ಚಂದನಾ ಅನಂತಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದನಾ ಅನಂತಕೃಷ್ಣ
Born
Nationalityಭಾರತೀಯ
Educationಟಿವಿಎಸ್ ಶಾಲೆ ತುಮಕೂರು,
ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್, ಬೆಂಗಳೂರು
ಆಳ್ವಾಸ್ ಕಾಲೇಜು, ಮೂಡುಬಿದಿರೆ , ಮಂಗಳೂರು
Occupation(s)ಕಿರುತೆರೆ ನಟಿ ,
ರಂಗಭೂಮಿ ಕಲಾವಿದೆ ,
ಭರತನಾಟ್ಯ ಕಲಾವಿದೆ
Known forಬಿಗ್ ಬಾಸ್ ೭

ಚಂದನಾ ಅನಂತಕೃಷ್ಣಅವರು ಕಿರುತರೆ ನಟಿ,ರಂಗಭೂಮಿ ಕಲಾವಿದೆ, ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಇವರು ಕನ್ನಡ ಧಾರಾವಾಹಿಯೊಂದಿಗೆ ಕನ್ನಡ ಡ್ಯಾನ್ಸ ಶೋನಲ್ಲಿ ಕನ್ನಡದ ಕಲರ್ಸ್ ಸೂಪರ್ ಚಾನೆಲ್‍ನಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ(ಧರಣಿ ರಮೇಶ ಅವರ ನಿರ್ದೇಶನದ)ಎಂಬ ಧಾರಾವಾಹಿಯ ಮೂಲಕ ಅವರು ಕನ್ನಡ ಕಿರುತರೆಗೆ ಪಾದಾರ್ಪಣೆ ಮಾಡಿದರು. ಆ ಧಾರಾವಾಹಿಯಲ್ಲಿ ಚುಕ್ಕಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದರು. ಧಾರಾವಾಹಿ,ನೃತ್ಯ,ಸಂಗೀತ ಸೇರದಂತೆ ಬಿಗ್ ಬಾಸ್ ೭ನೇ ಸೀಸನ್ ನಲ್ಲಿ ಒಬ್ಬ ಸ್ಪರ್ಧಿಯಾಗಿ ಹೋಗಿದ್ದರು. ಕನ್ನಡ ಧಾರಾವಾಹಿ ಮಾತ್ರವಲ್ಲದೆ ಇವರು ತೆಲುಗು ಧಾರಾವಾಹಿಯಲ್ಲಿಯೂ ಅಭಿನಯಿಸಿದ್ದಾರೆ. ಇವರು ತೆಲುಗು ಧಾರಾವಾಹಿಯಾದ ವರುಧಿನಿ ಪರಿಣಯಂ ಮೂಲಕ ತನ್ನ ನಟನಾ ವೃತ್ತಿಯನ್ನು ಶರು ಮಾಡಿದರು. ನಟನೆ ಮಾತ್ರವಲ್ಲದೆ ಇವರು ಹಾಡು ಕರ್ನಾಟಕ ಹಾಡು ಸಾಧು ಕೋಕಿಲಾ, ಇಂದು ನಾಗರಾಜ್ ತೀರ್ಪುಗಾರರಾಗಿದ್ದ ಸಂಗೀತ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿದ್ದರು. ೨೦೧೯ ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ೭ನೇ ಸೀಸನ್ ನಲ್ಲಿ ರವಿ ಬೆಳಗೆರೆ, ಸುಜಾತಾ ಅಕ್ಷಯ, ಅಮೂಲ್ಯ, ವಿಜೆ ಅಗ್ನಿ, ವಿಜಯಲಕ್ಷ್ಮಿ, ಜೈ ಜಗದೀಶ್, ಭೂಮಿ ಶೆಟ್ಟಿ, ಶ್ವೇತಾ ಪ್ರಸಾದ್ ಇವರೊಂದಿಗೆ ಇವರು ಕೂಡ ಸ್ಪರ್ಧಿಯಾಗಿದ್ದರು.[೧]

