ಚೀಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೀಟಿ ಬಟ್ಟೆಯ ಜ್ಯಾಕೆಟ್ ಮತ್ತು ಕುತ್ತಿಗೆ ಚೌಕ.

ಚೀಟಿ ಪದವು ಮೂಲತಃ ಹೊಳಪು ಕೊಟ್ಟಿರುವ ಕ್ಯಾಲಿಕೊ ಬಟ್ಟೆಗಳನ್ನು ಸೂಚಿಸುತ್ತಿತ್ತು, ವಿಶೇಷವಾಗಿ ಭಾರತದದಿಂದ ಆಮದು ಮಾಡಿಕೊಳ್ಳಲಾದ ಬಟ್ಟೆ. ಇವು ಸಾಮಾನ್ಯವಾಗಿ ತಿಳಿ ಸಾದಾ ಹಿನ್ನೆಲೆ ಮೇಲೆ ಭಿನ್ನ ಬಣ್ಣದ ಹೂವುಗಳು ಮತ್ತು ಇತರ ಮಾದರಿಗಳು ಇರುವ ವಿನ್ಯಾಸಗಳಿಂದ ಮುದ್ರಿತವಾಗಿರುತ್ತಿದ್ದವು. (ಈ ಹೆಸರು ಹಿಂದಿ ಶಬ್ದ ಚೀಂಟ್ ಇಂದ ವ್ಯುತ್ಪನ್ನವಾಗಿದೆ, ಇದರರ್ಥ "ಚುಕ್ಕೆಗಳಿರುವುದು" ಅಥವಾ "ವಿಭಿನ್ನ ಬಣ್ಣಗಳಿರುವ").[೧] ೧೯ನೇ ಶತಮಾನದಿಂದ ಚೀಟಿ ಪದವನ್ನು ಆ ಕ್ಯಾಲಿಕೊ ಬಟ್ಟೆಗಳಲ್ಲಿ ಮೂಡಿಸಲಾದ ಹೂ ಅಲಂಕಾರದ ಶೈಲಿಗೆ ಕೂಡ ಬಳಸಲಾಗಿದೆ, ಆದರೆ ನಂತರ ಹೆಚ್ಚು ವ್ಯಾಪಕವಾಗಿ ಬಳಸಲಾಗಿದೆ, ಉದಾಹರಣೆಗೆ ಚೀಟಿ ಮಡಕೆಗಳು ಮತ್ತು ಗೋಡೆಕಾಗದದ ಮೇಲೆ. ಚೀಟಿ ವಿನ್ಯಾಸಗಳು ಸಡಿಲವಾಗಿ ಭಾರತೀಯ ವಿನ್ಯಾಸಗಳ ಶೈಲಿಯಿಂದ (ಇವು ಸ್ವತಃ ಮುಘಲ್ ಕಲೆಯನ್ನು ಪ್ರತಿಬಿಂಬಿಸುತ್ತವೆ) ಜನ್ಯವಾದ ಬಹುತೇಕವಾಗಿ ಐರೋಪ್ಯ ಮಾದರಿಗಳಾಗಿವೆ. ಬಿಳಿ ಆಧಾರದ ಮೇಲೆ ಹೂ ಹಾಗೂ ಪ್ರಾಣಿ ಚಿತ್ರಗಳಿರುವುದು ಇದರ ಮೂಲಭೂತ ಲಕ್ಷಣಗಳಾಗಿವೆ.

ಉಲ್ಲೇಖಗಳು[ಬದಲಾಯಿಸಿ]

  1.  Chisholm, Hugh, ed. (1911). "Chintz" . Encyclopædia Britannica. Vol. 6 (11th ed.). Cambridge University Press. p. 235. {{cite encyclopedia}}: Cite has empty unknown parameters: |separator= and |HIDE_PARAMETER= (help)
"https://kn.wikipedia.org/w/index.php?title=ಚೀಟಿ&oldid=979004" ಇಂದ ಪಡೆಯಲ್ಪಟ್ಟಿದೆ