ಡಾಂಗಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ಲೂಟೂತ್ ಡಾಂಗಲ್

ಒಂದು ಇಲೆಕ್ಟ್ರಾನಿಕ್ ಸಾಧನಕ್ಕೆ ಜೋಡಣೆಯಾಗಿದ್ದುಕೊಂಡು ಕೆಲವು ಹೆಚ್ಚಿಗೆ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ಚಿಕ್ಕ ಯಂತ್ರಾಂಶಕ್ಕೆ ಡಾಂಗಲ್ ಎನ್ನುತ್ತಾರೆ.[೧] ಪ್ರಾರಂಭದ ದಿನಗಳಲ್ಲಿ ಗಣಕಗಳಿಗೆ ಜೋಡಣೆಯಾಗುವ, ಕೆಲವು ತಂತ್ರಾಂಶಗಳನ್ನು ಪ್ರತಿ ಮಾಡದಂತೆ ನಿರ್ಬಂಧಿಸುವಂತಹ ಚಿಕ್ಕ ಸಾಧನಕ್ಕೆ ಡಾಂಗಲ್ ಎನ್ನುತ್ತಿದ್ದರು.

ಇತ್ತೀಚೆಗಿನ ದಿನಗಳಲ್ಲಿ ಇನ್ನೂ ಹಲವು ಕೆಲಸಗಳನ್ನು ಮಾಡುವ ಸಾಧನಗಳಿಗೂ ಡಾಂಗಲ್ ಎನ್ನುತ್ತಾರೆ. ಇವು ವೈಫೈ, ಬ್ಲೂಟೂತ್, ಟೆಲಿವಿಶನ್ ಗ್ರಾಹಕ, ಇತ್ಯಾದಿ ಸೌಲಭ್ಯಗಳನ್ನು ಇಂತಹ ಸೌಲಭ್ಯಗಳಿಲ್ಲದ ಗಣಕಗಳಿಗೆ ಒದಗಿಸುವ ಕೆಲಸಗಳಾಗಿರಬಹುದು. ಸಾಮಾನ್ಯವಾಗಿ ಈ ಡಾಂಗಲ್‍ಗಳು ಗಣಕ ಯಾ ಲ್ಯಾಪ್‍ಟಾಪ್‍ಗಳಿಗೆ ಯುಎಸ್‍ಬಿ ಕಿಂಡಿಯ ಮೂಲಕ ಜೋಡಣೆಯಾಗುತ್ತವೆ.

ಉದಾಹರಣೆಗಳು[ಬದಲಾಯಿಸಿ]

ತಂತ್ರಾಂಶ ಪ್ರತಿ ನಿರ್ಬಂಧನೆ[ಬದಲಾಯಿಸಿ]

  • ವೋಕ್ಸ್ ವಾಗನ್ ಕಂಪೆನಿಯ ವಾಹನಗಳ ಬಿಡಿಭಾಗಗಳ ಪಟ್ಟಿಯು ಸಿ.ಡಿ.ಯಲ್ಲಿ ದೊರೆಯುತ್ತಿತ್ತು. ಈ ಸಿ.ಡಿ.ಯನ್ನು ಗಣಕ ಯಾ ಲ್ಯಾಪ್‍ಟಾಪ್‍ನಲ್ಲಿ ಓದಬೇಕಿದ್ದರೆ ಈ ಸಿ.ಡಿ.ಯ ಜೊತೆ ದೊರೆಯುತ್ತಿದ್ದ ಡಾಂಗಲ್ ಅನ್ನು ಗಣಕ ಯಾ ಲ್ಯಾಪ್‍ಟಾಪ್‍ಗೆ ಜೋಡಿಸಬೇಕಿತ್ತು.
  • ಶ್ರೀಲಿಪಿ, ಆಕೃತಿ, ಇತ್ಯಾದಿ ಭಾರತೀಯ ಭಾಷೆಗಳ ಫಾಂಟ್ ಮತ್ತು ಕೀಬೋರ್ಡ್ ತಂತ್ರಾಂಶಗಳನ್ನು ಬಳಸಬೇಕಿದ್ದರೆ ಅವುಗಳ ಜೊತೆ ಬರುತ್ತಿದ್ದ ಡಾಂಗಲ್ ಅನ್ನು ಗಣಕಕ್ಕೆ ಜೋಡಿಸಬೇಕಿತ್ತು. ಒಂದು ಗಣಕದಲ್ಲಿ ಏಕವ್ಯಕ್ತಿಯಿಂದ ಬಳಸಲು ಎಂದು ಕೊಂಡುಕೊಂಡ ತಂತ್ರಾಂಶವನ್ನು ಏಕಕಾಲಕ್ಕೆ ಹಲವು ಗಣಕಗಳಲ್ಲಿ ಬಳಸದಂತೆ ಮಾಡಲು ಈ ಡಾಂಗಲ್ ಬಳಕೆಯಾಗುತ್ತಿತ್ತು.

