಜೆರ್ಮನಿಯ ಒಂದು ಉತ್ತಮ ನಗರವಾಗಿದ್ದು ಹಲವು ಹೋಟೆಲ್ ಸೌಕರ್ಯಗಳು ಮತ್ತು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ಹೊಂದಿದೆ.

ಡ್ರೀಮ್ ಮಷೀನ್[ಬದಲಾಯಿಸಿ]

1989 ರಿಂದ 2007 ರವರೆಗೆ ವುಡಾರ್ಡ್ ಡ್ರೀಮ್ ಮಷೀನ್ ನ ನಕಲುಗಳನ್ನು ತಯಾರಿಸಿದರು.[೧೫][೧೬] ಬ್ರಯಾನ್ ಜಿಸಿನ್ ಮತ್ತು ಇಯಾನ್ ಸೋಮೆರ್ವಿಲ್ ತಯಾರಿಸಿದ ಸ್ಟ್ರಾಬೋಸ್ಕೋಪಿಕ್ ಕಾಂಟ್ರಿವಾನ್ಸ್ ಒಂದು ಕಂಚು ಅಥವಾ ಕಾಗದ ಸುತ್ತುವ ವಿದ್ಯುತ್ ದೀಪದಿಂದ ಮಾಡಿದ ಒಂದು ಸಾಧನವಾಗಿದೆ. ಇದನ್ನು ಮುಚ್ಚಿದ ಕಣ್ಣಿನಿಂದ ಗಮನಿಸಿದಾಗ ಮಾನಸಿಕ ಭಾವನೆಗಳಿಂದ ಕನಸು ಅಥವಾ ಮಾದಕ ವಸ್ತುಗಳಿಂದ ಆಗುವ ಅನುಭವವಾಗುತ್ತದೆ.[ಟಿ ೨] ವುಡಾರ್ಡ್ ಅವರು ಒಂದು ಡ್ರೀಮ್ ಮಷೀನ್ ಅನ್ನು ವಿಲಿಯಂ ಎಸ್ ಬರೋ ಅವರ 1996 ಎಲ್.ಎ.ಸಿ.ಎಂ.ಎ ದೃಶ್ಯಗೋಚರ ಪೋರ್ಟ್ಸ್ ಆಫ್ ಎಂಟ್ರಿ[೧೭] ಗೆ ಕೊಡುಗೆ ನೀಡಿದರು. ನಂತರ ಅವರು ಬರಹಗಾರರ ಸ್ನೇಹ ಗಳಿಸಿ ಅವರಿಗೆ ಬೊಹೆಮಿಯನ್ ಮಾಡೆಲ್ (ಕಾಗದ) ಡ್ರೀಮ್ ಮಷೀನ್ ಅನ್ನು ಅವರ 83ನೇ ಮತ್ತು ಕೊನೆಯ ಹುಟ್ಟಿದ ಹಬ್ಬಕ್ಕೆ ಕೊಡುಗೆ ಕೊಟ್ಟರು.[೧೮][೧೯]: 23  ಸೋತಬಿ ಅವರು ಮೊದಲ ಮಷೀನ್ ಅನ್ನು ಓರ್ವ ಖಾಸಗಿ ಸಂಗ್ರಾಹಕರಿಗೆ 2002 ರಲ್ಲಿ ಹರಾಜಿನಲ್ಲಿ ಕೊಟ್ಟರು ಮತ್ತು ಉಳಿದ ಮಷೀನ್ ಬರೋ ಅವರು ಸ್ಪೆನ್ಸರ್ಸ್ ಮ್ಯೂಸಿಯಂ ಆಫ್ ಆರ್ಟ್ ನಿಂದ ಪಡೆದ ಬರೋಸ್ ಎಸ್ಟೇಟ್ ಸಾಲದಲ್ಲಿ ಇದೆ.

ಉಲ್ಲೇಖಗಳು ಮತ್ತು ಟಿಪ್ಪಣಿ[ಬದಲಾಯಿಸಿ]

ಟಿಪ್ಪಣಿ[ಬದಲಾಯಿಸಿ]

