ಚಿಕಾಗೊದಲ್ಲಿ ವಿವೇಕಾನಂದರು ಮಾಡಿದ ಭಾಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

೧೮೯೩ ಸೆಪ್ಟೆಂಬರ್ ೧೧ರಂದು ಚಿಕಾಗೊ ಸರ್ವಧರ್ಮ ಸಮ್ಮೇಲನದಲ್ಲಿ ನೀಡಿದ ಉಪನ್ಯಾಸ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ, ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳು ಸಲ್ಲಿಸಲು ಪ್ರಯತ್ನಿಸುರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದದಿಂದ ತುಂಬಿ ತುಳುಕುತ್ತಿದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ವಂದನೆಗಳು ಅರ್ಪಿಸುತ್ತೇನೆ. ಹಿಂದೂ ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯ ನುಕೋಟಿ ಜನರ ಪರವಾಗಿ ನಿಮಗೆ ವಂದನೆಗಳು ಅರ್ಪಿಸುತ್ತೇನೆ.

ಇದೇ ವೇದಿಕೆಯ ಮೇಲೆ ನಿಂತು ಕೆಲವು ಭಾಷಣ ಕಾರರು, ಪೂರ್ವ ದೇಶಗಳಿಂದ ಬಂದಿರುವ ಪ್ರತಿನಿಧಿಗಳು ಕುರಿತು ಹೀಗೆ ಹೇಳಿದ್ದಾರೆ: 'ಬಹಳ ದೂರದಿಂದ ಬಂದಿರುವ ಇವರು ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿದಗೆ ಒಯ್ಯುವ ಗೌರವಕ್ಕೆ ಪಾತ್ರರಾಗುವರು.' ಹಾಗೆ ಹೇಳಿದಭಾಷಣಕಾರರಿಗೂ ನಾನು ವಂದನೆಗಳನ್ನು ಅರ್ಪಿಸುತ್ತೇನೆ. ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುದನ್ನೂ ಜನತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಯಾವ ವರ್ಷ ರೋಮನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳ ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು. ಅವರಿಗೆ ಆಶ್ರಯ ನೀಡಿದ ದೇಶದವನು ನಾನು ಎಂಬ ಹೆಮ್ಮೆ ನನ್ನದು ಝೊರತೂಷ್ಟ್ರ ರಾಷ್ಟ್ರ ನಿರಾಶ್ರಿತರಿಗೆ ಆಶ್ರಯ ನೀಡಿ ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಸೋದರರೆ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಎಂದಿಗೂ ಕೋಟ್ಯಂತರ ಜನರ ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮ ಮುಂದೆ ಹೇಳುತ್ತೆನೆ: "ಬೇರೆ ಬೇರೆ ಕಡೆಗಳಲ್ಲಿ ಹುಟ್ಟೈದ ನದಿಗಳು ಕೊನೆಗು ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆತಕ್ಕಂತೆ, ನೇರವಗಿಯೋ ವಕ್ರವಾಗಿಯೋ ಎರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವೂ ನಿನ್ನೆದೆಗೆ ಕರೆ ದೊಯ್ಯುತ್ತವೆ."

ಅತ್ಯಂತ ಮಹತ್ವಪೂರ್ಣವದ ಸಭೆಗಳಲ್ಲಿ ಒಂದು ಇಂದು ನೆರೆದಿರುವ ಈ ಸಭೆ. "ಯಾರೇ ಆಗಲಿ, ಯಾವುದೇ ಪರೂಪದಲ್ಲೇ ಆಗಲಿ ನನ್ನ ಅವರನ್ನು ಸ್ವೀಕರಿಸುತ್ತೇನೆ; ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿಬಂದು ನನ್ನನ್ನೇ ಸೇರಲು ಎಲ್ಲ ಜನರೂ ಪ್ರಯತ್ನಿಸುತ್ತಿದ್ದಾರೆ" ಎಂಬ ಗೀತೆಯ ಆದ್ಭುತ ತತ್ತ್ವದ ಸಥ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು. ಸಂಕುಚಿತ ಪಂಥಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಇವು ಈ ಸುಂದರ ಪೃಥ್ವಿಯನ್ನು ಬಹುಕಾಲದಿಂದ ಬಾಧಿಸುತ್ತಿವೆ. ಎವು ಈ ಭುಮಿಯನ್ನು ಹಿಂಸೆಯಿಂದ ತುಂಬಿವೆ, ಅದನ್ನು ಮತ್ತೆ ಮತ್ತೆ ನರ ರಕ್ತದಿಂದ ತೋಯಿಸಿವೆ, ನಾಗರಿಕತೆಯನ್ನು ನಾಶಗೊಳಿಸಿವೆ, ರಾಷ್ಟ್ರರಾಷ್ಟ್ರಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಎಂಥ ಭಯಂಕರ (ಧರ್ಮಾಂಧತೆಯ) ರಾಕ್ಷಸರು ಎಲ್ಲದೆಯೇ ಎದ್ದಿದ್ದರೆ ಮಾನವ ಸಮಾಜ ಈಗಿರುವುದಕ್ಕಿಂತಲೂ ಎಷೋ ಪಾಲು ಮುಂದುವರಿದಿರುತ್ತಿತ್ತು. ಆದರೆ ಅವರ ಕಾಲ ಮುಗಿದಿದೆ. ಎಂದು ಬೆಳ್ಳಗ್ಗೆ ಈ ಸಭೆಯ ಶುಭಾರಂಭತೆಯ, ಖಡ್ಗ ಎಲ್ಲವೇ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನುದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ ಎಂಬುದೇ ನನ್ನ ಆಶಯ"