ಜನನ[ಬದಲಾಯಿಸಿ]

ಇವರು ದಕ್ಷಿಣ ಭಾರತದ ಹಿಂದೂ ಕುಟುಂಬದಲ್ಲಿ ತುಮಕೂರಿನಲ್ಲಿ ಜನಿಸಿದರು.[೨]

ಶಿಕ್ಷಣ[ಬದಲಾಯಿಸಿ]

ಇವರು ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನ ಟಿವಿಎಸ್ ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ ಮುಂದೆ ಪದವಿ ಶಿಕ್ಷಣವನ್ನು Jain College ಬೆಂಗಳೂರಿನಲ್ಲಿ ಮುಗಿಸಿದರು. Mattu avaru eega Master of Performing Arts annu maduttiddare. ಕಲಿಯುತ್ತಿದ್ದಾಗಲೇ ನೃತ್ಯ,ಸಂಗೀತ ಮತ್ತು ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು.[೩]

ವೃತ್ತಿ ಜೀವನ[ಬದಲಾಯಿಸಿ]

ಮನರಂಜನೆ ಮಾಧ್ಯಮದಲ್ಲಿ ಚಂದನಾ ಅವರಿಗೆ ಜನಪ್ರಿಯತೆ ದೊರೆಯಲು ಕಾರಣವಾದ ಕನ್ನಡದ ಧಾರಾವಾಹಿಯಾದ ರಾಜಾ ರಾಣಿ ಅದರಲ್ಲಿ ಚುಕ್ಕಿ ಎಂಬ ಪ್ರಮುಖ ಪಾತ್ರವಾಗಿ ನಟಿಸುತ್ತಿದ್ದರು.ತನ್ನ ವೃತ್ತಿ ಜೀವನವನ್ನು ವರುಧಿನಿ ಪರಿಣಯಂ ಎಂಬ ತೆಲುಗು ಧಾರಾವಾಹಿಯ ಮೂಲಕ ಶುರು ಮಾಡಿದರು. ರಾಜಾ ರಾಣಿ ಧಾರಾವಾಹಿಯ ನಂತರ ಇವರು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಅಗುತ್ತಿದ್ದ ಡಾನ್ಸಿಂಗ್ ಚಾಂಪಿಯನ್ಸ್ ಎಂಬ ಡಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಹಾಗೆಯೇ ಇನ್ನೊಂದು ಕನ್ನಡದ ಹೂ ಮಳೆ ಎಂಬ ಧಾರಾವಾಹಿಯಲ್ಲಿ ಲಹರಿ ಎಂಬ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ನಟನೆ ಮಾತ್ರವಲ್ಲದೆ ಇವರು ಹಾಡು ಕರ್ನಾಟಕ ಹಾಡು ಸಾಧು ಕೋಕಿಲಾ, ಇಂದು ನಾಗರಾಜ್ ತೀರ್ಪುಗಾರರಾಗಿದ್ದ ಸಂಗೀತ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿದ್ದರು.೨೦೧೯ ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಬಿಗ್ ಬಾಸ್ ೭ನೇ ಸೀಸನ್ ನಲ್ಲಿ ರವಿ ಬೆಳಗೆರೆ, ಸುಜಾತಾ ಅಕ್ಷಯ, ಅಮೂಲ್ಯ, ವಿಜೆ ಅಗ್ನಿ, ವಿಜಯಲಕ್ಷ್ಮಿ, ಜೈ ಜಗದೀಶ್, ಭೂಮಿ ಶೆಟ್ಟಿ, ಶ್ವೇತಾ ಪ್ರಸಾದ್ ಇವರೊಂದಿಗೆ ಇವರು ಕೂಡ ಸ್ಪರ್ಧಿಯಾಗಿ ೮೪ ದಿನ ಬಿಗ್ ಬಾಸ್ ಮನೆಯೊಳಗಿದ್ದರು.[೪]

