ಜೂಲಿಯಾ ರಾಬರ್ಟ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೂಲಿಯಾ ರಾಬರ್ಟ್ಸ್‌

Roberts in 2002
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Julia Fiona Roberts
(1967-10-28) ಅಕ್ಟೋಬರ್ ೨೮, ೧೯೬೭ (ವಯಸ್ಸು ೫೬)
, U.S.
ವೃತ್ತಿ Actress, producer
ವರ್ಷಗಳು ಸಕ್ರಿಯ 1987–present
ಪತಿ/ಪತ್ನಿ Lyle Lovett (1993–1995) (divorced)
Daniel Moder (2002–present) 2 sons, 1 daughter


ಜೂಲಿಯಾ ಫಿಯೋನಾ ರಾಬರ್ಟ್ಸ್ (ಜನನ ಅಕ್ಟೋಬರ್ 28, 1967) ಒಬ್ಬ ಅಮೆರಿಕದ ಅಭಿನೇತ್ರಿ. ರಿಚರ್ಡ್ ಗೆರೆಯೊಡನೆ ಪ್ರಣಯ-ಹಾಸ್ಯಭರಿತ ಚಿತ್ರವಾದ, ವಿಶ್ವದಾದ್ಯಂತ ಪ್ರದರ್ಶನ ಕಂಡು $463 ಮಿಲಿಯನ್ ಗಳಿಸಿದ, ಪ್ರೆಟಿ ವುಮನ್ ನಲ್ಲಿನ ಇವಳ ಅಭಿನಯ ಜೂಲಿಯಾಗೆ ಹೆಸರು ತಂದುಕೊಟ್ಟಿತು. 1990ರಲ್ಲಿ ಸ್ಟೀಲ್ ಮ್ಯಾಗ್ನೋಲಿಯಾಸ್ ನ ಅಭಿನಯಕ್ಕಾಗಿ ಮತ್ತು 1991ರಲ್ಲಿ ಪ್ರೆಟಿ ವುಮನ್ ನ ಅಭಿನಯಕ್ಕಾಗಿ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯಲ್ಲಿ ಇದ್ದ ಜೂಲಿಯಾ, 2001ರ ಎರಿನ್ ಬ್ರೋಕೋವಿಚ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕಾಡಮಿಯ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿಯನ್ನು ಪಡೆದಳು. ಜೂಲಿಯಾ ಅಭಿನಯದ ರೋಚಕ-ಹಾಸ್ಯಪ್ರಧಾನ ಚಿತ್ರಗಳಾದ ಮೈ ಬೆಸ್ಟ್ ಫ್ರೆಂಡ್'ಸ್ ವೆಡ್ಡಿಂಗ್ , ಮಿಸ್ಟಿಕ್ ಪಿಝಾ , ನಾಟಿಂಗ್ ಹಿಲ್ , ರನವೇ ಬ್ರೈಡ್ ಮತ್ತು ಅಪರಾಧ ಪ್ರಧಾನವಾದ ದ ಪೆಲಿಕಾನ್ ಬ್ರೀಫ್ ಮತ್ತು ಓಷನ್'ಸ್ ಇಲೆವೆನ್ ಎಂಡ್ ಟ್ವೆಲ್ವ್ ಚಿತ್ರಗಳು ಒಟ್ಟಾರೆ $೨ ಬಿಲಿಯನ್ ಗಿಂತಲೂ ಹೆಚ್ಚು ಹಣ ಗಳಿಸಿ,ಹಣಗಳಿಕೆಯ ದೃಷ್ಟಿಯಿಂದ ಅವಳು ಅತ್ಯಂತ ಯಶಸ್ವಿ ನಟಿ ಎಂಬ ಹಿರಿಮೆಗೆ ಪಾತ್ರಳಾದಳು.[೧]

ರಾಬರ್ಟ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದು, ಹಾಲಿವುಡ್ ರಿಪೋರ್ಟರ್ವಾರ್ಷಿಕ "ಪವರ್ ಲಿಸ್ಟ್"ನ ಗರಿಷ್ಠ ಗಳಿಕೆ ಹೊಂದಿರುವ ಮಹಿಳಾ ತಾರೆಯಾಗಿ, 2006ರಲ್ಲಿ ನಿಕೋಲೆ ಕಿಡ್ ಮನ್ ಆ ಔನ್ನತ್ಯವನ್ನು ಮುಟ್ಟುವವರೆಗೂ, 2002ರಿಂದ 2005ರವರೆಗೂ ಗರಿಷ್ಠ ಗಳಿಕೆಯ ಮೊದಲ ಸ್ಥಾನವನ್ನಲಂಕರಿಸಿದ್ದಳು .1990ರ ಪ್ರೆಟಿ ವುಮನ್ ಗೆ ಅವಳು ಪಡೆದ ಸಂಭಾವನೆ {/0{2}}$300,೦೦೦;2003ರಲ್ಲಿ ಮೋನಾ ಲಿಸಾ ಸ್ಮೈಲ್ ಚಿತ್ರಕ್ಕೆ ಅಂದಿನವರೆಗೂ ಯಾವ ನಟಿಯೂ ಪಡೆಯದಿದ್ದ ಮೊತ್ತವಾದ $25 ಮಿಲಿಯನ್ ಗಳನ್ನು ಅವಳು ಸಂಭಾವನೆಯಾಗಿ ಪಡೆದಳು.' 2007ರಲ್ಲಿ ರಾಬರ್ಟ್ಸ್ ಳ ಒಟ್ಟು ಗಳಿಕೆ ಸುಮಾರು $140 ಮಿಲಿಯನ್ ಎಂದು ಅಂದಾಜಿಸಲಾಗಿತ್ತು.[೨]

ರಾಬರ್ಟ್ಸ್ ವೋಗ್ ಪತ್ರಿಕೆಯ ರಕ್ಷಾಪುಟದ ಮೇಲೆ ಗೋಚರಿಸಿದ ಮೊಟ್ಟಮೊದಲ ನಟಿ. GQ ಸಹ ಒಮ್ಮೆ ರಾಬರ್ಟ್ಸ್ ತಮ್ಮ ಪತ್ರಿಕೆಯ ಮುಖಪುಟವನ್ನು ಅಲಂಕರಿಸಿದ ಮೊದಲ ಮಹಿಳೆ ಎಂದು ಹೇಳಿಕೆ ನೀಡಿದ್ದರೂ, ನಂತರ ಆ ವರದಿ ತಪ್ಪೆಂದೂ, ಕೆರಾಲ್ ಚಾನ್ನಿಂಗ್ ಇವಳಿಗೂ ಮುಂಚೆ, 1964ರಲ್ಲಿ GQ ಮುಖಪುಟದಲ್ಲಿ ಗೋಚರಿಸಿದ್ದಳೆಂದೂ ಹೇಳಿಕೆ ನೀಡಿ ತನ್ನ ಮುಂಚಿನ ಹೇಳಿಕೆಯನ್ನು ಹಿಂತೆಗೆದುಕೊಂಡಿತು.[೩] ಪೀಪಲ್ ಪತ್ರಿಕೆಯು ಅವಳನ್ನು "ಜಗತ್ತಿನ ೫೦ ಬಲು ಸುಂದರ ವ್ಯಕ್ತಿಗಳು" ಪಟ್ಟಿಯಲ್ಲಿ ೧೧ ಬಾರಿ ಪ್ರಕಟಿಸಿದೆ; ಹಲ್ಲೆ ಬೆರ್ರಿಯೂ ಇಷ್ಟೇ ಬಾರಿ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ. 2001ರಲ್ಲಿ ಲೇಡೀಸ್ ಹೋಮ್ ಜರ್ನಲ್ ಅವಳನ್ನು ಅಮೆರಿಕದ ಶ್ರೇಷ್ಠ ಪ್ರಭಾವಶಾಲಿ ಮಹಿಳೆಯರ ಪೈಕಿ11ನೆಯವಳೆಂದು ಘೋಷಿಸಿ, ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಕಾಂಡೊಲೀಝಾ ರೈಸ್ ಮತ್ತು ಮೊದಲ ಲೇಡಿ ಲಾರಾ ಬುಷ್ ಗಿಂತಲೂ ಉನ್ನತ ಸ್ಥಾನದಲ್ಲಿ ಇವಳನ್ನು ಗುರುತಿಸಿತು.[೪] ರಾಬರ್ಟ್ಸ್ ಳು ರೆಡ್ ಓಮ್ ಫಿಲಂಸ್ ಎಂಬ ನಿರ್ಮಾಣಸಂಸ್ಥೆಯನ್ನು ನಡೆಸುತ್ತಿದ್ದಾಳೆ. (ರೆಡ್ ಓಂ ಎಂಬುದು ಅವಳ ಪತಿಯ ಅಂತ್ಯನಾಮವಾದ ಮಾಡರ್ ಎಂಬುದರ ತಿರುವುಮುರುವಾದ ರೂಪ.

ಆರಂಭಿಕ ಜೀವನ[ಬದಲಾಯಿಸಿ]