ನಮ್ಮಲ್ಲಿ ಏಕೆ ಒಮ್ಮತವಿಲ್ಲ?[ಬದಲಾಯಿಸಿ]

೧೮ ಸೆಪ್ಟೆಂಬರ್ ೧೮೯೩ ನಾನೊಂದು ಪುಟ್ಟಕಥೆಯನ್ನು ನಿಮಗೆ ಹೆಳುತ್ತೆನೆ. ಆಗತಾನೆ ತಮ್ಮ ಭಾಷಣವನ್ನು ಮುಗಿಸಿದ ವಾಗ್ಮಿಯೊಬ್ಬ 'ಪರಸ್ಪರ ದೂರುವುದನ್ನು ನಿಲ್ಲಿಸೋಣ' ಎಂದು ಹೇಳಿದ್ದನ್ನು ನೀವು ಕೇಳಿದ್ದೀರಿ. ಇಷ್ಟೊಂದು ಭಿನ್ನಾಭಿಪ್ರಾಯಗಳಿರುವುದು ಈ ಉಪನ್ಯಾಸಕರಿಗೆ ವ್ಯಥೆಯನ್ನು ತಂದಿದೆ.

ಈ ಭಿನ್ನಭಿಪ್ರಾಯಗಳಿಗೆ ಕಾರಣವೇನು ಎಂಬುದನ್ನು ಸುಮ್ದರವಾಗಿ ನಿರೂಪಿಸುವ ಒಂದು ಕಥೆಯನ್ನು ನಿಮಗೆ ಹೇಳುತ್ತೇನೆ. ಒಂದು ಬಾವಿ, ಅದರಲ್ಲೊಂದು ಕಪ್ಪೆ. ಅದು ಬಹುಕಾಲದಿಂದ ಅಲ್ಲಿ ವಾಸಿಸುತ್ತಿತು. ಆದರೂ ಅದು ಸಣ್ಣ ಕಪ್ಪೆಯಾಗೇ ಇತ್ತು. ಆ ಕಪ್ಪೆಗೆ ಕಣ್ಣು ಕಾಣುತ್ತಿತ್ತೋ ಇಲ್ಲವೋ ಎಂದು ಹೇಳುವುದಕ್ಕೆ ಇಂದಿನ ವಿಕಾಸವಾದಿಗಳು ಅಲ್ಲಿ ಇರಲಿಲ್ಲ. ನಮ್ಮ ಕಥೆಯ ಮಟ್ಟೈಗೆ ಅದಕ್ಕೆ ಕಣ್ಣು ಕಾಣಿಸುತ್ತಿತ್ತು ಎಂದು ಇಟ್ಟುಕೊಳ್ಳೋಣ. ಪ್ರತಿದಿನವೊ ಅದು ಬಾವಿಯ ನೀರಿನಲ್ಲಿರುವ ಕ್ರಿಮಿಕೀಟಗಳನ್ನು ಎಷ್ಟು ಶಕ್ತಿ ಉತ್ಸಾಹಗಳಿಂದ ನಾಶಗೊಳಿಸಿ ನೀರನ್ನು ಶುದ್ಧಗೊಳಿಸುತ್ತಿತ್ತು ಎಂದರೆ ಅಷ್ಟು ಶಕ್ತಿ ಉತ್ಸಾಹಗಳು ನಮ್ಮ ಆಧುನಿಕ ಬ್ಯಾಕ್ಟೀರಿಯ ತಜ್ಞರಿಗೆ ಇದ್ದಿದ್ದರೆ ಅವರು ಪಡಬಹುದಾಗಿತ್ತು!

