ಗ್ಲೋಬಲ್ ಡೇಟ
[[]] | |
ಸ್ಥಾಪನೆ | ೧೯೯೯ |
---|---|
ಮುಖ್ಯ ಕಾರ್ಯಾಲಯ | ಲಂಡನ್, ಯುನೈಟೆಡ್ ಕಿಂಗಡಂ |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಗ್ಲೋಬಲ್ ಡೇಟ ಪಿ ಎಲ್ ಸಿ (ಸಾರ್ವಜನಿಕ ನಿಯಮಿತ ಸಂಸ್ಥೆ) ೧೯೯೯ ರಲ್ಲಿ ಸ್ಥಾಪಿಸಲಾಗಿದ್ದು ಇಂಗ್ಲೆಂಡಿನಲ್ಲಿ ೦೩೯೨೫೩೧೯ ಸಂಖ್ಯೆಯೊಂದಿಗೆ ನೊಂದಣಿಗೊಂಡಿದೆ. ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಇದರ ಶೇರುಗಳು ಮಾರಾಟಗೊಳ್ಳುತ್ತಿವೆ[೧]. ಈ ಸಂಸ್ಥೆಯ ಕಛೇರಿಗಳು ಅಮೇರಿಕ ಸಂಯುಕ್ತ ಸಂಸ್ಥಾನ, ಸಂಯುಕ್ತ ಅರಬ್ ಗಣರಾಜ್ಯ, ಅರ್ಜಂಟೀನ, ದಕ್ಷಿಣ ಕೊರಿಯಾ, ಮೆಕ್ಸಿಕೋ, ಚೈನಾ, ಜಪಾನ, ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಇದ್ದು ಅಂದಾಜು ೩,೦೦೦ ಕೆಲಸಗಾರರನ್ನು ಹೊಂದಿದೆ.
ಹಿನ್ನೆಲೆ
[ಬದಲಾಯಿಸಿ]೨೦೦೭ರಲ್ಲಿ ವಿಲ್ಮಿಂಗ್‌ಟನ್ ಪಿ ಎಲ್ ಸಿ ಸಂಸ್ಥೆಯ ಹಲವು ಮಾಧ್ಯಮ ವಿಭಾಗಗಳನ್ನು ಕೊಂಡು ಪ್ರೋಗ್ರೆಸಿವ್ ಡಿಜಿಟಲ್ ಮೀಡಿಯ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು.
೨೦೦೮ರಲ್ಲಿ ಡೇಟಾಮಾನಿಟರ್ ಪಿ ಎಲ್ ಸಿ ಸಂಸ್ಥೆಯ ವಾಣಿಜ್ಯ ಹಿನ್ನೋಟ ವಿಭಾಗವನ್ನು ಕೊಳ್ಳಲಾಯಿತು. ನವೆಂಬರ ೨೦೦೮ರಲ್ಲಿ ಎಸ್ ಪಿ ಜಿ ಮೀಡಿಯ ಗ್ರೂಪ್ ಪಿ ಎಲ್ ಸಿ ಸಂಸ್ಥೆಯನ್ನು ಕೊಳ್ಳಲಾಯಿತು.
೨೦೦೯ರಲ್ಲಿ ಟಿ ಎಂ ಎನ್ ಗ್ರೂಪ್ ನ ಮಾರಾಟ ಸೇವೆಗಳ ವಿಭಾಗವನ್ನು ಕೊಳ್ಳಲಾಯಿತು.
೨೦೧೬ ಜನವರಿಯಲ್ಲಿ ಗ್ಲೋಬಲ್ ಡೇಟ ಹೋಲ್ಡಿಂಗ್ ನಿಯಮಿತ ಸಂಸ್ಥೆಯನ್ನು ಪ್ರೋಗ್ರೆಸಿವ್ ಡಿಜಿಟಲ್ ಮೀಡಿಯ ಸಂಸ್ಥೆಯು ಕೊಂಡು ತನ್ನ ಹೆಸರನ್ನು ಗ್ಲೋಬಲ್ ಡೇಟ ಸಾರ್ವಜನಿಕ ನಿಯಮಿತ ಸಂಸ್ಥೆ ಎಂದು ಬದಲಾಯಿಸಿತು.
ಕಾರ್ಯಚಟುವಟಿಕೆಗಳು
[ಬದಲಾಯಿಸಿ]ವರದಿ ತಯಾರಿಕೆ
ಜಾಣ ಕೇಂದ್ರಗಳು
ಸಲಹೆ
ವಿಶ್ಲೇಷಣೆ
ಸಾಂಸ್ಥಿಕ ಕ್ರಿಯೆಗಳು
[ಬದಲಾಯಿಸಿ]೨೦೧೭ ಡಿಸೆಂಬರ ೦೮ - ಅಸ್ಸೆಂಷಿಯಲ್ ಪಿ ಎಲ್ ಸಿ ಯಿಂದ ಮೀಡ್ ಮೀಡಿಯ ಎಫ್ ಜ್ಹೆಡ್ ಎಲ ಎಲ್ ಸಿ (ಮೀಡ್) ವಿಭಾಗವನ್ನು $೧೭.೫ ಮಿಲಿಯನ್ ಗೆ ಕೊಂಡುಕೊಳ್ಳಲಾಯಿತು. [೨]
೨೦೧೮ - ರಿಸರ್ಚ ವ್ಯೂಸ್ ನಿಯಮಿತ ವನ್ನು ಕೊಂಡುಕೊಳ್ಳಲಾಯಿತು [೩]
೨೦೨೧ ಸೆಪ್ಟೆಂಬರ ೦೯ - ಐ ಹೆಚ್ ಎಸ್ ಮಾರ್‍ಕಿಟ್'ನ ಜೈವಿಕ ವಿಜ್ಞಾನ ವಿಭಾಗವನ್ನು ಕೊಂಡುಕೊಳ್ಳಲಾಯಿತು [೪]
೨೦೨೧ ಡಿಸೆಂಬರ ೧೬ - ಎಲ್ ಎಂ ಸಿ ಆಟೊಮೊಟಿವ್ ಮತ್ತು ಎಲ್ ಎಂ ಸಿ ಐ ಹೋಲ್ಡಿಂಗ್ಸ್ ಅನ್ನು ಕೊಂಡುಕೊಳ್ಳಲಾಯಿತು [೫]
ಹೊರಗಿನ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://www.londonstockexchange.com/exchange/prices-and-markets/stocks/summary/company-summary/GB00B87ZTG26GBGBXASX1.html?lang=en
- ↑ https://markets.ft.com/data/announce/detail?dockey=1323-13459408-226T925OE5ABB2VIP2T090E6TP
- ↑ https://www.globaldata.com/wp-content/uploads/releases/Proposed-acquisition-of-Research-Views-Limited.pdf
- ↑ https://www.lse.co.uk/news/DATA/globaldata-agrees-acquisition-of-ihs-markit-life-sciences-business-9ykhh3fuh8k3ydp.html
- ↑ https://www.just-auto.com/news/globaldata-acquires-lmc-automotive-and-boosts-sector-forecasting-capabilities/