ಜರ್ಬರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜರ್‍ಬರ - ಆಸ್ಟರೇಸೀ (ಕಂಪಾಸಿಟೀ) ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ಅಲಂಕಾರ ಸಸ್ಯ. ಆಫ್ರಿಕ ಹಾಗೂ ಏಷ್ಯಗಳ ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಮೂಲವಾಸಿ.

ಸುಮಾರು 40 ಪ್ರಭೇದಗಳನ್ನು ಒಳಗೊಂಡಿದೆ. ಇವುಗಳಲ್ಲಿ ಜೇಮ್‍ಸೋನಿಯೈ ಪ್ರಭೇದ ಬಲು ಮುಖ್ಯವಾದ್ದು. ಇದೊಂದು ಕುಳ್ಳುಗಾತ್ರದ ಬಹುವಾರ್ಷಿಕ ಮೂಲಿಕೆ; ಇದರ ಎತ್ತರ ಸುಮಾರು 30-45 ಸೆಂ.ಮೀ. ಇದಕ್ಕೆ ಕಾಂಡವೇ ಇಲ್ಲ. ಎಲೆಗಳು ಬೇರಿನ ಮೇಲ್ತುದಿಯಲ್ಲಿ ಕಮಲದಳಗಳಂತೆ ಜೋಡಣೆಗೊಂಡಿವೆ. ಎಲೆಗಳ ಉದ್ದ ಸುಮಾರು 15 ಸೆಂ.ಮೀ. ಅಂಚು ನಯವಾಗಿರಬಹುದು ಇಲ್ಲವೆ ಹಾಲೆಗಳಾಗಿ ವಿಭಾಗವಾಗಿರಬಹುದು. ಹೂಗಳು ಉದ್ದ ತೊಟ್ಟಿನ ಚಂಡು ಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ಬಿಳಿ, ಕೆನೆ, ಹಳದಿ, ಉದಾ, ಕೆಂಪು, ಕಡುಗೆಂಪು, ಕಿತ್ತಳೆ ಮುಂತಾಗಿ ವೈವಿಧ್ಯಮಯ. ಇದರಿಂದಾಗಿ ಹೂಗಳು ಬಹುಚೆಲುವಾಗಿ ಕಾಣುತ್ತವೆ. ಕೆಲವು ಬಗೆಗಳಲ್ಲಿ ಜೋಡಿಸುತ್ತಿನ ದಳಗಳೂ ಇರುವುದರಿಂದ ಹೂಗಳ ಅಂದ ಇಮ್ಮಡಿಯಾಗುವುದು. ಜರ್‍ಬರವನ್ನು ಬೀಜಗಳಿಂದ ಇಲ್ಲವೆ ಮೋಸುಗಳಿಂದ ವೃದ್ಧಿಸಲಾಗುತ್ತದೆ. ಬೀಜ ಬಿತ್ತುವ ಕಾಲ ಜೂನ್ ತಿಂಗಳು. ಬಿತ್ತಿದ 1 ತಿಂಗಳ ಅನಂತರ ಸಸಿಗಳನ್ನು ಬೇಕಾದ ಸ್ಥಳಗಳಲ್ಲಿ ನಾಟಿ ಮಾಡಲಾಗುತ್ತದೆ. ಅಕ್ಟೋಬರ್ ವೇಳೆಗೆ ಹೂ ಅರಳತೊಡಗುತ್ತವೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜರ್ಬರ&oldid=1061652" ಇಂದ ಪಡೆಯಲ್ಪಟ್ಟಿದೆ