ಚಿಕ್ಕ ಸಾಧನಗಳನ್ನು ಬಳಸಲು[ಬದಲಾಯಿಸಿ]

  • ಅವಕೆಂಪು (infrared) ದೂರನಿಯಂತ್ರಕಗಳನ್ನು ಬಳಸಲು. ಸಾಮಾನ್ಯವಾಗಿ ಇಂತಹ ದೂರನಿಯಂತ್ರಕಗಳನ್ನು ಗೋಷ್ಠಿ ಮತ್ತು ವಿಚಾರಸಂಕಿರಣಗಳಲ್ಲಿ ಪ್ರೆಸೆಂಟೇಶನ್ ಕೊಡುವಾಗ ಮುಂದಿನ ಅಥವಾ ಹಿಂದಿನ ಸ್ಲೈಡ್‍ಗಳಿಗೆ ಹೋಗಲು ಬಳಸುತ್ತಾರೆ.
  • ಎಚ್‍ಡಿಎಂಐ ಸೌಲಭ್ಯವಿಲ್ಲದ ಹಳೆಯ ಗಣಕಗಳಿಗೆ ಈ ಸೌಲಭ್ಯವನ್ನು ನೀಡುವ, ಯುಎಸ್‍ಬಿ ಕಿಂಡಿಯ ಮೂಲಕ ಜೋಡಣೆಯಾಗುವ, ಚಿಕ್ಕ ಸಾಧನ.

ಅಡಾಪ್ಟರ್[ಬದಲಾಯಿಸಿ]

  • ಕೆಲವು ಲ್ಯಾಪ್‍ಟಾಪ್‍ಗಳಲ್ಲಿ ಎಚ್‍ಡಿಎಂಐ ಕಿಂಡಿ ಇರುವುದಿಲ್ಲ. ವಿಜಿಎ ಕಿಂಡಿ ಮಾತ್ರ ಇರುತ್ತದೆ. ಕೆಲವು ಆಧುನಿಕ ಪ್ರೊಜೆಕ್ಟರ್‍ಗಳಲ್ಲಿ ಎಚ್‍ಡಿಎಂಐ ಸಂಪರ್ಕ ಮಾತ್ರವಿರುತ್ತದೆ, ವಿಜಿಎ ಸಂಪರ್ಕ ಇರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಲ್ಯಾಪ್‍ಟಾಪ್‍ಗೆ ಒಂದು ಡಾಂಗಲ್ ಜೋಡಿಸಿ ಅದಕ್ಕೆ ಎಚ್‍ಡಿಎಂಐ ಕೇಬಲ್ ಜೋಡಿಸಿ ಅದರ ಮೂಲಕ ಪ್ರಜೆಕ್ಟರ್‍ಗೆ ಜೋಡಿಸಲಾಗುತ್ತದೆ.

ಇತರೆ[ಬದಲಾಯಿಸಿ]

  • ಬಹುತೇಕ ಗಣಕಗಳಲ್ಲಿ ಬ್ಲೂಟೂತ್ ಸೌಲಭ್ಯವಿರುವುದಿಲ್ಲ. ಅಂತಹ ಗಣಕಗಳಿಗೆ ಬ್ಲೂಟೂತ್ ಸೌಲಭ್ಯವನ್ನು ಒದಗಿಸುವ ಡಾಂಗಲ್‍ಗಳು ಲಭ್ಯವಿವೆ.
  • ಬಹುತೇಕ ಗಣಕಗಳಲ್ಲಿ ವೈಫೈ ಸೌಲಭ್ಯವಿರುವುದಿಲ್ಲ. ಅಂತಹ ಗಣಕಗಳಿಗೆ ವೈಫೈ ಸೌಲಭ್ಯವನ್ನು ಒದಗಿಸುವ ಡಾಂಗಲ್‍ಗಳು ಲಭ್ಯವಿವೆ.
  • ಎಫ್.ಎಂ. ಪ್ರೇಷಕಗಳು. ಗಣಕ ಯಾ ಲ್ಯಾಪ್‍ಟಾಪ್‍ನ ಯುಎಸ್‍ಬಿ ಕಿಂಡಿಗೆ ಇವು ಜೋಡಣೆಯಾಗುತ್ತವೆ. ಪ್ಲೇ ಆಗುತ್ತಿರುವ ದ್ವನಿಯನ್ನು ಈ ಪ್ರೇಷಕವು ಎಫ್.ಎಂ. ತರಂಗಗಳಲ್ಲಿ ಕಳುಹಿಸುತ್ತದೆ. ಅದನ್ನು ಎಫ್.ಎಂ. ರೇಡಿಯೋ ಮೂಲಕ ಸ್ವೀಕರಿಸಿ ಆಲಿಸಬಹುದು.

ಉಲ್ಲೇಖ[ಬದಲಾಯಿಸಿ]

  1. Watson, David Lilburn; Jones, Andrew (2013-08-30). Digital Forensics Processing and Procedures: Meeting the Requirements of ISO 17020, ISO 17025, ISO 27001 and Best Practice Requirements. Newnes. ISBN 9781597497459.
"https://kn.wikipedia.org/w/index.php?title=ಡಾಂಗಲ್&oldid=803750" ಇಂದ ಪಡೆಯಲ್ಪಟ್ಟಿದೆ