  1. ಸ್ವಿಸ್ ದೇಶದ ಉತ್ತಮ ಭಾಷಾಶಾಸ್ತ್ರಜ್ಞ ಥಾಮಸ್ ಶ್ಮಿತ್ ವುಡಾರ್ಡ್ ಅವರ ಪತ್ರಗಳ ಧ್ವನಿಯನ್ನು ಥಾಮಸ್ ಪಿಂಚನ್ ಕಾದಂಬರಿಯಲ್ಲಿ ಮೆಚ್ಚಿಕೊಂಡಿದ್ದಾರೆ.
  2. 1990 ರಲ್ಲಿ ವುಡಾರ್ಡ್ ಒಂದು ಕಾಲ್ಪನಿಕ ಮನಪರಿವರ್ತನೆ ಮಾಡಬಲ್ಲ ಸಾಧನವನ್ನು ಕಂಡುಹಿಡಿದಿದ್ದಾರೆ - ಫೆರಾಲೀಮಿನಲ್ ಲಿಂಕಾಂತ್ರೋಫೈಝರ್. ಇದು ಡ್ರೀಮ್ ಮಷೀನ್ ಗೆ ತದ್ವಿರುದ್ಧವಾಗಿ ಕೆಲಸ ಮಾಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Carpenter, S., "In Concert at a Killer's Death", ಲಾಸ್ ಏಂಜಲೀಸ್ ಟೈಮ್ಸ್, 9 ಮೇ 2001.
  2. Rapping, A., ವುಡಾರ್ಡ್ ಭಾವಚಿತ್ರ (ಸಿಯಾಟಲ್: ಗೆಟ್ಟಿ ಚಿತ್ರಗಳು, 2001).
  3. Reich, K., "Family to Sue City, Firms Over Angels Flight Death", ಲಾಸ್ ಏಂಜಲೀಸ್ ಟೈಮ್ಸ್, 16 ಮೇ 2001.
  4. Dawson, J., Los Angeles' Angels Flight (ಮೌಂಟ್ ಪ್ಲೆಸೆಂಟ್, ದಕ್ಷಿಣ ಕೆರೊಲಿನಾ: ಆರ್ಕೇಡಿಯ ಪಬ್ಲಿಷಿಂಗ್, 2008), ಪು. 125.
  5. Manzer, T., "Pelican's Goodbye is a Sad Song", ಪ್ರೆಸ್-ಟೆಲಿಗ್ರಾಂ, 2 ಅಕ್ಟೋಬರ್ 1998.
  6. Carozzi, I., "La storia di Nueva Germania", ಪೋಸ್ಟ್, 13 ಅಕ್ಟೋಬರ್ 2011.
  7. Chandarlapaty, R., "Woodard and Renewed Intellectual Possibilities", Seeing the Beat Generation (Jefferson, NC: McFarland & Company, 2019), ಪುಟಗಳು. 98–101.
  8. Epstein, J., "Rebuilding a Home in the Jungle" Archived 2016-10-09 ವೇಬ್ಯಾಕ್ ಮೆಷಿನ್ ನಲ್ಲಿ., ಸ್ಯಾನ್ ಫ್ರಾನ್ಸಿಸ್ಕೋ ಕ್ರಾನಿಕಲ್, 13 ಮಾರ್ಚ್ 2005.
  9. Schröter, J., "Interpretive Problems with Author, Self-Fashioning and Narrator", ಒಳಗೆ Birke, Köppe, ಸಂಪಾದಕರು, ಲೇಖಕರು ಮತ್ತು ನಿರೂಪಕರು (ಬರ್ಲಿನ್: De Gruyter, 2015), ಪುಟಗಳು. 113–138..
  10. ವುಡಾರ್ಡ್, ಡ., "In Media Res", 032c, ಬೇಸಿಗೆ 2011, ಪುಟಗಳು. 180–189.
  11. Link, M., "Wie der Gin zum Tonic", ಫ್ರಾಂಕ್ಫರ್ಟರ್ ಆಲ್ಗೆಮೈನ್ ಝೀಟಂಗ್, 9 ನವೆಂಬರ್ 2011.
  12. ಕ್ರಾಚ್ಟ್, ಕ್ರಿ., ಮತ್ತು ವುಡಾರ್ಡ್, Five Years (ಹ್ಯಾನೋವರ್: Wehrhahn Verlag, 2011).
  13. Diez, G., "Die Methode Kracht", Der Spiegel, 13 ಫೆಬ್ರವರಿ 2012.
  14. McCann, A. L., "Allegory and the German (Half) Century", ಸಿಡ್ನಿ ರಿವ್ಯೂ ಆಫ್ ಬುಕ್ಸ್, 28 ಆಗಸ್ಟ್ 2015.
  15. Allen, M., "Décor by Timothy Leary", ದಿ ನ್ಯೂ ಯಾರ್ಕ್ ಟೈಮ್ಸ್, 20 ಜನವರಿ 2005.
  16. Bolles, D., "Dream Weaver", ಲಾಸ್ ಏಂಜಲೀಸ್ ವೀಕ್ಲಿ, 26 ಜುಲೈ-1 ಆಗಸ್ಟ್, 1996.
  17. Knight, C., "The Art of Randomness", ಲಾಸ್ ಏಂಜಲೀಸ್ ಟೈಮ್ಸ್, 1 ಆಗಸ್ಟ್ 1996.
  18. ಯುನೈಟೆಡ್ ಸ್ಟೇಟ್ಸ್ ಆಫ್ ರಾಯಭಾರ, ಪ್ರೇಗ್, "Literary Centenary", ಅಕ್ಟೋಬರ್ 2014.
  19. ವುಡಾರ್ಡ್, "Burroughs und der Steinbock", ಸ್ವಿಸ್ ತಿಂಗಳು, ಮಾರ್ಚ್ 2014, ಪು. 23.

ಹೊರಗಿನ ಕೊಂಡಿಗಳು[ಬದಲಾಯಿಸಿ]