ರಾಬರ್ಟ್ಸ್ ಜಾರ್ಜಿಯಾದ ಅಟ್ಲಾಂಟಾದ ಕ್ರಾಫರ್ಡ್ ಲಾಂಗ್ ಆಸ್ಪತ್ರೆ (ಈಗಿನ ಎಮೋರಿ ಹಾಸ್ಪಿಟಲ್ ಮಿಡ್ ಟೌನ್)ಯಲ್ಲಿ ಬೆಟ್ಟಿ ಲೂ (ಜನ್ಮನಾಮ ಬ್ರೆಡೆಮಸ್) ಮತ್ತು ವಾಲ್ಟರ್ ಗ್ರೇಡಿ ರಾಬರ್ಟ್ಸ್ ರ ಮಗಳಾಗಿ ಜನಿಸಿದಳು.[೫][೬] ಅವಳ ಅಣ್ಣ ಎರಿಕ್ ರಾಬರ್ಟ್ಸ್ (ಕೆಲಕಾಲ ಅವನಿಂದ ದೂರವಾಗಿದ್ದು ನಂತರ 2004ರಲ್ಲಿ ರಾಜಿಯಾದಳು)ಮತ್ತು ತಂಗಿ ಲಿಸಾ ರಾಬರ್ಟ್ಸ್ ಗಿಲಾನ್ ಸಹ ನಟನಕಲಾ ಚತುರರೇ. ರಾಬರ್ಟ್ಸ್ ಳ ಮಾತಾಪಿತರು ಒಂದು ಕಾಲದಲ್ಲಿ ನಟನೆ ಮತ್ತು ನಾಟಕರಚನೆಯಲ್ಲಿ ತೊಡಗಿದ್ದು, ಸೇನಾದಳಗಳಿಗೆಂದು ನಾಟಕಗಳನ್ನು ನಿರ್ಮಿಸುತ್ತಿದ್ದ ಕಾಲದಲ್ಲಿ ಪರಸ್ಪರ ಭೇಟಿಯಾದರು ಮತ್ತು ನಂತರದ ದಿನಗಳಲ್ಲಿ ಅಟ್ಲಾಂಟಾ ನಟರ ಮತ್ತು ಲೇಖಕರ ಶಿಬಿರವೊಂದನ್ನು ಜಾರ್ಜಿಯಾದ ಅಟ್ಲಾಂಟಾದಲ್ಲಿ, ಮಿಡ್ ಟೌನ್ ನ ಜುನಿಪರ್ ರಸ್ತೆಯ ಸಮೀಪದಲ್ಲೆ ಸ್ಥಾಪಿಸಿದರು. ರಾಬರ್ಟ್ಸ್ ಗರ್ಭಸ್ಥಳಾಗಿದ್ದ ಸಮಯದಲ್ಲಿ ಅವಳ ತಾಯಿಯು ತನ್ನ ಪತಿಯೊಡನೊಡಗೂಡಿ ಮಕ್ಕಳಿಗಾಗಿ ಒಂದು ಅಭಿನಯ ಕಲಿಕಾ ಶಾಲೆಯನ್ನು ಡಿಕಾಟರ್, ಜಾರ್ಜಿಯಾದಲ್ಲಿ ನಡೆಸುತ್ತಿದ್ದಳು. ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್ ನ ಮಕ್ಕಳು ಮತ್ತು ಕೊರೆಟ್ಟಾ ಸ್ಕಾಟ್ ಕಿಂಗ್ ನ ಮಕ್ಕಳು ಈ ಶಾಲೆಯಲ್ಲಿ ಓದಿದರು. ಇವರ ಸೇವೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದುದರ ಕುರುಹಾಗಿ ರಾಬರ್ಟ್ಸ್ ಳ ತಾಯಿಯು ಜೂಲಿಯಾಗೆ ಜನ್ಮವಿತ್ತಾಗ ಒದಗಿದ, ಪ್ರಸವಕಾಲದ ಆಸ್ಪತ್ರೆಯ ಖರ್ಚುಗಳನ್ನು ಶ್ರೀಮತಿ ಕಿಂಗ್ ಗೇ ಭರಿಸಿದರು.[೭]

ರಾಬರ್ಟ್ಸ್ ನ ತಾಯಿಯು ವಿವಾಹವಿಚ್ಛೇದನಕ್ಕೆ 1971ರಲ್ಲಿ ಅರ್ಜಿಯಿತ್ತು, 1972ರಲ್ಲಿ ವಿಚ್ಛೇದನವನ್ನು ಪಡೆದಳು.[೮] ನಂತರ ಇವರ ಕುಟುಂಬವು ಜಾರ್ಜಿಯಾದ ಸ್ಮಿರ್ನಾ(ಅಟ್ಲಾಂಟಾದ ಹೊರವಲಯದ ಒಂದು ಬಡಾವಣೆ)ದಲ್ಲಿ ನೆಲೆಸಿತು. ಇಲ್ಲಿ ರಾಬರ್ಟ್ಸ್ ಫಿಟ್ಸ್ ಹಗ್ ಲೀ ಎಲಿಮೆಂಟರಿ ಸ್ಕೂಲ್, ಗ್ರಿಫಿತ್ ಮಿಡಲ್ ಸ್ಕೂಲ್ ಮತ್ತು ಕ್ಯಾಂಪ್ ಬೆಲ್ ಪ್ರೌಢಶಾಲೆಗಳಲ್ಲಿ ಓದಿದಳು.[೯] ಅವಳ ತಾಯಿಯು ಮೈಕಲ್ ಮೋಟ್ಸ್ ಎಂಬುವನೊಂದಿಗೆ ಮರುಮದುವೆಯಾಗಿ 1976ರಲ್ಲಿ ನ್ಯಾನ್ಸಿ ಮೋಟ್ಸ್ ಎಂಬ ಹೆಣ್ಣುಮಗುವಿಗೆ ಜನ್ಮವಿತ್ತಳು. ರಾಬರ್ಟ್ಸ್ ಳ ತಂದೆಯು ಕ್ಯಾನ್ಸರ್ ರೋಗಕ್ಕೆ ಬಲಿಯಾದಾಗ ಅವಳು ಇನ್ನೂ ಹತ್ತರ ಬಾಲೆ.

ಶಾಲೆಯಲ್ಲಿ ರಾಬರ್ಟ್ಸ್ ಬ್ಯಾಂಡ್ ನಲ್ಲಿ ಕ್ಲಾರಿನೆಟ್ ನುಡಿಸುತ್ತಿದ್ದಳು. ಬಾಲ್ಯದಲ್ಲಿ ಮುಂದೊಮ್ಮೆ ಪಶುವೈದ್ಯಳಾಗುವ ಕನಸು ಹೊತ್ತಿದ್ದ ಇವಳು, ಸ್ಮಿರ್ನಾದ ಕ್ಯಾಂಪ್ ಬೆಲ್ ಪ್ರೌಢಶಾಲೆಯಿಂದ ಉತ್ತೀರ್ಣಳಾಗಿ ಹೊರಬರುತ್ತಲೇ ನ್ಯೂಯಾರ್ಕ್ ನತ್ತ ಪಯಣ ಬೆಳೆಸಿ ತನ್ನ ಅಣ್ಣ ಮತ್ತು ತಂಗಿ ಲಿಸಾ ರಾಬರ್ಟ್ಸ್ ಗಿಲಾನ್ರೊಡನೊಡಗೂಡಿ ಅಭಿನಯವೃತ್ತಿಗೆ ಪೂರಕವಾದ ಶಿಕ್ಷಣ ಪಡೆಯಲಾರಂಭಿಸಿದಳು.[೧೦] ಅಲ್ಲಿನ ಕ್ಲಿಕ್ ಮಾಡೆಲಿಂಗ್ ಏಜೆನ್ಸಿಗೆ ಸೇರಿ, ಅಭಿನಯ ತರಬೇತಿ ತರಗತಿಗಳಿಗೂ ಸೇರಿಕೊಂಡಳು. "ಸ್ಕ್ರೀನ್ ಆಕ್ಟರ್ಸ್ ಗಿಲ್ಡ್"ಗೆ ರಾಬರ್ಟ್ಸ್ ಸೇರಲು ಹೋದಾಗ ಅಲ್ಲಿ ಜೂಲೀ ರಾಬರ್ಟ್ಸ್ ಎಂಬ ಹೆಸರಿನವಳೊಬ್ಬಳು ಆಗಲೇ ಸೇರಿದ್ದುದರಿಂದ ತನ್ನ ಮೂಲ ಹೆಸರಾದ ಜೂಲಿಯಾ ರಾಬರ್ಟ್ಸ್ ಎಂಬ ಹೆಸರಿನಲ್ಲೇ ಆ ಸಂಘಕ್ಕೆ ಸೇರಿದಳು. ತಾನು ಚಲನಚಿತ್ರದ ಸೆಟ್ ಗಳಿಗೆ ಹೋಗುವಾಗಲೆಲ್ಲಾ ತನ್ನ ಜೊತೆ ಕರೆದೊಯ್ಯುತ್ತಿದ್ದ, ರಾಬರ್ಟ್ಸ್ ಳ ಅಣ್ಣನ ಮಗಳಾದ ಎಮ್ಮಾ ರಾಬರ್ಟ್ಸ್ ಸಹ ತನ್ನ ತಂದೆ ಮತ್ತು ಚಿಕ್ಕಮ್ಮಂದಿರೊಂದಿಗೆ ಅಭಿನಯ ಕ್ಷೇತ್ರದಲ್ಲಿ ತೊಡಗಿಕೊಂಡಳು.

ವೃತ್ತಿಜೀವನ[ಬದಲಾಯಿಸಿ]

1986–1989[ಬದಲಾಯಿಸಿ]

ರಾಬರ್ಟ್ಸ್ , ತನ್ನ ಅಣ್ಣ ಎರಿಕ್ ನೊಡನೆ, ಬ್ಲಡ್ ರೆಡ್ ಚಿತ್ರದಲ್ಲಿ ಸಹನಟಿಯ ಪಾತ್ರ ನಿರ್ವಹಿಸುವುದರ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಳು.(ಅವಳಿಗೆ ಎರಡೇ ಪದ ಹೇಳುವಷ್ಟು ಅವಕಾಶವಿತ್ತಷ್ಟೆ). ಆ ಚಿತ್ರವು 1987ರಲ್ಲೇ ಚಿತ್ರೀಕರಣಗೊಂಡರೂ ಬಿಡುಗಡೆಯಾದದ್ದು 1898ರಲ್ಲಿ. ಫೆಬ್ರವರಿ ೧೩, 1987ರಂದು ಪ್ರಸಾರವಾದ ಕ್ರೈಮ್ ಸ್ಟೋರಿ ಯ ಮೊದಮೊದಲ ದಿನಗಳಲ್ಲೇ ಆ ಕಾರ್ಯಕ್ರಮದ "ದ ಸರ್ವೈವರ್" ಎಂಬ ಸಂಚಿಕೆಯ ಮೂಲಕ, ಡೆನಿಸ್ ಫರೀನಾಳೊಡನೆ, ಅತ್ಯಾಚಾರಕ್ಕ್ಕೆ ಬಲಿಯಾದ ಬಾಲಕಿಯ ಪಾತ್ರದಲ್ಲಿ ರಾಬರ್ಟ್ಸ್ ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡಳು. ಸಿಸಾಮಿ ಸ್ಟ್ರೀಟ್ ನಲ್ಲಿ ಎಲ್ಮೋ ಎಂಬ ಪಾತ್ರದ ಎದುರಾಗಿ ಅಭಿನಯಿಸಿದ ರಾಬರ್ಟ್ಸ್ ತನ್ನ ಭಾವನೆಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಪ್ರಬುದ್ಧವಾಗಿ ಪ್ರದರ್ಶಿಸಿದಳು. 1988ರಲ್ಲಿ ಸ್ವತಂತ್ರ ಚಲನಚಿತ್ರವಾದ ಮಿಸ್ಟಿಕ್ ಪಿಝಾ ದಲ್ಲಿನ ಅಭಿನಯದ ಮೂಲಕ ರಾಬರ್ಟ್ಸ್ ಚಿತ್ರರಸಿಕರ ಮನ ಸೆಳೆದಳು; ಅದೇ ವರ್ಷ ಮಿಯಾಮಿ ವೈಸ್ ನ 4ನೆಯ ಆವೃತ್ತಿಯ ಕಡೆಯ ಪ್ರದರ್ಶನದಲ್ಲಿಯೂ ಅಭಿನಯಿಸಿದಳು. ನಂತರದ ವರ್ಷದಲ್ಲಿ ಸ್ಟೀಲ್ ಮ್ಯಾಗ್ನೋಲಿಯಾಸ್ ಚಿತ್ರದಲ್ಲಿ ಮಧುಮೇಹವಿರುವ ಸಣ್ಣ ಪ್ರಾಯದ ವಧುವಿನ ಪಾತ್ರದಲ್ಲಿ ನೀಡಿದ ಅಭಿನಯಕ್ಕೆ ಅವಳ ಹೆಸರನ್ನು ಅಕಾಡಮಿ ಪ್ರಶಸ್ತಿಗಾಗಿ (ಅತ್ಯುತ್ತಮ ಸಹನಟಿ ಪ್ರಶಸ್ತಿಗಾಗಿ)ಸೂಚಿಸಲಾಗಿತ್ತು.

