ಚೋರ್ಲಾ ಘಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೋರ್ಲಾ ಘಾಟ್ ವೀಕ್ಷಣಾ ಸ್ಥಳ

ಚೋರ್ಲಾ ಘಾಟ್ (ಹಿಂದಿ:चोरला घाट ) ಎಂಬುದು ಒಂದು ಭಾರತೀಯ ಪ್ರಕೃತಿ ತಾಣವಾಗಿದೆ. ಇದು ಗೋವಾ, ಕರ್ನಾಟಕ,[೧] ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಗಳ ಛೇದಕದ ಮೇಲಿದೆ.[೨] ಇದು ಗೋವಾದ ಪಣಜಿಯ ಈಶಾನ್ಯದಲ್ಲಿದೆ (ಸುಮಾರು ೫೦ ಕಿ.ಮೀ. ದೂರದಲ್ಲಿ). ಇದು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ೮೦೦ ಮೀಟರ್ ಎತ್ತರದಲ್ಲಿದೆ. ಈ ಘಾಟ್ ತನ್ನ ಉಪ-ಉಷ್ಣವಲಯದ ಕಾಡುಗಳಲ್ಲಿ ಪಟ್ಟಿಗಳುಳ್ಳ ತೋಳ ಹಾವಿನಂತಹ ಕೆಲವು ಅಪರೂಪದ ಜಾತಿಯ ಕಾಡುಜೀವಿಗಳನ್ನು ಹೊಂದಿದೆ.

ಸೆಪ್ಟೆಂಬರ್ ತಿಂಗಳ ಕೊನೆಯ ವೇಳೆಯಲ್ಲಿ

ಸಹ್ಯಾದ್ರಿ ಪ್ರದೇಶದ ಪಶ್ಚಿಮ ಘಟ್ಟಗಳ ಮತ್ತು ಅವುಗಳ ಜೀವವೈವಿಧ್ಯತೆಯ ಸಂಶೋಧನೆ ಮತ್ತು ದೀರ್ಘಕಾಲೀನ ಮೇಲ್ವಿಚಾರಣೆಗೆ ಅನುಕೂಲವಾಗುವಂತೆ ಚೋರ್ಲಾ ಘಾಟ್‌ನಲ್ಲಿ ಪ್ರಕೃತಿ ಸಂರಕ್ಷಣಾ ಸೌಲಭ್ಯವನ್ನು ಸ್ಥಾಪಿಸಲಾಗಿದೆ ಮತ್ತು ಪರಿಸರ ವಿಜ್ಞಾನಿಗಳು ಮತ್ತು ವನ್ಯಜೀವಿ ಜೀವಶಾಸ್ತ್ರಜ್ಞರಿಗೆ ಸಂಪೂರ್ಣ ಸುಸಜ್ಜಿತ ಕ್ಷೇತ್ರಕೇಂದ್ರದ ಮೂಲಕ ವೇದಿಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.  [ ಉಲ್ಲೇಖದ ಅಗತ್ಯವಿದೆ ] ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಅವಳಿ ವಜ್ರ ಜಲಪಾತಗಳು ಮತ್ತು ಲಾಸ್ನಿ ಟೆಂಬ್‌ನ ಶಿಖರ ಸೇರಿವೆ. ಚಟುವಟಿಕೆಗಳಲ್ಲಿ ಕಾಲು ಹಾದಿ, ಕಾಡು ನಡಿಗೆ, ಚಾರಣ ಮತ್ತು ಪಾದಯಾತ್ರೆ, ಮಚಾನುಗಳು ಮತ್ತು ಮರೆಗಳು ಸೇರಿವೆ.

ಉಲ್ಲೇಖಗಳು[ಬದಲಾಯಿಸಿ]

  1. Faldesai, M.; Savoikar, P. P. (2020-07-03). "Monitoring Control and Mapping of Landslides in Goa". In Das, Bibhuti Bhusan; Barbhuiya, Salim; Gupta, Rishi; Saha, Purnachandra (eds.). Recent Developments in Sustainable Infrastructure: Select Proceedings of ICRDSI 2019. Singapore: Springer Nature. pp. 91–94. ISBN 981-1-545-774. Retrieved 2020-11-25.
  2. Meena, R. P. (2020). "15, 16". PT 2020 in 100 days: UPSC Prelims: day 16-30 MCQs. GRASP IAS. pp. 105–111. Retrieved 2020-11-25.

ಹೊರಗಿನ ಕೊಂಡಿಗಳು[ಬದಲಾಯಿಸಿ]