ದೂರದರ್ಶನ[ಬದಲಾಯಿಸಿ]

ನಟಿ[ಬದಲಾಯಿಸಿ]

ಚಂದನಾ ಅವರು ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. [೫]

ನಾಟಕ[ಬದಲಾಯಿಸಿ]

ಬೆದ್ರದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ಭಾಗವಹಿಸಿದ ಇವರು ಹಲವಾರು ನಾಟಕದಲ್ಲಿ ಭಾಗವಹಿಸಿದ್ದಾರೆ ಅದರಲ್ಲಿ ಮಹಾಮಾಹಿ ನಾಟಕ ತುಂಬಾ ಹೆಸರುವಾಸಿಯಾಗಿದೆ.

ಕನ್ನಡ ಧಾರಾವಾಹಿ[ಬದಲಾಯಿಸಿ]

  • ರಾಜಾ ರಾಣಿ-(ಪಾತ್ರ)ಚುಕ್ಕಿ[೬]
  • ಹೂ ಮಳೆ-(ಪಾತ್ರ)ಲಹರಿ
  • ಧರಣಿ ರಮೇಶ್ ಅವರು ನಿರ್ದೇಶನ ಮಾಡಿದ ರಾಜಾ ರಾಣಿ ಧಾರಾವಾಹಿಯಲ್ಲಿ ಚಂದನಾ ಅವರು ಲಹರಿ ಎಂಬ ಪಾತ್ರವಾಗಿ ನಟನೆ ಮಾಡಿದ್ದಾರೆ.
  • ಮುದ್ದುಮಣಿಗಳು-ಸೃಷ್ಟಿ

ತೆಲುಗು ಧಾರಾವಾಹಿ[ಬದಲಾಯಿಸಿ]

  • ವರುಧಿನಿ ಪರಿಣಯಂ[೭]

ನಿರೂಪಕಿ[ಬದಲಾಯಿಸಿ]

  • ಹಾಡು ಕರ್ನಾಟಕ ಹಾಡು

ಸ್ಪರ್ಧಿಯಾಗಿ[ಬದಲಾಯಿಸಿ]

  • ಡಾನ್ಸಿಂಗ್ ಚ್ಯಾಂಪಿಯನ್
  • ಬಿಗ್ ಬಾಸ್ ೭[೮]

ಉಲ್ಲೇಖಗಳು[ಬದಲಾಯಿಸಿ]

  1. "Chandana Ananthakrishna fulfills the dream of her parents; pursues her graduation in performing arts". The Times of India. Retrieved 4 February 2023.
  2. "Chandana Anaanthakrishna elated to be a part of Bigg Boss Kannada Mini Season". The Times of India. Retrieved 4 February 2023.
  3. "Chandana Ananthakrishna Wiki, Age, Boyfriend, Husband, Family, Biography & More". BigNameBio. 17 July 2022. Archived from the original on 4 ಫೆಬ್ರವರಿ 2023. Retrieved 4 February 2023.
  4. "Chandana AnanthaKrishna (Actress) Wiki, Biography, Age, Family, Images, Movies". 22 July 2020. Archived from the original on 4 ಫೆಬ್ರವರಿ 2023. Retrieved 4 February 2023.
  5. "Kannada Tv Show Haadu Karnataka - Full Cast and Crew". nettv4u (in ಇಂಗ್ಲಿಷ್). Retrieved 4 February 2023.
  6. "Bigg Boss Kannada 7 update, Day 58: Chandana is the new captain; nominates Kishen to danger zone". The Times of India. Retrieved 4 February 2023.
  7. "Chandana Tv Actress News | Latest News on Chandana Tv Actress - Times of India". The Times of India (in ಇಂಗ್ಲಿಷ್). Retrieved 4 February 2023.
  8. "Chandana Ananthakrishna All Serials & Shows | Cast & Crew". nettv4u (in ಇಂಗ್ಲಿಷ್). Retrieved 4 February 2023.

ಉಲ್ಲೇಖ[ಬದಲಾಯಿಸಿ]