1990–2000[ಬದಲಾಯಿಸಿ]

1990ರ, ರಿಚರ್ಡ್ ಗೆರೆಯೊಡನೆ ಅಭಿನಯಿಸಿದ, ಸಿಂಡ್ರೆಲಾ ಪಿಗ್ಮಾಲಿಯನ್ ರೀತಿಯ ಕಥೆ ಹೊಂದಿದ, ಪ್ರೆಟಿ ವುಮನ್ ಚಿತ್ರದ ಮೂಲಕ ರಾಬರ್ಟ್ಸ್ ವಿಶ್ವದಾದ್ಯಂತ ಚಿತ್ರರಸಿಕರಿಗೆ ಪರಿಚಯವಾದಳು. ಈ ಪಾತ್ರ ವಹಿಸಲು ಮೊದಲ ಆಯ್ಕೆಗಳಾದ ಮಾಲಿ ರಿಂಗ್ ವಾಲ್ಡ್ ಮತ್ತು ಮೆಗ್ ರಿಯಾನ್ ಇಬ್ಬರೂ ಈ ಪಾತ್ರವನ್ನು ತಿರಸ್ಕರಿಸಿದ ಕಾರಣ ರಾಬರ್ಟ್ಸ್ ಈ ಪಾತ್ರವನ್ನು ಪಡೆದಳು. ಈ ಪಾತ್ರವು ಅವಳಿಗೆ ಅತ್ಯುತ್ತಮ ಅಭಿನೇತ್ರಿ ಎಂದು ಎರಡನೆಯ ಆಸ್ಕರ್ ಮೆಚ್ಚುಗೆ ಗಳಿಸಿಕೊಟ್ಟಿತು. ಬಾಕ್ಸ್ ಆಫೀಸ್ ನಲ್ಲಿ ಯಶ ಗಳಿಸಿದ ರಾಬರ್ಟ್ಸ್ ಳ ಮುಂದಿನ ಚಿತ್ರ ರೋಮಾಂಚಕವಾದ "ಸ್ಲೀಪಿಂಗ್ ವಿತ್ ದ ಎನಮಿ ". ಬುದ್ಧಿಸ್ಥಿಮಿತವಿಲ್ಲದ ಗಂಡನೊಡನೆ ಜೀವನ ಸಾಗಿಸಲಾಗದೆ, ಜರ್ಝರಿತಳಾದ ಹೆಣ್ದೊಬ್ಬಳು, ಪತಿ ಪ್ಯಾಟ್ರಿಕ್ ಬರ್ಗಿನ್ ನಿಂದ ತಪ್ಪಿಸಿಕೊಂಡು ಹೋಗಿ ಇಯೋವಾದಲ್ಲಿ ಹೊಸ ಬದುಕನ್ನು ಆರಂಭಿಸುವ ಪಾತ್ರವದು. 1991ರಲ್ಲಿ ಸ್ಟೀವನ್ ಸ್ಪೀಲ್ ಬರ್ಗ್ಹುಕ್ ಚಿತ್ರದಲ್ಲಿ ಟಿಂಕರ್ ಬೆಲ್ ಳ ಪಾತ್ರವನ್ನು ಮಾಡಿ, ಅದೇ ವರ್ಷ ಡೈಯಿಂಗ್ ಯಂಗ್ ಚಿತ್ರದಲ್ಲಿ ನರ್ಸ್ ಆಗಿ ಅಭಿನಯಿಸಿದಳು. ನಂತರದ ಎರಡು ವರ್ಷಗಳಲ್ಲಿ ರಾಬರ್ಟ್ ಆಲ್ಟ್ ಮನ್ದ ಪ್ಲೇಯರ್ (1992)ಎಂಬ ಚಿತ್ರದಲ್ಲಿನ ಚಿಕ್ಕ ಪಾತ್ರವೊಂದರ ಹೊರತಾಗಿ ಯಾವುದೇ ಚಿತ್ರದಲ್ಲಿ ಅಭಿನಯಿಸಲಿಲ್ಲ. 1993ರ ಆದಿಯಲ್ಲಿ ಅವಳು ಪೀಪಲ್ ಪತ್ರಿಕೆಯ ಮುಖಪುಟಕ್ಕೆ ವಸ್ತುವಾಗಿದ್ದು, "ಜೂಲಿಯಾ ರಾಬರ್ಟ್ಸ್ ಗೆ ಏನಾಯಿತು?" ಎಂಬ ಶೀರ್ಷಿಕಾಬರಹವೊಂದು ಪ್ರಕಟವಾಯಿತು.

1993ರಲ್ಲಿ ಜಾನ್ ಗ್ರಿಷಮ್ ರ ಕಾದಂಬರಿಯಾಧಾರಿತ ಯಶಸ್ವೀ ಚಿತ್ರ ದ ಪೆಲಿಕಾನ್ ಬ್ರೀಫ್ ನಲ್ಲಿ ಡೆನ್ಝೆಲ್ ವಾಷಿಂಗ್ಟನ್ ನೊಡನೆ ಸಹನಟಿಯಾಗಿ ಅಭಿನಯಿಸಿದಳು. ಲಿಯಾಮ್ ನೀಸನ್ ನೊಡನೆ ಸಹ ಅವಳು 1996ರಲ್ಲಿ ಮೈಕೆಲ್ ಕಾಲಿನ್ಸ್ ಎಂಬ ಚಿತ್ರದಲ್ಲಿ ಅಭಿನಯಿಸಿದಳು. 1995ರಲ್ಲಿ ಫ್ರೆಂಡ್ಸ್ ನ ಎರಡನೆಯ ಆವೃತ್ತಿ(ಕಂತು ೧೩ "ದ ಒನ್ ಆಪ್ಟರ್ ದ ಸೂಪರ್ ಬೌಲ್")ಯಲ್ಲಿ ಕಾಣಿಸಿಕೊಂಡಳು. ನಂತರದ ಹಲವು ವರ್ಷಗಳು ಅವಳು ಎಡೆಬಿಡದೆ ಸ್ಟೀಫನ್ ಫ್ರಿಯರ್ಸ್ ರವರ ಮೇರಿ ರೀಲಿ ಯಂತಹ(1996) ಹಲವಾರು ವಿಮರ್ಶೆ ಮತ್ತು ಗಳಿಕೆಗಳಲ್ಲಿ ಸೋತ ಚಿತ್ರಗಳಲ್ಲಿ ಅಭಿನಯಿಸಿದಳು. ಇವೆಲ್ಲಾ ಸೋಲುಗಳನ್ನು ಎದೆಗುಂದದೆ ಎದುರಿಸಿ ಮುಂದುವರೆದ ರಾಬರ್ಟ್ಸ್ 1997ರಲ್ಲಿ ಮೈ ಬೆಸ್ಟ್ ಫ್ರೆಂಡ್'ಸ್ ವೆಡ್ಡಿಂಗ್ ಚಿತ್ರದಲ್ಲಿ ಅಭಿನಯಿಸಿದ್ದು, ಚಿತ್ರವು ಹಣಗಳಿಕೆ ಮತ್ತು ವಿಮರ್ಶೆ ಎರಡರಲ್ಲೂ ಭೇಷ್ ಎನಿಸಿಕೊಂಡಿತು. 1999ರ ನಾಟಿಂಗ್ ಹಿಲ್ ಎಂಬ ಚಿತ್ರದಲ್ಲಿ ರಾಬರ್ಟ್ಸ್ ಹಗ್ ಗ್ರಾಂಟ್ ನೊಡನೆ ಅಭಿನಯಿಸಿದಳು. ಅದೇ ವರ್ಷ ಅವಳು ರಿಚರ್ಡ್ ಗೆರೆಯೊಂದಿಗಿನ ತನ್ನ ಎರಡನೆಯ ಚಿತ್ರವಾದ ರನವೇ ಬ್ರೈಡ್ ನಲ್ಲೂ ಮಿಂಚಿದಳು. ಲಾ & ಆರ್ಡರ್ ಎಂಬ ಟೆಲಿಸೀರಿಯಲ್ ನ "ಎಂಪೈರ್" ಎಂಬ ಸಂಚಿಕೆಯಲ್ಲಿ ರಾಬರ್ಟ್ಸ್ ಅತಿಥಿ ನಟಿಯಾಗಿ ಆ ಸೀರಿಯಲ್ ನ ಪ್ರಮುಖ ಪಾತ್ರಧಾರಿ ಬೆಂಜಮಿನ್ ಬ್ರೆಟ್ (ಅಂದಿನ ಅವಳ ಆಪ್ತ ಗೆಳೆಯ)ನೊಂದಿಗೆ ಕಾಣಿಸಿಕೊಂಡಳು. ಅಂತೆಯೇ 1999ರಲ್ಲಿ ಸೂಸನ್ ಸಾರಂಡಾನ್ ಳೊಡನೆ ಸ್ಟೆಪ್ ಮಾಮ್ ಎಂಬ ವಿಮರ್ಶಾತ್ಮಕವಾಗಿ ಪ್ಯಾನ್ ಮಾಡಲ್ಪಟ್ಟ[ಸೂಕ್ತ ಉಲ್ಲೇಖನ ಬೇಕು] ಚಿತ್ರದಲ್ಲೂ ಅಭಿನಯಿಸಿದಳು.

2001–2005[ಬದಲಾಯಿಸಿ]

ಓಷನ್'ಸ್ ಇಲೆವೆನ್ ನ ಪಾತ್ರವರ್ಗವಾದ ಬ್ರ್ಯಾಡ್ ಪಿಟ್, ಜಾರ್ಜ್ ಕ್ಲೂನೀ, ಮ್ಯಾಟ್ ಡಮಾನ್, ಆಂಟಿ ಗಾರ್ಸಿಯಾ, ರಾಬರ್ಟ್ಸ್ ನಿರ್ದೇಶಕ ಸ್ಟೀವನ್ ಸಾಡರ್ ಬರ್ಗ್ ನೊಡನೆ. ಡಿಸೆಂಬರ್ 2001ರಲ್ಲಿ.

