ಠೇಚಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಠೇಚಾ ಖಾರವಾಗಿರುವ ಒಂದು ವ್ಯಂಜನವಾಗಿದೆ. ಇದನ್ನು ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳಾದ್ಯಂತ ತಯಾರಿಸಲಾಗುತ್ತದೆ. ಇದರ ಅನೇಕ ರೂಪಗಳಿವೆ ಆದರೆ ಮುಖ್ಯವಾದ ಘಟಕಾಂಶಗಳೆಂದರೆ ಮೆಣಸಿನಕಾಯಿ (ಹಸಿರು ಅಥವಾ ಕೆಂಪು) ಮತ್ತು ಬೆಳ್ಳುಳ್ಳಿ.ಇದನ್ನು ಹಲವುವೇಳೆ ಎಣ್ಣೆಯಲ್ಲಿ, ಜೊತೆಗೆ ಜೀರಿಗೆ, ಎಳ್ಳು, ಇಂಗು, ಲವಂಗ ಮತ್ತು ತುರಿದ ಕೊಬ್ಬರಿ ಸೇರಿದಂತೆ ಅನೇಕ ಸಂಬಾರ ಪದಾರ್ಥಗಳನ್ನು ಸೇರಿಸಿ ಹುರಿಯಲಾಗುತ್ತದೆ. ಸಾಂಪ್ರದಾಯಿಕ ಪಾಕಶೈಲಿಗಳಲ್ಲಿ ಘಟಕಾಂಶಗಳನ್ನು ಲೋಹದಲ್ಲಿ ಅಥವಾ ಕಲಬತ್ತು ಕುಟ್ಟಣಿ ಬಳಸಿ ಪುಡಿಮಾಡಬೇಕು ಅಥವಾ ಕುಟ್ಟಬೇಕು ಎಂದು ಹೇಳಲಾಗಿದೆ. ಆದರೆ ಆಧುನಿಕ ಅಡುಗೆ ಮನೆಗಳಲ್ಲಿ ಹಲವುವೇಳೆ ಆಹಾರ ಸಂಸ್ಕಾರಗಳಲ್ಲಿ ರುಬ್ಬಿಕೊಳ್ಳಲಾಗುತ್ತದೆ.[೧][೨][೩] ಇದನ್ನು ಝುಣಕ ಭಕ್ರಿಯಂತಹ ಖಾದ್ಯಗಳೊಂದಿಗೆ ಬಡಿಸಲಾಗುತ್ತದೆ.[೪] ಅಥವಾ ಜೋಳದ ರೊಟ್ಟಿಯೊಂದಿಗೆ ತಿನ್ನಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Sonal Thakur (21 February 2011). Musings. AuthorHouse. p. 132. ISBN 978-1-4678-9364-0. Retrieved 10 April 2013.
  2. Sanjeev Kapoor. Mirch Mazaa. Popular Prakashan. p. 83. ISBN 978-81-7991-573-8. Retrieved 10 April 2013.
  3. Asha Khatau (1 February 2004). Epicure S Vegetarian Cuisines Of India. Popular Prakashan. p. 57. ISBN 978-81-7991-119-8. Retrieved 10 April 2013.
  4. Deshmukh, Gayatri (2012-04-25). "Vandana Gupte believes in nature and God". The Times of India. Archived from the original on 2013-06-29. Retrieved 6 April 2013.
"https://kn.wikipedia.org/w/index.php?title=ಠೇಚಾ&oldid=1055586" ಇಂದ ಪಡೆಯಲ್ಪಟ್ಟಿದೆ