ಟೆಲಿಗ್ರಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೮೪೦ರ ದಶಕದಲ್ಲಿ ಅಮೇರಿಕಾ ದೇಶದಲ್ಲಿ ದೂರಸಂಪರ್ಕ ತಂತಿ ಸಂಸ್ಥೆ ಹುಟ್ಟಿಕೊಂಡಿತು. ದೂರದ ಎರಡು ಸ್ಥಳಗಳ ಮಧ್ಯ ಟೆಲಿಗ್ರಾಫ್ ಕಂಬಗಳನ್ನು ಬಳಸಿ, ತಂತಿ ಎಳೆಯುತ್ತಿದ್ದರು. ಇದು ಸುದ್ದಿಯನ್ನು ತೀವ್ರವಾಗಿ ಸಾಂಕೇತಿಕ ರೂಪದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಲು ಅನುಕೂಲವಾಯಿತು.  ಎರಡೂ ಬದಿಗಳಲ್ಲಿ ಮೋಹರ್ಸ್ ಕೋಡಿಂಗ್ ಬಲ್ಲ, ಟೆಲಿಗ್ರಾಫ್ ಆಪರೇಟರ್ ಗಳು ಕಾರ್ಯ ನಿರ್ವಹಿಸುತ್ತಿದ್ದರು.

ನೇರ ವಿದ್ಯುತ್ ತಂತಿಯನ್ನು ಬಳಸಿ, ದ್ವಿಮಾನ ಪದ್ದತಿಯ ಸಾಂಕೇತಿಕ ಮೋರ್ಸ್ ಕೋಡಿಂಗ್ ರೂಪದಲ್ಲಿ, ದೂರದ ಸ್ಥಳಗಳಿಗೆ ಲಿಖಿತರೂಪದ ಮಾಹಿತಿ ರವಾನಿಸುವ ತಂತ್ರಜ್ಞಾನವನ್ನು ಟೆಲಿಗ್ರಾಫಿ ಅಥವಾ ಟೆಲಿಗ್ರಾಫ್ ತಂತಿ ವ್ಯವಸ್ಥೆ ಎನ್ನುವರು. ಇದರಲ್ಲಿ ಮಾಹಿತಿ ರವಾನಿಸಲು ವಿದ್ಯುತ್ ಸಿಗ್ನಲ್ ಗಳ ಬಳಕೆ ಮಾಡುತ್ತಾರೆ. ಟೆಲೆಗ್ರಾಫ್ ಸಂಪರ್ಕ ತಂತ್ರವು, ೧೮೩೭ರಲ್ಲಿ, ಅಮರಿಕಾ ದೇಶದಲ್ಲಿ ದೂರದ ಸ್ಥಳಕ್ಕೆ ವೇಗವಾಗಿ ಸುದ್ದಿ ಕಳುಹಿಸಲು, ಮಾನವ ನಿರ್ಮಿತ ಮೊಟ್ಟ ಮೊದಲ ಉಪಕರಣದ ಆವಿಸ್ಕಾರ. ಟೆಲಿಗ್ರಾಫ್ ತಂತಿಯ ಎರಡೂ ಬದಿಗಳ ಮದ್ಯ ನೇರ ವಿದ್ಯುತ್ ಬಳಸಿ, ವಾಹಕ ತಂತಿಯಿಂದ, ಟೆಲಿಗ್ರಾಪ್ ಗುಂಡಿಯಿಂದ ಡಾ, ಮತ್ತು ಡಿಡ್, ಶಬ್ದ ಉಂಟುಮಾಡಿ, ದ್ವಿಮಾನ ಕೋಡಿಂಗ್ ಭಾಷೆಯ ರೂಪದಲ್ಲಿ ಲಿಖಿತ ಮಾಹಿತಿಯ ವಿನಿಮಯ ಮಾಡುವುದು. ಈ ಪ್ರಕಾರದ ವ್ಯವಸ್ಥೆಯಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾಹಿತಿ ಕಳುಹಿಸುವ ಕೆಲಸಕ್ಕೆ ಟೆಲಿಗ್ರಾಫ್ ಸಾಂಕೇತಿಕ ಭಾಷೆಬಲ್ಲ ಟೆಲಿಗ್ರಾಫರ್ ಗಳು ಬೇಕಾಗುತ್ತಾರೆ. ಮೋರ್ಸ್ ಅವರು, ಮೊದಲಬಾರಿಗೆ ಟೆಲಿಗ್ರಾಫ್ ತಂತಿಯಿಂದ ಸುದ್ದಿಯನ್ನು ೧೮೪೪ರ ಮೇ ೨೪ರಂದು ಅಮೇರಿಕೆಯ ವಾಸಿಂಗ್ಟನ್ ನಗರದಿಂದ, ಮೇರಿಲ್ಯಾಂಡನ ಬಾಲ್ಟಿಮೋರ್ ಗೆ ಕಳುಹಿಸಿದರು. ಟೆಲಿಗ್ರಾಫ್ ತಂತಿ ವ್ಯವಸ್ಥೆಯಿಂದ, ಆಧುನಿಕ ಕಾಲದಲ್ಲಿ, ವಿವಿಧ ದೇಶಗಳಲ್ಲಿ ಲಿಖಿತ ರೂಪದ ಸುದ್ದಿ-ಸಂಪರ್ಕದಲ್ಲಿ ಅಪಾರ ಪ್ರಗತಿ ಉಂಟಾಯಿತು. ಸರಕಾರಗಳ ಮಿಲಿಟರಿಯಲ್ಲಿ ಇದನ್ನು ಮೊದಮೊದಲು ಬಳಸಲಾಗುತ್ತಿತ್ತು. ಭಾರತದಲ್ಲಿ ಈ ತಂತ್ರವು ಬ್ರಿಟೀಶರ ಕಾಲದಲ್ಲಿ ಅಳವಡಿಸಲಾಯಿತು. ಭಾರತದಲ್ಲಿ ೧೮೫೦ರಲ್ಲಿ ಪ್ರಾಯೋಗಿಕವಾಗಿ ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ಗಳ ನಡುವೆ ತಂತಿ ಸಂದೇಶ ರವಾನೆ ವ್ಯವಸ್ಥೆ ಅಳವಡಿಸಲಾಯಿತು. ನಂತರ ಈ ತಂತಿ ವ್ಯವಸ್ಥೆ ೧೮೫೫ರಲ್ಲಿ ಕಾರ್ಯಾರಂಭ ಮಾಡಿತು.