2001ರಲ್ಲಿ ರಾಬರ್ಟ್ಸ್ [[ಪೆಸಿಫಿಕ್ ಗ್ಯಾಸ್ & ಎಲೆಕ್ಟ್ರಿಕ್ ಎಂಬ ಶಕ್ತಿ ಸಂಪನ್ಮೂಲದ ದೈತ್ಯಸಂಸ್ಥೆಯ ವಿರುದ್ಧ ಯಶಸ್ವಿಯಾಗಿ ದಾವೆ ಹಾಕಿ ಗೆಲ್ಲಲು ಸಹಾಯ ಮಾಡಿದ ಎರಿನ್ ಬ್ರೋಕೋವಿಚ್ ನ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದುದನ್ನು ಮೆಚ್ಚಿ ಅವಳಿಗೆ ಅಕಾಡಮಿಯ ಅತ್ತ್ಯುತ್ತಮ ನಟಿ ಪ್ರಶಸ್ತಿ|ಪೆಸಿಫಿಕ್ ಗ್ಯಾಸ್ & ಎಲೆಕ್ಟ್ರಿಕ್ ಎಂಬ ಶಕ್ತಿ ಸಂಪನ್ಮೂಲದ ದೈತ್ಯಸಂಸ್ಥೆಯ ವಿರುದ್ಧ ಯಶಸ್ವಿಯಾಗಿ ದಾವೆ ಹಾಕಿ ಗೆಲ್ಲಲು ಸಹಾಯ ಮಾಡಿದ ಎರಿನ್ ಬ್ರೋಕೋವಿಚ್ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದುದನ್ನು ಮೆಚ್ಚಿ ಅವಳಿಗೆ ಅಕಾಡಮಿಯ ಅತ್ತ್ಯುತ್ತಮ ನಟಿ ಪ್ರಶಸ್ತಿ]]ನೀಡಲಾಯಿತು. ತರುವಾಯದ ವರ್ಷದಲ್ಲಿ ಡೆನ್ಝೆಲ್ ವಾಷಿಂಗ್ಟನ್ ಗೆ ಅತ್ತ್ಯುತ್ತಮ ನಟ ಪ್ರಶಸ್ತಿ ನೀಡುವ ಸಂದರ್ಬದಲ್ಲಿ, ಟಾಮ್ ಕಾಂಟಿಯು ಅಲ್ಲಿ ಇಲ್ಲದಿರುವುದು ಅವಳಿಗೆ ಸಂತಸ ತಂದಿದೆ ಎಂದು ತಪ್ಪು ಹೆಸರು ಹೇಳಿ ಪೇಚಿಗೆ ಬಿದ್ದಳು. ಅವಳು ಹೇಳಹೊರಟಿದ್ದು ಬಿಲ್ ಕಾಂಟಿ ಎಂಬ ನಿರೂಪಕನ ಬಗ್ಗೆ; ಆತ ಹಿಂದಿನ ವರ್ಷ ರಾಬರ್ಟ್ಸ್ ಆಸ್ಕರ್ ಪ್ರಶಸ್ತಿ ಪಡೆದಾಗ ಮಾತನಾಡತೊಡಗಿದುದನ್ನು ಅವಸರದಿಂದ ಮುಗಿಸಲು, ಕಡಿತಗೊಳಿಸಲು, ಯತ್ನಿಸುತ್ತಿದ್ದ - ಆದರೆ ಪ್ರಮಾದವಶಾತ್ ಅವನ ಹೆಸರಿನ ಬದಲು ಈ ಸ್ಕಾಟಿಷ್ ನಟನ ಹೆಸರನ್ನು ಉಚ್ಚರಿಸಿಬಿಟ್ಟಳು.[೧೧] ಎರಿನ್ ಬ್ರೋಕೋವಿಚ್ ಚಿತ್ರ ನಿರ್ದೇಶಿಸಿದ ಸ್ಟೀವನ್ ಸಾಡರ್ ಬರ್ಗ್ ರೊಡನೆ ರಾಬರ್ಟ್ಸ್ ಮತ್ತೂ ಮೂರು ಚಿತ್ರಗಳಲ್ಲಿ ಭಾಗಿಯಾದಳು; ಓಷನ್'ಸ್ ಇಲೆವೆನ್ (2001), ಫುಲ್ ಫ್ರಂಟಲ್ (2002) ಮತ್ತು ಓಷನ್'ಸ್ ಟ್ವೆಲ್ವ್ (2004)ಆ ಮೂರು ಚಿತ್ರಗಳು. ನಂತರ 2001ರಲ್ಲಿ ರೋಡ್ ಗ್ಯಾಂಗ್ ಸ್ಟರ್ ಕಾಮೆಡಿ ದ ಮೆಕ್ಸಿಕನ್ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ತನ್ನ ಬಹಳ ಕಾಲದ ಗೆಳೆಯ ಬ್ರ್ಯಾಡ್ ಪಿಟ್ ನೊಡನೆ ನಟಿಸುವ ಅವಕಾಶ ದೊರೆತಂತಾಯಿತು. 2005ರಲ್ಲಿ ಡ್ರೀಮ್ ಗರ್ಲ್ ಎಂಬ, ಡೇವ್ ಮ್ಯಾಥ್ಯೂಸ್ ಬ್ಯಾಂಡ್ ನ ಯಶಸ್ವಿ ಸಿಂಗಲ್ (ರೆಕಾರ್ಡ್) ಸಂಗೀತದ ವೀಡಿಯೋದಲ್ಲಿ ರಾಬರ್ಟ್ಸ್ ಪಾಲ್ಗೊಂಡಳು.

2006ರಿಂದ ಇಂದಿನವರೆಗೆ[ಬದಲಾಯಿಸಿ]

ದ ಅಂಟ್ (Ant) ಬುಲಿ ಮತ್ತು ಚಾರ್ಲೊಟ್ಟೆ'ಸ್ ವೆಬ್ ಎಂಬ ಎರಡು ರಾಬರ್ಟ್ಸ್ ಚಿತ್ರಗಳು 2006ರಲ್ಲಿ ತೆರೆಕಂಡವು. ಎರಡೂ ಚಿತ್ರಗಳು ಕಾರ್ಟೂನ್ ಚಿತ್ರಗಳಾಗಿದ್ದು ಅವುಗಳಿಗೆ ರಾಬರ್ಟ್ಸ್ ಧ್ವನಿಯಾಧಾರಿತ ನಟನೆಯನ್ನು ಧಾರೆಯೆರೆದಳು. ಅವಳ ಮುಂದಿನ ಚಿತ್ರವು CBS ನ ಮಾಜಿ ಪತ್ರಕರ್ತ ಜಾರ್ಜ್ ಕ್ರೈಲ್ ಬರೆದ ಕೃತಿಯಾಧಾರಿತ, ಮೈಕ್ ನಿಕೋಲ್ಸ್ ನಿರ್ದೇಶಿತ ಹಾಗೂ ಟಾಮ್ ಹ್ಯಾಂಕ್ಸ್ ಮತ್ತು ಫಿಲಿಪ್ ಸೈಮರ್ ಹಾಫ್ ಮನ್ ಅಭಿನಯಿಸಿದ ಚಾರ್ಲೀ ವಿಲ್ಸನ್'ಸ್ ವಾರ್ ಎಂಬುದು; ಅದು ಡಿಸೆಂಬರ್ 21, 2007ರಂದು ಬಿಡುಗಡೆಯಾಯಿತು. ಫೆಬ್ರವರಿ 2008ರ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಯಾನ್ ರೀನಾಲ್ಡ್ಸ್ ಮತ್ತು ವಿಲ್ಲೆಮ್ ಡಫೋರೊಡನೆ ನಟಿಸಿದ ಫೈರ್ ಫ್ಲೈಸ್ ಇನ್ ದ ಗಾರ್ಡನ್ ಬಿಡುಗಡೆಯಾಯಿತು.

ಏಪ್ರಿಲ್ 19, 2006ರಂದು, ರಿಚರ್ಡ್ ಗ್ರೀನ್ ಬರ್ಗ್ ರವರ 1997ರ ನಾಟಕ ತ್ರೀ ಡೇಸ್ ಆಫ್ ರೈನ್ ಅನ್ನು ಮತ್ತೆ ಆಡಲು ತೆಗೆದುಕೊಂಡಾಗ ಅದರಲ್ಲಿನ ನ್ಯಾನ್ ಎಂಬ ಪಾತ್ರವನ್ನು, ಬ್ರ್ಯಾಡ್ಲೀ ಕೂಪರ್ ಮತ್ತು ಪಾಲ್ ರಡ್ ರೊಡನೆ, ಅಭಿನಯಿಸಿದಳು. ಮೊದಲ ವಾರ[೧೨] ದಲ್ಲೇ ನಿವ್ವಳ US$1 ಮಿಲಿಯನ್ ಅನ್ನು ಟಿಕೆಟ್ ಮಾರಾಟದ ಮೂಲಕ ಗಳಿಸಿದ ಈ ನಾಟಕವು ನಡೆದಷ್ಟು ದಿನವೂ ಲಾಭದಾಯಕವಾಗಿದ್ದರೂ,ರಾಬರ್ಟ್ಸ್ ಳ ಅಭಿನಯವು ಟೀಕೆಗೆ ಗುರಿಯಾಯಿತು. ನ್ಯೂ ಯಾರ್ಕ್ ಟೂಮ್ಸ್ ನ ವಿಮರ್ಶಕ ಬೆನ್ ಬ್ರ್ಯಾಂಟ್ಲಿಯು ಅವಳು "ತನ್ನಲ್ಲೇ ಹುದುಗಿಕೊಳ್ಳುವ ಗುಣದ ಹಿಡಿತಕ್ಕೆ ಸಿಲುಕಿ ಅಧೀರಳಾಗಿದ್ದಳು,(ವಿಶೇಷತಃ ಮೊದಲ ಅಂಕದಲ್ಲಿ) ನಾಟಕದ ಇತರ ಎರಡು ಪಾತ್ರಗಳ ಬಗ್ಗೆ ಕೊಂಚ ಮಾತ್ರ ತಿಳಿದಿದ್ದಳು" ಎಂದು ಟೀಕಿಸಿದನು[೧೩] . ಬ್ರ್ಯಾಂಟ್ಲಿಯು "ಗ್ರೀನ್ ಬರ್ಗ್ ರ ಚಿಕ್ಕದಾದ, ಚೊಕ್ಕವಾದ ನಾಟಕವ"ದ ನಿರ್ಮಾಣವನ್ನೂ ಟೀಕೆ ಮಾಡುತ್ತಾ "ಇಂತಹ ಭಾವನಾರಹಿತ, ಹರಕು ಹರಕಾದ, ಜೋ ಮ್ಯಾಂಟೆಲೋ ನಿರ್ದೇಶನದ, ಈ ಪ್ರದರ್ಶನದಿಂದ ಅದರಲ್ಲಿರಬಹುದಾದ ಕಲಾತ್ಮಕ ಗುಣಗಳನ್ನು ಅರಿಯುವುದು ಅಸಾಧ್ಯವೇ ಸೈ" ಎಂದನು.[೧೩] ತ್ರೀ ಡೇಸ್ ಆಫ್ ರೈನ್ ಟೋನಿ ಪ್ರಶಸ್ತಿಗಾಗಿ, ರಂಗಸಜ್ಜಿಕೆಯ ವಿಭಾಗದಲ್ಲಿ, ಎರಡು ನಾಮನಿರ್ದೇಶನಗಳನ್ನು ಪಡೆಯಿತು. 2009ರಲ್ಲಿ ಲ್ಯಾಂಕೋಮ್ ಕಂಪನಿಯು ಜೂಲಿಯಾ ರಾಬರ್ಟ್ಸ್ ತನ್ನ ಕಂಪನಿಯ ಗ್ಲೋಬಲ್ ರಾಯಭಾರಿಯಾಗುವರೆಂದು ಘೋಷಿಸಿತು.[೧೪] ರಾಬರ್ಟ್ಸ್ ಕ್ಲೈವ್ ಓವನ್ ರೊಡನೆ ಅಭಿನಯಿಸಿದ ಹಾಸ್ಯ-ರೋಚಕ ಚಿತ್ರ ಡ್ಯೂಪ್ಲಿಸಿಟಿಪಾತ್ರಕ್ಕೆ ತನ್ನ ಜೀವನದ ಏಳನೆಯ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವನ್ನು ಪಡೆದಳು. 2010ರಲ್ಲಿ ಅವಳು ಸಂಗೀತಗಾರರ ಪ್ರಣಯ-ಹಾಸ್ಯ ಪ್ರಧಾನ ಚಿತ್ರ ವಾದ ವ್ಯಾಲೆಂಟೈನ್ಸ್ ಡೇ ನಲ್ಲಿ ಶಿರ್ಲೀ ಮೆಕ್ಲೈನ್. ಕ್ಯಾಥೀ ಬೇಟ್ಸ್ ಮತ್ತು ಕ್ವೀನ್ ಲತೀಫಾ ರೊಡನೆ ಹಾಗೂ ಚಲನಚಿತ್ರರೂಕ್ಕೆ ಅಳವಡಿಸಲ್ಪಡುವ ಈಟ್, ಪ್ರೇ, ಲವ್ ನಲ್ಲಿ ಪಾತ್ರವಹಿಸಲಿದ್ದಾಳೆ. '