ಹೀಗೆಯೇ ಅದು ಬೆಳೆಯುತ್ತಾ ಸ್ವಲ್ಪ ದಪ್ಪಾವಾಯಿತು. ಹೀಗಿರುವಾಗ ಒಂದು ದಿನ ಸಮುದ್ರದಲ್ಲಿದ್ದ ಮತ್ತೋಂದು ಕಪ್ಪೆ ಬಾವಿಗೆ ಬಂದು ಬಿತ್ತು.

ಬಾವಿ ಕಪ್ಪೆ: ನೀನು ಎಲ್ಲಿಂದ ಬಂದೆ? ಸಮುದ್ರ ಕಪ್ಪೆ: ನಾನು ಸಮುದ್ರದಿಂದ ಬಂದೆ. ಬಾವಿ ಕಪ್ಪೆ: ಸಮುದ್ರ! ಅದು ಎಷ್ಟು ದೊಡ್ಡದು? ಅದು ನನ್ನ ಬಾವಿಯಷ್ಟು ದೊಡ್ಡದೆ? ಎಂದು ಕೇಳಿ ಬಾವಿಯ ಒಂದು ಕಡೆಯಿಂದ ಮತ್ತೋಂದು ಕಡೆಗೆ ನಗೆಯಿತು. ಸಮುದ್ರ ಕಪ್ಪೆ: ಅಯ್ಯಾ ಮಿತ್ರ, ಸಮುಸದ್ರವನ್ನು ಬಾವಿಯೊಂದಿಗೆ ಹೇಗೆ ಹೋಲೆಸಬಲ್ಲೆ?

ಬಾವಿ ಕಪ್ಪೆ ಇನ್ನೋಂದು ಸಲ ನೆಗೆದು ನಿನ್ನ ಸಮುದ್ರ ಇಷ್ಟು ದೊಡ್ಡದೊ? ಎಂದು ಕೇಳಿತು.

ಸಮುದ್ರ ಕಪ್ಪೆ: ಎಂಥ ಹುಚ್ಚುತನ ನಿನ್ನದು, ಸಮುದ್ರವನ್ನು ನಿನ್ನ ಬಾವಿಸೆ ಹೋಲಿಸುವೆಯಲ್ಲ!

ಬಾವಿ ಕಪ್ಪೆ: ನನ್ನ ಬಾವಿಗಿಂತ ದೊಡ್ಡದು ಯಾವುದೂ ಇರುವುದು ಸಾಧ್ಯವಿಲ್ಲ. ಇದಕ್ಕಿಂತ ದೊಡ್ಡದು ಯಾವುದೂ ಇರಲಾರದು. ಇವನೊಬ್ಬ ಸುಳ್ಳುಗಾರ, ಇವನನ್ನು ಹೊರಗೆ ನೂಕಿ.

ಯಾವಾಗಲೂ ನಮ್ಮ ಮುಂದಿರುವ ಕಷ್ಟ ಇದೇ. ನನೊಬ್ಬ ಹಿಂದು. ನಾನು ನನ್ನ ಸಣ್ಣ ಬಾವಿಯಲ್ಲಿ ಕುಳಿತಿಕೊಂಡು ಜಗತ್ತೆಲ್ಲ ಈ ನನ್ನ ಬಾವಿ ಎಂದು ಯೋಚಿಸುತ್ತಿರುವೆ. ಕ್ರಿಸ್ತ್ರರು ತಮ್ಮ ಪುಟ್ಟ ಬಾವಿಯಲ್ಲಿ ಕುಳಿತುಕೊಂಡು ಪ್ರಪಂಚವೆಲ್ಲ ಇಷ್ಟೆ ಎಂದು ತಿಳಿಯುವರು. ಮಹಮ್ಮದೀಯರು ತಮ್ಮ ಪುಟ್ಟ ಬಾವಿಯಲ್ಲಿ ಕುಳಿತು ಪ್ರಪಂಚಗಳ ಗೋಡೆಗಳನ್ನು ನಡೆಸುತ್ತಿರುವ ಅಮೆರಿಕನ್ನರೇ, ನಿಮಗೆ ನನ್ನ ಕೃತಜ್ಜ್ನತೆಗಳು. ಆ ನಿಮ್ಮ ಗುರಿಯನ್ನು ಸಾಧಿಸಲು ಭಗವಂತ ಸಹಾಯ ಮಾಡುವನೆಂದು ಆಶಿಸುತ್ತೇನೆ.