ಅಮೆರಿಕನ್ ಗರ್ಲ್ ಚಲನಚಿತ್ರಗಳು[ಬದಲಾಯಿಸಿ]

ರಾಬರ್ಟ್ಸ್ ತನ್ನ ತಂಗಿ ಲಿಸಾಳ ಜೊತೆ ನಿರ್ವಾಹಕ ನಿರ್ಮಾಪಕಿಯಾಗಿ ಸೇರಿ ಅಮೆರಿಕನ್ ಗರ್ಲ್ ನ ಹಲವಾರು ಪುಸ್ತಕಗಳನ್ನು ಚಲನಚಿತ್ರಕ್ಕೆ ಅಳವಡಿಸಿಕೊಳ್ಳುವುದರ ಮೂಲಕ ಅ ಪುಸ್ತಕಗಳಿಗೆ ಜೀವತುಂಬಿದಳು. ಆ ಕಂಪನಿಯ ಉತ್ಪಾದನಾ ಮತ್ತು ಸೇವಾ ಯೋಜನೆಗಳ ಗುರಿ ಅಮೆರಿಕನ್ ಇತಿಹಾಸದ ವಿವಿಧ ಕಾಲಘಟ್ಟಗಳ, ಬೊಂಬೆಗಳಾಗಿ ಬಿಂಬಿತವಾದ ಅಥವಾ ಕಥೆಗಳಲ್ಲಿ, ಅದರಲ್ಲೂ ಪುಸ್ತಕಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ವರ್ಣಿಸಲ್ಪಟ್ಟ, ಹದಿಹರೆಯಕ್ಕೆ ಮುಂಚಿನ ಹುಡುಗಿಯರ ಪಾತ್ರಗಳು. ಆ ಕಂಪನಿಯ ಹೆಗ್ಗಳಿಕೆಯೆಂದರೆ ಚರಿತ್ರಾರ್ಹವಾದ ೧೮-ಅಂಗುಲದ, ಪುಸ್ತಕ ಮತ್ತು ಪರಿಕರಗಳನ್ನು ಹೊಂದಿರುವಂತಹ, ಬೊಂಬೆಗಳ ಸಂಗ್ರಹ.[ಸೂಕ್ತ ಉಲ್ಲೇಖನ ಬೇಕು] ರಾಬರ್ಟ್ಸ್ ನಾಲ್ಕು ಚಲನಚಿತ್ರಗಳನ್ನು ನಿರ್ಮಿಸಿದ್ದಾಳೆ.[೧೫]

ಪ್ರಭಾವ[ಬದಲಾಯಿಸಿ]

ರಾಬರ್ಟ್ಸ್ ಳ ಚಿತ್ರಗಳು ಅಮೆರಿಕನ್ ಬಾಕ್ಸ್ ಆಫೀಸ್ ನಲ್ಲಿ $2.3 ಬಿಲಿಯನ್ ಗಿಂತಲೂ ಅಧಿಕ ಹಣ ಗಳಿಸಿ, ರಾಬರ್ಟ್ಸ್ ಗರಿಷ್ಠ ಗಳಿಕೆ ಹೊಂದಿದ ಮಹಿಳಾ ಚಲನಚಿತ್ರತಾರೆಯಾದಳು.[೧೬] ಜೇಮ್ಸ್ ಉಲ್ಮರ್ ನು ತಯಾರಿಸಿದ ಖಾಸಗಿ ಮತ್ತು ಸ್ಟುಡಿಯೋಬದ್ಧ ನಟ ಮತ್ತು ನಿರ್ದೇಶಕರು ವಿಶ್ವದಾದ್ಯಂತ ಸಮಗ್ರ ರೀತಿಯಲ್ಲಿ ಪ್ರಭಾವ ಬೀರುವುದರ ಅಳತೆಗೋಲಾದ ಉಲ್ಮರ್ ಸ್ಕೇಲ್ ನ ಪ್ರಕಾರ ರಾಬರ್ಟ್ಸ್, ಟಾಮ್ ಕ್ರೂಯಿಸ್ ಮತ್ತು ಟಾಮ್ ಹ್ಯಾಂಕ್ಸ್ ನಂತಹ ಪ್ರತಿಷ್ಠಿತರನ್ನೂ ಹಿಂದಿಕ್ಕಿ ಆ ಮಾನದಂಡದ ಶಿಖರದಲ್ಲಿ ರಾರಾಜಿಸುವುದರ ಮೂಲಕ ವಿಶ್ವದ ಮಹೋನ್ನತ ಪ್ರಭಾವಶಾಲಿ ವ್ಯಕ್ತಿಯಾಗಿ ಬಿಂಬಿಸಲ್ಪಟ್ಟಳು.

ವೈಯಕ್ತಿಕ ಜೀವನ[ಬದಲಾಯಿಸಿ]

ಸಂಬಂಧಗಳು[ಬದಲಾಯಿಸಿ]

ರಾಬರ್ಟ್ಸ್ ಳ ವೈಯಕ್ತಿಕ ಜೀವನವು ಆಗಾಗ್ಗೆ ಜನಮನ ಸೆಳೆಯುತ್ತಿತ್ತು. ಅವಳು ಹಲವಾರು ಖ್ಯಾತ ಪುರುಷರೊಂದಿಗೆ ಪ್ರಣಯಭರಿತ ಸಂಬಂಧಗಳನ್ನು ಹೊಂದಿದ್ದಳೆಂದು ವರದಿಗಳಿದ್ದು, ಲಿಯಾಮ್ ನೀಸನ್, ಡೈಲಾನ್ ಮೆಕ್ಡರ್ಮಾಟ್, ಕೀಫರ್ ಸದರ್ ಲ್ಯಾಂಡ್, ಲೈಲ್ ಲೊವೆಟ್, ಮ್ಯಾಥ್ಯೂ ಪೆರಿ, ಮತ್ತು ಬೆಂಜಮಿನ್ ಬ್ರ್ಯಾಟ್ ರೊಂದಿಗೆ ಅವಳ ಹೆಸರನ್ನು ಜೋಡಿಸಲಾಗಿದೆ. ಸ್ಟೀಲ್ ಮ್ಯಾಗ್ನೋಲಿಯಾಸ್ ನ ಸಹನಟ ಮೆಕ್ಡರ್ಮಾಟ್ ನೊಂದಿಗೆ ಕೆಲಕಾಲ ಅವಳ ವಿವಾಹ ನಿಶ್ಚಯವಾಗಿತ್ತು. ಸದರ್ ಲ್ಯಾಂಡ್ ನನ್ನು ಅವಳು ಭೇಟಿಯಾದದ್ದು 1990ರಲ್ಲಿ ಅವನು ತನ್ನ ಸಹನಟನಾಗಿ ಫ್ಲಾಟ್ ಲೈನರ್ಸ್ ನಲ್ಲಿ ಅಭಿನಯಿಸಲು ಬಂದಾಗ. ಆಗಸ್ಟ್ 1990ರಲ್ಲಿ ರಾಬರ್ಟ್ಸ್ ಮತ್ತು ಸದರ್ ಲ್ಯಾಂಡ್ ತಾವು ವಿವಾಹವಾಗುವುದಾಗಿ ಪ್ರಕಟಿಸಿ, ಸ್ಟುಡಿಯೋ-ರೂಪಿತವಾದ ಅದ್ಧೂರಿ ರೀತಿಯಲ್ಲಿ ಜೂನ್ 14, 1991ರಂದು ಮದುವೆಯಾಗಲು ನಿರ್ಧರಿಸಿದರು. ಮದುವೆಗೆ ಮೂರು ದಿನಗಳಿರುವಾಗ ರಾಬರ್ಟ್ಸ್ ವಿವಾಹವಾಗಲು ನಿರಾಕರಿಸಿದಳು. ನಂತರ ರಾಬರ್ಟ್ಸ್ ಸದರ್ ಲ್ಯಾಂಡ್ ನ ಸ್ನೇಹಿತನಾದ ಜಾಸನ್ ಪ್ಯಾಟ್ರಿಕ್ ನೊಡನೆ ಐರ್ಲ್ಯಾಂಡ್ ಗೆ ಹೋದಳು. ಜೂನ್ 27, 1993ರಂದು ಅವಳು ಕಂಟ್ರಿ ಹಾಡುಗಾರ ಲೈಲ್ ಲೊವೆಟ್ ನನ್ನು ಮದುವೆಯಾದಳು. ಲೊವೆಟ್ ತನ್ನ ತಂಡದೊಂದಿಗೆ ಪ್ರವಾಸ ಮಾಡುತ್ತಿದ್ದಾಗ ಅವನು ತಂಗಿದ್ದ ಸ್ಥಳಕ್ಕೆ ಹತ್ತಿರವಾದ ಮರಿಯನ್, ಇಂಡಿಯಾನಾಸೇಂಟ್ ಜೇಮ್ಸ್ ಲುಥೇರನ್ ಚರ್ಚ್ ನಲ್ಲಿ ಇವರ ಮದುವೆಯು ಜರುಗಿತು. ಮಾರ್ಚ್ 1995ರಲ್ಲಿ ಈ ಜೋಡಿ ಬೇರೆಯಾಗಿ, ನಂತರ ವಿಚ್ಛೇದನ ಹೊಂದಿದರು.

1998ರಲ್ಲಿ ರಾಬರ್ಟ್ಸ್ ಲಾ & ಆರ್ಡರ್ ನ ತಾರೆ ಬೆಂಜಮಿನ್ ಬ್ರ್ಯಾಟ್ ನೊಡನೆ ಓಡಾಡಲು ಆರಂಭಿಸಿದ್ದು, ರಾಬರ್ಟ್ಸ್ ಆಸ್ಕರ್ ಗಳಿಸಿದ ಮಾರ್ಚ್ 25, 2001ರ ಅಕಾಡಮಿ ಪ್ರಶಸ್ತಿ ಸಮಾರಂಭಕ್ಕೆ ಅವನೇ ಅವಳ ಬೆಂಗಾವಲಾಗಿದ್ದನು. ಮೂರು ತಿಂಗಳ ನಂತರ, ಜೂನ್ 2001ರಲ್ಲಿ, ರಾಬರ್ಟ್ಸ್ ಮತ್ತು ಬ್ರ್ಯಾಟ್ ತಮ್ಮನ್ನು ಇನ್ನು ಮುಂದೆ ಜೊಡಿ ಎಂದು ಪರಿಗಣಿಸಬಾರದೆಂದು ಹೇಳಿಕೆ ಇತ್ತರು. "ಕೋಮಲಭಾವ ಭರಿತ ಅಂತ್ಯವನ್ನು ನಮ್ಮ ಸಂಬಂಧ ತಲುಪಿದೆ" ಎಂದು ಅವಳು ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಳು.[೧೭]

ರಾಬರ್ಟ್ಸ್ ತನ್ನ ಈಗಿನ ಪತಿಯಾದ ಕ್ಯಾಮರಾಮ್ಯಾನ್ ಡೇನಿಯಲ್ ಮಾಡರ್ ನನ್ನು 2000ದ ಇಸವಿಯಲ್ಲಿ ತಾನು ಅಭಿನಯಿಸುತ್ತಿದ್ದ ದ ಮೆಕ್ಸಿಕನ್ ಚಿತ್ರದ ಸೆಟ್ ನಲ್ಲಿ ಭೇಟಿಯಾದಳು. ಆಗ ಮಾಡರ್ ವೆರಾ ಸ್ಟೀಮ್ ಬರ್ಗ್ ಮಾಡರ್ ಳೊಂದಿಗೆ ವಿವಾಹವಾಗಿದ್ದನು. ಒಂದು ವರ್ಷದ ನಂತರ ಅವನು ತನ್ನ ವಿವಾಹವಿಚ್ಛೇದನಕ್ಕೆ ಅರ್ಜಿ ನೀಡಿ,ತತ್ಸಂಬಂದಿತ ತೀರ್ಪು ಬಂದ ನಂತರ , ರಾಬರ್ಟ್ಸ್ ಳನ್ನು ನ್ಯೂ ಮೆಕ್ಸಿಕೋದ ಟಾವೋಸ್ ನಲ್ಲಿನ ಅವಳದೇ ಆದ ನಾಡಬಂಗಲೆಯಲ್ಲಿ ಜುಲೈ 4, 2002ರಂದು ವಿವಾಹವಾದನು.[೧೮] ನವೆಂಬರ್ ೨೮, 2004ರಂದು ಅವರು ಅವಳಿ ಮಕ್ಕಳಾದ (ಫ್ರೆಟರ್ನಲ್ ಟ್ವಿನ್ಸ್ ಎಂದು ಕರೆಯಲ್ಪಡುವ) ಹ್ಯಾಝೆಲ್ ಪ್ಯಾಟ್ರೀಷಿಯಾ ಎಂಬ ಮಗಳು ಮತ್ತು ಫಿನ್ನಾಯಸ್ "ಫ್ಲಿನ್" ವಾಲ್ಟರ್ ಎಂಬ ಮಗನಿಗೆ ಮಾತಾಪಿತೃಗಳಾದರು. ಅವರ ಮೂರನೆಯ ಶಿಶು, ಮಗನಾದ ಹೆನ್ರಿ ಡೇನಿಯಲ್ ಮಾಡರ್, ಜೂನ್ 18, 2007ರಂದು ಲಾಸ್ ಏಂಜಲೀಸ್ ನಲ್ಲಿ ಜನಿಸಿದನು.[೧೯]

ಸಹಾಯಾರ್ಥಗಳು[ಬದಲಾಯಿಸಿ]

ರಾಬರ್ಟ್ಸ್ ತನ್ನ ಸಮಯ ಮತ್ತು ಸಂಪನ್ಮೂಲಗಳನ್ನು UNICEF ಮತ್ತು ಇತರ ಪರೋಪಕಾರಿ ಸಂಸ್ಥೆಗಳೊಂದಿಗೆ ಹಲವಾರು ಬಾರಿ ಹಂಚಿಕೊಂಡಿದ್ದಾಳೆ. 1995ರ ಬೇಸಿಗೆಯಲ್ಲಿ, UNICEFನ ಉತ್ಸಾಹೀ ಬೆಂಬಲಿಗಳಾದ ರಾಬರ್ಟ್ಸ್ ತಾನು ಆ ಪರೋಪಕಾರಿ ಸಂಸ್ಥೆಯ ಬಹಳ ದೀನ ಪರಿಸ್ಥಿತಿಯಲ್ಲಿರುವ ದಾನ ಪಡೆಯುವವರನ್ನು ಭೇಟಿಯಾಗಲು ಬಯಸಿದಳು. ಮೇ 10ರಂದು ಪೋರ್ಟ್-ಆ-ಪ್ರಿನ್ಸ್ ಗೆ ಬಂದ ಅವಳು "ನನ್ನಿಂದ ನಾನೇ ಶಿಕ್ಷಣ ಪಡೆಯಲು ಬಂದೆ" ಎಂದಳು.[ಸೂಕ್ತ ಉಲ್ಲೇಖನ ಬೇಕು] ಅವಳು ಕಂಡ ಬಡತನ ಬಹಳ ಕಡುವಾಗಿತ್ತು. "ನನ್ನ ಹೃದಯ ಛಿದ್ರವಾದಂತೆನ್ನಿಸುತ್ತಿದೆ" ಎಂದಳವಳು.[ಸೂಕ್ತ ಉಲ್ಲೇಖನ ಬೇಕು] UNICEF ಅಧಿಕಾರಿಗಳು ರಾಬರ್ಟ್ಸ್ ಳ ಆರು ದಿನಗಳ ಭೇಟಿಯು ದಾನದ ಹೊಳೆಯನ್ನೇ ಹರಿಸುವುದೆಂದು ಆಶಿಸಿದ್ದರು; $10 ಮಿಲಿಯನ್ ಗಳನ್ನು ದೇಣಿಗೆಯಾಗಿ ನೀಡಲು ಅವರಿಂದ ಬೇಡಿಕೆ ಬಂದಿತ್ತು.[ಸೂಕ್ತ ಉಲ್ಲೇಖನ ಬೇಕು]

2000ದಲ್ಲಿ ಲಾಸ್ ಏಂಜಲೀಸ್, ಬಾಲ್ಟಿಮೋರ್ ಮತ್ತು ಬ್ಯೂಯಾರ್ಕ್ ಗಳಲ್ಲಿ ಚಿತ್ರೀಕರಣಗೊಂಡ ರೆಟ್ ಸಿಂಡ್ರೋಮ್ ಎಂಬ ನರಮಂಡಲವೃದ್ಧಿದೋಷದ ಬಗ್ಗೆ ಸೈಲೆಂಟ್ ಏಂಜಲ್ಸ್ ಎಂಬ ಪ್ರಾತ್ಯಕ್ಷಿಕೆಗೆ ನಿರೂಪಣೆ ನೀಡಿದಳು. ಆ ರೋಗದ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಆ ಪ್ರಾತ್ಯಕ್ಷಿಕೆಯನ್ನು ರೂಪಿಸಲಾಗಿತ್ತು. ಜುಲೈ 2006ರಲ್ಲಿ ಅರ್ಥ್ ಬಯೋಫ್ಯೂಯಲ್ಸ್ ರಾಬರ್ಟ್ಸ್ ತಮ್ಮ ಸಂಸ್ಥೆಯ ವಿಚಾರವಿನಿಮಯಕಾರ್ತಿಯೆಂದೂ, ಮರುಬಳಕೆ ಮಾಡಲಾಗುವ ಇಂಧನಗಳ ಪ್ರಚಾರಕ್ಕಾಗಿ ಕಂಪನಿಯು ನಿರ್ಮಿಸಿದ ನೂತನ ಸಲಹಾಸಮಿತಿಯ ಅಧ್ಯಕ್ಷೆಯೆಂದೂ ಸಾರಿತು.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

Beslan: Three Days In September ನಿರೂಪಕ/ವಿವರಣೆಕಾರ
ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
1987 ಫೈರ್ ಹೌಸ್ ಬಾಬ್ಸ್
1986 ಬ್ಲಡ್ ರೆಡ್ ಮಾರಿಯಾ ಕೊಲೋಗೆರೋ
ಮಿಸ್ಟಿಕ್ ಪಿಝಾ ಡೈಸೀ ಅರುಜೋ ನಾಮನಿರ್ದೇಶಿತ - ಇಂಡಿಪೆಂಡೆಂಟ್ ಸ್ಪಿರಿಟ್ ಅವಾರ್ಡ್ ಫಾರ್ ಬೆಸ್ಟ್ ಲೀಡ್ ಪೀಮೇಲ್
ಸ್ಯಾಟಿಸ್ ಫ್ಯಾಕ್ಷನ್ ಡರೈಲ್ ಗರ್ಲ್ಸ್ ಆಫ್ ಸಮ್ಮರ್ ಎಂದೂ ಪರಿಚಿತ
1989 ಸ್ಟೀಲ್ ಮ್ಯಾಗ್ನೋಲಿಯಾಸ್ ಶೆಲ್ಬಿ ಈಟೆಂಟನ್ ಲ್ಯಾಟ್ಚೆರೀ

ಅತ್ಯುತ್ತಮ ಪೋಷಕ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ – ಮೋಷನ್ ಪಿಕ್ಚರ್
ನಾಮನಿರ್ದೇಶಿತ — ಅಕಾಡೆಮಿ ಅವಾರ್ಡ್‌ (ಅತ್ಯುತ್ತಮ ಪೋಷಕ ನಟಿ)

2007 ಫ್ಲ್ಯಾಟ್ ಲೈನರ್ಸ್ ರಾಚೆಲ್ ಮನ್ನಸ್ ನಾಮನಿರ್ದೇಶನಗೊಂಡಿದ್ದು – ಅತ್ಯುತ್ತಮ ಪೋಷಕನಟಿಗೆ ಮೀಸಲಾದ ಸ್ಯಾಟರ್ನ್‌ ಪ್ರಶಸ್ತಿ
ಪ್ರೆಟಿ ವುಮನ್ ವಿವಿಯನ್ ವಾರ್ಡ್

ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ – ಸಂಗೀತ ಮತ್ತು ಹಾಸ್ಯ ಚಲನಚಿತ್ರ, ಮೋಷನ್ ಪಿಕ್ಷರ್.
ನಾಮನಿರ್ದೇಶನ-ಅತ್ಯುತ್ತಮ ನಟಿಗಾಗಿ ಅಕಾಡೆಮಿ ಅವಾರ್ಡ್‌
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ BAFTA ಅವಾರ್ಡ್‌‌ಗೆ ನಾಮನಿರ್ದೇಶಿತವಾಗಿದೆ.

1991 ಹುಕ್ ಟಿಂಕರ್ ಬೆಲ್
ಡೈಯಿಂಗ್ ಯಂಗ್ ಹಿಲೇರಿ ಒನೀಲ್
ಸ್ಲೀಪಿಂಗ್ ವಿತ್ ದ ಎನಮಿ ಸಾರಾ ವಾಟರ್ಸ್/ಲಾರಾ ಬರ್ನೀ

ನಾಮನಿರ್ದೇಶಿತ — ಅತ್ಯುತ್ತಮ ನಟಿಗಾಗಿ ಸ್ಯಾಟರ್ನ್‌ ಅವಾರ್ಡ್‌

1992 ದ ಪ್ಲೇಯರ್

ಕಿರುಪಾತ್ರ

1993 ದ ಪೆಲಿಕಾನ್ ಬ್ರೀಫ್ ಡಾರ್ಬಿ ಷಾ
1994 ಪ್ರೆಟ್-ಅ-ಪೋರ್ಟರ್ ಅನ್ನೆ ಈಷೆನ್ ಹೊವರ್ ರೆಡಿ ಟು ವೇರ್ ಎಂದೂ ಕರೆಯಲಾಗುತ್ತದೆ.
ಉತ್ತಮ ಪಾತ್ರವರ್ಗಕ್ಕಾಗಿ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ
ಲವ್ ಟ್ರಬಲ್ ಸ್ಯಾಬ್ರಿನಾ ಪೀಟರ್ ಸನ್
1995 ಸಂಥಿಂಗ್ ಟು ಟಾಕ್ ಎಬೌಟ್ ಗ್ರೇಸ್ ಕಿಂಗ್ ಬೈಚಾನ್
1996 ಎವೆರಿ ಒನ್‌ ಸೇಸ್‌ ಐ ಲವ್‌ ಯು ವಾನ್ ಸಿಡೆಲ್
ಮೈಕೆಲ್ ಕಾಲಿನ್ಸ್ ಕಿಟ್ಟಿ ಕೀರ್ನನ್
ಮೇರಿ ರೀಲ್ಲಿ ಮೇರಿ ರೀಲ್ಲಿ
1997

ಕಾನ್ಸ್ಪಿರೆಸಿ ಥಿಯರಿ

ಆಲಿಸ್ ಸಟ್ಟನ್
ಮೈ ಬೆಸ್ಟ್ ಫ್ರೆಂಡ್'ಸ್ ವೆಡ್ಡಿಂಗ್ ಜೂಲಿಯನ್ನೆ ಪಾಟರ್

ನಾಮನಿರ್ದೇಶಿತ — ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ for ಅತ್ಯುತ್ತಮ ನಟಿ – ಮೋಷನ್ ಪಿಕ್ಚರ್ ಗಾಯನಪ್ರಧಾನ ಅಥವಾ ಹಾಸ್ಯಪ್ರಧಾನ.
ನಾಮನಿರ್ದೇಶಿತ — ಸ್ಯಾಟೆಲೈಟ್‌ ಅವಾರ್ಡ್‌ for ಅತ್ಯುತ್ತಮ ನಟಿ - ಮೋಷನ್ ಪಿಕ್ಚರ್ ಗಾಯನಪ್ರಧಾನ ಅಥವಾ ಹಾಸ್ಯಪ್ರಧಾನ

1998 ಸ್ಟೆಪ್ ಮಾಮ್ ಇಸಾಬೆಲ್ ಕೆಲಿ
1999 ರನವೇ ಬ್ರೈಡ್ ಮ್ಯಾಗೀ ಕಾರ್ಪೆಂಟರ್
ನಾಟಿಂಗ್ ಹಿಲ್ ಅನ್ನಾ ಸ್ಕಾಟ್

ನಾಮನಿರ್ದೇಶಿತ — [[ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ – ಮೋಷನ್ ಪಿಕ್ಷರ್ ಗಾಯನಪ್ರಧಾನ ಅಥವಾ ಹಾಸ್ಯಪ್ರಧಾನ]]
ನಾಮನಿರ್ದೇಶಿತ — ಸ್ಯಾಟೆಲೈಟ್‌ ಅವಾರ್ಡ್‌ for ಅತ್ಯುತ್ತಮ ನಟಿ - ಮೋಷನ್ ಪಿಕ್ಚರ್ ಗಾಯನಪ್ರಧಾನ ಅಥವಾ ಹಾಸ್ಯಪ್ರಧಾನ

2000 ಎರಿನ್ ಬ್ರೋಕೋವಿಚ್ ಎರಿನ್ ಬ್ರೋಕೋವಿಚ್ ಅತ್ಯುತ್ತಮ ನಟಿಗಾಗಿ ಅಕಾಡೆಮಿ ಅವಾರ್ಡ್‌
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ BAFTA ಅವಾರ್ಡ್‌
ಅತ್ಯುತ್ತಮ ನಟಿಗಾಗಿ ಬ್ರಾಡ್‌ಕ್ಯಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಅವಾರ್ಡ್‌
ನಾಮನಿರ್ದೇಶಿತ – ಉತ್ತಮ ನಟಗಾಗಿ ಎಂಪೈರ್ ಅವಾರ್ಡ್
ಅತ್ಯುತ್ತಮ ನಟಿಗಾಗಿ ಗೋಲ್ಡನ್‌ ಗ್ಲೋಬ್‌ ಅವಾರ್ಡ್‌-ಸಂಜ್ಞಾ ಚಿತ್ರ ನಾಟಕ
ಅತ್ಯುತ್ತಮ ಪೋಷಕ ನಟಿಗಾಗಿ ಲಾಸ್‌ ಎಂಜಲ್ಸ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಸಿಯೆಷನ್‌ ಅವಾರ್ಡ್‌
ಅತ್ಯುತ್ತಮ ಪೋಷಕ ನಟಿಗಾಗಿ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಅವಾರ್ಡ್
ಅತ್ಯುತ್ತಮ ನಟಿಗಾಗಿ ಸ್ಯಾನ್‌ ಡಿಯೆಗೊ ಫಿಲ್ಮ್‌ ಕ್ರಿಟಿಕ್ಸ್‌ ಸೊಸೈಟಿ ಅವಾರ್ಡ್‌
ಮುಖ್ಯ ಪಾತ್ರದಲ್ಲಿ ನಟಿಯ ಅತ್ಯುತ್ತಮ ನಟನೆ - ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಅವಾರ್ಡ್‌
ಅತ್ಯುತ್ತಮ ನಟಿಗಾಗಿ ಶಿಕಾಗೊ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಅವಾರ್ಡ್‌ಗೆ ನಾಮನಿರ್ದೇಶಿತವಾಗಿದೆ
ನಾಮನಿರ್ದೇಶಿತ— ಲಾಸ್ ವೇಗಾಸ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿಯ ಅತ್ಯುತ್ತಮ ನಟಿ ಪ್ರಶಸ್ತಿ
ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಆನ್‌ಲೈನ್‌ ಫಿಲ್ಮ್‌ ಕ್ರಿಟಿಕ್ಸ್‌ ಸೊಸೈಟಿ ಅವಾರ್ಡ್‌‌ಗೆ ನಾಮನಿರ್ದೇಶಿತವಾಗಿದೆ
ಚಲನಚಿತ್ರ ನಾಟಕದಲ್ಲಿ ಅತ್ಯುತ್ತಮ ನಟಿಗಾಗಿ ಸ್ಯಾಟೆಲೈಟ್‌ ಅವಾರ್ಡ್‌ಗೆ ನಾಮ ನಿರ್ದೇಶಿತವಾಗಿದೆ
2001

ಓಷನ್ಸ್‌ ಥರ್ಟೀನ್‌

ಟೆಸ್ ಓಷನ್

ನಾಮನಿರ್ದೇಶಿತ – ಫೀನಿಕ್ಸ್‌ ಫಿಲ್ಮ್‌ ಕ್ರಿಟಿಕ್ಸ್‌ ಸೊಸೈಟಿ ಪ್ರಶಸ್ತಿ‌ (ಅತ್ಯುತ್ತಮ ಪಾತ್ರ)

ಅಮೆರಿಕಾ'ಸ್ ಸ್ವೀಟ್ ಹಾರ್ಟ್ಸ್ ಕ್ಯಾಥ್ಲೀನ್ "ಕಿಕಿ" ಹ್ಯಾರಿಸನ್
ದ ಮೆಕ್ಸಿಕನ್ ಸಾಮಂತಾ ಬಾರ್ಝೆಲ್
2002 ಕನ್ಫೆಷನ್ಸ್‌ ಆಫ್ ಎ ಡೇಂಜರಸ್‌ ಮೈಂಡ್‌ ಪ್ಯಾಟ್ರೀಷಿಯಾ ವ್ಯಾಟ್ಸನ್
ಗ್ರ್ಯಾಂಡ್ ಚಾಂಪಿಯನ್ ಜೋಲೀನ್
ಫುಲ್ ಫ್ರಂಟಲ್ ಕ್ಯಾಥರೀನ್/ಫ್ರ್ಯಾನ್ಸೆಸ್ಕಾ
2003 ಮೋನಾ ಲಿಸಾ ಸ್ಮೈಲ್ ಕ್ಯಾಥರೀನ್ ಆನ್ ವ್ಯಾಟ್ಸನ್
2004 ಓಷನ್ಸ್‌ ಟ್ವೆಲ್ವ್‌ ಟೆಸ್ ಓಷನ್

ನಾಮನಿರ್ದೇಶಿತ – ಬ್ರಾಡ್ಕಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ ( ಅತ್ಯುತ್ತಮ ಪಾತ್ರ)

ಕ್ಲೋಸರ್ ಅನ್ನಾ ಕ್ಯಾಮೆರಾನ್ ಅತ್ಯುತ್ತಮ ಪಾತ್ರವರ್ಗಕ್ಕಾಗಿ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ.
ನಾಮನಿರ್ದೇಶಿತ – ಬ್ರಾಡ್ಕಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ ( ಅತ್ಯುತ್ತಮ ಪಾತ್ರವರ್ಗ)
2006 ಚಾರ್ಲೊಟ್ಟೆ'ಸ್ ವೆಬ್ ಚಾರ್ಲೊಟ್ಟೆ ದ ಸ್ಪೈಡರ್ (ಧ್ವನಿ)
ದ ಆಂಟ್ (ಅಂತ) ಬುಲಿ Hova (ಕಂಠ)
2007 ಚಾರ್ಲೀ ವಿಲ್ಸನ್'ಸ್ ವಾರ್ ಜೋಅನ್ನೆ ಹೆರಿಂಗ್

ನಾಮನಿರ್ದೇಶಿತ — ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ ಅತ್ಯುತ್ತಮ ಪೋಷಕ ನಟಿ - ಚಲನಚಿತ್ರ

2008 ಫೈರ್ ಫ್ಲೈಸ್ ಇನ್ ದ ಗಾರ್ಡನ್ ಲಿಸಾ ವೇಕ್ಟರ್
2009 ಡ್ಯೂಪ್ಲಿಸಿಟಿ ಕ್ಲೇಯ್ರ್ ಸ್ಟೆನ್ವಿಕ್

ನಾಮನಿರ್ದೇಶಿತ — ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ for ಅತ್ಯುತ್ತಮ ನಟಿ – ಚಲನಚಿತ್ರ ಗಾಯನಾಧಾರಿತ ಅಥವಾ ಹಾಸ್ಯಪ್ರಧಾನ

2010 ವ್ಯಾಲೈಂಟೈನ್ಸ್‌ ಡೇ ಕೇಟ್ ಬಿಡುಗಡೆಯಾಗಲಿದೆ
ಈಟ್‌, ಪ್ರೇ, ಲವ್‌ ಎಲಿಝಬೆತ್ ಗಿಲ್ಬರ್ಟ್ (ಚಿತ್ರೀಕರಣ)

ಕಿರುತೆರೆ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
1987 ಕ್ರೈಂ ಸ್ಟೋರಿ ಟ್ರೇಸಿ ಸಂಚಿಕೆ "ದ ಸರ್ವೈವರ್" (1.19)
1996 ಫ್ರೆಂಡ್ಸ್‌ ಸೂಸೀ ಮಾಸ್ ಕಂತು "ದ ಒನ್ ಆಪ್ಟರ್ ದ ಸೂಪರ್ ಬೌಲ್ : ಭಾಗ 2" (2.13)
1988 ಮಿಯಾಮಿ ವೈಸ್ ಪಾಲಿ ವೀಲರ್ ಋತು 4, ಕಂತು 22: "ಮಿರರ್ ಇಮೇಜ್"
ಬಾಜಾ ಓಕಲ್ಹೋಮಾ ಕ್ಯಾಂಡೀ ಹಚಿನ್ಸ್ ಟಿವಿ
1999 ಲಾ & ಆರ್ಡರ್ ಕತ್ರೀನಾ ಲಡ್ಲೋವ್ ಸಂಚಿಕೆ "ಎಂಪೈರ್"
ನಾಮನಿರ್ದೇಶಿತ - ಶ್ರೇಷ್ಠ ಅತಿಥಿ ನಟಿಗೆ ನೀಡುವ ಎಮ್ಮಿ ಅವಾರ್ಡ್ - ನಾಟಕದ ಸರಣಿ
2003 Freedom: A History Of Us ವರ್ಜೀನಿಯಾ ಐ ವಿಟ್ ನೆಸ್ ೨ ಸಂಚಿಕೆಗಳು : "ವಾಟ್ ಈಸ್ ಫ್ರೀಡಂ?" (1.07); "ಯರ್ನಿಂಗ್ ಟು ಬ್ರೀತ್ ಫ್ರೀ" (1.10)
2010 ಹೋಪ್ ಫಾರ್ ಹಾಯ್ತಿ ನೌ ಸ್ವತಃ ಅವಳೇ ಹಾಯ್ತಿ ಭೂಕಂಪ ಪರಿಹಾರ ನಿಧಿಗಾಗಿ ಟೆಲಿಥಾನ್

ಆಕರಗಳು[ಬದಲಾಯಿಸಿ]

  1. "ಬಾಕ್ಸ್ ಆಫೀಸ್ ಮೋಜೋ - ಪೀಪಲ್ ಇಂಡಿಕ್ಸ್". Archived from the original on 2013-01-19. Retrieved 2021-09-01.
  2. "ದ ಟ್ವೆಂಟಿ ರಿಚೆಸ್ಟ್ ವಿಮೆನ್ ಇನ ಎಂಟರ್ಟೈನ್ಮೆಂಟ್." Forbes.com. ಜನವರಿ 27, 2007.
  3. ಹ್ಯಾರಿಂಗ್ಟನ್, ಏಮಿ ಎಂಡ್ ನ್ಯಾನ್ಸಿ. "ವಾಟ್ ಯೂ ಡೋಂಟ್ ನೋ ಎಬೌಟ್ ಜೂಲಿಯಾ ರಾಬರ್ಟ್ಸ್." Archived 2009-03-23 ವೇಬ್ಯಾಕ್ ಮೆಷಿನ್ ನಲ್ಲಿ. GetBack.com.
  4. "ದ ಪವರ್ ಇಂಡೆಕ್ಸ್". Archived from the original on 2008-03-17. Retrieved 2021-08-10.
  5. Taylor, Clarke (1983-11-24). "ERIC ROBERTS: HIS 'STAR 80' SHINES". Los Angeles Times. Archived from the original on 2013-07-22. Retrieved 2009-12-16. {{cite news}}: Cite has empty unknown parameter: |coauthors= (help)
  6. "ಜೀನಿಯಾಲಜಿ". Archived from the original on 2013-01-17. Retrieved 2010-02-23.
  7. "JULIA ROBERTS - CORETTA SCOTT KING WAS JULIA ROBERTS' FAIRY GODMOTHER". Contact Music. 2006-02-10. Retrieved 2009-12-16. {{cite news}}: Cite has empty unknown parameter: |coauthors= (help)
  8. "ಜೂಲಿಯಾ: ಹರ್ ಲೈಫ್", ಜೇಮ್ಸ್ ಸ್ಪಾಡಾ. ಸೇಂಟ್ ಮಾರ್ಟಿನ್ ಮುದ್ರಣಾಲಯ, ನ್ಯೂ ಯಾರ್ಕ್. ಪುಟ 349..
  9. "ಜೂಲಿಯಾ ರಾಬರ್ಟ್ಸ್." Archived 2013-01-16 ವೇಬ್ಯಾಕ್ ಮೆಷಿನ್ ನಲ್ಲಿ. ದ ನ್ಯೂ ಜಾರ್ಜಿಯಾ ಎನ್ ಸೈಕ್ಲೋಪೀಡಿಯಾ .
  10. ""ಕ್ಯಾಂಪ್ ಬೆಲ್ ಹೈ ಸ್ಕೂಲ್"". Archived from the original on 2008-01-06. Retrieved 2010-02-23.
  11. "ಇನ್ಸೈಡರ್ಸ್ ಯಾಂಗರ್ಡ್ ಬೈ ರಾಬರ್ಟ್ಸ್' ಬಯಾಸ್." WENN. ಮಾರ್ಚ್ 28, 2002.
  12. Gardner, Elysa (2006-04-13). "Roberts rains money on Broadway". USA Today. Retrieved 2009-07-06.
  13. ೧೩.೦ ೧೩.೧ Brantley, Ben (2006-04-20). "Enough Said About 'Three Days of Rain.' Let's Talk Julia Roberts!". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-07-06.
  14. "ಜೂಲಿಯಾ ರಾಬರ್ಟ್ಸ್' ನ್ಯೂಯೆಸ್ಟ್ ರೋಲ್: ಲ್ಯಾನ್ಕಮ್ ಸ್ಪೋಕ್ಸ್ ಪರ್ಸನ್." ಪೀಪಲ್‌ ಡಿಸೆಂಬರ್ 4, 2009.
  15. ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ರಾಬರ್ಟ್ಸ್‌
  16. "ಜೂಲಿಯಾ ರಾಬರ್ಟ್ಸ್." ಗಲ್ಲಾಪೆಟ್ಟಿಗೆ ಮೊಜೊ.
  17. ಸಿಲ್ವರ್ ಮ್ಯಾನ್, ಸ್ಟೀಫನ್ ಎಂ[೧] Archived 2015-02-14 ವೇಬ್ಯಾಕ್ ಮೆಷಿನ್ ನಲ್ಲಿ.Julia Roberts Lays It on the Line." ಜೂಲಿಯಾ ರಾಬರ್ಟ್ಸ್ ಲೇಸ್ ಇಟ್ ಆನ್ ದ ಲೈನ್." Archived 2015-02-14 ವೇಬ್ಯಾಕ್ ಮೆಷಿನ್ ನಲ್ಲಿ. ಪೀಪಲ್‌ ಜುಲೈ 11, 1991
  18. Schneider, Karen (2002-07-11). "Hideaway Bride". People Magazine. Archived from the original on 2008-01-29. Retrieved 2007-12-18.
  19. "ಜೂಲಿಯಾ ರಾಬರ್ಟ್ಸ್ ವೆಲ್ ಕಮ್ಸ್ ಎ ಬೇಬಿ ಬಾಯ್." ಪೀಪಲ್‌ ಜೂನ್ 18, 2007

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜೂಲಿಯಾ ರಾಬರ್ಟ್ಸ್‌]]